ಹತ್ತರಲ್ಲಿ ಒಬ್ಬರು ಮಧುಮೇಹ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದ್ದು, ಈಗಾಗಲೇ ವಿಶ್ವದ ಮಧುಮೇಹ ರಾಜಧಾನಿ ಎಂಬ ಪಟ್ಟ ಕಟ್ಟಿಕೊಂಡಿದೆ. ಇನ್ನು ಭಾರತದಲ್ಲಿ ವಾಯು ಮಾಲಿನ್ಯದ ಪ್ರಮಾಣವೂ ಭಯಾನಕವಾಗಿದೆ. ಇದರ ಸಮ್ಮುಖದಲ್ಲಿ ಮಧುಮೇಹ (diabetes) ಮತ್ತು ವಾಯು ಮಾಲಿನ್ಯಕ್ಕೆ (air pollution levels) ಸಂಬಂಧ ಕಲ್ಪಿಸಲಾಗಿದೆ. ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೆಚ್ಚುತ್ತಿರುವ ಮಧುಮೇಹದ ಹೊರೆಯನ್ನು ತಡೆಯಲು ಸಾಧ್ಯ ಎಂದು ಆರೋಗ್ಯ ತಜ್ಞರು (health experts) ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ಭಾರತೀಯರಲ್ಲಿ ಹತ್ತನೇ ಒಂದು ಭಾಗದಷ್ಟು ಜನರು ಮಧುಮೇಹ ಹೊಂದಿರುವ ದೇಶವನ್ನು ಈಗಾಗಲೇ ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತವು 101 ಮಿಲಿಯನ್ ಮಧುಮೇಹಿಗಳು ಮತ್ತು 136 ಮಿಲಿಯನ್ ಪ್ರಿ-ಡಯಾಬಿಟಿಕ್ ಜನರಿಗೆ ನೆಲೆಯಾಗಿದೆ ಎಂದು ಡೇಟಾ ತೋರಿಸುತ್ತದೆ. ದೀರ್ಘಕಾಲದ ಕಾಯಿಲೆಯ ಹರಡುವಿಕೆಯು ವಿಶೇಷವಾಗಿ ಯುವ ವಯಸ್ಕರಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ವಾಯು ಮಾಲಿನ್ಯವು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊದಲು ತಿಳಿದಿತ್ತು. ಭಾರತದಲ್ಲಿ ಮಧುಮೇಹದ ಆಕ್ರಮಣಕ್ಕೆ ವಾಯು ಮಾಲಿನ್ಯವು ಗಮನಾರ್ಹ ಕೊಡುಗೆಯಾಗಿದೆ ಎಂದು ಸಂಶೋಧನೆಯು ಈಗ ದೃಢಪಡಿಸುತ್ತಿದೆ.
ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನವು (Lancet study) ಜಾಗತಿಕವಾಗಿ ಟೈಪ್ 2 ಡಯಾಬಿಟಿಸ್ ಬಾಧಿತರ ಪೈಕಿ ಶೇ. 20 ರಷ್ಟು ಬಾಧಿತರು 2·5 ಮೈಕ್ರೊಮೀಟರ್ಗಳು ಅಥವಾ ಅದಕ್ಕಿಂತ ಕಡಿಮೆ (PM2·5) ವ್ಯಾಸದ ಕಣಗಳ ಮ್ಯಾಟರ್ಗೆ (ಪಿಎಂ) ದೀರ್ಘಕಾಲದಿಂದ ಒಡ್ಡಿಕೊಳ್ಳುವುದರಿಂದ ಬರುತ್ತದೆ ಎಂದು ತೋರಿಸಿದೆ.
