Oily Skin: ನಿಮ್ಮ ಮುಖದಲ್ಲಿನ ಎಣ್ಣೆಯುಕ್ತ ಚರ್ಮಕ್ಕೆ ಗುಡ್​ಬೈ ಹೇಳಲು ಕೆಲವೊಂದಿಷ್ಟು ಸಲಹೆಗಳು ಹೀಗಿವೆ

| Updated By: Skanda

Updated on: Jun 10, 2021 | 7:42 AM

ಆದಷ್ಟು ರಾಸಾಯನಿಕಗಳಿಂದ ತಯಾರಾದ ಮೇಕ್​ಅಪ್​ ಬಣ್ಣಗಳಿಂದ ದೂರವಿರಿ. ಕೆಲವು ರಾಸಾಯನಿಕ ಅಂಶವು ನಿಮ್ಮ ಸುಂದರ ಮುಖಕ್ಕೆ ಹಾನಿಯುಂಟು ಮಾಡಬಹುದು.

Oily Skin: ನಿಮ್ಮ ಮುಖದಲ್ಲಿನ ಎಣ್ಣೆಯುಕ್ತ ಚರ್ಮಕ್ಕೆ ಗುಡ್​ಬೈ ಹೇಳಲು ಕೆಲವೊಂದಿಷ್ಟು ಸಲಹೆಗಳು ಹೀಗಿವೆ
ಸಾಂದರ್ಭಿಕ ಚಿತ್ರ
Follow us on

ಬದಲಾಗುತ್ತಿರುವ ಹವಾಮಾನದಿಂದಾಗಿ ಮುಖ ಕಾಂತಿ ಕಳೆದುಕೊಳ್ಳುತ್ತದೆ. ಮುಖದಲ್ಲಿ ಮೊಡವೆಗಳು, ಮುಖ ಬಾಡಿದಂತೆ ಅನಿಸುವುದು ಹಾಗೂ ಎಷ್ಟೇ ಬಾರಿ ಮುಖ ತೊಳೆದರೂ ಸಹ ಎಣ್ಣೆಯುಕ್ತ ಚರ್ಮ ಕಾಣಿಸಿಕೊಳ್ಳುತ್ತದೆ. ಮುಖದಲ್ಲಿ ಹೆಚ್ಚು ಎಣ್ಣೆಯ ಅಂಶ ಕಂಡು ಬಂದಂತೆ ಮೊಡವೆಗಳು ಹೆಚ್ಚು ಏಳುತ್ತವೆ. ಆಗ ಮುಖ ಕಾಂತಿ ಕಳೆದುಕೊಳ್ಳುವುದು ಸಾಮಾನ್ಯ. ಹೀಗಿರುವಾಗ ಪರಿಹಾರ ಕ್ರಮಗಳೇನು? ಎಂಬುದರ ಕುರಿತಾಗಿ ತಿಳಿಯೋಣ.

ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು ಎಂಬುದು ಎಲ್ಲರ ಆಸೆ. ಮುಖದ ಚರ್ಮ ಮೃದುವಾಗಿರಬೇಕು, ಯಾವುದೇ ಕಲೆಗಳಿಲ್ಲದೇ ಸುಂದರವಾಗಿರುವ ಸಲುವಾಗಿ ಅದೆಷ್ಟೋ ಔಷಧಿಗಳನ್ನು ಮಾಡುತ್ತೇವೆ. ಮನೆಯಲ್ಲಿಯೇ ಸುಲಭವಾಗಿರುವ ವಿಧಾನಗಳು ಇರುವಾಗ ಅಲ್ಲಿ ಇಲ್ಲಿ ಔಷಧಿಗಾಗಿ ಹುಡುಕಾಡುವುದೇಕೆ?

ಹವಾಮಾನ ಏರುಪೇರಿನಿಂದಾಗಿ ಸಾಮಾನ್ಯವಾಗಿ ಮುಖ ಎಣ್ಣೆಯುಕ್ತವಾಗುತ್ತದೆ ಇದಕ್ಕೆ ಪರಿಹಾರವಾಗಿ ಕೆಲವು ಟಿಪ್ಸ್​ಗಳು ಹೀಗಿವೆ
ಪ್ರತಿನಿತ್ಯ ಮೂರಿಂದ-ನಾಲ್ಕು ಬಾರಿಯಾದರು ಶುದ್ಧ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖಕ್ಕೆ ಅಂಟಿಕೊಂಡಿರುವ ಎಣ್ಣೆಯ ಅಂಶ, ಮುಖದಲ್ಲಿನ ಧೂಳು ಹಾಗೂ ಮುಖದ ರಂಧ್ರಗಳಲ್ಲಿ ಸಿಲುಕಿಕೊಂಡಿರುವ ಧೂಳನ್ನು ತೆಗೆದು ಹಾಕಬಹುದು. ಹಾಗೂ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

