AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Papaya: ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ?

Myth Busters about Papaya: ಜತೆಗೆ ಇನ್ನೊಂದು ಅತ್ಯಂತ ಮುಖ್ಯವಾದ ತಪ್ಪು ಅಭಿಪ್ರಾಯವಿದೆ. ಪಪ್ಪಾಯಿ ಹಣ್ಣನ್ನು ಕಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂಬುದೇ ಆ ತಪ್ಪು ಅಭಿಪ್ರಾಯ. ಆದರೆ ಹಾಗೇನೂ ಇಲ್ಲ, ಪಪ್ಪಾಯಿ ಅತ್ಯಂತಸತ್ವಯುತ ಹಣ್ಣಾಗಿದ್ದು, ಖಾಲಿ ಹೊಟ್ಟೆಯಲ್ಲಿ ಸಹ ಅದನ್ನು ತಿನ್ನಬಹುದಾಗಿದೆ.

Papaya: ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ?
ಪಪ್ಪಾಯಿ ಹಣ್ಣು
guruganesh bhat
| Updated By: ಆಯೇಷಾ ಬಾನು|

Updated on: May 23, 2021 | 8:33 AM

Share

ಹಣ್ಣುಗಳಲ್ಲಿ ನಿಮಗೆ ಯಾವ ಹಣ್ಣು ಇಷ್ಟ ಎಂದರೆ ಥಟ್ಟನೆ ಪಪ್ಪಾಯಿ ಎಂದು ಉತ್ತರಿಸುವವರ ಸಂಖ್ಯೆ ವಿರಳ. ಸಾಮಾನ್ಯವಾಗಿ ಇಷ್ಟರಮಟ್ಟಿಗೆ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಪಪ್ಪಾಯಿಯ ಬಳಕೆ ಕಡಿಮೆಯೇ. ಅಷ್ಟೇನೂ ದುಬಾರಿಯಲ್ಲದ, ರುಚಿಯಲ್ಲಿ ಯಾವದಕ್ಕೂ ಕಡಿಮೆಯಿಲ್ಲದ ಪಪ್ಪಾಯಿ ಬಗ್ಗೆ ನಮಗೆ ಕೊಂಚ ಅಸಡ್ಡೆಯೂ ಇದೆ. ಪಪ್ಪಾಯಿಯ ಬಗ್ಗೆ ಅಷ್ಟೇನು ತಿಳಿವಳಿಕೆ ನಮಗಿಲ್ಲ ಎಂಬುದೇ ಇದಕ್ಕೆ ಕಾರಣ. ಹೀಗೆ ತಿಳಿವಳಿಕೆ ಕಡಿಮೆ ಇದ್ದು, ಪಪ್ಪಾಯಿಯ ಬಳಕೆ ಮಾಡದೇ ಇರುವುದಕ್ಕಿಂತ ಅತ್ಯಂತ ಪೌಷ್ಠಿಕ ಹಣ್ಣಾಗಿರುವ ಪಪ್ಪಾಯಿ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ. ಪಪ್ಪಾಯಿ ಬಗ್ಗೆ ಇಲ್ಲಿ ಕೆಲವು ಬಹುಮುಖ್ಯ ಮಾಹಿತಿ ನೀಡಲಾಗಿದೆ.

ನಮ್ಮಲ್ಲಿ ಹೆಚ್ಚಿನ ಜನರಿಗೆ ಪಪ್ಪಾಯಿ ಹಣ್ಣಿನ ತಿರುಳನ್ನೊಂದೇ ತಿನ್ನಬೇಕು. ಬೀಜಗಳನ್ನು ತಿನ್ನದೇ ಎಸಿಯಬೇಕು ಎಂಬ ತಿಳಿವಳಿಕೆಯೇ ಇದೆ. ಆದರೆ ನಿಜಕ್ಕೂ ಹಾಗೇನೂ ಇಲ್ಲ. ಪಪ್ಪಾಯಿ ಹಣ್ಣಿನ ಬೀಜವನ್ನೂ ತಿನ್ನಬಹುದು. ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಹಲವು ಕಿರು ಪೋಷಕಾಂಶಗಳು ಇರುತ್ತವೆ ಎನ್ನುತ್ತಾರೆ ವೈದ್ಯರು. ಅಲ್ಲದೇ ಕ್ಯಾನ್ಸರ್ ಬರದಂತೆ ತಡೆಯಲು ಸಹ ಪಪ್ಪಾಯಿ ಬೀಜಗಳ ಸೇವನೆ ಸಹಾಯ ಮಾಡುತ್ತದಂತೆ. ಕಿಡ್ನಿಯ ಆರೋಗ್ಯಕ್ಕೂ ಪಪ್ಪಾಯಿ ಬೀಜಜಗಳ ಸೇವನೆ ಉತ್ತಮವೇ ಆಗಿದೆ.

