ಈ ಕಾರಣಕ್ಕೆ ನಿಮಗೆ ಮಕ್ಕಳಾಗುತ್ತಿಲ್ಲ, ಇದನ್ನು ಸಂಪೂರ್ಣ ಬಿಟ್ಟುಬಿಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2025 | 2:57 PM

ಸಾಮಾನ್ಯವಾಗಿ ಮದುವೆಯಾಗಿ ಎಷ್ಟೋ ವರ್ಷಗಳಾಗಿದ್ದರೂ ಕೂಡ ಮಕ್ಕಳು ಆಗಿರುವುದಿಲ್ಲ ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಆಧುನಿಕ ಜೀವನಶೈಲಿಯಲ್ಲಿ ಪ್ರತಿನಿತ್ಯ ಒತ್ತಡ ಹೆಚ್ಚಾಗುತ್ತಿದ್ದು ಖಾಸಗಿ ಬದುಕನ್ನು ಕೂಡ ಖುಷಿಯಾಗಿ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ವೈಯಕ್ತಿಕ ಸಂಬಂಧ ಹಾಳಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿರುವುದು ಕೂಡ ಇಂತಹದ್ದೇ ಕಾರಣಗಳಿಗೆ. ಇದು ಸಂಶೋಧನೆಗಳಿಂದಲೂ ತಿಳಿದು ಬಂದಿದೆ. ಹಾಗಾದರೆ ಮಕ್ಕಳಾಗದಿರುವುದಕ್ಕೆ ಕಾರಣವೇನು? ಯಾವ ರೀತಿಯ ಅಭ್ಯಾಸಗಳು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಈ ಕಾರಣಕ್ಕೆ ನಿಮಗೆ ಮಕ್ಕಳಾಗುತ್ತಿಲ್ಲ, ಇದನ್ನು ಸಂಪೂರ್ಣ ಬಿಟ್ಟುಬಿಡಿ
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು ಇದರಿಂದಾಗಿ ಕೆಲವರಿಗೆ ಖಾಸಗಿ ಬದುಕಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಲೇ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಂಬಂಧ ಮುರಿದು ಬೀಳುತ್ತಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಆದರೆ ಹೆಚ್ಚಾಗಿ ಗಂಡ- ಹೆಂಡತಿ ಬೇರೆಯಾಗಲು ಮಕ್ಕಳ ವಿಷಯವೇ ಕಾರಣವಾಗಿರುತ್ತವೆ. ಇದು ಸಂಶೋಧನೆಗಳಿಂದಲೂ ತಿಳಿದು ಬಂದಿದೆ. ಮದುವೆಯಾಗಿ ಎಷ್ಟೋ ವರ್ಷಗಳಾಗಿದ್ದರೂ ಕೂಡ ಮಕ್ಕಳು ಆಗದಿರಲು ಆಧುನಿಕ ಜೀವನಶೈಲಿ (Modern lifestyle) ಕೂಡ ಕಾರಣವಾಗಿರಬಹುದು. ನಿದ್ದೆ ಕೊರತೆ, ಆಹಾರದಲ್ಲಿ ಮಾಡಿಕೊಂಡಂತಹ ಬದಲಾವಣೆಗಳು, ಆರೋಗ್ಯಕರ ಅಭ್ಯಾಸಗಳನ್ನು ನಿತ್ಯವೂ ಪಾಲನೆ ಮಾಡದಿರುವುದು ಸೇರಿದಂತೆ ಹಲವಾರು ವಿಷಯಗಳು ಇದಕ್ಕೆ ಸಂಬಂಧಿಸಿರಬಹುದು. ಹಾಗಾದರೆ ಮಕ್ಕಳು ಆಗದಿರಲು ಕಾರಣವೇನು? ತಂದೆ- ತಾಯಿಯಾಗುವ ಮೊದಲು ನಾವು ಸೇವನೆ ಮಾಡುವ ಆಹಾರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ.

