AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಮಲಗುವಾಗ ಎರಡು ಲವಂಗ ತಿಂದರೆ ಅನಾರೋಗ್ಯ ಓಡುತ್ತದೆ ಬಹುದೂರ!

ಲವಂಗ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹವನ್ನು ಬಲಗೊಳಿಸುತ್ತದೆ. ಅದೇ ಕಾರಣಕ್ಕೆ ನಮ್ಮ ಹಿರಿಯರು ದಿನನಿತ್ಯದ ಆಹಾರದಲ್ಲಿ ಅಲ್ಪಪ್ರಮಾಣದಲ್ಲಿ ಲವಂಗದ ಬಳಕೆ ಮಾಡುತ್ತಿದ್ದರು.

ರಾತ್ರಿ ಮಲಗುವಾಗ ಎರಡು ಲವಂಗ ತಿಂದರೆ ಅನಾರೋಗ್ಯ ಓಡುತ್ತದೆ ಬಹುದೂರ!
ಲವಂಗ
guruganesh bhat
| Edited By: |

Updated on:Apr 24, 2021 | 8:46 AM

Share

ಈಗಿನ ಕಾಲದಲ್ಲಿ ಆರೋಗ್ಯವೇ ಮಹಾಭಾಗ್ಯ. ಏನಿದ್ದರೇನು, ಆರೋಗ್ಯ ಚೆನ್ನಾಗಿರದಿದ್ದರೆ ಎಲ್ಲವೂ ವ್ಯರ್ಥ. ಈಗ ಕೊರೊನಾ ಸೋಂಕು ಬಂದಮೇಲಂತೂ ಆರೊಗ್ಯದ ಮೇಲಿನ ಕಾಳಜಿ ಎಲ್ಲರಿಗೂ ಹೆಚ್ಚಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವಿಧವಿಧದ ಕ್ರಮಗಳನ್ನು ನಾವು ಅನುಸರಿಸುತ್ತೇವೆ. ಆದರೆ, ನಮ್ಮದೇ ಮನೆಯಲ್ಲಿ, ಅದರಲ್ಲೂ ಪ್ರೀತಿಯ ಅಡಿಗೆ ಮನೆಯಲ್ಲಿ ನಮ್ಮ ಆರೋಗ್ಯವನ್ನು ನಿಷ್ಠೆಯಿಂದ ಕಾಪಿಡುವ ವಸ್ತುಗಳಿವೆ ಎಂಬುದರ ಅರಿವು ನಮ್ಮಲ್ಲಿ ಹೆಚ್ಚಿನವರಿಗೆ ಇಲ್ಲ. ಅಡಿಗೆ ಮನೆಯಲ್ಲಿ ಸುಮ್ಮನೆ ತನ್ನ ಪಾಡಿಗೆ ತಾನಿರುವ ಲವಂಗದಿಂದಲೂ ಅಡಿಗೆಯನ್ನು ಬಿಟ್ಟೇ ಹತ್ತಾರು ಪ್ರಯೋಜನಗಳಿವೆ. ಅವು ಯಾವುವು ಎಂದು ತಿಳಿದುಕೊಳ್ಳುವ ಕುತುಹಲ ನಿಮಗೂ ಉಂಟಾಯಿತೆ? ಈ ಸ್ಟೋರಿ ಓದಿ.l

ಲವಂಗ ಒಂದು ಮಸಾಲೆ ಪದಾರ್ಥ. ನಮ್ಮ ಪ್ರಾಚೀನ ಕಾಲದಿಂದಲೂ ಲವಂಗ ದಿನನಿತ್ಯದ ಜೀವನದಲ್ಲು ಬಹು ಉಪಯೋಗಕಾರಿಯಾಗಿದೆ. ಚಿಕ್ಕ ಲವಂಗವೊಂದು ನಮ್ಮ ದೇಹದ ಆರೋಗ್ಯವನ್ನು ಹದವಾಗಿ ಇಡಬಲ್ಲುದು ಎಂಬುದೇ ಸಾಕು ಲವಂಗದ ಸಾಮರ್ಥ್ಯ ಅರ್ಥಮಾಡಿಕೊಳ್ಳಲು..ಲವಂಗ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹವನ್ನು ಬಲಗೊಳಿಸುತ್ತದೆ. ಅದೇ ಕಾರಣಕ್ಕೆ ನಮ್ಮ ಹಿರಿಯರು ದಿನನಿತ್ಯದ ಆಹಾರದಲ್ಲಿ ಅಲ್ಪಪ್ರಮಾಣದಲ್ಲಿ ಲವಂಗದ ಬಳಕೆ ಮಾಡುತ್ತಿದ್ದರು. ಲವಂಗದಲ್ಲಿ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಡಿ, ಒಮೆಗಾ ಸೇರಿದಂತೆ ಇನ್ನೂ ಹಲವು ಅಂಶಗಳಿವೆ. ಅಂದಹಾಗೆ ಅವೆಲ್ಲವೂ ದೇಹಕ್ಕೆ ಅವಶ್ಯಕ ಮತ್ತು ಅನಿವಾರ್ಯವೂ ಕೂಡ ಹೌದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ!

