AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corn silk benefits: ಮುಸುಕಿನ ಜೋಳದ ಜುಟ್ಟು ಎಂದು ಹಗುರವಾಗಿ ಕಾಣಬೇಡಿ! ಅದು ಈ 6 ರೋಗಗಳಿಗೆ ಪವಾಡದ ಮದ್ದು!

Corn silk: ಕಾರ್ನ್ ಸಿಲ್ಕ್​ (ಮುಸುಕಿನ ಜೋಳದ ಜುಟ್ಟು) ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಗರ್ಭಿಣಿಯರು ಕಾರ್ನ್ ಸಿಲ್ಕ್​ ಅನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿ ಫೋಲಿಕ್ ಆಮ್ಲವಿದೆ.

Corn silk benefits: ಮುಸುಕಿನ ಜೋಳದ ಜುಟ್ಟು ಎಂದು ಹಗುರವಾಗಿ ಕಾಣಬೇಡಿ! ಅದು ಈ 6 ರೋಗಗಳಿಗೆ ಪವಾಡದ ಮದ್ದು!
ಕಾರ್ನ್ ಸಿಲ್ಕ್​ (ಮುಸುಕಿನ ಜೋಳದ ಜುಟ್ಟು) ಆರೋಗ್ಯ ಪ್ರಯೋಜನಗಳು
ಸಾಧು ಶ್ರೀನಾಥ್​
|

Updated on: Feb 23, 2024 | 6:06 AM

Share

ಅನೇಕ ಜನರು ಮುಸುಕಿನ ಜೋಳವನ್ನು (Maize) ಇಷ್ಟಪಡುತ್ತಾರೆ. ನಾವು ಅದನ್ನು ಹುರಿದ ಅಥವಾ ಬೇಯಿಸಿ ತಿನ್ನುತ್ತೇವೆ. ಮತ್ತು ಮಳೆಗಾಲದಲ್ಲಿ ಬಿಸಿ ಬಿಸಿ ಹುರಿದ ಜೋಳದ ತೆನೆಗೆ ಚಿಟಿಕೆ ಉಪ್ಪು ಮತ್ತು ನಿಂಬೆಹಣ್ಣನ್ನು ಸವರಿ ತಿನ್ನುತ್ತಿದ್ದರೆ ಅಯ್ಯೋ… ಆ ರುಚಿಯೇ ಬೇರೆ..! ಅದಿಲ್ಲದಿದ್ದರೆ ಜೋಳದ ಕಾಳುಗಳಿಂದ ಬಗೆಬಗೆಯ ಬಜ್ಜಿ ಮಾಡಿ ತಿನ್ನುತ್ತಾರೆ. ಕಾರ್ನ್ ಕಾಳುಗಳು ಫೈಬರ್, ವಿಟಮಿನ್ ಸಿ, ಕೆ, ಪ್ರೋಟೀನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದಲೇ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಹಜವಾಗಿ, ನಾವೆಲ್ಲರೂ ಜೋಳದ ಕಾಳುಗಳನ್ನು ತಿನ್ನುತ್ತೇವೆ, ಆದರೆ ಅವುಗಳ ಸುತ್ತಾ ಇರುವ ನಾರಿನ ಪದಾರ್ಥಗಳನ್ನು (ಕಾರ್ನ್ ಸಿಲ್ಕ್​ -ಮುಸುಕಿನ ಜೋಳದ ಜುಟ್ಟು Corn Silk) ಅಸಡ್ಡೆಯಿಂದ ತಿರಸ್ಕರಿಸುತ್ತೇವೆ. ಆದರೆ, ಜೋಳ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅದು ರೇಷ್ಮೆಯಂತಹ ಕೂದಲು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ! (Maize Health Benefits)

ಕಾರ್ನ್ ಸಿಲ್ಕ್​ (ಮುಸುಕಿನ ಜೋಳದ ಜುಟ್ಟು) ಆರೋಗ್ಯ ಪ್ರಯೋಜನಗಳು:

1. ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ: ಅಧಿಕ ಕೊಲೆಸ್ಟ್ರಾಲ್ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದರ ಪ್ರಮಾಣವನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಹೃದ್ರೋಗ ಬರುವ ಅಪಾಯವಿದೆ. ಕಾರ್ನ್ ಸಿಲ್ಕ್​ ಅನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ.

2. ಮಧುಮೇಹ ನಿಯಂತ್ರಣ: ಕಾರ್ನ್ ಸಿಲ್ಕ್​ (ಮುಸುಕಿನ ಜೋಳದ ಜುಟ್ಟು) ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನವಾಗಿದೆ. ಇವು ಮಧುಮೇಹ ನಿವಾರಕ ಗುಣಗಳನ್ನು ಹೊಂದಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ.

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕೊರೋನಾ ಕಾಲದಿಂದ ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಬಲವಾದ ರೋಗನಿರೋಧಕ ವ್ಯವಸ್ಥೆಯು ಸೋಂಕನ್ನು ತಡೆಯುತ್ತದೆ. ಕಾರ್ನ್ ಸಿಲ್ಕ್​ ನಲ್ಲಿ ವಿಟಮಿನ್ ಸಿ ಇರುವ ಕಾರಣ, ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಕಾರ್ನ್ ಸಿಲ್ಕ್​ ಅನ್ನು ಸೇವಿಸಬಹುದು. ಏಕೆಂದರೆ ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

Also Read: ಯೂರಿಕ್ ಆಸಿಡ್ ಅಧಿಕವಾಗಿರುವವರು ಏನು ತಿನ್ನಬೇಕು.. ಏನು ತಿನ್ನಬಾರದು? ಇಲ್ಲಿ ತಿಳಿದುಕೊಳ್ಳಿ

5. ಗರ್ಭಿಣಿಯರಿಗೆ ಪ್ರಯೋಜನಗಳು: ಗರ್ಭಿಣಿಯರು ಕಾರ್ನ್ ಸಿಲ್ಕ್​ ಅನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿ ಫೋಲಿಕ್ ಆಮ್ಲವಿದೆ. ಇದು ಗರ್ಭಿಣಿಯರಿಗೆ ಉಪಯುಕ್ತವಾಗಿದೆ.

6. ಕಿಡ್ನಿಗಳಿಗೆ ಸೂಪರ್ ಮೆಡಿಸಿನ್: ಕಾರ್ನ್ ಪಿಷ್ಟದೊಂದಿಗೆ ಚಹಾವನ್ನು ಕುಡಿಯುವುದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಾರ್ನ್ ಸಿಲ್ಕ್​ ಮೂತ್ರಪಿಂಡಗಳಿಗೆ ಸೂಪರ್ ಔಷಧಿ ಎಂದು ಹೇಳಲಾಗುತ್ತದೆ. ಇದು ಮೂತ್ರಪಿಂಡದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತದೆ. ಈ ಚಹಾವನ್ನು ನೀವು ಪ್ರತಿದಿನ ಸೇವಿಸಿದರೆ, ನೀವು ಮೂತ್ರಪಿಂಡದ ಕಲ್ಲುಗಳನ್ನು ತಡೆಯಬಹುದು. ಕಾರ್ನ್ ಸಿಲ್ಕ್​ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