ಸುಮಾರು 13.4 ಪ್ರತಿಶತ ಟೈಪ್ 2 ಡಯಾಬಿಟಿಸ್ ಪ್ರಕರಣಗಳು PM2.5 ಪ್ರಮಾಣದ ಮಾಲಿನ್ಯನಿಂದ ಸೃಷ್ಟಿಯಾಗುತ್ತಿದ್ದು, 6.5 ಪ್ರತಿಶತ ಪ್ರಕರಣಗಳು ಗೃಹ ವಾಯು ಮಾಲಿನ್ಯದಿಂದ ಸೃಷ್ಟಿಯಾಗುತ್ತಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಮ್ಯಾಕ್ಸ್ ಹೆಲ್ತ್ಕೇರ್ನ ಎಂಡೋಕ್ರೈನಾಲಜಿ ಮತ್ತು ಡಯಾಬಿಟಿಸ್ ವಿಭಾಗದ ಅಧ್ಯಕ್ಷ ಡಾ ಅಂಬ್ರಿಶ್ ಮಿಥಾಲ್ ಅವರು ಹೇಳುವಂತೆ ಮಾನವನ ಕೂದಲಿಗಿಂತ 30 ಪಟ್ಟು ತೆಳ್ಳಗಿರುವ PM 2.5 ಪ್ರಮಾಣದ ಮಾಲಿನ್ಯವು ಟೈಪ್ ಟು ಡಯಾಬಿಟಿಸ್ನ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಮಾಹಿತಿಯಿದೆ.
ಈ ಅಲ್ಪ ಪ್ರಮಾಣದ ವಾಯುಮಾಲಿನ್ಯಕ್ಕೆ ಕೇವಲ ಒಂದು ತಿಂಗಳ ಕಾಲ ಒಡ್ಡಿಕೊಂಡರೂ ಸಹ ಇನ್ಸುಲಿನ್ ಪ್ರತಿರೋಧದ ಅಪಾಯ ಹೆಚ್ಚಾಗುತ್ತದೆ ಮತ್ತು ಮಧುಮೇಹವನ್ನು ಹೆಚ್ಚಿಸಸಬಹುದು. ಇನ್ನು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮಧುಮೇಹದ ಅಪಾಯವು ಶೇಕಡಾ 20 ರಷ್ಟು ಹೆಚ್ಚಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟವು ವಿಶ್ವದಲ್ಲೇ ಅತಿ ಹೆಚ್ಚು. 2023 ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಂತರ ದೇಶವು ಜಾಗತಿಕವಾಗಿ ಮೂರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದೆ.
ಆದ್ದರಿಂದ, ವಿಶ್ವ ಆರೋಗ್ಯ ಸಂಸ್ಥೆಯು WHO ಪ್ರತಿ ಘನ ಮೀಟರ್ಗೆ 5 ಮೈಕ್ರೋ ಗ್ರಾಂ ನಷ್ಟು PM 2.5 ಒಪ್ಪತಕ್ಕದ್ದು ಎಂದು ಶಿಫಾರಸು ಮಾಡಿದೆ. ಆದರೆ ದುರದೃಷ್ಟಕರವೆಂದರೆ ಭಾರತದಲ್ಲಿ ಅದರ ಪ್ರಮಾಣ ಸರಾಸರಿ 50 ಆಗಿದೆ ಮತ್ತು ಕೆಲವು ನಗರಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶ್ವಾಸಕೋಶದ ಮೇಲೆ ವಾಯು ಮಾಲಿನ್ಯ ಪರಿಣಾಮ ಬೀರುವುದನ್ನು ಈಗಾಗಲೇ ಚೆನ್ನಾಗಿ ದಾಖಲಿಸಲಾಗಿದೆ. ಇನ್ನು, ಇತ್ತೀಚಿನ ಪುರಾವೆಗಳು ವಾಯುಮಾಲಿನ್ಯದಿಂದ ಎಂಡೋಕ್ರೈನ್ ಡಿಸ್ರಪ್ಟರ್ (endocrine disruptor) ಬಾಧಕವಾಗಿ ಟೈಪ್ 2 ಡಯಾಬಿಟಿಸ್ಗೆ ಕಾರಣವಾಗುತ್ತದೆ ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಡಾ. ವಿ ಮೋಹನ್ ತಿಳಿಸಿದ್ದಾರೆ.
