
ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೃದಯಾಘಾತ ಕೇಸ್ಗಳು ಯುವಕರಲ್ಲೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಹಾರ್ಟ್ ಅಟ್ಯಾಕ್ಗೆ ಹೃದಯದ ನರಗಳಲ್ಲಿ ಉಂಟಾಗುವ ಬ್ಲಾಕೇಜ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೃದಯದಲ್ಲಿ ಬ್ಲಾಕೇಜ್ ಏಕೆ ಉಂಟಾಗುತ್ತದೆ? ಅದರ ಆರಂಭಿಕ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇಂದಿಗಿದೆ.
ಹೃದಯದ ನರಗಳಲ್ಲಿ ಕೊಬ್ಬು (ಫ್ಯಾಟ್) ಅಥವಾ ಕೊಲೆಸ್ಟ್ರಾಲ್ ಶೇಖರೆಯಾಗುವುದರಿಂದ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯಕ್ಕೆ ಬೇಕಾದಷ್ಟು ರಕ್ತ ಮತ್ತು ಆಮ್ಲಜನಕ ಸಿಗದೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕೋರೊನರಿ ಆರ್ಟರಿ ಡಿಸೀಸ್ ಎಂದು ಕರೆಯಲಾಗುತ್ತದೆ. ಇಲ್ಲಿ ತಿಳಿಯಬೇಕಾದ ಪ್ರಮುಖ ವಿಚಾರವೆಂದರೆ ಹೃದಯದಲ್ಲಿ ಬ್ಲಾಕೇಜ್ ಅಚಾನಕ್ ಆಗಿ ಉಂಟಾಗುವುದಿಲ್ಲ. ಬದಲಾಗಿ ದೀರ್ಘಕಾಲದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಇದು ಆಗುವಂತಹದ್ದು. ಈ ಸಮಸ್ಯೆಯ ಲಕ್ಷಣಗಳು ಬಹಳ ಹಿಂದಿನಿಂದಲೇ ಕಾಣಿಸಿಕೊಳ್ಳುತ್ತವೆಯಾದರೂ ಅವನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ದೊಡ್ಡದಿದೆ ಎಂಬುದು ವಿಪರ್ಯಾಸ.
ಇದನ್ನೂ ಓದಿ: ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು; ಅಧ್ಯಯನದಿಂದ ಬಹಿರಂಗ
ವೈದ್ಯರ ಪ್ರಕಾರ ಕುಟುಂಬದಲ್ಲಿ ಹೃದಯ ರೋಗದ ಇತಿಹಾಸ ಇರುವವರು, ಹೈ ಬಿಪಿ (ರಕ್ತದೊತ್ತಡ) ಇರುವವರು ಮತ್ತು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಇರುವವರಿಗೆ ಅಪಾಯ ಹೆಚ್ಚು ಎನ್ನಲಾಗಿದೆ.
ಇನ್ನು ಇವೆಲ್ಲವೂ ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣ ಮತ್ತು ಯಾರಿಗೆ ಅಪಾಯ ಹೆಚ್ಚೆಂಬ ಮಾಹಿತಿಯಾದರೆ ಹೃದಯ ಸಂಬಂಧಿ ರೋಗಗಳಿಂದಲೇ ದೂರ ಉಳಿಯಲು ನಾವೇನು ಮಾಡಬಹುದು ಎಂಬೂದನ್ನೂ ತಿಳಿದುಕೊಳ್ಳಬೇಕಿದೆ. ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ ಎಂಬುದು ವೈದ್ಯರ ಮಾತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.