ದಸರಾ ಹಬ್ಬದಂದು ಮನೆಯಲ್ಲಿ ಮಾಡಬಹುದಾದ ಸರಳ, ಆರೋಗ್ಯಕರ ಪಾಕವಿಧಾನ ಇಲ್ಲಿದೆ
ನವರಾತ್ರಿ ದಿನಗಳಲ್ಲಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿಯೂ ಸುಲಭ, ಸರಳ ಹಾಗೂ ಆರೋಗ್ಯಕ್ಕೆ ಪೂರಕವಾದ ಪಾಕವಿಧಾನ ಮಾಡುವುದರಿಂದ ಕೆಲಸವೂ ಸುಲಭ ಜೊತೆಗೆ ಹಬ್ಬದಲ್ಲಿ ಆರೋಗ್ಯ ಕೆಡುವ ಭಯವಿರುವುದಿಲ್ಲ. ಹಾಗಾಗಿ ಇಲ್ಲಿ ಸುಲಭ ಮತ್ತು ನಿಮ್ಮ ಆಹಾರದ ರುಚಿ ಹೆಚ್ಚಿಸುವ ಪಾಕವಿಧಾನವನ್ನು ನೀಡಲಾಗಿದೆ. ಹಾಗಾಗಿ ಮನೆಯಲ್ಲಿ ಪ್ರಯತ್ನಿಸಿ ನೋಡಿ.
ದೇವಿ ದುರ್ಗಾ ಮಾತೆಗೆ ನವರಾತ್ರಿ ದಿನಗಳಲ್ಲಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿಯೂ ಸುಲಭ ಮತ್ತು ಸರಳ ಹಾಗೂ ಆರೋಗ್ಯಕ್ಕೆ ಪೂರಕವಾದ ಪಾಕವಿಧಾನ ಮಾಡುವುದರಿಂದ ಕೆಲಸವೂ ಸುಲಭ ಜೊತೆಗೆ ಹಬ್ಬದಲ್ಲಿ ಆರೋಗ್ಯ ಕೆಡುವ ಭಯವಿರುವುದಿಲ್ಲ. ಹಾಗಾಗಿ ಇಲ್ಲಿ ಸುಲಭ ಮತ್ತು ನಿಮ್ಮ ಆಹಾರದ ರುಚಿ ಹೆಚ್ಚಿಸುವ ಪಾಕವಿಧಾನವನ್ನು ನೀಡಲಾಗಿದೆ ಅದರಲ್ಲಿ ಮೊದಲನೇಯದು ಚಿತ್ರಾನ್ನ. ದಕ್ಷಿಣ ಭಾರತದ ವಿಶೇಷ ಪಾಕವಿಧಾನದಲ್ಲಿ ಚಿತ್ರಾನ್ನವೂ ಒಂದು. ಇದು ಕರ್ನಾಟಕದಲ್ಲಿ ಜನಪ್ರಿಯವಾಗಿದೆ ಏಕೆಂದರೆ ಪ್ರತಿ ಹಬ್ಬದ ನೈವೇದ್ಯಕ್ಕೂ ಇದೊಂದು ಸುಲಭ ಮತ್ತು ರುಚಿಕರ ಪಾಕವಿಧಾನವಾಗಿದೆ. ನೀವು ಇದನ್ನು ನಿಂಬೆ ಅನ್ನ ಅಥವಾ ನಿಂಬೆ ಚಿತ್ರಾನ್ನ ಎಂದೂ ಕರೆಯಬಹುದು. ಇದು ಸಾಂಪ್ರದಾಯಿಕ ಪಾಕವಿಧಾನವಾಗಿದ್ದು ದಸರಾ ಹಬ್ಬದಲ್ಲಿ ಒಂದು ದಿನ ಮಾಡಬಹುದಾದ ಖಾದ್ಯವಾಗಿದೆ. ಇದು ತುಂಬಾ ಸರಳ ಮತ್ತು ರುಚಿಕರವಾಗಿರುತ್ತದೆ, ವಿಶೇಷವಾಗಿ ಹುಳಿ ಮತ್ತು ಮಸಾಲೆಯುಕ್ತವಾಗಿರುತ್ತದೆ. ನೀವು ಇದನ್ನು ಉಪಾಹಾರಕ್ಕಾಗಿ ಬಡಿಸಬಹುದು. ಅದರಲ್ಲಿಯೂ ಒಂದೇ ರೀತಿಯ ದಾಲ್ ರೈಸ್ ಅಥವಾ ಖಿಚಡಿ ಅಥವಾ ಪುಲಾವ್ ಸೇವಿಸುವುದರಿಂದ ನಿಮಗೆ ಬೇಸರವಾಗಿದ್ದರೆ, ಚಿತ್ರಾನ್ನ ನೀವು ಪ್ರಯತ್ನಿಸಲೇಬೇಕಾದ ಪಾಕವಿಧಾನವಾಗಿದೆ. ಇದನ್ನು ಸುಲಭವಾಗಿ ಮನೆಯಲ್ಲಿ ಪ್ರಯತ್ನಿಸಬಹುದು. ಕರ್ನಾಟಕ ವಿಶೇಷ ಚಿತ್ರಾನ್ನದ ಬಗ್ಗೆ ಆಸಕ್ತಿದಾಯಕ ಸಂಗತಿಯೆಂದರೆ ಚಿತ್ರಾನ್ನ ದಕ್ಷಿಣ ಭಾರತೀಯ ಅಥವಾ ಕರ್ನಾಟಕ ವಿಶೇಷ ಪಾಕವಿಧಾನವಾಗಿದೆ. ಜೊತೆಗೆ ಭಾರತದಲ್ಲಿ ಇದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಹಬ್ಬದ ದಿನಗಳಲ್ಲಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಅಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಲವು ರೀತಿಯಲ್ಲಿ ಚಿತ್ರಾನ್ನ ಮಾಡಬಹುದು ಅದರಲ್ಲಿ ಒಂದು ರೀತಿಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಚಿತ್ರಾನ್ನಕ್ಕೆ ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಅನ್ನ
ರುಚಿಗೆ ತಕ್ಕಷ್ಟು ಉಪ್ಪು
ರುಚಿಗೆ ತಕ್ಕಷ್ಟು ಮೆಟ್ಕುಟ್ (ಕೆಲವು ಪದಾರ್ಥಗಳನ್ನು ಸೇರಿಸಿ ಮಾಡಿದ ಪುಡಿ)
1 ಟೀ ಸ್ಪೂನ್ ಎಣ್ಣೆ
1 ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಜೀರಿಗೆ
1 ಟೀ ಸ್ಪೂನ್ ಉದ್ದಿನ ಬೇಳೆ
1 ಟೀ ಸ್ಪೂನ್ ಹುರಿದ ಕಡಲೆಬೇಳೆ
2 ಟೀ ಸ್ಪೂನ್ ಹಸಿ ಕಡಲೆಕಾಯಿ
ಕರಿಬೇವಿನ ಎಲೆಗಳು
ಒಂದು ಚಿಟಿಕೆ ಇಂಗು
ಅರಿಶಿನ ಪುಡಿ
ಸ್ಯಾಂಡ್ಗಿ ಮಿರ್ಚಿ
ನಿಂಬೆ ರಸ
ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಚಿತ್ರಾನ್ನ ಮಾಡಬಹುದಾದ ವಿಧಾನ:
ಹಂತ 1: ಬೇಯಿಸಿದ ಅನ್ನ, ಉಪ್ಪು, ಮೆಟ್ಕುಟ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ.
ಹಂತ 2: ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
ಹಂತ 3: ಸಾಸಿವೆ ಜೀರಿಗೆಯನ್ನು ಸೇರಿಸಿ ಹುರಿಯಲು ಬಿಡಿ.
ಹಂತ 4: ಉದ್ದಿನ ಬೇಳೆ, ಹುರಿದ ಕಡಲೆಬೇಳೆ, ಕಡಲೆಕಾಯಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಹುರಿಯಿರಿ.
ಹಂತ 5: ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಇಂಗು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 6: ಸ್ಯಾಂಡ್ಗಿ ಮಿರ್ಚಿಯನ್ನು ಬೇಕಾದಷ್ಟು ಹಾಕಿ ಚೆನ್ನಾಗಿ ಹುರಿಯಿರಿ.
