ಸದ್ಯದಲ್ಲೇ 4 ಮಾರಣಾಂತಿಕ ವೈರಸ್​ಗಳ ಎಚ್ಚರ ನೀಡಿದ ವಿಜ್ಞಾನಿಗಳು!

ಈ ವೈರಸ್‌ಗಳಿಂದ ಸಾವುಗಳು ಸಂಭವಿಸಬಹುದು. ಈ ವೈರಸ್​ಗಳಲ್ಲಿ ಅರ್ಧದಷ್ಟು ಮಾನವರಲ್ಲಿ ಹರಡುತ್ತವೆ. 2050ರ ವೇಳೆಗೆ ಈ ವೈರಸ್​ಗಳಿಂದ ಸಾವಿನ ಪ್ರಮಾಣ 12 ಪಟ್ಟು ಹೆಚ್ಚಾಗಲಿದೆ. ಹಾಗಾದರೆ ಮನುಕುಲಕ್ಕೆ ಮಾರಕವಾಗಬಲ್ಲ ಲಕ್ಷಣಗಳಿರುವ ವೈರಸ್​ಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸದ್ಯದಲ್ಲೇ 4 ಮಾರಣಾಂತಿಕ ವೈರಸ್​ಗಳ ಎಚ್ಚರ ನೀಡಿದ ವಿಜ್ಞಾನಿಗಳು!
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Dec 06, 2023 | 2:22 PM

ನವದೆಹಲಿ: ಕೊರೊನಾವೈರಸ್ ರೀತಿಯಲ್ಲೇ ಶೀಘ್ರದಲ್ಲೇ ಮುಂದಿನ ದಿನಗಳಲ್ಲಿ 4 ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ವಿಶ್ವದಾದ್ಯಂತ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದಿದ್ದರೂ ಎಬೋಲಾ, ಮಾರ್ಬರ್ಗ್, SARS ಮತ್ತು ನಿಪಾಹ್‌ನಂತಹ ವೈರಸ್​ಗಳು ವಿಶ್ವಾದ್ಯಂತ ಪ್ರಮುಖ ಮಾರಣಾಂತಿಕ ರೋಗ ಹರಡುವ ವೈರಸ್​ಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ವೈರಸ್‌ಗಳಿಂದ ಸಾವುಗಳು ಸಂಭವಿಸಬಹುದು. ಈ ವೈರಸ್​ಗಳಲ್ಲಿ ಅರ್ಧದಷ್ಟು ಮಾನವರಲ್ಲಿ ಹರಡುತ್ತವೆ. 2050ರ ವೇಳೆಗೆ ಈ ವೈರಸ್​ಗಳಿಂದ ಸಾವಿನ ಪ್ರಮಾಣ 12 ಪಟ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಮುಂದಿನ ಸಾಂಕ್ರಾಮಿಕ ರೋಗದ ಮೂಲವೆಂದು ಈ ವೈರಸ್‌ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ ಸಹ, ಎಬೋಲಾ ತರಹದ ವೈರಸ್ ಮಾನವಕುಲಕ್ಕೆ ಹೆಚ್ಚು ಆತಂಕ ತಂದಿಟ್ಟಿದೆ ಎಂದು ಅಧ್ಯಯನದ ಲೇಖಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೀನಾ ನಿಗೂಢ ವೈರಸ್: ಬೆಂಗಳೂರಿನಲ್ಲೂ ಭೀತಿ

ಎಬೋಲಾ ಮತ್ತು ಮಾರ್ಬರ್ಗ್:

ಎಬೋಲಾ ಮತ್ತು ಮಾರ್ಬರ್ಗ್ ಎರಡೂ ಬಾವಲಿಗಳಲ್ಲಿ ಕಂಡುಬರುವ 2 ಅತ್ಯಂತ ಸಾಂಕ್ರಾಮಿಕ ವೈರಸ್​ಗಳಾಗಿವೆ. ಆಫ್ರಿಕಾದಾದ್ಯಂತ ಈ ವೈರಸ್‌ಗಳು ಕಳೆದ ಕೆಲವು ವರ್ಷಗಳಲ್ಲಿ ಏಕಾಏಕಿ ಸಾವಿರಾರು ಜನರ ಸಾವಿಗೆ ಕಾರಣವಾಗಿವೆ. ಎಬೋಲಾ ಹೆಮರಾಜಿಕ್ ಜ್ವರವು ಅಪರೂಪದ ಆದರೆ ತೀವ್ರವಾದ ಮತ್ತು ಸಾಮಾನ್ಯವಾಗಿ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಕಾಡು ಪ್ರಾಣಿಗಳಿಂದ ಹರಡುತ್ತದೆ ಮತ್ತು ಮನುಷ್ಯರಿಂದ ಮನುಷ್ಯನಿಗೆ ಹರಡುವ ಮೂಲಕ ವೇಗವಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಈ ವೈರಸ್​ನಿಂದ ಸರಾಸರಿ ಸಾವಿನ ಪ್ರಮಾಣವು ಸುಮಾರು ಶೇ. 50ರಷ್ಟು ಎಂದು ತಜ್ಞರು ಹೇಳುತ್ತಾರೆ.

