ಕೊಲೆಸ್ಟ್ರಾಲ್(Cholesterol) ಮಟ್ಟವು ಹೆಚ್ಚಾದಂತೆ ಆರೋಗ್ಯ(Health) ಸಮಸ್ಯೆಗಳು ಕಾಡುವ ಸಂಭವವೇ ಹೆಚ್ಚು. ಈ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕಕ ಕೊಲೆಸ್ಟ್ರಾಲ್ ಹೊಂದಿದ್ದರೆ ಪಾದಗಳಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ. ಕೆಲವೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯವಾಗುತ್ತದೆ. ಹಾಗಾಗಿ ಈ ಕೆಲವು ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.
* ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ನ ಆರಂಭಿಕ ಲಕ್ಷಣವೆಂದರೆ ವಾಕಿಂಗ್ ಅಥವಾ ಸ್ವಲ್ಪ ವ್ಯಾಯಾಮ ಮಾಡಿದ ನಂತರವೂ ಉಸಿರಾಟದ ತೊಂದರೆಯು ಉಂಟಾಗುತ್ತದೆ. ಆದರೆ ಈ ಉಸಿರಾಟದ ತೊಂದರೆಗೆ ಇತರ ಹಲವು ಕಾರಣಗಳು ಇರಬಹುದು. ಹೀಗಾಗಿ ರಕ್ತ ಪರೀಕ್ಷೆ ಮಾಡದೇನೇ ಅಧಿಕ ಕೊಲೆಸ್ಟ್ರಾಲ್ ಇದೆ ಎಂದು ಹೇಳುವಂತಿಲ್ಲ.
* ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಪಾದಗಳಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರಾತ್ರಿಯಲ್ಲಿ ಪಾದಗಳು ತಣ್ಣಗಾಗುತ್ತವೆ. ಚಳಿಗಾಲವಿರಲಿ, ಬೇಸಿಗೆಯಿರಲಿ, ಮಳೆಗಾಲವಿರಲಿ.. ಎಲ್ಲ ಕಾಲದಲ್ಲೂ ರಾತ್ರಿ ವೇಳೆ ಪಾದಗಳು ತಣ್ಣಗಾಗುತ್ತಿದ್ದರೆ ಅದು ಕೊಲೆಸ್ಟ್ರಾಲ್ ಇದೆಯೆನ್ನುವುದರ ಸಂಕೇತವಾಗಿದೆ.
ಮತ್ತಷ್ಟು ಓದಿ: ICMR Dietary Guidelines Part 2 : ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?
* ಪಾದಗಳಲ್ಲಿ ಕಾಣಿಸಿಕೊಳ್ಳುವ ಊತವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೆಲವರಿಗೆ ಪಾದಗಳು ಉರಿಯುತ್ತವೆ. ದೇಹದಲ್ಲಿ ಪಿತ್ತರಸ ಹೆಚ್ಚಾದಾಗಲೂ ಹೀಗೂ ಆಗಬಹುದು. ಆದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಲೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
* ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕಾಲುಗಳ ನರಗಳ ಹಾನಿಯಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ ಪಾದಗಳು, ಕಾಲ್ಬೆರಳುಗಳಲ್ಲಿನ ನರಗಳಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