ಹಂತ 7: ಗ್ಯಾಸ್ ಆಫ್ ಮಾಡಿ ಬಳಿಕ ಬೇಯಿಸಿದ ಅನ್ನವನ್ನು ಸೇರಿಸಿ.
ಹಂತ 8: ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ಚಿತ್ರಾನ್ನ ರೆಡಿಯಾಗುತ್ತದೆ.
ನವರಾತ್ರಿ ವಿಶೇಷ ಸಾಬೂದಾನ ಅಥವಾ ಸಾಬಕ್ಕಿ ಖಿಚಡಿ
ನಾವು ಉಪವಾಸ ಸಂದರ್ಭದಲ್ಲಿ ಸೇವಿಸಬಹುದಾದ ಸಾಕಷ್ಟು ಪಾಕವಿಧಾನಗಳನ್ನು ನೋಡಿದ್ದೇವೆ. ಅದೆಲ್ಲದರ ಜೊತೆಗೆ ಸಾಬಕ್ಕಿ ಖಿಚಡಿ ಮತ್ತೊಂದು ರುಚಿಕರವಾದ ಸೇರ್ಪಡೆಯಾಗಿದೆ. ಈ ಖಿಚಡಿ ಮೃದುವಾಗಿ ದೀರ್ಘಕಾಲದವರೆಗೆ ಹಾಗೆಯೇ ಇರುತ್ತದೆ. ಪ್ರತಿಯೊಂದು ಸಾಬುದಾನ ಅಥವಾ ಸಾಬಕ್ಕಿ ಚೆನ್ನಾಗಿ ಉಬ್ಬಿಕೊಳ್ಳುವುದರಿಂದ ಇದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಈ ಖಿಚಡಿ ಅಂಟಿಕೊಳ್ಳುವುದಿಲ್ಲ ಹಾಗಾಗಿ ನಿಮ್ಮ ಮನೆಯಲ್ಲಿ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಅದರಲ್ಲಿ ಸಂಶಯವಿಲ್ಲ. ಇದು ಸರಳ ಪಾಕವಿಧಾನವಾಗಿದ್ದು ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾಗಿದೆ. ಸಾಬಕ್ಕಿ ಖಿಚಡಿಯನ್ನು ತಯಾರಿಸುವುದು ಕಷ್ಟ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಈ ಹಂತಗಳನ್ನು ನೀವು ಅನುಸರಿಸಿದರೆ, ಅದು ನಿಜವಾದ ಸುಲಭ ಮತ್ತು ಸರಳ ಪಾಕವಿಧಾನವಾಗಿದೆ. ಈ 5 ತಪ್ಪುಗಳನ್ನು ತಪ್ಪಿಸಿ ಮತ್ತು ಖಿಚಡಿ ಮಾಡಿ. ನವರಾತ್ರಿಯಾಗಿರುವುದರಿಂದ, ನೀವು ಉಪವಾಸದ ಪಾಕವಿಧಾನಗಳನ್ನು ಹುಡುಕುತ್ತಿದ್ದರೇ ಈ ಖಾದ್ಯವನ್ನು ಪ್ರಯತ್ನಿಸಿ ನೋಡಿ.
ಇದನ್ನೂ ಓದಿ:ಮಕ್ಕಳು ಇಷ್ಟಪಡುವ ಆರೋಗ್ಯಕರ ತಿಂಡಿಗಳಾವುವು? ಆವಕಾಡೊ ಪಾಕವಿಧಾನ ಇಲ್ಲಿದೆ
ನವರಾತ್ರಿ ವಿಶೇಷ ಸಾಬುದಾನ ಖಿಚಡಿ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು :-
ಇದು ತುಂಬಾ ಸುಲಭ ಮತ್ತು ಸರಳ ಪಾಕವಿಧಾನವಾಗಿದೆ. ಇದು ಮಹಾರಾಷ್ಟ್ರದಲ್ಲಿ ಬಹಳ ಸಾಮಾನ್ಯ ಉಪವಾಸ ಅಥವಾ ವ್ರತಕ್ಕೆ ಮಾಡುವ ಖಾದ್ಯವಾಗಿದೆ. ಅಲ್ಲದೆ ಇದು ಜನಪ್ರಿಯವಾಗಿದ್ದು, ಉಪವಾಸವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿಯೂ ಇದನ್ನು ಸೇವಿಸಬಹುದು. ಈ ಪಾಕವಿಧಾನಕ್ಕೆ ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲ. ನಿಮ್ಮಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವೇ ಪದಾರ್ಥಗಳಿಂದ ನೀವು ಇದನ್ನು ತಯಾರಿಸಬಹುದು. ಸೂಚನೆಗಳನ್ನು ಅನುಸರಿಸಿ ಈ ಪಾಕವಿಧಾನವನ್ನು ಪ್ರಯತ್ನಿಸಿ.