ಬಾಯಿ, ಹಲ್ಲು ಮತ್ತು ಗಂಟಲಿನ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಇದ್ದಲ್ಲಿ ಲವಂಗದ ಸೇವನೆ ಈ ಸಮಸ್ಯೆಯನ್ನು ನಿವಾರಿಸಬಲ್ಲದು. ಹೀಗಾಗಿಯೇ ಬಹು ಹಿಂದಿನಿಂದಲೂ ಹಲ್ಲುನೋವು ಆದರೆ ಲವಂಗವನ್ನು ಹಲ್ಲಿನ ಬಳಿ ಇಟ್ಟುಕೊಳ್ಳುವ ರೂಢಿ ಬಂದಿದೆ.

ಅಷ್ಟೇ ಅಲ್ಲ, ಲವಂಗ ಜೀರ್ಣಕ್ರಿಯೆಯನ್ನು ಇನ್ನಷ್ಟು ಸಕ್ರಿಯಗೊಳಿಸುತ್ತದೆ. ಜೀರ್ಣ ಸರಿಯಾಗಿ ಆಗದೇ ಹೊಟ್ಟೆ ನೊವಿನಿಂದ ಬಳಲುತ್ತಿದ್ದರೆ ಎರಡು ಲವಂಗದ ಸೇವನೆ ಪರಿಹಾರ ನಿಡಬಲ್ಲುದು. ಅಲ್ಲದೇ, ಲವಂಗದಲ್ಲಿನ ಕೆಲವು ಅಂಶಗಳು ನಮ್ಮ ದೇಹದ ಮೂಳೆ ಮತ್ತು ಎಲಬುಗಳ ಸಾಂದ್ರತೆಯನ್ನು ಹೆಚ್ಚಿಸುತ್ತವೆ. ಮೂಳೆಗಳಿಗೆ ಅಗತ್ಯವಿರುವ ಖನಿಜಾಂಶಗಳನ್ನು ಒದಗಿಸುತ್ತವೆ. ಹೀಗಾಗಿ ಪ್ರತಿದಿನ ನಿದ್ರೆ ಹೋಗುವ ಮೊದಲು ಬೆಚ್ಚನೆಯ ನೀರಿನ ಜತೆಗೆ ಎರಡು ಲವಂಗವನ್ನು ಸೇವಿಸುವುದು ಸರ್ವೋತ್ತಮ.

ನಿಮಗೇನಾದರೂ ತಲೆನೋವು ಕಾಣಿಸಿಕೊಂಡರೂ, ಲವಂಗ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದು ಪರಿಹಾರ ಒದಗಿಸಬಲ್ಲದು. ಅಲ್ಲದೆ ಮೈ ಕೈ ನೋವು ನಿವಾರಕವಾಗಿಯೂ ಲವಂಗ ಕೆಲಸ ಮಾಡುತ್ತದೆ ಎಂಬುದು ಕೆಲವರಿಗಷ್ಟೇ ತಿಳಿದಿರುವ ವಿಚಾರ. ಇಲ್ಲ ಸಲ್ಲದ ಯಾವುದೋ ಔಷಧ ಸೇವನೆಗಿಂತ ಎರಡು ಲವಂಗದ ಸೇವನೆ ಎಲ್ಲಕ್ಕಿಂತ ಉತ್ತಮ. ಅಲ್ಲದೇ ಲವಂಗದ ಎಣ್ಣೆಯಲ್ಲಿರುವ ಬ್ಯಾಕ್ಟಿರಿಯಾ ನಿರೋಧಕ ಗುಣಗಳು ಇಂದಿನ ಅನಾರೋಗ್ಯಕರ ವಾತಾವರಣದಲ್ಲಿ ನಮ್ಮ ಆರೊಗ್ಯ ರಕ್ಷಿಸಲು ಸಹಕಾರಿಯಾಗಬಲ್ಲವು.

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

(Daily 2 cloves with warm water can boost your health before sleeping)

Published On - 8:45 am, Sat, 24 April 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