Monkey pox Virus: ಮಂಕಿಪಾಕ್ಸ್ ವೈರಸ್ ಮೆದುಳಿನ ಮೇಲೂ ಪರಿಣಾಮ ಬೀರಬಹುದು: ತಜ್ಞರಿಂದ ಎಚ್ಚರಿಕೆ

Monkey pox Virus: ಇತ್ತೀಚಿಗೆ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೊಂದು ವೈರಲ್ ಕಾಯಿಲೆಯಾಗಿದ್ದು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಸಾಮಾನ್ಯವಾಗಿ ಈ ರೋಗವು ಕೆಲವೇ ದಿನಗಳಲ್ಲಿ ಗುಣವಾಗುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಈ ವೈರಸ್ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವೈರಸ್ ನ ಆರಂಭದ ದಿನಗಳಲ್ಲಿ ಜ್ವರ, ಕೆಲವರಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದರ ನಂತರ ದದ್ದು ದೇಹದಾದ್ಯಂತ ಹರಡುತ್ತದೆ. ಕೆಲವೊಮ್ಮೆ ಇದರ ಪರಿಣಾಮ ನರಮಂಡಲದ ಮೇಲೂ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಮಂಕಿಪಾಕ್ಸ್ ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು, ಅಂದರೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕೂಡ ಕಂಡುಬರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Monkey pox Virus: ಮಂಕಿಪಾಕ್ಸ್ ವೈರಸ್ ಮೆದುಳಿನ ಮೇಲೂ ಪರಿಣಾಮ ಬೀರಬಹುದು: ತಜ್ಞರಿಂದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 07, 2024 | 10:13 AM

ಕೊರೊನಾ ವೈರಸ್ ನಂತರ ವಿಚಿತ್ರವಾದ ಕಾಯಿಲೆಗಳು ಕಂಡು ಬರುತ್ತಿದೆ. ಆ ಸಾಲಿನಲ್ಲಿ ಮಂಕಿಪಾಕ್ಸ್ ಕೂಡ ಒಂದು. ಅದರಲ್ಲಿಯೂ ಇತ್ತೀಚಿಗೆ ಈ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೊಂದು ವೈರಲ್ ಕಾಯಿಲೆಯಾಗಿದ್ದು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಸಾಮಾನ್ಯವಾಗಿ ಈ ರೋಗವು ಕೆಲವೇ ದಿನಗಳಲ್ಲಿ ಗುಣವಾಗುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಈ ವೈರಸ್ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವೈರಸ್ ನ ಆರಂಭದ ದಿನಗಳಲ್ಲಿ ಜ್ವರ, ಕೆಲವರಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದರ ನಂತರ ದದ್ದು ದೇಹದಾದ್ಯಂತ ಹರಡುತ್ತದೆ. ಕೆಲವೊಮ್ಮೆ ಇದರ ಪರಿಣಾಮ ನರಮಂಡಲದ ಮೇಲೂ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಮಂಕಿಪಾಕ್ಸ್ ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು, ಅಂದರೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕೂಡ ಕಂಡುಬರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕ ಡಾ. ಪ್ರವೀಣ್ ಗುಪ್ತಾ ಅವರು ಹೇಳುವ ಪ್ರಕಾರ ಮಂಕಿಪಾಕ್ಸ್ ವೈರಸ್ ಸೋಂಕಿತ ರೋಗಿಯ ನರಮಂಡಲದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಇದು ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ ಎನ್ಸೆಫಾಲಿಟಿಸ್ ಅಪಾಯವಿದೆ. ಈ ಸಮಸ್ಯೆಯು ಮೆದುಳಿನಲ್ಲಿ ಊತವನ್ನು ಉಂಟು ಮಾಡುತ್ತದೆ. ಇದರಿಂದಾಗಿ ರೋಗಿಯು ತಲೆನೋವು ಮತ್ತು ಜ್ವರದಂತಹ ಸಮಸ್ಯೆಗಳನ್ನು ಎದುರಿಸಬಹುದು. ಇದಲ್ಲದೆ, ಮೆನಿಂಜೈಟಿಸ್ ಸಹ ಸಂಭವಿಸಬಹುದು. ಇದರಲ್ಲಿ, ರೋಗಿಯ ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಯಲ್ಲಿ ಊತ ಕಂಡು ಬರುತ್ತದೆ.