ಚರ್ಮದ ಆರೈಕೆಗಾಗಿ ಹೈಡ್ರೇಟಿಂಗ್​ ಸೀರಮ್​ಗಳನ್ನು ಬಳಸಿ. ಇದರಿಂದ ಮುಖದ ಹೊಳಪು ಮತ್ತು ಮುಖದಲ್ಲಿನ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ.

ಎಣ್ಣೆಯುಕ್ತ ಚರ್ಮ ಹೊಂದಿರುವವರು ಮುಖಕ್ಕೆ ಮಸಾಜ್​ ಮಾಡಿ. ಇದರಿಂದ ಗುಳ್ಳೆಗಳು ಮತ್ತು ಕಣ್ಣಿನ ಸುತ್ತ ಬ್ಲ್ಯಾಕ್​ ಸರ್ಕಲ್​ಗಳು ಆಗದಂತೆ ನೋಡಿಕೊಳ್ಳಬಹುದು.

ಸುಡು ಬಿಸಿಲಿಗೆ ಹೋಗುವಾಗ ಆದಷ್ಟು ಮುಖಕ್ಕೆ ಬಿಸಿಲು ತಾಗದಂತೆ ಏನಾದರೂ ಬಳಸಿ. ನಮ್ಮಲ್ಲಿ ಉತ್ಪತ್ತಿಯಾಗುವ ಬೆವರು ಮುಖದಲ್ಲಿನ ಮೊಡವೆಗೆ ಕಾರಣವಾಗಬಹುದು. ಹಾಗೂ ಮುಖದಲ್ಲಿ ಎಣ್ಣೆಯ ಅಂಶ ಉತ್ಪತ್ತಿಯಾಗಲು ಕಾರಣವಾಗುತ್ತದೆ.

ಆದಷ್ಟು ರಾಸಾಯನಿಕಗಳಿಂದ ತಯಾರಾದ ಮೇಕ್​ಅಪ್​ ಬಣ್ಣಗಳಿಂದ ದೂರವಿರಿ. ಕೆಲವು ರಾಸಾಯನಿಕ ಅಂಶವು ನಿಮ್ಮ ಸುಂದರ ಮುಖಕ್ಕೆ ಹಾನಿಯುಂಟು ಮಾಡಬಹುದು.

ಮೇಕ್​ಅಪ್​​ ಮಾಡಿಯೇ ನಿದ್ರಿಸಬಿಡಬೇಡಿ. ಅಂದರೆ, ಕೆಲವು ಬಾರಿ ವಿಶೇಷ ದಿನದಂದು ಸುಂದರವಾಗಿ ಕಾಣಲು ಮೇಕ್​ಅಪ್​ ಮಾಡಿಕೊಳ್ಳುತ್ತೇವೆ. ಅದರಲ್ಲಿಯೇ ರಾತ್ರಿ ಮಲಗುವುದರಿಂದ ಮುಖದ ರಂಧ್ರಗಳಲ್ಲಿ ರಾಸಾಯನಿಕ ಬಣ್ಣಗಳು ಸೇರಿಕೊಳ್ಳುತ್ತವೆ. ಇದರಿಂದ ಚರ್ಮದ ಸಮಸ್ಯೆ ಉಂಟಾಗಬಹುದು. ಶುದ್ಧ ನೀರಿನಲ್ಲಿ ಮುಖವನ್ನು ತೊಳೆದು ಮಲಗಿ.

ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಫೇಸ್​ಮಾಸ್ಕ್​ ಹಚ್ಚಿ. ಶ್ರೀಗಂಧದ ಲೇಪನ ಅಥವಾ ಜೇಡಿಮಣ್ಣಿನ ಲೇಪನ ಮಾಡಿಕೊಳ್ಳಬಹುದು. ಇದು ನಿಮ್ಮ ಮುಖದಲ್ಲಿನ ಎಣ್ಣೆಅಂಶವನ್ನು ತೆಗೆದುಹಾಕುತ್ತದೆ ಹಾಗೂ ಮುಖ ಹೆಚ್ಚು ಕಾಂತಿಯುತವಾಗಿ ಕಾಣಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