ಮೊಡವೆಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ? ಅವುಗಳನ್ನು ತಡೆಯಲು ಈ ರೀತಿ ಮಾಡಿ

ಇತ್ತೀಚಿನ ದಿನಗಳಲ್ಲಿ ಮೊಡವೆಗಳ ಸಮಸ್ಯೆ ಸಾಮಾನ್ಯವಾಗಿದೆ, ಆದರೆ ಅದು ನಿರಂತರವಾಗಿ ಹೆಚ್ಚುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಕ್ರಮೇಣ ಚರ್ಮದ ನೈಸರ್ಗಿಕ ಹೊಳಪನ್ನು ಕಡಿಮೆ ಮಾಡುತ್ತದೆ. ಅಷ್ಟೇಅಲ್ಲ, ಇದು ಕಲೆಗಳಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರೆಯುತ್ತದೆ. ಹಾಗಾಗಿ ಮೊಡವೆ ಕಂಡುಬರುವುದಕ್ಕೆ ಕಾರಣ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮೊಡವೆಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ? ಅವುಗಳನ್ನು ತಡೆಯಲು ಈ ರೀತಿ ಮಾಡಿ
Acne Causes And Prevention
Image Credit source: Getty Images

Updated on: Feb 09, 2026 | 7:22 PM

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅನಿಯಮಿತ ದಿನಚರಿ, ಮೊದಲು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತಡರಾತ್ರಿ ಎಚ್ಚರವಾಗಿರುವುದು, ಹೆಚ್ಚು ಜಂಕ್ ಫುಡ್ ಸೇವಿಸುವುದು, ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಮಾನಸಿಕ ಒತ್ತಡ ಸೇರಿದಂತೆ ನಾನಾ ರೀತಿಯ ಕಾರಣಗಳು ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ರೀತಿಯ ಅಭ್ಯಾಸಗಳಿಂದ ಮುಖದ ಮೇಲೆ ಆಗಾಗ ಮೊಡವೆಗಳು (Acne) ಕಾಣಿಸಿಕೊಳ್ಳುತ್ತದೆ, ಇದು ಯುವಕರು ಮತ್ತು ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಏಕೆಂದರೆ ಇದು ಕ್ರಮೇಣ ಚರ್ಮದ ನೈಸರ್ಗಿಕ ಹೊಳಪನ್ನು ಕಡಿಮೆ ಮಾಡುತ್ತದೆ. ಅಷ್ಟೇಅಲ್ಲ, ಇದು ಕಲೆಗಳಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರೆಯುತ್ತದೆ. ಹಾಗಾಗಿ ಮೊಡವೆ ಕಂಡುಬರುವುದಕ್ಕೆ ಕಾರಣ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮೊಡವೆ ಹೆಚ್ಚಾಗಿ ಕಂಡುಬರಲು ಕಾರಣವೇನು?

ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಸೌಮ್ಯ ಸಚ್‌ದೇವ ಹೇಳುವ ಪ್ರಕಾರ, ಚರ್ಮದ ಮೇಲೆ ಮೊಡವೆ ಹೆಚ್ಚಾಗಲು ಹಲವಾರು ಕಾರಣಗಳಿರಬಹುದು. ಅದರಲ್ಲಿ ಹಾರ್ಮೋನುಗಳ ಬದಲಾವಣೆಯೂ ಒಂದು. ಇದು ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಅಥವಾ ಒತ್ತಡದ ಸಮಯದಲ್ಲಿ ಗಮನಾರ್ಹವಾಗಿ ಕಂಡುಬರುತ್ತದೆ. ಇದರ ಜೊತೆಗೆ, ಹುರಿದ, ಮಸಾಲೆಯುಕ್ತ ಮತ್ತು ತುಂಬಾ ಸಿಹಿ ಆಹಾರಗಳು ಸಹ ಮೊಡವೆ ಹೆಚ್ಚಳಕ್ಕೆ ಕಾರಣವಾಗಬಹುದು. ಜೊತೆಗೆ ಮುಖವನ್ನು ಪದೇ ಪದೇ ಸ್ಪರ್ಶಿಸುವುದು ಅಥವಾ ಕೊಳಕು ಕೈಗಳಿಂದ ಸ್ಪರ್ಶಿಸುವುದು ಕೂಡ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಮೇಕಪ್ ಅನ್ನು ಸರಿಯಾಗಿ ತೆಗೆದುಹಾಕದಿರುವುದು ಮತ್ತು ಎಣ್ಣೆಯುಕ್ತ ಚರ್ಮದ ಮೇಲೆ ಕ್ರೀಮ್‌ಗಳನ್ನು ಹಚ್ಚುವುದು, ನಿದ್ರೆಯ ಕೊರತೆ ಮತ್ತು ಕಡಿಮೆ ನೀರು ಕುಡಿಯುವುದು ಕೂಡ ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸಬಹುದು. ಕೆಲವರಲ್ಲಿ, ಆನುವಂಶಿಕ ಕಾರಣಗಳಿಂದಲೂ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: ಹುಡುಗಿಯರೇ… ಈ ರೀತಿ ಮಾಡಿದರೆ ಮುಖದಲ್ಲಿ ಎಷ್ಟೇ ಮೊಡವೆಗಳಿದ್ದರೂ ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ

ಮೊಡವೆಯನ್ನು ತಡೆಯುವುದು ಹೇಗೆ?

ಸಾಮಾನ್ಯವಾಗಿ ಮೊಡವೆಗಳನ್ನು ತಡೆಗಟ್ಟಲು, ಮೊದಲು ದಿನಚರಿಯನ್ನು ಸುಧಾರಿಸಿಕೊಳ್ಳಿ. ಪ್ರತಿದಿನ ಸೌಮ್ಯವಾದ ಫೇಸ್ ವಾಶ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಮೇಕಪ್ ತೆಗೆದ ನಂತರವೇ ನಿದ್ರೆ ಮಾಡಿ. ಹುರಿದ ಮತ್ತು ಜಂಕ್ ಫುಡ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆಹಾರದಲ್ಲಿ ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ. ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ವ್ಯಾಯಾಮ ಮಾಡಿ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಬಳಸಿ. ಮೊಡವೆ ದೀರ್ಘಕಾಲದ ವರೆಗೆ ಗುಣವಾಗದಿದ್ದರೆ ಮನೆಮದ್ದುಗಳನ್ನು ಮಾತ್ರ ಅವಲಂಬಿಸಬೇಡಿ. ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