ಮಕ್ಕಳನ್ನು ಪಡೆಯಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕೆಲವು ಆಹಾರಗಳನ್ನು ಸೇವನೆ ಮಾಡಬಾರದು. ಕಟ್ಟುನಿಟ್ಟಾದ ಆಹಾರಕ್ರಮ ರೂಢಿಸಿಕೊಂಡಾಗ ಮಾತ್ರ ಮಕ್ಕಳು ಆರೋಗ್ಯವಾಗಿ ಹುಟ್ಟುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಮದುವೆಯಾದ ಯುವಕ- ಯುವತಿಯರಲ್ಲಿ ಹೆಚ್ಚಿನವರಿಗೆ ಮಕ್ಕಳಾಗುವುದಿಲ್ಲ. ಅದಕ್ಕೆ ಕಾರಣವೇನು? ಮಗುವಿಗಾಗಿ ಪ್ರಯತ್ನಿಸುತ್ತಿರುವಾಗ ಅವರ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: ಪ್ರವಾಸಗಳಿಗೆ ಹೋದಾಗ ಫಿಲ್ಟರ್ ಇಲ್ಲದೆಯೇ ಶುದ್ಧ ನೀರನ್ನು ಕುಡಿಯಲು ಇಲ್ಲಿದೆ ಸುಲಭ ವಿಧಾನ

ಇದನ್ನೂ ಓದಿ
ಬೇಸಿಗೆಯ ಧಗೆಯಿಂದ ಕಷ್ಟ ಆಗುತ್ತಾ? ಚಿಂತೆ ಬಿಟ್ಟು ಹಸಿ ಈರುಳ್ಳಿ ಸೇವನೆ ಮಾಡಿ
ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ
ಹಾಸಿಗೆ ಬಿಟ್ಟು ನೆಲದ ಮೇಲೆ ಮಲಗುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ, ಅಲ್ಲವೋ?
ನಿಮ್ಮ ನಾಲಿಗೆ ನೀಡುವ ಈ ರೀತಿಯ ಸಂದೇಶಗಳನ್ನು ಎಂದಿಗೂ ಕಡೆಗಣಿಸಬೇಡಿ

ಆಧುನಿಕ ಜೀವನಶೈಲಿಯಿಂದ ಜನ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಈ ರೀತಿ ಪ್ರತಿದಿನ ನಿದ್ದೆ ಕಡಿಮೆ ಮಾಡುವುದರಿಂದ ಗಂಡು- ಹೆಣ್ಣು ಇಬ್ಬರಲ್ಲೂ ಹಾರ್ಮೋನ್ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಅದಲ್ಲದೆ ನಿರಂತರ ನಿದ್ದೆ ಕೊರತೆ ಸಂತಾನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನಿದ್ದೆ ಸರಿಯಾಗಿ ಮಾಡದಿದ್ದರೆ ಸ್ಟ್ರೆಸ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದ ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್ ಹಾರ್ಮೋನ್ ಏರುಪೇರಾಗುತ್ತದೆ. ಹಾಗಾಗಿ ಪ್ರತಿನಿತ್ಯ ನೀವು ಚೆನ್ನಾಗಿ ನಿದ್ದೆ ಮಾಡಬೇಕು. ಎಷ್ಟೇ ಒತ್ತಡವಿದ್ದರೂ ಕೂಡ ಅದರಿಂದ ನಿದ್ದೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.

ಮಗುವಿಗಾಗಿ ಪ್ರಯತ್ನಿಸುತ್ತಿರುವಾಗ ಗಂಡು- ಹೆಣ್ಣು ಇಬ್ಬರೂ ಇವುಗಳನ್ನು ಸೇವಿಸಬಾರದು;

  • ಆಲ್ಕೋಹಾಲ್, ಸ್ಮೋಕಿಂಗ್ ಮಾಡಬಾರದು.
  • ಬೇಕರಿ ಐಟಂಗಳಾದ ಕೇಕ್, ಪಪ್ಸ್, ಪೇಸ್ಟ್ರಿಗಳನ್ನು ಆದಷ್ಟು ತಿನ್ನುವುದನ್ನು ತಪ್ಪಿಸಬೇಕು.
  • ನಿಮ್ಮ ಆಹಾರದಲ್ಲಿ ಹೆಚ್ಚು ಸಕ್ಕರೆ ಇರದಂತೆ ನೋಡಿಕೊಳ್ಳಿ.
  • ಅತಿಯಾಗಿ ಕಾಫಿ ಕುಡಿಯುವುದನ್ನು ಬಿಡುವುದು ಒಳ್ಳೆಯದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