ಬೇಕಾಗುವ ಸಾಮಾಗ್ರಿಗಳು
1 ಕಪ್ ಸಾಬಕ್ಕಿ ಅಥವಾ ಸಾಬುದಾನ
1 ಕಪ್ ಗಿಂತ ಕಡಿಮೆ ನೀರು
1/2 ಕಪ್ ಹಸಿ ಕಡಲೆಕಾಯಿ
2 ಚಮಚ ತುಪ್ಪ
ಕತ್ತರಿಸಿದ ಹಸಿ ಮೆಣಸಿನಕಾಯಿ
ಬೇಯಿಸಿ, ಸಿಪ್ಪೆ ಸುಲಿದು ಕತ್ತರಿಸಿಟ್ಟುಕೊಂಡ ಆಲೂಗಡ್ಡೆ
ಹುರಿದ ಕಡಲೆಕಾಯಿ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ರುಚಿಗೆ ತಕ್ಕಷ್ಟು ಸಕ್ಕರೆ (ಐಚ್ಛಿಕ)
ಮಾಡುವ ವಿಧಾನ:
ಹಂತ 1: ಸಾಬುದಾನ ಅಥವಾ ಸಾಬಕ್ಕಿಯನ್ನು ಕನಿಷ್ಠ 3 -4 ಬಾರಿ ನೀರಿನಿಂದ ಚೆನ್ನಾಗಿ ತೊಳೆಯಿರಿ ಮತ್ತು ರಾತ್ರಿಯಿಡೀ ಅಥವಾ ಕನಿಷ್ಠ 4- 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ಹಂತ 2: ಸಾಬುದಾನವನ್ನು ನೆನೆಸಲು ನೀರು ಸ್ವಲ್ಪ ಜಾಸ್ತಿ ಹಾಕಿ ಹೇಗೆಂದರೆ ಅದರ ಮೇಲೆ ಸ್ವಲ್ಪ ನೀರು ಇರುವಂತೆ ನೋಡಿಕೊಳ್ಳಿ.
ಹಂತ 3: ಸಾಬುದಾನವನ್ನು ಚೆನ್ನಾಗಿ ನೆನೆಸಿಲ್ಲ ಎಂದರೆ ಅದರ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 10 ನಿಮಿಷಗಳ ಕಾಲ ಹಾಗೆ ಬಿಡಿ.
ಹಂತ 4: ಮಧ್ಯಮ ಶಾಖದಲ್ಲಿ ಬಾಣಲೆಯನ್ನು ಬಿಸಿ ಮಾಡಿ ಮತ್ತು ಕಡಲೆಕಾಯಿಯನ್ನು ಸೇರಿಸಿ.
ಹಂತ 5: ಅದರ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸಿ ಮತ್ತು ಕಡಲೆಕಾಯಿಯನ್ನು ಮಧ್ಯಮ ಶಾಖದಲ್ಲಿ ಹುರಿಯುವುದು ನಿಜವಾಗಿಯೂ ಒಳ್ಳೆಯದು.
ಹಂತ 6: ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
ಹಂತ 7: ಕಡಲೆಕಾಯಿಯ ಸಿಪ್ಪೆಗಳನ್ನು ತೆಗೆದು ಹಾಕಿ.
ಹಂತ 8: ಕಡಲೆಕಾಯಿಯನ್ನು ಬ್ಲೆಂಡರ್ ಜಾರ್ ಗೆ ವರ್ಗಾಯಿಸಿ, ಅವುಗಳನ್ನು ಒರಟು ಪುಡಿಯಾಗಿ ಮಿಶ್ರಣ ಮಾಡಿ.
ಹಂತ 9: ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಸೇರಿಸಿ.
