AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಂಡರೆ ಮಕ್ಕಳಲ್ಲಿ ವಿಟಮಿನ್ ಕೊರತೆಯಿದೆ ಎಂದರ್ಥ

ಮಕ್ಕಳು ಎಲ್ಲ ಕೆಲಸದಲ್ಲಿಯೂ ಆಲಸ್ಯ ತೋರುತ್ತಿದ್ದರೆ ಅಥವಾ ಅವರಿಗೆ ಪದೇ ಪದೇ ಶೀತ, ಜ್ವರ ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಮಕ್ಕಳಲ್ಲಿ ವಿಟಮಿನ್ ಕೊರತೆ ಕಂಡುಬಂದಾಗ ಈ ರೀತಿಯಾಗುತ್ತದೆ. ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು, ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಅವರ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಜೊತೆಗೆ ಮಕ್ಕಳಲ್ಲಿ ಕಂಡುಬರುವ ಬದಲಾವಣೆಗಳನ್ನು ಕಾಲಕಾಲಕ್ಕೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ನಿರ್ಲಕ್ಷ್ಯ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾದರೆ, ಮಕ್ಕಳಿಗೆ ಜೀವಸತ್ವ ಕೊರತೆಯಿದ್ದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಈ ಕೊರತೆಯನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಂಡರೆ ಮಕ್ಕಳಲ್ಲಿ ವಿಟಮಿನ್ ಕೊರತೆಯಿದೆ ಎಂದರ್ಥ
Vitamin Deficiencies In Kids
ಪ್ರೀತಿ ಭಟ್​, ಗುಣವಂತೆ
|

Updated on: Jul 23, 2025 | 4:22 PM

Share

ಮಕ್ಕಳಿಗೆ ಸ್ವಲ್ಪ ಹುಷಾರಿಲ್ಲದಿದ್ದರೂ ಕೂಡ, ಪೋಷಕರು ಚಿಂತೆಗೀಡಾಗುತ್ತಾರೆ. ಮಕ್ಕಳು (children) ಬೆಳೆಯುವವರಾಗಿರುವುದರಿಂದ ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿರುವುದು ಬಹಳ ಅವಶ್ಯವಾಗಿರುತ್ತದೆ. ಅದರಲ್ಲಿಯೂ ಮಕ್ಕಳು ಯಾವ ರೀತಿಯ ಆಹಾರವನ್ನು ಯಾವಾಗ, ಹೇಗೆ ಸೇವನೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮಕ್ಕಳು ಅನಾರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡು ಅನಗತ್ಯ ಸಮಸ್ಯೆಗಳನ್ನು ಆಹ್ವಾನ ಮಾಡಿದಂತಾಗಬಹುದು. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ, ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬೇಕು. ಜೀವಸತ್ವಗಳನ್ನು ಸರಿಯಾಗಿ ಸಿಕ್ಕಾಗ ಮಾತ್ರ ಅವರು ಆರೋಗ್ಯವಾಗಿರಲು ಸಾಧ್ಯ. ಇಲ್ಲದಿದ್ದರೆ, ಪದೇ ಪದೇ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ವಿಟಮಿನ್ ಕೊರತೆಯು (Vitamin deficiency) ಕಂಡುಬರುತ್ತಿದ್ದು ಬಹಳ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಆದರೆ ಮಕ್ಕಳಲ್ಲಿ ವಿಟಮಿನ್ ಕೊರತೆಯಾದಾಗ ಕೆಲವು ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇವುಗಳನ್ನು ಕಾಲಕಾಲಕ್ಕೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ನಿರ್ಲಕ್ಷ್ಯ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾದರೆ, ಮಕ್ಕಳಿಗೆ ಜೀವಸತ್ವ ಕೊರತೆಯಿದ್ದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಈ ಕೊರತೆಯನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪದೇ ಪದೇ ಮಕ್ಕಳಿಗೆ ಶೀತವಾಗುವುದು

ಸಾಮಾನ್ಯವಾಗಿ, ಮಕ್ಕಳು ಮಳೆಗಾಲ ಅಥವಾ ಚಳಿಗಾಲದಲ್ಲಿ ಶೀತಗಳಿಗೆ ತುತ್ತಾಗುತ್ತಾರೆ. ಆ ಸಮಯದಲ್ಲಿ, ಹವಾಮಾನವು ತುಂಬಾ ತಂಪಾಗಿರುವುದರಿಂದ ಶೀತವಾಗುವುದು ಸಹಜ. ಆದರೆ ವಿಟಮಿನ್ ಸಿ ಕೊರತೆಯಿರುವ ಮಕ್ಕಳಲ್ಲಿ ಋತುಮಾನವನ್ನು ಲೆಕ್ಕಿಸದೆ ಶೀತ ಕಂಡುಬರುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕಡಿಮೆಯಾದಾಗಲೆಲ್ಲಾ ಅವರು ಪದೇ ಪದೇ ಸೋಂಕು ಮತ್ತು ಜ್ವರದಿಂದ ಬಳಲುತ್ತಾರೆ. ಆದ್ದರಿಂದ, ಮಕ್ಕಳಿಗೆ ಸರಿಯಾದ ಪ್ರಮಾಣದ ವಿಟಮಿನ್ ಸಿ ಒದಗಿಸಲು, ಅವರ ಆಹಾರದಲ್ಲಿ ಕೆಲವು ಬದಲಾವಣೆಗಳು ಅಗತ್ಯ. ಅವರಿಗೆ ನಿಯಮಿತವಾಗಿ ಕಿತ್ತಳೆ, ಕಿವಿ, ಬೆಲ್ ಪೆಪರ್ ಮತ್ತು ಪೇರಳೆ ಹಣ್ಣುಗಳನ್ನು ನೀಡಬೇಕು. ಇವು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಅನ್ನು ಒದಗಿಸುತ್ತವೆ.

