ಸಾಕ್ಷಿಗಳಿಗೆ ಬೆದರಿಕೆ ಹಾಕ್ತಿದ್ದಾರೆ ಬಿಗ್ ಬಾಸ್ ಒಟಿಟಿ ವಿನ್ನರ್
ಖ್ಯಾತ ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಹಾವು ಕಳ್ಳಸಾಗಣೆ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬೆದರಿಕೆಯಿಂದಾಗಿ ಗಾಜಿಯಾಬಾದ್ ನ್ಯಾಯಾಲಯವು ನಂದಗ್ರಾಮ ಪೊಲೀಸ್ ಠಾಣೆಗೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಆದೇಶಿಸಿದೆ. ಎಲ್ವಿಶ್ ಯಾದವ್ ಅವರ ಮೇಲೆ ಹಾವು ಕಳ್ಳಸಾಗಣೆ ಆರೋಪವಿದೆ ಮತ್ತು ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಸಿದ್ಧ ಮತ್ತು ಜನಪ್ರಿಯ ಯೂಟ್ಯೂಬರ್ ಎಲ್ವಿಶ್ ಯಾದವ್ಗೆ ಕಷ್ಟ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಯೂಟ್ಯೂಬರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಲಾಗಿದೆ. ಖ್ಯಾತ ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಹಾವು ಕಳ್ಳಸಾಗಣೆ ಪ್ರಕರಣದಲ್ಲಿ ಹೆಸರು ಕೇಳಿಬಂದ ನಂತರ ಸಮಸ್ಯೆಗಳು ಹೆಚ್ಚಿವೆ. ಹಳೆಯ ಪ್ರಕರಣದ ಸಾಕ್ಷಿಯೊಬ್ಬರು ಗಾಜಿಯಾಬಾದ್ ನ್ಯಾಯಾಲಯದಲ್ಲಿ ಬೆದರಿಕೆ ಎದುರಿಸಿರುವುದಾಗಿ ಆರೋಪಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸುವ ಜವಾಬ್ದಾರಿಯನ್ನು ನ್ಯಾಯಾಲಯ ನಂದಗ್ರಾಮ ಪೊಲೀಸ್ ಠಾಣೆಗೆ ವಹಿಸಿದೆ.
ಎಲ್ವಿಶ್ ಯಾದವ್ ಹಾವಿನ ವಿಷವನ್ನು ಕಳ್ಳಸಾಗಣೆ ಮಾಡಿದ ಆರೋಪ ಹೊತ್ತಿದ್ದರು. ನೊಯ್ಡಾ ಪೊಲೀಸರು ಹಾವು ಕಳ್ಳಸಾಗಣೆ ಗ್ಯಾಂಗ್ ಅನ್ನು ಹಿಡಿದಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ, ಈ ಗ್ಯಾಂಗ್‌ನ ಸದಸ್ಯರು ಖ್ಯಾತ ಯೂಟ್ಯೂಬರ್ ಎಲ್ವಿಶ್ ಎಲ್ವಿಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಿದ್ದರು. ಈ ಪ್ರಕರಣದಲ್ಲಿ ನೊಯ್ಡಾ ಪೊಲೀಸರು ಬಂಧಿಸಿದ್ದರು.
ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದೀಗ ಇದೇ ಪ್ರಕರಣದಲ್ಲಿ ಸಾಕ್ಷಿ ಘಾಜಿಯಾಬಾದ್ ನಿವಾಸಿ ಸೌರಭ್ ಗುಪ್ತಾ ಎಂಬುವರು ಗಾಜಿಯಾಬಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮಗೆ ಬೆದರಿಕೆ ಹಾಕಲಾಗುತ್ತಿದೆ ಹಾಗೂ ಅವರು ವಾಸಿಸುವ ಪ್ರದೇಶದಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸೌರಭ್ ಗುಪ್ತಾ ನ್ಯಾಯಾಲಯದಲ್ಲಿ ಈ ಆರೋಪಗಳನ್ನು ಮಾಡಿದಾಗ, ನ್ಯಾಯಾಲಯ ಸೌರಭ್ ಗುಪ್ತಾಗೆ ನೀವು ನ್ಯಾಯಾಲಯಕ್ಕೆ ಏಕೆ ಬರುತ್ತಿದ್ದೀರಿ ಮತ್ತು ನಿಮಗೆ ಬೆದರಿಕೆ ಹಾಕುತ್ತಿದ್ದರೆ ಪೊಲೀಸರಿಗೆ ವರದಿ ಮಾಡಿ ಎಂದು ಹೇಳಿದೆ. ಈ ಕುರಿತು ಸೌರಭ್ ಗುಪ್ತಾ ಅವರು ದಾಖಲೆಗಳನ್ನು ಸಲ್ಲಿಸಿ ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸೌರಭ್ ಗುಪ್ತಾ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗುತ್ತಿದೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಸೌರಭ್ ಗುಪ್ತಾ ಕೂಡ ಹೇಳಿದ್ದಾರೆ. ನಿರಂತರ ಬೆದರಿಕೆಯಿಂದಾಗಿ ಸೌರಭ್ ಗುಪ್ತಾ ಫೇಸ್ ಬುಕ್ ಖಾತೆಯನ್ನೂ ಮುಚ್ಚಿದ್ದಾರೆ. ಈ ದೂರನ್ನು ಪರಿಗಣಿಸಿದ ನ್ಯಾಯಾಲಯ ಇದೀಗ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಸಂಪೂರ್ಣ ತನಿಖೆ ನಡೆಸುವಂತೆ ಆದೇಶಿಸಿದೆ.
ಇದನ್ನೂ ಓದಿ: ಹಾವಿನ ವಿಷ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಇಡಿ ತನಿಖೆ
ಎಲ್ವಿಶ್ ಯಾದವ್ ಅವರು ಬಿಗ್ ಬಾಸ್ ಒಟಿಟಿ ವಿನ್ನರ್. ಅವರು ಕೆಲವರಿಗೆ ಹೊಡೆದು ಕೂಡ ಸುದ್ದಿ ಆಗಿದ್ದರು. ಇತ್ತೀಚೆಗೆ ಅವರು ವಿವಾದದ ಮೂಲಕವೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.