ಪಪ್ಪಾಯಿ ಅಷ್ಟೇನೂ ಪೌಷ್ಠಿಕ ಹಣ್ಣಲ್ಲ? ಇದೂ ಸಹ ತಪ್ಪು ಅಭಿಪ್ರಾಯ. ಪಪ್ಪಾಯಿ ಇತರ ಹಣ್ಣುಗಳಂತೆಯೇ ಅತ್ಯಂತ ಪೌಷ್ಠಿಕ ಹಣ್ಣು. ದೇಹಕ್ಕೆ ಅತ್ಯಂತ ಅಗತ್ಯವಾದ ಸಿ ವಿಟಾಮಿನ್ ಸಹ ಈ ಹಣ್ಣಿನಲ್ಲಿ ಇರುತ್ತದಂತೆ. ಅಲ್ಲದೇ ಫೈಬರ್​​ನ ಅಂಶವೂ ಪಪ್ಪಾಯಿಯಲ್ಲಿ ಇದ್ದು, ಹಣ್ಣಿನ ಸೇವನೆಯಿಂದ ಆರೋಗ್ಯ ನಳನಳಿಸುತ್ತದೆ.

ಪಪ್ಪಾಯಿ ಹಣ್ಣು ತಿನ್ನುವುದು ಅಲರ್ಜಿಗೆ ಕಾರಣ? ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ ಎಂಬ ಭಾವನೆಯೂ ಕೆಲವರಲ್ಲಿದೆ. ಆದರೆ ಅದೊಂದು ತಪ್ಪು ಕಲ್ಪನೆ. ಶುದ್ಧವಾದ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಯಾವುದೇ ಅಲರ್ಜಿಯೂ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.

ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ? ಜತೆಗೆ ಇನ್ನೊಂದು ಅತ್ಯಂತ ಮುಖ್ಯವಾದ ತಪ್ಪು ಅಭಿಪ್ರಾಯವಿದೆ. ಪಪ್ಪಾಯಿ ಹಣ್ಣನ್ನು ಕಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂಬುದೇ ಆ ತಪ್ಪು ಅಭಿಪ್ರಾಯ. ಆದರೆ ಹಾಗೇನೂ ಇಲ್ಲ, ಪಪ್ಪಾಯಿ ಅತ್ಯಂತಸತ್ವಯುತ ಹಣ್ಣಾಗಿದ್ದು, ಖಾಲಿ ಹೊಟ್ಟೆಯಲ್ಲಿ ಸಹ ಅದನ್ನು ತಿನ್ನಬಹುದಾಗಿದೆ.

ಹೀಗೆ ಪಪ್ಪಾಯಿ ಕುರಿತು ಹಲವರಲ್ಲಿ ತಪ್ಪು ಅಭಿಪ್ರಾಯಗಳಿವೆ. ಆದರೆ ಪಪ್ಪಾಯಿ ಅತ್ಯಂತ ಪೌಷ್ಠಿಕ ಆಹಾರವೇ ಆಗಿದ್ದು, ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: Karnataka Lockdown: ನೆಪ ಹೇಳಿದ ತಪ್ಪಿಗೆ ಒಂದು ಗೊನೆ ಬಾಳೆಹಣ್ಣು ತೆಗೆದುಕೊಂಡು ಹೋದ ಚಿಕ್ಕಮಗಳೂರು ವ್ಯಕ್ತಿ

Health Tips: ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ?

(Myth busters about Papaya fruit in Kannada you should read)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