ಹಂತ 10: ಜೀರಿಗೆ ಹುರಿದ ನಂತರ, ಹಸಿ ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
ಹಂತ 11: ಹಸಿರು ಮೆಣಸಿನಕಾಯಿಗಳು ಬಣ್ಣವನ್ನು
ಬದಲಾಯಿಸಿದಾಗ, ಆಲೂಗಡ್ಡೆಯನ್ನು ಸೇರಿಸಿ. ಆಲೂಗಡ್ಡೆಯನ್ನು ಚೆನ್ನಾಗಿ ಹುರಿಯಿರಿ.
ಹಂತ 12: ಸಾಬುದಾನವನ್ನು ಸೇರಿಸಿ ಮತ್ತು ಸುಮಾರು 3- 4 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
ಹಂತ 13: ಸಾಬುದಾನವನ್ನು ಚೆನ್ನಾಗಿ ಬೇಯುವವರೆಗೆ ಮುಚ್ಚಿ ಬೇಯಿಸಿಕೊಳ್ಳಿ.
ಹಂತ 14: ಪ್ರತಿ 2 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಮತ್ತೆ ಮುಚ್ಚಿ ಸಾಬುದಾನ ಬೇಯಲು ಬಿಡಿ.
ಹಂತ 15: ಸಾಬುದಾನ ಅರೆ ಬೆಂದಾಗ ಹುರಿದ ಕಡಲೆಕಾಯಿ ಪುಡಿ, ಉಪ್ಪು, ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 16: ಖಿಚಡಿಯನ್ನು ಚೆನ್ನಾಗಿ ಹುರಿದುಕೊಳ್ಳಿ.
ಹಂತ 17: ಖಿಚಡಿಯನ್ನು ಮುಚ್ಚಿ ಸುಮಾರು ಒಂದು ನಿಮಿಷ ಬೇಯಿಸಿದರೆ ಸಾಬಕ್ಕಿ ಖಿಚಡಿ ಸಿದ್ಧವಾಗುತ್ತದೆ.
ಹಂತ 18: ನೀವು ಖಿಚಡಿಯನ್ನು ಹಾಗೆಯೇ ಸೇವಿಸಬಹುದು ಅಥವಾ ಮಜ್ಜಿಗೆ ಜೊತೆ ಬಡಿಸಿಕೊಳ್ಳಬಹುದು.
ಗಮನಿಸಬೇಕಾದ ಅಂಶಗಳು;
– ತುಪ್ಪದ ಬದಲಿಗೆ ನೆಲಗಡಲೆ ಎಣ್ಣೆಯನ್ನು ಬಳಸಬಹುದು.
– ನಿಮಗೆ ಜೀರಿಗೆ ಇಷ್ಟವಿಲ್ಲದಿದ್ದರೆ ಬಿಟ್ಟು ಬಿಡಬಹುದು.
– ನೀವು ಹಸಿ ಆಲೂಗಡ್ಡೆಯನ್ನು ಬಳಸಲು ಬಯಸಿದರೆ ಅದನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿ.
– ಸಕ್ಕರೆ ಸೇರಿಸುವುದು ಐಚ್ಛಿಕವಾಗಿದೆ. ಹಾಗಾಗಿ ಅದನ್ನು ಬಿಟ್ಟು ಬಿಡಬಹುದು.
ಈ ತಪ್ಪುಗಳನ್ನು ಮಾಡಬೇಡಿ
– ಸಾಬಕ್ಕಿಯನ್ನು ಮುಂಚಿತವಾಗಿ ನೆನೆಸಲು ಮರೆಯಬೇಡಿ. ನೀವು ಮರೆತರೆ ಸಾಬುದಾನವನ್ನು ಸ್ವಲ್ಪ ಹುರಿದು ಒಂದು ಗಂಟೆ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿಡಿ.
– ಖಿಚಡಿ ತಯಾರಿಸಲು ಯಾವಾಗಲೂ ತುಪ್ಪವನ್ನು ಬಳಸಿ
– ಸಾಬುದಾನ ಸೇರಿಸಿದ ತಕ್ಷಣ ಕಡಲೆಕಾಯಿ ಪುಡಿಯನ್ನು ಸೇರಿಸಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Tue, 17 October 23