ಒಂದು ತುಂಡು ಬೆಲ್ಲ ತಿನ್ನಿ, ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಿ
ಹವಾಮಾನ ಬದಲಾವಣೆ ಹಾಗೂ ಹೆಚ್ಚುತ್ತಿರುವ ಮಾಲಿನ್ಯವು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಶ್ವಾಸಕೋಶದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುದರಿಂದ ಇದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಒಂದು ತುಂಡು ಬೆಲ್ಲ ತಿನ್ನುವುದರಿಂದ ಶ್ವಾಸಕೋಶವು ಸ್ವಚ್ಛವಾಗುವುದಲ್ಲದೆ, ಗಂಭೀರ ಸಮಸ್ಯೆಯಿಂದ ಪಾರಾಗಬಹುದು. ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಬೆಲ್ಲವು ಹೇಗೆ ಪರಿಣಾಮಕಾರಿಯಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದೇ ಸಿಹಿ ಪದಾರ್ಥ ಮಾಡಿದರೂ ಅದಕ್ಕೆ ಸಕ್ಕರೆ ಬದಲು ಬೆಲ್ಲ ಹಾಕಿದರೆ ಆ ಖಾದ್ಯದ ರುಚಿಯೇ ಹೆಚ್ಚು. ಹೀಗಾಗಿ ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚು ಬಳಸಲಾಗುವ ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. ಇದನ್ನು ಆಯುರ್ವೇದದಲ್ಲಿ ಔಷಧಿ ಪರಿಗಣಿಸಲಾಗಿದೆ. ನಿಯಮಿತವಾಗಿ ಬೆಲ್ಲ ಸೇವನೆ ಮಾಡುವುದರಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು. ಬೆಲ್ಲವು ಶ್ವಾಸಕೋಶ ಸೇರಿದಂತೆ ಉಸಿರಾಟದಂತಹ ಸಮಸ್ಯೆ ಹೇಗೆ ರಾಮಬಾಣವಾಗಿದೆ? ಏನೆಲ್ಲಾ ಪ್ರಯೋಜನಗಳಿವೆ? ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.
- ಬೆಲ್ಲವು ಪ್ರೊಫೈಲ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ನೈಸರ್ಗಿಕ ನಿರ್ವಿಶೀಕರಣವಾಗಿದ್ದು, ಶ್ವಾಸಕೋಶದಿಂದ ಹಾನಿಕಾರಕ ವಿಷ ಮತ್ತು ಮಾಲಿನ್ಯಕಾರಕಗಳನ್ನು ಹೊರಹಾಕುವ ಮೂಲಕ ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಹೌದು, ಶ್ವಾಸಕೋಶದ ಅಲ್ವಿಯೋಲಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಕಾರ್ಬನ್ ಕಣಗಳನ್ನು ಬೆಲ್ಲವು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಮಾಲಿನ್ಯವನ್ನು ತೊಡೆದು ಹಾಕಲು ಸಹಕಾರಿಯಾಗಿದೆ.
- ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉತ್ಪತ್ತಿಯಾಗುವ ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥಗೊಳಿಸುತ್ತದೆ. ಇದು ಶ್ವಾಸಕೋಶದ ಅಂಗಾಂಶಗಳನ್ನು ಹಾನಿಗೊಳಿಸುವುದಲ್ಲದೇ ಉರಿಯೂತಕ್ಕೂ ಕಾರಣವಾಗಬಹುದು. ಹೀಗಾಗಿ ಈ ಬೆಲ್ಲವು ಸೆಲೆನಿಯಂನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.
- ಬೆಲ್ಲವು ಕಬ್ಬಿಣದ ಉತ್ತಮ ಮೂಲವಾಗಿದೆ, ಇದು ಹಿಮೋಗ್ಲೋಬಿನ್ ಉತ್ಪಾದನೆಗೆ ಅವಶ್ಯಕವಾಗಿದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ, ಬೆಲ್ಲವು ಸಮರ್ಥ ಆಮ್ಲಜನಕದ ಸಾಗಣೆಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಕಲುಷಿತ ಗಾಳಿಯ ಕಣಗಳು ಮತ್ತು ರಾಸಾಯನಿಕ ಕಣಗಳು ಗಂಟಲಿನಲ್ಲಿ ಸೇರಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಬೆಚ್ಚಗಿನ ನೀರಿನೊಂದಿಗೆ ಬೆಲ್ಲವು ಸೇವಿಸಿದಾಗ, ಇದು ಗಂಟಲಿನ ಮೇಲೆ ರಕ್ಷಣಾತ್ಮಕ ಲೇಪನವನ್ನು ರೂಪಿಸುತ್ತದೆ. ಇದು ಗಂಟಲಿನ ಅಸ್ವಸ್ಥತೆಯನ್ನು ಕಡಿಮೆ ಮಾಡಿ, ಈ ಕಣಗಳಿಂದ ಉಂಟಾಗುವ ಕೆಮ್ಮನ್ನು ನಿವಾರಿಸುತ್ತದೆ. ಬ್ರಾಂಕೈಟಿಸ್, ಉಬ್ಬಸ, ಆಸ್ತಮಾ ಮತ್ತು ಇತರ ಉಸಿರಾಟದ ಅಸ್ವಸ್ಥತೆಗಳು ಬಾರದಂತೆ ನೋಡಿಕೊಳ್ಳುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