AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HaathSafeRakho: ಕೈ ಸ್ವಚ್ಛವಾಗಿಟ್ಟುಕೊಳ್ಳಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟಿವಿ9 ನೆಟ್​ವರ್ಕ್​ ಅಭಿಯಾನ

ನೋಯ್ಡಾ, ದೆಹಲಿ, ಮುಂಬೈ, ಥಾಣೆ, ಪುಣೆ, ನವಿ ಮುಂಬೈ, ಹೈದರಾಬಾದ್​, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ 11 ನಗರಗಳಲ್ಲಿ ಈ ಅಭಿಯಾನವನ್ನು ನಡೆಸಲಾಗಿದ್ದು, ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

HaathSafeRakho: ಕೈ ಸ್ವಚ್ಛವಾಗಿಟ್ಟುಕೊಳ್ಳಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟಿವಿ9 ನೆಟ್​ವರ್ಕ್​ ಅಭಿಯಾನ
HaathSafeRakho
TV9 Web
| Edited By: |

Updated on: Jul 23, 2021 | 8:05 PM

Share

ಕೊರೋನಾ ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕೊವಿಡ್​ ಎರಡನೇ ಅಲೆ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ 3ನೇ ಅಲೆಯ ಮತ್ತಷ್ಟು ಅಪಾಯಕಾರಿಯಾಗಿರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಜನರು ಕೂಡ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಇದಾಗ್ಯೂ ಜನರು ಈ ಕುರಿತಂತೆ ನಿರ್ಲಕ್ಷ್ಯ ತೋರುತ್ತಿದ್ದು, ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಟಿವಿ9 ನೆಟ್​ವರ್ಕ್​ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಟಿವಿ9 ನೆಟ್​ವರ್ಕ್​ ಮತ್ತು ಬಿಸ್ಲೆರಿ ಕಂಪೆನಿ ಹ್ಯಾಂಡ್ ಪ್ಯೂರಿಫೈಯರ್ #HaathSafeRakho ಅಭಿಯಾನಯನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ಜನರಲ್ಲಿ ಕೊರೋನಾ ಮಹಾಮಾರಿಯ ಕುರಿತಾದ ಜಾಗೃತಿ ಮೂಡಿಸಲು ಮುಂದಾಗಿದೆ.

ಈ ಅಭಿಯಾನದ ಮೂಲಕ ಕೋವಿಡ್ ಸುರಕ್ಷತೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಗುರಿಯನ್ನು ಹೊಂದಿದ್ದು, ವಿಶೇಷವಾಗಿ ಕೈ ಸ್ವಚ್ಛೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಲಿದೆ. ಕೊರೊನಾವೈರಸ್ ಬಗ್ಗೆ ಹೆಚ್ಚಿನ ಜನರು ನಿರ್ಲಕ್ಷ್ಯ ತೋರಲಾರಂಭಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು #HaathSafeRakho (ಕೈ ಸ್ವಚ್ಛವಾಗಿಟ್ಟುಕೊಳ್ಳಿ) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವ್ಯಾಕ್ಸಿನೇಷನ್ ಮೊದಲು ಹಾಗೂ ನಂತರ ಕೈಗಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕೆಂಬ ಸುರಕ್ಷಾ ಅಭಿಯಾನವಾಗಿದೆ. ಕೋವಿಡ್ ಸುರಕ್ಷತೆಯ ಸಂದೇಶವನ್ನು ಮೊದಲು ಮನೆ ಮನೆಗೆ ತಲುಪಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು, ಪ್ರತಿಯೊಬ್ಬರು ಪ್ರತಿ ಸಂದರ್ಭದಲ್ಲೂ ಕೈಗಳ ಸ್ವಚ್ಛವಾಗಿಟ್ಟುಕೊಂಡು ಹೇಗೆ ಕೊರೋನಾದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಈ ಅಭಿಯಾನ ತಿಳಿಸಲಿದೆ.

ಚುಚ್ಚು ಮದ್ದಿನ (ವ್ಯಾಕ್ಸಿನೇಷನ್​) ಬಳಿಕ ಕೂಡ ಕೊರೋನಾ ವಿರುದ್ದ ಸುರಕ್ಷತೆ ಅತ್ಯವಶ್ಯಕ ಎಂಬ ಸಂದೇಶವನ್ನು ಬಲಪಡಿಸಲು ಜುಲೈ 16, ಶುಕ್ರವಾರದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅದರಂತೆ ಪ್ರಮುಖ 11 ನಗರಗಳಲ್ಲಿ 11 ದಿನಗಳ ಕಾಲ ಒಟ್ಟು 450ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತಲುಪಲಿದೆ. ಈ ಕೇಂದ್ರಗಳಲ್ಲಿ ಲಸಿಕೆ ಪಡೆಯುತ್ತಿರುವ ಜನರಿಗೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ತಿಳಿಸಿ, ಜಾಗೃತಿ ಮೂಡಿಸಲಾಗುತ್ತದೆ.

