ಕೊರೊನಾ ವೈರಾಣು ಗಾಳಿಯ ಮೂಲಕವೇ ಹರಡುತ್ತಿದೆ ಎನ್ನುತ್ತಾರೆ ತಜ್ಞರು

ತಜ್ಞರ ಪ್ರಕಾರ ಕೊರೊನಾ ವೈರಾಣು ಗಾಳಿಯಲ್ಲಿ ಸುಮಾರು 3 ಗಂಟೆಗಳ ಕಾಲ ಸಕ್ರಿಯವಾಗಿರಲಿದ್ದು, 1.1ಗಂಟೆಯ ಒಳಗೆ ಯಾವುದೇ ದೇಹವನ್ನು ಪ್ರವೇಶಿಸಲಾಗದಿದ್ದಲ್ಲಿ ಅದು ತನ್ನ ಅರ್ಧದಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತದೆ.

  • Publish Date - 12:08 pm, Sat, 17 April 21 Edited By: preethi shettigar Follow us -
ಕೊರೊನಾ ವೈರಾಣು ಗಾಳಿಯ ಮೂಲಕವೇ ಹರಡುತ್ತಿದೆ ಎನ್ನುತ್ತಾರೆ ತಜ್ಞರು
ಪ್ರಾತಿನಿಧಿಕ ಚಿತ್ರ

ಜಾಗತಿಕ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಕೊರೊನಾ ವೈರಾಣು ಇದೀಗ ಭಾರತಕ್ಕೆ ಎರಡನೇ ಅಲೆಯ ಆಘಾತ ನೀಡುತ್ತಿದೆ. 219 ದೇಶಗಳ 14,05,31,290 ಜನರನ್ನು ಸೋಂಕಿತರನ್ನಾಗಿಸಿ ಸುಮಾರು 30,12,206 ಮಂದಿಯನ್ನು ಬಲಿಪಡೆದಿರುವ ಕೊರೊನಾ ವೈರಾಣು ಅತಿಮುಖ್ಯವಾಗಿ ಗಾಳಿಯ ಮೂಲಕವೇ ಹರಡುತ್ತದೆ ಎಂದು ವೈದ್ಯಕೀಯ ಪತ್ರಿಕೆ ಲ್ಯಾನ್ಸೆಟ್ ವರದಿ ಮಾಡಿದೆ. ಕೊರೊನಾ ಗಾಳಿಯ ಮುಖೇನ ಹರಡುತ್ತದೆ ಎನ್ನುವುದಕ್ಕೆ ಬಲವಾದ ಸಾಕ್ಷಿಯಿದೆ. ಗಾಳಿಯ ಹೊರತಾಗಿ ಬೇರೆ ಮಾರ್ಗದಲ್ಲಿ ಇದು ಹರಡುತ್ತದೆಯಾದರೂ ಕೊರೊನಾ ಪಾಲಿಗೆ ಗಾಳಿಯಷ್ಟು ಪ್ರಬಲ ವಾಹಕ ಮತ್ತೊಂದಿಲ್ಲ ಎನ್ನುವುದನ್ನು ಬ್ರಿಟನ್, ಅಮೆರಿಕಾ ಮತ್ತು ಕೆನಡಾ ದೇಶಗಳ ಆರು ತಜ್ಞರು ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿಯಲ್ಲಿನ ಗಮನಾರ್ಹ ಅಂಶವೆಂದರೆ ಕೊರೊನಾ ವೈರಾಣು SARS-CoV-2 ಹರಡುವಿಕೆಯಲ್ಲಿ ಜನರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮಗಳ ಪಾತ್ರ ಬಹಳ ದೊಡ್ಡದಿದ್ದು, ಅತಿವೇಗವಾಗಿ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡಲು ಸಹಾಯಕವಾಗಿದೆ. ಅಲ್ಲದೇ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲದವರಿಂದ ಅಥವಾ ಆಗಷ್ಟೇ ಸೋಂಕಿಗೆ ತುತ್ತಾದವರಿಂದ ಶೇ.59ರಷ್ಟು ಸೋಂಕು ವ್ಯಾಪಿಸುತ್ತಿದೆ ಎನ್ನುವ ಅಂಶ ಕಂಡುಬಂದಿದೆ. ಅಂತೆಯೇ, ಗಾಳಿಯಲ್ಲಿಯೇ ಹೆಚ್ಚಾಗಿ ಹರಡುತ್ತಿರುವ ಕೊರೊನಾ ವೈರಾಣು ಹೊರಾಂಗಣ ಪ್ರದೇಶಕ್ಕಿಂತ ಒಳಾಂಗಣದಲ್ಲಿ ಅತಿ ವೇಗವಾಗಿ ಹರಡುತ್ತಿದೆ ಎನ್ನುವುದೂ ಗೊತ್ತಾಗಿದೆ.

ತಜ್ಞರ ಪ್ರಕಾರ ಕೊರೊನಾ ವೈರಾಣು ಗಾಳಿಯಲ್ಲಿ ಸುಮಾರು 3 ಗಂಟೆಗಳ ಕಾಲ ಸಕ್ರಿಯವಾಗಿರಲಿದ್ದು, 1.1 ಗಂಟೆಯ ಒಳಗೆ ಯಾವುದೇ ದೇಹವನ್ನು ಪ್ರವೇಶಿಸಲಾಗದಿದ್ದಲ್ಲಿ ಅದು ತನ್ನ ಅರ್ಧದಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದು ಕೊರೊನಾ ರೋಗಿಗಳಿದ್ದ ಕೋಣೆಯ ಗಾಳಿ ಹಾಗೂ ಕಾರನ್ನು ಪರೀಕ್ಷೆಗೆ ಒಳಪಡಿಸಿದಾಗ ತಿಳಿದುಬಂದಿದೆ. ಆದರೆ, ಅದನ್ನು ದೃಢವಾಗಿ ಹೇಳಲು ಹಲವು ತಾಂತ್ರಿಕ ಅಡತಡೆಗಳು ಎದುರಾಗಿದ್ದು ಅದನ್ನು ಮೀರಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕುಂಭಮೇಳದಲ್ಲಿ ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆಚರಣೆ ಸಾಂಕೇತಿಕವಾಗಿದ್ದರೆ ಸಾಕು ಎಂದು ಟ್ವೀಟ್ ಮಾಡಿದ ಪ್ರಧಾನಿ ಮೋದಿ 

ಕೊವಿಡ್ 19 ​ತಾಂತ್ರಿಕ ಸಲಹಾ ಸಮಿತಿ ನೀಡಿದ ಆತಂಕಕಾರಿ ವರದಿ ಇದು..; ಕಠಿಣ ನಿಯಮ ಜಾರಿಗೊಳಿಸದೆ ಇದ್ರೆ ಅಪಾಯ ತಪ್ಪಿದ್ದಲ್ಲ

(Coronavirus is primarily a Airborne disease say Experts)

Click on your DTH Provider to Add TV9 Kannada