Health Tips: ಪ್ರತಿದಿನ ಬಾದಾಮಿ ಹಾಲು ಕುಡಿದ್ರೆ ಸಿಗುತ್ತೆ ಹಲವು ಪ್ರಯೋಜನಗಳು
Health Tips in Kannada: ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಹಾಲಿನ ಬದಲಾಗಿ ನೀವು ಬಾದಾಮಿ ಹಾಲನ್ನು ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ.
health benefits of almond milk: ಹಾಲು ಎಂಬುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಬಾದಾಮಿ ಹಾಲು ಇನ್ನಷ್ಟು ಆರೋಗ್ಯಕರ. ಏಕೆಂದರೆ ಇದು ಪೌಷ್ಟಿಕ-ಭರಿತ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಪಾನೀಯವಾಗಿದೆ. ಬಾದಾಮಿಯಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಕೆ, ವಿಟಮಿನ್ ಇ, ಪ್ರೋಟೀನ್, ಸತು ಮತ್ತು ತಾಮ್ರ ಅಂಶಗಳು ಆರೋಗ್ಯಕರ ದೇಹಕ್ಕೆ ಅಗತ್ಯ. ಹೆಲ್ತ್ ಲೈನ್ ಮಾಹಿತಿ ಪ್ರಕಾರ, ಬಾದಾಮಿ ಹಾಲು ದೇಹಕ್ಕೆ ಬೇಕಾದ ಹಲವು ಆರೋಗ್ಯಕರ ಅಂಶಗಳೊಂದಿಗೆ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಪ್ರತಿನಿತ್ಯ ಈ ಹಾಲನ್ನು ಕುಡಿಯುವುದರಿಂದ ಹಲವು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಹಾಗಿದ್ರೆ ಬಾದಾಮಿ ಹಾಲನ್ನು ಕುಡಿಯುವುದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು ಎಂದು ತಿಳಿಯೋಣ.
1. ತೂಕವನ್ನು ಕಡಿಮೆ ಮಾಡುತ್ತದೆ: ಸಾಮಾನ್ಯವಾಗಿ ಜನರು ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಎಂದು ಭಾವಿಸುತ್ತಾರೆ. ಆದರೆ ಬಾದಾಮಿಯನ್ನು ಪಾನೀಯವಾಗಿ ಬಳಸಿದರೆ ಅದು ಕಡಿಮೆ ಕ್ಯಾಲೋರಿ ಪಾನೀಯವಾಗುತ್ತದೆ. ಹಾಗಾಗಿ ಕಡಿಮೆ ಕೊಬ್ಬಿನ ಆಹಾರವನ್ನು ತಿನ್ನಲು ಬಯಸುವವರು ಬಾದಾಮಿ ಹಾಲನ್ನು ಕುಡಿಯುವುದು ಉತ್ತಮ . ಏಕೆಂದರೆ ಇದು ಇತರ ಹಾಲುಗಿಂತ ಶೇ. 80 ರಷ್ಟು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.
2. ಸಕ್ಕರೆ ಕಡಿಮೆ: ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಹಾಲಿನ ಬದಲಾಗಿ ನೀವು ಬಾದಾಮಿ ಹಾಲನ್ನು ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗೆಯೇ ಫೈಬರ್ ಅಂಶವು ಬಾದಾಮಿ ಹಾಲಿನಲ್ಲಿ ಸಮೃದ್ಧವಾಗಿರುತ್ತದೆ.
3. ವಿಟಮಿನ್ ಇ ಸಮೃದ್ಧ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಸೇವಿಸಿದರೆ, ಅದು ದಿನಕ್ಕೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಯ 20 ರಿಂದ 50 ಪ್ರತಿಶತದಷ್ಟು ಪೂರೈಸುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಇದು ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಒತ್ತಡ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ.
4. ಭರಪೂರ ಕ್ಯಾಲ್ಸಿಯಂ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶೇ. 20 ರಿಂದ 45 ರಷ್ಟು ಕ್ಯಾಲ್ಸಿಯಂ ಪಡೆಯಬಹುದು. ಇದು ನಿಮ್ಮ ಹೃದಯ, ಮೂಳೆಗಳು, ನರಗಳು ಇತ್ಯಾದಿಗಳ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
5. ವಿಟಮಿನ್ ಡಿ: ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಹೃದಯದ ಕಾರ್ಯ, ಮೂಳೆಯ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಬಾದಾಮಿ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.
6. ಲ್ಯಾಕ್ಟೋಸ್ ಮುಕ್ತ ಹಾಲು: ಅನೇಕರು ಲ್ಯಾಕ್ಟೋಸ್ ಹೊಂದಿರುವ ಹಾಲನ್ನು ಸೇವಿಸುವುದಿಲ್ಲ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಲ್ಯಾಕ್ಟೋಸ್ ಹಾಲಿನ ಬದಲಾಗಿ ಸೋಯಾ ಮಿಲ್ಕ್ ಅನ್ನು ಸೇವಿಸುತ್ತಾರೆ. ಆದರೆ ಸೋಯಾ ಹಾಲು ಸೇವಿಸಲು ಇಚ್ಛಿಸಿದವರಿಗೆ ಬಾದಾಮಿ ಹಾಲು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಹಾಲಿನಿಂದ ಪಡೆಯಬಹುದಾದ ಎಲ್ಲಾ ಆರೋಗ್ಯಕರ ಪೌಷ್ಠಿಕಾಂಶಗಳನ್ನು ಬಾದಾಮಿ ಹಾಲಿನ ಸೇವನೆ ಮೂಲಕ ತಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(health benefits of drinking almond milk)