ನರವೈಜ್ಞಾನಿಕ ಸಮಸ್ಯೆಗಳು ಏಕೆ ಸಂಭವಿಸುತ್ತವೆ?

ಡಾ. ಪ್ರವೀಣ್ ಗುಪ್ತಾ ಅವರ ಪ್ರಕಾರ, ಮಂಕಿಪಾಕ್ಸ್ ವೈರಸ್ ರೋಗಿಯ ಚರ್ಮ ಮತ್ತು ಉಸಿರಾಟದ ನಾಳದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವು ರೋಗಿಗಳಲ್ಲಿ, ಈ ವೈರಸ್ ಅವರ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಇದು ನರಮಂಡಲ ಮತ್ತು ಮೆದುಳಿನ ಜೀವಕೋಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಜೊತೆಗೆ ಊತ ಉಂಟಾಗುತ್ತದೆ. ಕೆಲವೊಮ್ಮೆ ಮಂಕಿಪಾಕ್ಸ್ ನಿಂದ ಬಳಲುತ್ತಿರುವ ರೋಗಿಗಳಲ್ಲಿನ ದುರ್ಬಲ ಪ್ರತಿರಕ್ಷಣಾ ಸಾಮರ್ಥ್ಯದಿಂದ ನರಮಂಡಲವು ಹಾನಿಗೊಳಗಾಗುತ್ತದೆ. ಆದರೆ ಮಂಕಿಪಾಕ್ಸ್ ನಿಂದ ನರವೈಜ್ಞಾನಿಕ ಸಮಸ್ಯೆಗಳಾಗಿರುವ ಪ್ರಕರಣಗಳು ಕಡಿಮೆ ಇವೆ.

ಇದನ್ನೂ ಓದಿ: ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ಇದೆಯೇ, ಮಕ್ಕಳ ಬ್ರೈನ್ ಡ್ಯಾಮೇಜ್ ಆಗಬಹುದು ಎಚ್ಚರ

ಮಂಕಿಪಾಕ್ಸ್ ರೋಗಕ್ಕೆ ಚಿಕಿತ್ಸೆ ಏನು?

ಈ ವೈರಸ್ ನನ್ನು ಎಷ್ಟು ಬೇಗ ಪತ್ತೆಹಚ್ಚಲಾಗುತ್ತದೆಯೋ, ಅಷ್ಟು ಸುಲಭವಾಗಿ ನಿಯಂತ್ರಿಸಬಹುದು. ರೋಗಲಕ್ಷಣಗಳ ಆಧಾರದ ಮೇಲೆ ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಾರೆ. ಈ ರೋಗಕ್ಕೆ ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲವಾದರೂ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಶೀಘ್ರದಲ್ಲೇ ಈ ರೋಗದ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದು ಎಂದು ವರದಿಗಳು ತಿಳಿಸಿವೆ.

ಮಂಕಿಪಾಕ್ಸ್ ತಡೆಗಟ್ಟುವುದು ಹೇಗೆ?

*ಪದೇ ಪದೇ ಕೆಮ್ಮುವ ಅಥವಾ ಸೀನುವ ಜನರಿಂದ ದೂರವಿರಿ.

*ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರಬೇಡಿ. ಜೊತೆಗೆ ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಬಳಸಬೇಡಿ.

*ಸ್ವಚ್ಛತೆಯ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ವಹಿಸಿ.

*ಫ್ಲೂ ತರಹದ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:53 pm, Fri, 6 September 24

ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