AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Health: ಕಣ್ಣಿನ ತುರಿಕೆ ನಿವಾರಿಸಲು ನೀವು ಏನು ಮಾಡಬಹುದು?

ಕೆಲವು ರೀತಿಯ ಕಣ್ಣಿನ ತುರಿಕೆಯನ್ನು ಡ್ರೈ ಐ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ತುರಿಕೆಯಿದ್ದರೆ ನಾವೇ ಮನೆಮದ್ದುಗಳನ್ನು ಬಳಸುವ ಬದಲು ನೇತ್ರಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಉತ್ತಮ. ಅಲರ್ಜಿಗಳು ಮತ್ತು ಸೋಂಕು ಸೇರಿದಂತೆ ವಿವಿಧ ಸಮಸ್ಯೆಗಳು ಕಣ್ಣಿನ ತುರಿಕೆಗೆ ಕಾರಣವಾಗಬಹುದು.

Eye Health: ಕಣ್ಣಿನ ತುರಿಕೆ ನಿವಾರಿಸಲು ನೀವು ಏನು ಮಾಡಬಹುದು?
ಕಣ್ಣಿನ ತುರಿಕೆ Image Credit source: istock
ಸುಷ್ಮಾ ಚಕ್ರೆ
|

Updated on: Apr 22, 2024 | 3:27 PM

Share

ಕಣ್ಣಿನ ಅಲರ್ಜಿಗಳು ಆಗಾಗ ಉಂಟಾಗುತ್ತಲೇ ಇರುತ್ತದೆ. ಇದರಿಂದ ಕಣ್ಣುಗಳ ತುರಿಕೆ (Itchy Eyes) ಉಂಟಾಗುತ್ತದೆ. ಈ ಅಲರ್ಜಿಗಳು ಪರಾಗ ಅಥವಾ ಪಿಇಟಿ ಡ್ಯಾಂಡರ್​ನಿಂದ ಹೆಚ್ಚು ಪ್ರಚೋದನೆಗೊಳಗಾಗುತ್ತದೆ. ಧೂಳು (Dust) ಮತ್ತು ಹೊಗೆಯಂತಹ ಉದ್ರೇಕಕಾರಿಗಳು, ಅಥವಾ ಲೋಷನ್‌ಗಳು, ಮೇಕ್ಅಪ್ ಅಥವಾ ಕಾಂಟ್ಯಾಕ್ಟ್ ಲೆನ್ಸ್ ದ್ರಾವಣಗಳಂತಹ ಉತ್ಪನ್ನಗಳು ಸಹ ಕಣ್ಣಿನ ಅಲರ್ಜಿಯ ಲಕ್ಷಣಗಳನ್ನು ಉಂಟುಮಾಡಬಹುದು. ಕಣ್ಣಿನ ತುರಿಕೆಯನ್ನು ನಿಯಂತ್ರಿಸಲು ಏನು ಮಾಡಬೇಕು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕೆಲವು ವೈದ್ಯಕೀಯ ಸಮಸ್ಯೆಗಳು ಕಣ್ಣಿನ ತುರಿಕೆಗೆ ಕಾರಣವಾಗಬಹುದು. ಹೊರಾಂಗಣ ವಸ್ತುಗಳಾದ ಮರಗಳು, ಹುಲ್ಲುಗಳು, ಕಳೆಗಳು ಮತ್ತು ಪೊದೆಗಳಿಂದ ಪರಾಗವೂ ಕಣ್ಣಿನ ತುರಿಕೆಗೆ ಕಾರಣವಾಗಬಹುದು. ಒಳಾಂಗಣ ವಸ್ತುಗಳಾದ ಧೂಳಿನ ಹುಳಗಳು, ಶಿಲೀಂಧ್ರಗಳು, ಅಚ್ಚು ಮತ್ತು ಸಾಕುಪ್ರಾಣಿಗಳ ಚರ್ಮದ ಸಣ್ಣ ತುಂಡುಗಳು ಕೂಡ ಇದಕ್ಕೆ ಕಾರಣವಾಗಬಹುದು. ಮಾನವ ನಿರ್ಮಿತ ವಸ್ತುಗಳಾದ ತಂಬಾಕು ಹೊಗೆ, ಸುಗಂಧ ದ್ರವ್ಯ, ರಾಸಾಯನಿಕಗಳು ಕೂಡ ಕಣ್ಣಿನ ಅಲರ್ಜಿಗೆ ಕಾರಣವಾಗಬಹುದು.