ಎಬೋಲಾ ಮತ್ತು ಮಾರ್ಬರ್ಗ್ ಎರಡೂ ತೀವ್ರ ಜ್ವರ, ತೀವ್ರ ತಲೆನೋವು, ಅಸ್ವಸ್ಥತೆ ಮತ್ತು ಕಣ್ಣುಗಳು ಅಥವಾ ಆಂತರಿಕ ಅಂಗಗಳಿಂದ ರಕ್ತಸ್ರಾವ ಉಂಟಾಗುವ ಮೂಲಕ ಕಾಣಿಸಿಕೊಳ್ಳುತ್ತದೆ.

ತೀವ್ರತರವಾದ ಉಸಿರಾಟದ ಸಿಂಡ್ರೋಮ್ ಅಥವಾ SARS:

ತೀವ್ರವಾದ ಉಸಿರಾಟದ ಸಿಂಡ್ರೋಮ್ ಅಥವಾ SARS ಎಂಬುದು ಕೊರೊನಾವೈರಸ್‌ನಿಂದ ಉಂಟಾಗುವ ವೈರಲ್ ಉಸಿರಾಟದ ಸೋಂಕು. ಇದು COVID-19ಗೆ ಸಹ ಕಾರಣವಾಗುತ್ತದೆ. SARS ಶ್ವಾಸಕೋಶದಲ್ಲಿನ ವಾಯುಮಾರ್ಗಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಹಾಗೇ, ತಲೆನೋವು, ಜ್ವರ, ಮೈಕೈ ನೋವು, ಕೆಮ್ಮು ಮತ್ತು ನ್ಯುಮೋನಿಯಾವನ್ನು ಒಳಗೊಂಡಿರುವ ಜ್ವರ ಮತ್ತು ನೆಗಡಿಯಂತಹ ರೋಗಲಕ್ಷಣಗಳನ್ನು ಇದು ಹೊಂದಿದೆ.

ಇದನ್ನೂ ಓದಿ: ಕೋವಿಡ್-19ಗಿಂತ ಮಾರಕ ಸಾಂಕ್ರಾಮಿಕ ರೋಗವಾಗಲಿದೆ ಡಿಸೀಸ್ ಎಕ್ಸ್, ತಜ್ಞರು ಹೇಳಿದ್ದೇನು?

SARS ಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಈ ವೈರಸ್ ಹೊಂದಿರುವ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅಥವಾ ವೈರಸ್ ಹೊಂದಿರುವ ವಸ್ತುಗಳು ಅಥವಾ ಮೇಲ್ಮೈಗಳ ಸಂಪರ್ಕದಿಂದ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ ಇದು ಹರಡುತ್ತದೆ.

ನಿಪಾಹ್:

ಅಧ್ಯಯನದ ಪ್ರಕಾರ, ಹಣ್ಣಿನ ಬಾವಲಿಗಳಿಂದ ಹರಡುವ ನಿಪಾಹ್ ಮುಂದಿನ ದೊಡ್ಡ ಸಾಂಕ್ರಾಮಿಕ ರೋಗವಾಗುವ ಲಕ್ಷಣಗಳಿವೆ. ಮೆದುಳಿನ ಮೇಲೆ ದಾಳಿ ಮಾಡುವ ಈ ವೈರಸ್ ಉರಿಯೂತವನ್ನು ಉಂಟುಮಾಡುತ್ತದೆ. ಶೇ. 75ರಷ್ಟು ಸಾವಿನ ಪ್ರಮಾಣವನ್ನು ಉಂಟುಮಾಡುತ್ತದೆ. ಈ ವರ್ಷ ಭಾರತದ ಕೇರಳದಲ್ಲಿ ನಿಪಾಹ್ ಸೋಂಕಿನಿಂದ ಹಲವು ಜನ ಸಾವನ್ನಪ್ಪಿದ್ದರು.

ಮಚುಪೋ:

ಕಪ್ಪು ಟೈಫಸ್ ಮತ್ತು ಬೊಲಿವಿಯನ್ ಹೆಮರಾಜಿಕ್ ಜ್ವರ ಎಂದೂ ಕರೆಯಲ್ಪಡುವ ಮಚುಪೋವನ್ನು ಮೊದಲು 50ರ ದಶಕದಲ್ಲಿ ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ಕಂಡುಹಿಡಿಯಲಾಯಿತು. ಮಚುಪೋ ಇಲಿಗಳಿಂದ ಹರಡುತ್ತದೆ. ಇದು ಈಗ ಮುಂದಿನ ಸಾಂಕ್ರಾಮಿಕವಾಗಬಹುದು.

ಮಲೇರಿಯಾವನ್ನು ಹೋಲುವ ಜ್ವರ, ಅಸ್ವಸ್ಥತೆ, ತಲೆನೋವಿನಿಂದ ಈ ಸೋಂಕು ನಿಧಾನವಾಗಿ ಆರಂಭವಾಗುತ್ತದೆ. ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳಲ್ಲಿ ತೀವ್ರವಾದ ಹೆಮರಾಜಿಕ್ ಅಥವಾ ನರವೈಜ್ಞಾನಿಕ ಲಕ್ಷಣಗಳು ಕಂಡುಬರುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?