ಲಿವರ್ ಆರೋಗ್ಯಕ್ಕೆ ಆಲ್ಕೋಹಾಲ್ ಗಿಂತ ನೀವು ಸೇವಿಸುವ ಈ ಆಯಿಲ್ ಗಳೇ ಹೆಚ್ಚು ಅಪಾಯಕಾರಿ!
ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿ ಮಾಡಿಕೊಳ್ಳುತ್ತಿರುವ ಬದಲಾವಣೆಗಳು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದರಲ್ಲಿಯೂ ಕೊಬ್ಬಿನ ಪಿತ್ತಜನಕಾಂಗ, ಯಕೃತ್ತಿನ ಸೋಂಕು ಮತ್ತು ಯಕೃತ್ತಿನ ಸಿರೋಸಿಸ್ ಗೆ ಸಂಬಂಧಿಸಿದ ಪ್ರಕರಣಗಳು ಬಹಳ ಸಾಮಾನ್ಯವಾಗುತ್ತಿವೆ. ಆದರೆ ಇದಕ್ಕೆಲ್ಲಾ ಕಾರಣ ಆಲ್ಕೋಹಾಲ್, ಸಕ್ಕರೆ ಅಥವಾ ಎಣ್ಣೆಯುಕ್ತ ಆಹಾರಗಳು ಎಂದು ಭಾವಿಸುತ್ತೇವೆ. ಆದರೆ ಯಕೃತ್ತಿಗೆ ಅಂದರೆ ಲಿವರ್ ಗೆ ಆಲ್ಕೋಹಾಲ್‌ಗಿಂತ ಹೆಚ್ಚು ಅಪಾಯಕಾರಿ ಆಹಾರವಿದೆ ಎಂದರೆ ನಂಬುತ್ತೀರಾ? ಹೌದು. ನೀವು ನಂಬಲೇ ಬೇಕು. ಯಾವುದು ಅದು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿ ಮಾಡಿಕೊಳ್ಳುತ್ತಿರುವ ಬದಲಾವಣೆಗಳು ಮತ್ತು ಆಹಾರ ಪದ್ಧತಿಗಳಿಂದಾಗಿ, ಮಧುಮೇಹ ಮಾತ್ರವಲ್ಲದೆ ಯಕೃತ್ತು ಮತ್ತು ಮೂತ್ರಪಿಂಡದ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದೆ. ಅದರಲ್ಲಿಯೂ ಕೊಬ್ಬಿನ ಪಿತ್ತಜನಕಾಂಗ, ಯಕೃತ್ತಿನ ಸೋಂಕು ಮತ್ತು ಯಕೃತ್ತಿನ ಸಿರೋಸಿಸ್ ಗೆ ಸಂಬಂಧಿಸಿದ ಪ್ರಕರಣಗಳು ಬಹಳ ಸಾಮಾನ್ಯವಾಗುತ್ತಿವೆ. ಆಲ್ಕೋಹಾಲ್, ಸಕ್ಕರೆ ಅಥವಾ ಎಣ್ಣೆಯುಕ್ತ ಆಹಾರಗಳು ಮಾತ್ರ ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಯಕೃತ್ತಿಗೆ ಅಂದರೆ ಲಿವರ್ ಗೆ (liver) ಆಲ್ಕೋಹಾಲ್‌ಗಿಂತ ಹೆಚ್ಚು ಅಪಾಯಕಾರಿಯಾಗಿರುವ ಆಹಾರವನ್ನು ನಾವು ಪ್ರತಿನಿತ್ಯ ಸೇವನೆ ಮಾಡುತ್ತಿದ್ದೇವೆ ಎಂದರೆ ನಂಬುತ್ತೀರಾ? ಹೌದು. ಪ್ರತಿನಿತ್ಯ ಆರೋಗ್ಯಕ್ಕೆ ಒಳ್ಳೆಯದು ಎಂದು ಬಳಸುವ ಸೀಡ್ಸ್ ಆಯಿಲ್ (seed oil) ಗಳು ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಹಾಗಾದರೆ ಯಾವ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವೈದ್ಯರ ಪ್ರಕಾರ, ಯಕೃತ್ತು ಅಂದರೆ ನಮ್ಮ ಲಿವರ್ ಗೆ ಹಾನಿ ಮಾಡುವ ಅತ್ಯಂತ ಅಪಾಯಕಾರಿ ಆಹಾರಗಳಲ್ಲಿ ಬೀಜದ ಎಣ್ಣೆ ಅಂದರೆ ಸೀಡ್ಸ್ ಆಯಿಲ್ ಗಳು ಕೂಡ ಒಂದು. ಇವುಗಳನ್ನು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಲಾಗುತ್ತದೆ. ಮಾತ್ರವಲ್ಲ ಈ ಪ್ರಕ್ರಿಯೆಯಲ್ಲಿ, ಎಣ್ಣೆಯನ್ನು ಪೆಟ್ರೋಲ್‌ನಲ್ಲಿ ಕಂಡು ಬರುವ ಹೆಕ್ಸೇನ್ ಎಂಬ ದ್ರಾವಕದೊಂದಿಗೆ ಸಂಯೋಜಿಸಲಾಗುತ್ತದೆ. ಇದು ಅವುಗಳನ್ನು ಅಪಾಯಕಾರಿಯನ್ನಾಗಿ ಮಾಡುತ್ತದೆ.