ಇದನ್ನೂ ಓದಿ: ನೈಸರ್ಗಿಕವಾಗಿ ಕಣ್ಣುಗಳನ್ನು ಆರೋಗ್ಯವಾಗಿಡುವುದು ಹೇಗೆ?

ಕಣ್ಣಿನ ತುರಿಕೆ ನಿಯಂತ್ರಿಸಲು ಏನು ಮಾಡಬೇಕು?:

1. ಕಾರಣವನ್ನು ಗುರುತಿಸಿ ಮತ್ತು ಚಿಕಿತ್ಸೆ ನೀಡಿ:

ಕಣ್ಣಿನ ತುರಿಕೆಯು ಅಲರ್ಜಿಗಳು, ಒಣ ಕಣ್ಣು, ಬ್ಲೆಫರಿಟಿಸ್ ಅಥವಾ ಕಣ್ಣಿನ ಸೋಂಕುಗಳಂತಹ ವಿವಿಧ ಸಮಸ್ಯೆಗಳ ಲಕ್ಷಣವಾಗಿರಬಹುದು. ಮೂಲ ಕಾರಣವನ್ನು ನಿರ್ಧರಿಸಲು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯಲು ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ.

2. ಕೋಲ್ಡ್ ಕಂಪ್ರೆಸ್‌ಗಳನ್ನು ಬಳಸಿ:

ತುರಿಕೆ ಇರುವ ಕಣ್ಣುಗಳಿಗೆ ಶುದ್ಧವಾದ, ತಂಪಾದ ಸಂಕುಚನವನ್ನು ಹಚ್ಚುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ತುರಿಕೆ ನಿವಾರಿಸಲು ಸಹಾಯ ಮಾಡುತ್ತದೆ.

3. ಐ ಡ್ರಾಪ್​​ಗಳನ್ನು ಬಳಸಿ:

ಕಣ್ಣಿನ ತುರಿಕೆಗೆ ಕಾರಣವೇನೆಂಬುದನ್ನು ಅವಲಂಬಿಸಿ ಐ ಡ್ರಾಪ್​ ಅಥವಾ ಕೃತಕ ಕಣ್ಣೀರಿನ ಹನಿಗಳನ್ನು ಬಳಸಬಹುದು. ಇದು ತಾತ್ಕಾಲಿಕ ಪರಿಹಾರ ನೀಡುತ್ತದೆ.

ಇದನ್ನೂ ಓದಿ: Eye Care Tips: ಬೇಸಿಗೆ ಸಮಯದಲ್ಲಿ ಕಣ್ಣಿನ ರಕ್ಷಣೆ ಮಾಡಲು ಹೀಗೆ ಮಾಡಿ

4. ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ:

ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯುವುದು ಮತ್ತು ಕೊಳಕಾದ ಕೈಗಳಿಂದ ನಿಮ್ಮ ಕಣ್ಣುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಹರಡುವಿಕೆಯನ್ನು ತಡೆಯುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

5. ಜೀವನಶೈಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಿ:

ಕಣ್ಣಿನ ತುರಿಕೆಗೆ ಕಾರಣವಾಗುವ ಪ್ರಚೋದಕಗಳನ್ನು ಗುರುತಿಸುವುದು ಮತ್ತು ಅವುಗಳ ಬಳಕೆಯನ್ನು ತಪ್ಪಿಸುವುದು ಅಗತ್ಯ. ಇದು ಕಣ್ಣಿನ ಆಯಾಸ, ಕಣ್ಣಿನ ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