ಈ ಬಗ್ಗೆ ಮಾತನಾಡಿರುವ ಬಿಸ್ಲೆರಿ ಇಂಟರ್‌ನ್ಯಾಷನಲ್‌ನ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್‌ನ ನಿರ್ದೇಶಕಿ ಅಂಜನಾ ಘೋಷ್ ಅವರು, “ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಮೂಡಿದ್ದು, ವೈಯಕ್ತಿಕವಾಗಿ ಸ್ವಚ್ಛತೆ ವಿಷಯದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಸ್ವಚ್ಛತೆ ವಿಷಯದಲ್ಲಿ ಜಾಗೃತಿ ಹೊಂದಿದ್ದರೂ ಗ್ರಾಹಕರು ಉತ್ತಮವಾದ ಸುವಾಸನೆಯ ಉತ್ಪನ್ನವನ್ನು ಬಯಸುತ್ತಾರೆ. ಆದರೆ ಅಂತಹ ಉತ್ಪನ್ನಗಳು ಸುವಾಸನೆ ನೀಡುತ್ತದೆ ಹೊರತು ವೈರಸ್​ಗಳಿಂದ ರಕ್ಷಣೆ ನೀಡುವುದಿಲ್ಲ. ಇವೆಲ್ಲವನ್ನು ಪರಿಗಣಿಸಿ ಹಲವು ವೈಶಿಷ್ಟ್ಯಗಳೊಂದಿಗೆ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್‌ ಅತ್ಯುತ್ತಮ ಉತ್ಪನ್ನವನ್ನು ಪರಿಚಯಿಸಿತು. ಇದೀಗ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್‌ ಪ್ಯಾನ್ ಇಂಡಿಯಾ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ಕಿರಾಣಿ ಅಂಗಡಿಗಳು, , ಸ್ಟೇಷನರಿ ಅಂಗಡಿ, ಔಷಧ ಅಂಗಡಿ, ಪಾನ್ ಅಂಗಡಿ, ಕಾಸ್ಮೆಟಿಕ್ಸ್ ಶಾಪ್, ಸಲೊನ್​ನಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ, ಡಿ-ಮಾರ್ಟ್, ರಿಲಯನ್ಸ್ ಫ್ರೆಶ್, ರಿಲಯನ್ಸ್ ಸ್ಮಾರ್ಟ್, ಜಿಯೋ ಮಾರ್ಟ್ ಮತ್ತು ಮೋರ್ ರಿಟೇಲ್ ಲಿಮಿಟೆಡ್‌ನಲ್ಲಿದೆ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್‌ ಲಭ್ಯವಿದೆ. ಅಲ್ಲದೆ, www.shop.bisleri.com ಮೂಲಕ ಆನ್‌ಲೈನ್‌ನಲ್ಲೂ ಇವುಗಳನ್ನು ಖರೀದಿಸಬಹುದು. ” ಎಂದು ತಿಳಿಸಿದ್ದಾರೆ.

ಖ್ಯಾತ ವೈದ್ಯರೊಂದಿಗಿನ ವರ್ಚುವಲ್ ಚರ್ಚಾ ವೇದಿಕೆ ಮೂಲಕ #HaathSafeRakho ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಾಜಿ ಕೇಂದ್ರ ಸಚಿವ ಮತ್ತು ಗೌತಮ್ ಬುದ್ಧನಗರದ ಸಂಸದ ಡಾ.ಮಹೇಶ್ ಶರ್ಮಾ, ಕೈಲಾಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಸಿಎಂಡಿ ಆಗಿರುವ ಪದ್ಮಶ್ರೀ ಡಾ.ಡಿ.ಎಸ್.ರಾಣಾ, ಸರ್ ಗಂಗಾ ರಾಮ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಅಧ್ಯಕ್ಷರು, ಬಿಸ್ಲೆರಿ ಇಂಟರ್‌ನ್ಯಾಷನಲ್‌ನ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್‌ನ ನಿರ್ದೇಶಕಿ ಅಂಜನಾ ಘೋಷ್ ಮತ್ತು ಏಮ್ಸ್ ಸಮುದಾಯ ಪ್ರಾಧ್ಯಾಪಕ ಡಾ. ಸಂಜಯ್ ಕೆ ರೈ ಅವರು ಈ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ನೋಯ್ಡಾ, ದೆಹಲಿ, ಮುಂಬೈ, ಥಾಣೆ, ಪುಣೆ, ನವಿ ಮುಂಬೈ, ಹೈದರಾಬಾದ್​, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ 11 ನಗರಗಳಲ್ಲಿ ಈ ಅಭಿಯಾನವನ್ನು ನಡೆಸಲಾಗಿದ್ದು, ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

“ಸರ್ಕಾರದ ವ್ಯಾಕ್ಸಿನೇಷನ್ ಡ್ರೈವ್ ವೇಗವನ್ನು ಹೆಚ್ಚಿಸುತ್ತಿದ್ದು, ಅದರ ಜೊತೆಗೆ ಕೈಗಳ ಸ್ವಚ್ಛೆ ಕಾಪಾಡಿಕೊಳ್ಳುವ ಮೂಲಕ ಭವಿಷ್ಯದ ಅಲೆಗಳನ್ನು ತಡೆಗಟ್ಟಲು ಜನರನ್ನು ಪ್ರೇರೇಪಿಸಬೇಕಿದೆ. ಇದೇ ಉದ್ದೇಶದೊಂದಿಗೆ #HaathSafeRakho ಅಭಿಯಾನದಲ್ಲಿ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್‌ ಜೊತೆ ಪಾಲುದಾರರಾಗಿರುವ ಬಗ್ಗೆ ಖುಷಿಯಿದೆ. ಕೋವಿಡ್ ಸಂಧರ್ಭದಲ್ಲಿ ಜಾಗೃತಿ ಮೂಡಿಸುವ ಈ ಅಭಿಯಾನವು ಮಹತ್ವದ್ದಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಟಿವಿ 9 ನೆಟ್‌ವರ್ಕ್‌ನ ಸಿಒಒ, ಸ್ಟುಡಿಯೋ 9 (ಡಿಜಿಟಲ್ ಮತ್ತು ಬ್ರಾಡ್‌ಕಾಸ್ಟಿಂಗ್) ರಕ್ತಿಮ್ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

Follow Us
Web contact
Web contact

TV9 Kannada

Read More
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!