AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

COVID19: ಒಮಿಕ್ರಾನ್​ ಉಪತಳಿ BA.2 ಹೆಚ್ಚು ಸಾಂಕ್ರಾಮಿಕವಾಗಿದೆ; ಅಧ್ಯಯನ

ವಿಶ್ವ ಆರೋಗ್ಯ ಸಂಸ್ಥೇಯ ಪ್ರಕಾರ ಮನೆಯೊಳಗೆ BA.2 ಸೋಂಕು ಹರಡುವ ಸಂಭವನೀತೆಯು ಶೇ. 39ರಷ್ಟಿದೆ. ಮತ್ತು BA.1 ತಳಿ ಹರಡುವ ಪ್ರಮಾಣ ಶೇ. 29ರಷ್ಟಿದೆ.

COVID19: ಒಮಿಕ್ರಾನ್​ ಉಪತಳಿ BA.2 ಹೆಚ್ಚು ಸಾಂಕ್ರಾಮಿಕವಾಗಿದೆ; ಅಧ್ಯಯನ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 02, 2022 | 11:45 AM

Share

ಕೊರೊನಾ, ಒಮಿಕ್ರಾನ್​ ಬಳಿಕ ಈಗ ಓಮಿಕ್ರಾನ್ ಉಪತಳಿ BA.2 ವೇಗವಾಗಿ ಹರುಡುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. BA.1 ತಳಿಗಿಂತ ಸೋಂಕು ವೇಗವಾಗಿ ಹರಡಲಿದ್ದು ಲಸಿಕೆ ಪಡೆಯವದವರಲ್ಲಿ ಮಾತ್ರವಲ್ಲ ಲಸಿಕೆ ಪಡೆದವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಡ್ಯಾನಿಶ್​ ಆರೋಗ್ಯ ಸಚಿವಾಲಯದ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ಆದರೆ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೆ BA.2  ಕಾಣಿಸಿಕೊಂಡರೆ ಅವರು ಬೇರೆಯವರಿಗೆ ಹರಡುವ ಸಾಧ್ಯತೆ ಕಡಿಮೆ ಎಂದು ಸಿಎನ್​ಬಿಸಿ ವರದಿ ಮಾಡಿದೆ. BA.1 ತಳಿಯು ಲಸಿಕೆ ಪಡೆದವರಿಗೆ ತಗುಲುವ ಸಾಧ್ಯತೆ ಕಡಿಮೆ ಆದರೆ BA.2 ತಳಿಯ ಸೋಂಕು ಲಸಿಕೆ ಪಡೆದರೂ ಕಾಣಿಸಿಕೊಳ್ಳುತ್ತದೆ. ಬೂಸ್ಟರ್​ ಲಸಿಕೆ ಪಡೆದವರಿಗೆ BA.2 ಸೋಂಕಿನ ಅಪಾಯ ಕಡಿಮೆ ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಲಸಿಕೆ ಪಡೆಯದ ವ್ಯಕ್ತಿಗಳಲ್ಲಿ BA.2 ಅಪಾಯ ಹೆಚ್ಚು. ಬೂಸ್ಟರ್​ ಡೋಸ್​ ಲಸಿಕೆಯನ್ನು ಪಡೆದರೆ BA.2 ಮತ್ತು BA.1 ರೀತಿಯ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಅಧ್ಯಯನದಲ್ಲಿ ಓಮಿಕ್ರಾನ್​ ಮತ್ತು BA.2 ತಳಿಯು ಹೆಚ್ಚಾಗಿ ಶಾಲೆಗಳಲ್ಲಿ ಮತ್ತು ಡೇ ಕೇರ್​ಗಳಲ್ಲಿ ಸೋಂಕು ಹರಡುತ್ತದೆ. ಏಕೆಂದರೆ ಅಲ್ಲಿರುವ ಮಕ್ಕಳು ಲಸಿಕೆಯನ್ನು ಪಡೆದಿರುವುದಿಲ್ಲ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೇಯ ಪ್ರಕಾರ ಮನೆಯೊಳಗೆ BA.2 ಸೋಂಕು ಹರಡುವ ಸಂಭವನೀತೆಯು ಶೇ. 39ರಷ್ಟಿದೆ. ಮತ್ತು BA.1 ತಳಿ ಹರಡುವ ಪ್ರಮಾಣ ಶೇ. 29ರಷ್ಟಿದೆ. ಜಾಗತಿಕ ಆರೋಗ್ಯ ಸಂಸ್ಥೆ ಈವರೆಗೆ BA.2 ತಳಿಯನ್ನು ಓಮಿಕ್ರಾನ್​ನ ಉಪತಳಿ ಎಂದು ಅಧಿಕೃತವಾಗಿ ಹೇಳಿಲ್ಲ. ಆದರೂ ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಅದರ ಉಪತಳಿಯು ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಸದ್ಯಕ್ಕೆ BA.2 ತಳಿಯು BA.1ಗಿಂತ ಹೆಚ್ಚು ತೀವ್ರವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದೂ ಸಿಡಿಸಿ ವಕ್ತಾರ ಕ್ರಿಸ್ಟನ್​ ನಾಡಲಂಡ್​ ತಿಳಿಸಿದ್ದಾರೆ ಎಂದು ಇಂಡಿಯಾ ಟಿವಿ ವರದಿ ತಿಳಿಸಿದೆ.

ಇದನ್ನೂ ಓದಿ:

NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !