ದೀರ್ಘಕಾಲ ಕಾಡ್ಗಿಚ್ಚಿನ ಹೊಗೆಗೆ ಒಡ್ಡಿಕೊಳ್ಳುವುದು ಮರೆವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದೆ, ಎಲ್ಲೆಡೆ ಕಾಡ್ಗಿಚ್ಚು ಹಬ್ಬುತ್ತಿದೆ. ಹೀಗಿರುವಾಗ ಆಲ್ಝೈಮರ್ಸ್ ಅಸೋಸಿಯೇಷನ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ಈ ಕುರಿತು ಮಾಹಿತಿ ನೀಡಿದೆ.
ಕಾಡ್ಗಿಚ್ಚಿನ ಹೊಗೆ ವಾಯು ಮಾಲಿನ್ಯಕ್ಕಿಂತಲೂ ಹೆಚ್ಚು ಅಪಾಯವನ್ನು ಸೃಷ್ಟಿಸಬಲ್ಲದು, ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದೆ. 2009 ರಿಂದ 2019 ರವರೆಗೆ 1.2 ಮಿಲಿಯನ್ ವೃದ್ಧರ ಮೇಲೆ ಈ ಹೊಗೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಕುರಿತು ಅಧ್ಯಯನ ಮಾಡಲಾಗಿದೆ.
ವಾಹನ ಹೊರಸೂಸುವಿಕೆ ಅಥವಾ ಕೈಗಾರಿಕಾ ಮಾಲಿನ್ಯದಂತಹ ಇತರ ಮೂಲಗಳಿಂದ PM2.5 ನಲ್ಲಿ ಮೂರು-ಮೈಕ್ರೋಗ್ರಾಂ ಹೆಚ್ಚಳವು ಬುದ್ಧಿಮಾಂದ್ಯತೆಯ ಅಪಾಯವನ್ನು ಶೇ. 3 ರಷ್ಟು ಹೆಚ್ಚಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 392,480 ಎಕರೆಗಳಿಗೆ ಕಾಡ್ಗಿಚ್ಚು ಹಬ್ಬಿದೆ. ಮತ್ತೊಂದು ಅಂಶವೆಂದರೆ ಕಣಗಳ ಗಾತ್ರ. ಕಾಳ್ಗಿಚ್ಚುಗಳಿಂದ ಬರುವ PM2.5 ಕಣಗಳು ನಗರ ವಾಯುಮಾಲಿನ್ಯಕ್ಕಿಂತ ಚಿಕ್ಕದಾಗಿರುತ್ತವೆ, ಇದು ಅಂಗಗಳು ಮತ್ತು ರಕ್ತಪ್ರವಾಹಕ್ಕೆ ಸುಲಭವಾಗಿ ನುಗ್ಗಲು ಅನುವು ಮಾಡಿಕೊಡುತ್ತದೆ.
ಕಾಡ್ಗಿಚ್ಚಿನ ಹೊಗೆಯ ನಿರ್ದಿಷ್ಟ ಅಂಶಗಳು ಹೆಚ್ಚಿದ ಬುದ್ಧಿಮಾಂದ್ಯತೆಯ ಅಪಾಯವನ್ನು ಉಂಟುಮಾಡಬಹುದು ಎಂಬುದನ್ನು ಗುರುತಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಕಾಡ್ಗಿಚ್ಚಿನ ಹೊಗೆಯು ಒತ್ತಡ ಹಾಗೂ ಖಿನ್ನತೆಯನ್ನುಂಟುಮಾಡಬಹುದು. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಳ್ಳುತ್ತಿದ್ದು, ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮತ್ತಷ್ಟು ಓದಿ: Sleeping vishnu pose: ವಿಷ್ಣುವಿನ ರೀತಿ ಅನಂತಾಸನದಲ್ಲಿ ಮಲಗುವ ಅಭ್ಯಾಸವಿದ್ದರೆ ಈ ಸಮಸ್ಯೆ ಬರುವುದಿಲ್ಲ
ವಯಸ್ಸಾಗುತ್ತಾ ಹೋದಂತೆ ಮರೆವು ಹೆಚ್ಚಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡಿಮೆನ್ಶಿಯಾ ಎಂದು ಕರೆಯುತ್ತಾರೆ. ಡಿಮೆನ್ಶಿಯಾ ಕಟ್ಟುನಿಟ್ಟಾಗಿ ರೋಗವಲ್ಲದಿದ್ದರೂ, ಇದೊಂದು ರೀತಿಯ ಮಾನಸಿಕ ವ್ಯಾದಿಯಾಗಿದೆ. ಮರೆಗುಳಿತನ ಹೊಂದಿರುವ ರೋಗಿಗಳ ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ವಿವಿಧ ಕಾಯಿಲೆಗಳನ್ನು ಪ್ರತಿನಿಧಿಸಲು ವೈದ್ಯಕೀಯದಲ್ಲಿ ಬಳಸಲಾಗುವ ಸಾಮಾನ್ಯ ಪದವಾಗಿದೆ. ಜ್ಞಾಪಕಶಕ್ತಿ, ಭಾಷೆ, ಕಾರ್ಯನಿರ್ವಾಹಕ ಕಾರ್ಯ ಮತ್ತು ಕಲಿಕೆ ಎಲ್ಲವೂ ಮರೆಗುಳಿತನದಿಂದ ಪ್ರಭಾವಿತವಾಗಿರುತ್ತದೆ.