Also Read: Stridhan law in IPC -ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ
ದೆಹಲಿ ಮತ್ತು ಚೆನ್ನೈನಲ್ಲಿ 7 ವರ್ಷಗಳ ಕಾಲ ವಾಸಿಸುವ 12,064 ವಯಸ್ಕರನ್ನು ಅನುಸರಿಸಿದ ಭಾರತದ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ: ಪ್ರತಿ ಘನ ಮೀಟರ್ ಗಾಳಿಗೆ 10 ಮಿಲಿಗ್ರಾಂಗಳಷ್ಟು, PM2.5 ಗೆ ಮಾಸಿಕ ಸರಾಸರಿ ಮಾನ್ಯತೆ ಹೆಚ್ಚಳವು ಪ್ರತಿ ಡೆಸಿಲೀಟರ್ಗೆ 0.04 ಮಿಲಿಗ್ರಾಂ ಹೆಚ್ಚಳದೊಂದಿಗೆ ಸಂಬಂಧಿಸಿದೆ. ಉಪವಾಸ ಸಕ್ಕರೆ ಪ್ರಮಾಣವು 3 ತಿಂಗಳ HbA1c ಟೆಸ್ಟ್ನಲ್ಲಿ 0.021 ಯೂನಿಟ್ ಹೆಚ್ಚಳಕ್ಕೆ ಕಾರಣೀಭೂತವಾಗಿದೆ. HbA1c ಪರೀಕ್ಷೆಯನ್ನು ವ್ಯಕ್ತಿಯ 90 ದಿನಗಳ ಅವಧಿಯ ಗ್ಲೂಕೋಸ್ ನಿಯಂತ್ರಣದ ಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ.
ಸರಾಸರಿ ವಾರ್ಷಿಕ PM2.5 ಮಾನ್ಯತೆ ಪ್ರತಿ ಘನ ಮೀಟರ್ ಗಾಳಿಗೆ 10 ಮಿಲಿಗ್ರಾಂಗಳಷ್ಟು ಹೆಚ್ಚಳವು ಟೈಪ್ 2 ಮಧುಮೇಹದ 22 ಪ್ರತಿಶತದಷ್ಟು ಹೆಚ್ಚು ಅಪಾಯ ತಂದೊಡ್ಡುತ್ತದೆ. ಇದು ಸಾಮಾನ್ಯವಾಗಿ ಜನ ತಮ್ಮ ಆರೋಗ್ಯ ಸುಧಾರಣೆಗಾಗಿ ವಾಯು ಮಾಲಿನ್ಯವನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಮತ್ತು ನಿರ್ದಿಷ್ಟವಾಗಿ ಟೈಪ್ 2 ಮಧುಮೇಹವನ್ನು ತಡೆಗಟ್ಟುವಲ್ಲಿ ನೆರವಾಗಬಲ್ಲದು ಎಂದು ಪ್ರಸಿದ್ಧ ಮಧುಮೇಹಶಾಸ್ತ್ರಜ್ಞರೊಬ್ಬರು ವಿವರಿಸಿದ್ದಾರೆ.
ವಾಯು ಮಾಲಿನ್ಯದ ಮಟ್ಟವನ್ನು ನಿಗ್ರಹಿಸುವ ಮೂಲಕ ಮಧುಮೇಹ ಪ್ರಕರಣಗಳ ಹೊಸ ಆಕ್ರಮಣವನ್ನು ತಡೆಗಟ್ಟಲು ಸಾಧ್ಯವಾಗುವ ಪ್ರಮುಖ ಮುನ್ನೆಚ್ಚರಿಕಾ ಅಂಶಗಳಲ್ಲಿ ಒಂದಾಗಿದೆ ಎಂದು ತಜ್ಞರು ಗಮನಿಸಿದ್ದಾರೆ.
PM 2.5 ಒಂದು ಸಣ್ಣ ಕಣವಾಗಿದ್ದು ಅದು ರಕ್ತಪ್ರವಾಹದೊಳಕ್ಕೆ ಪ್ರವೇಶಿಸುತ್ತದೆ. ಅಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಉತ್ಪಾದಿಸುವ ಜೀವಕೋಶಗಳಿಗೆ ಅಂಟಿಕೊಂಡುಬಿಡುತ್ತದೆ. ಅದು ಬಹುತೇಕ ಮೇದೋಜ್ಜೀರಕ ಗ್ರಂಥಿಯ ಮೇಲೆ ದಾಳಿ ಮಾಡಬಹುದು ಮತ್ತು ಅಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಮತ್ತು ಕೊನೆಯ ಅಪಾಯಕಾರಿ ಪ್ರಕ್ರಿಯೆಯಾಗಿ ಪ್ರಾಯಶಃ ಇನ್ಸುಲಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡಿಬಿಡಬಹುದು ಎಂದು ಡಾ ಮಿಥಾಲ್ ಹೇಳಿದರು.
ಹೀಗೆ ವಾಯುಮಾಲಿನ್ಯ ಪ್ರಮಾಣವು ಮಧುಮೇಹಕ್ಕೆ ದಾರಿಮಾಡಿಕೊಡುತ್ತದೆ ಎಂಬುದನ್ನು ಹೇಳಲು ನಿಖರವಾದ ಕಾರ್ಯವಿಧಾನದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಇದು ಇನ್ಸುಲಿನ್ ಪ್ರತಿರೋಧ ಮತ್ತು ಇನ್ಸುಲಿನ್ ಸ್ರವಿಸುವಿಕೆಯ ಮಟ್ಟದಲ್ಲಿದೆ ಎಂದು ತೋರುತ್ತದೆ. ಅದೇನೇಆದರೂ ವಾಯು ಮಾಲಿನ್ಯ ಮತ್ತು ಮಧುಮೇಹದ ನಡುವೆ ಸಂಬಂಧವಿದೆ. ಇದು ಗಮನಾರ್ಹ ಕೊಡುಗೆಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಭಾರತದಲ್ಲಿ ಮಧುಮೇಹದ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ಅವರು ಎಚ್ಚರಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹೃದಯರಕ್ತನಾಳದ ಸಮಸ್ಯೆಗಳ ಹಿಂದೆ ಕಳಪೆ ಗಾಳಿಯ ಗುಣಮಟ್ಟವೂ ಪ್ರಮುಖ ಅಂಶವಾಗಿ ಹೊರಹೊಮ್ಮುತ್ತಿದೆ ಎಂದು ಇದೇ ವೈದ್ಯರು ಗಮನಿಸಿದ್ದಾರೆ.
ಮಧುಮೇಹ, ಹೃದಯದ ಅಪಾಯ ಮತ್ತು ವಾಯು ಮಾಲಿನ್ಯದ ನಡುವೆ ಬೆಳೆಯುತ್ತಿರುವ ಸಂಪರ್ಕದ ನಡುವೆ ನಮಗೆ ಶುದ್ಧ ಇಂಧನ ಮತ್ತು ಮಾಲಿನ್ಯ ನಿಯಂತ್ರಣ ನಿಯಮಗಳ ಅಗತ್ಯವಿದೆ ಎಂದು ಫೋರ್ಟಿಸ್ ಸಿ-ಡಾಕ್ ಆಸ್ಪತ್ರೆಯ ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರದ ಅಧ್ಯಕ್ಷ ಮತ್ತು ನಿರ್ದೇಶಕ ಡಾ. ಅನೂಪ್ ಮಿಶ್ರಾ ಹೇಳುತ್ತಾರೆ.
ಈ ಅಪಾಯವನ್ನು ತಡೆಗಟ್ಟುವಲ್ಲಿ ನಗರಗಳಲ್ಲಿ ಹೆಚ್ಚಿನ ಹಸಿರು ಸ್ಥಳಗಳು ಸಹಾಯ ಮಾಡಬಲ್ಲವು. ಮಾಸ್ಕ್ಗಳು ಮತ್ತು ಏರ್ ಪ್ಯೂರಿಫೈಯರ್ಗಳು ಸ್ವಲ್ಪ ಸಹಾಯ ಮಾಡಬಹುದು. ಆದರೆ ಪ್ರತಿಯೊಬ್ಬರೂ ಶುದ್ಧೀಕರಣವನ್ನು ಪಡೆಯಲು ಸಾಧ್ಯವಿಲ್ಲ. ಈ ಕುರಿತಾದ ಸಾರ್ವಜನಿಕ ಶಿಕ್ಷಣವು ಪ್ರಮುಖವಾಗಿದೆ. ಜೊತೆಗೆ ಸರ್ಕಾರ, ಉದ್ಯಮ ಕ್ಷೇತ್ರಗಳು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕಾದ ಜರೂರತ್ತು ಹೆಚ್ಚಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.