ಅಪಾಯಕಾರಿ ಬೀಜದ ಎಣ್ಣೆಗಳು:
ಸೋಯಾಬೀನ್ ಎಣ್ಣೆ, ಕ್ಯಾನೋಲ ಎಣ್ಣೆ, ಕಾರ್ನ್ ಎಣ್ಣೆ, ಹತ್ತಿಬೀಜದ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ದ್ರಾಕ್ಷಿ ಬೀಜದ ಎಣ್ಣೆ ಮುಂತಾದ ಎಣ್ಣೆಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಲಿವರ್ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ಲಿವರ್ ಆರೋಗ್ಯಕ್ಕೆ ಯಾವ ಎಣ್ಣೆ ಒಳ್ಳೆಯದು?
ಈ ಎಣ್ಣೆಗಳು ಬಹುತೇಕ ಎಲ್ಲಾ ಆಹಾರಗಳಲ್ಲಿ ಕಂಡುಬರುತ್ತವೆ. ಅಂದರೆ ನಾವು ಹೋಗುವ ರೆಸ್ಟೋರೆಂಟ್‌ಗಳಲ್ಲಿ ತಯಾರಿಸುವ ಆಹಾರಗಳಲ್ಲಿ, ಟೈಮ್ ಪಾಸ್ ಗೆ ತಿನ್ನುವ ಚಿಪ್ಸ್, ತಿಂಡಿಗಳು, ಪ್ರೋಟೀನ್ ಬಾರ್‌ಗಳು, ಮೇಯನೇಸ್ ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಇಂತಹ ಎಣ್ಣೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇಂತಹ ಆಹಾರಗಳ ಸೇವನೆ ಮಾಡಿದಾಗ ಇದು ಯಕೃತ್ತಿನ ಆಳಕ್ಕೆ ಹೋಗಿ ವರ್ಷಗಳ ಕಾಲ ಅಲ್ಲಿಯೇ ಉಳಿಯುತ್ತವೆ. ಕಾಲಾನಂತರದಲ್ಲಿ, ಇದು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹಾಗಾಗಿ ನೀವು ಸೇವನೆ ಮಾಡುವ ಆಹಾರದಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಯಕೃತ್ತನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ರೀತಿ ಬೀಜದ ಎಣ್ಣೆಗಳ ಬದಲಿಗೆ, ಅಡುಗೆಗೆ ಬೆಣ್ಣೆ, ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ. ಕಡಲೆಕಾಯಿ ಎಣ್ಣೆ ಕೂಡ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದು ಇವುಗಳನ್ನು ಕೂಡ ಬಳಕೆ ಮಾಡಬಹುದಾಗಿದೆ.
ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ ಇರುವವರು ವೈದ್ಯರ ಸಲಹೆಯ ಮೇರೆಗೆ TUDCA (ಒಂದು ರೀತಿಯ ಬೋರಿಕ್ ಆಮ್ಲ) ಬಳಸಬಹುದು. ಇದು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದನ್ನು ವೈದ್ಯರನ್ನು ಸಂಪರ್ಕಿಸಿದ ನಂತರವೇ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