ಈ ಪ್ರಕರಣಗಳಲ್ಲಿ ಈ ಅಂಶಗಳಲ್ಲಿ ವಾಯು ಮಾಲಿನ್ಯ, ಕಡಿಮೆ ಶಿಕ್ಷಣ, ಶ್ರವಣ ದೋಷ, ಅಧಿಕ ರಕ್ತದೊತ್ತಡ, ದೈಹಿಕ ನಿಷ್ಕ್ರಿಯತೆ, ಮಧುಮೇಹ, ಸಾಮಾಜಿಕ ಪ್ರತ್ಯೇಕತೆ, ಅತಿಯಾದ ಮದ್ಯ ಸೇವನೆ, ಧೂಮಪಾನ, ಬೊಜ್ಜು, ಮೆದುಳಿನ ಗಾಯ ಮತ್ತು ಖಿನ್ನತೆ ಸೇರಿವೆ.
They lost their home in Paradise to the Camp fire in 2018.
Six years later, after relocating to another Chico enclave, Kristy + Michael Daneau have lost a 2nd home to the massive Park fire. (Video of part of their evacuation)
Their tragic story & others:https://t.co/VOmCJ5C7GY pic.twitter.com/e9pgyB9FgW
— Grace Toohey (@grace_2e) August 1, 2024
ದೆಹಲಿ ವಾಯುಮಾಲಿನ್ಯ: ದೆಹಲಿಯಲ್ಲಿ ದಿನಕಳೆದಂತೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿದೆ. ವಾಯು ಮಾಲಿನ್ಯದಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ಉಸಿರಾಟ ಮತ್ತು ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದ ರಾಜಧಾನಿಯಲ್ಲಿ ಉಸಿರಾಟ ನಡೆಸುವುದೂ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದು ಇದೇ ಮೊದಲೇನಲ್ಲ. ಹಾಗಿದ್ದರೂ ಸರ್ಕಾರ ನಗರದ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ದೂರದೃಷ್ಟಿಯ ಯೋಚನೆ, ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸುವತ್ತ ಲಕ್ಷ್ಯ ಹರಿಸದಿರುವುದು ಬಲುದೊಡ್ಡ ಪ್ರಮಾದವೇ ಸರಿ.
ನಮ್ಮನ್ನಾಳುವವರಿಗೆ ಜನಸಾಮಾನ್ಯನ ಸಂಕಷ್ಟ ಅರಿವಿಗೆ ಬರದೇ ಹೋದರೆ ಇಂಥ ಅವ್ಯವಸ್ಥೆಗಳು ಮರುಕಳಿಸುತ್ತಲೇ ಇರುತ್ತವೆ. ಎಲ್ಲದಕ್ಕೂ ಸದ್ಯ ಬೀಸೋ ದೊಣ್ಣೆಯಿಂದ ಪಾರಾದರೆ ಸಾಕು ಎಂಬ ನಿಲುವಿಗೆ ಅಂಟಿಕೊಂಡರೆ ಇಂಥ ದುಃಸ್ಥಿತಿ ಎಂದೂ ಮುಗಿಯದು, ಇನ್ನಾದರೂ ದೆಹಲಿ ಸರ್ಕಾರ ಕೇಂದ್ರದ ಸಹಾದೊಂದಿಗೆ ರಾಜಧಾನಿಯ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಚ್ಛಾಶಕ್ತಿ, ಬದ್ಧತೆಯನ್ನು ಪ್ರದರ್ಶಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Sun, 8 December 24