ಕೆಲವು ಆಹಾರಗಳನ್ನು ಮಾತ್ರ ಸೇವನೆ ಮಾಡುವುದು

ಮಕ್ಕಳು ತಾವು ಇಷ್ಟಪಡುವುದನ್ನು ಹೊರತುಪಡಿಸಿ ಬೇರೆ ಯಾವ ಆಹಾರವನ್ನು ಕೂಡ ಮುಟ್ಟುವುದಿಲ್ಲ, ಅದಕ್ಕಾಗಿಯೇ ಅವರಿಗೆ ಆಗಾಗ ಆರೋಗ್ಯ ಸಮಸ್ಯೆಗಳು ಬರುತ್ತದೆ ಅದರಲ್ಲಿಯೂ ಸತು ಮತ್ತು ಕಬ್ಬಿಣದ ಅಂಶ ಕೊರತೆಯಿರುವ ಮಕ್ಕಳಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯನ್ನು ಪರಿಹರಿಸಲು, ಮಕ್ಕಳಿಗೆ ನಿಯಮಿತವಾಗಿ ಕಡಲೆ ಮತ್ತು ಸೊಪ್ಪು, ತರಕಾರಿಗಳನ್ನು ತಿನ್ನಿಸಬೇಕು. ಇವುಗಳ ಜೊತೆಗೆ, ಅವರಿಗೆ ಕಿಡ್ನಿ ಬೀನ್ಸ್, ಪಾಲಕ್, ಗೋಡಂಬಿ ಮತ್ತು ಖರ್ಜೂರವನ್ನು ಸಹ ನೀಡಬೇಕು. ಪ್ರತಿದಿನ ಬೆಲ್ಲ ಸೇವಿಸುವುದರಿಂದ ಉತ್ತಮ ಪ್ರಮಾಣದ ಕಬ್ಬಿಣಾಂಶ ದೊರೆಯುತ್ತದೆ. ಕೋಳಿ ಮಾಂಸವನ್ನು ಇಷ್ಟಪಡುವ ಮಕ್ಕಳಿಗೆ, ವಾರಕ್ಕೆ ಎರಡು ಬಾರಿ ಇದನ್ನು ನೀಡಬೇಕು. ಜೊತೆಗೆ ಡಾರ್ಕ್ ಚಾಕೊಲೇಟ್‌ಗಳು ಕೂಡ ಕಬ್ಬಿಣ ಮತ್ತು ಸತುವಿನ ಅಂಶವನ್ನು ಒದಗಿಸುತ್ತದೆ.

ಇದನ್ನೂ ಓದಿ
Image
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
Image
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
Image
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
Image
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ಎತ್ತರ ಹೆಚ್ಚಾಗದಿರುವುದು

ಕೆಲವು ಮಕ್ಕಳು ಬೇಗನೆ ಬೆಳೆಯುತ್ತಾರೆ, ಇನ್ನು ಕೆಲವು ಮಕ್ಕಳ ಎತ್ತರ ಹೆಚ್ಚಾಗಿರುವುದಿಲ್ಲ. ವಿಟಮಿನ್ ಕೊರತೆ ಮತ್ತು ಎತ್ತರದ ನಡುವೆ ಸಂಬಂಧವಿದೆ. ಸತು ಅಥವಾ ವಿಟಮಿನ್ ಡಿ ಕೊರತೆಯಿದ್ದಾಗ, ಮಕ್ಕಳು ಎತ್ತರವಾಗಿ ಬೆಳೆಯುವುದಿಲ್ಲ. ಮಕ್ಕಳ ಎತ್ತರ ಸರಿಯಾಗಿರಲು ಅವರಿಗೆ ನಿಯಮಿತವಾಗಿ ಮೊಸರು ತಿನ್ನಿಸಬೇಕು. ಪ್ರತಿದಿನ ಮಕ್ಕಳು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಅವರ ಆಹಾರದಲ್ಲಿ ಮೊಟ್ಟೆ ಮತ್ತು ಕಡಲೆಹಿಟ್ಟನ್ನು ನೀಡಬೇಕು.

ಕೂದಲು ಉದುರುವುದು

ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಸತು ಅಥವಾ ಬಯೋಟಿನ್ ಕೊರತೆಯನ್ನು ಸೂಚಿಸುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು, ಮಕ್ಕಳ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು. ಇವುಗಳ ಜೊತೆಗೆ, ಬಾದಾಮಿ, ಕಡಲೆಕಾಯಿ, ವಾಲ್ನಟ್, ಸಿಹಿ ಗೆಣಸು, ಕುಂಬಳಕಾಯಿ ಬೀಜಗಳು ಮತ್ತು ಎಳ್ಳುಗಳನ್ನು ಕೊಡಬೇಕು. ಗೋಡಂಬಿಯನ್ನು ಸಹ ನಿಯಮಿತವಾಗಿ ನೀಡಬೇಕು.

ತುಟಿಗಳು ಒಣಗುವುದು

ಮಕ್ಕಳ ತುಟಿಗಳು ಒಣಗಿದಂತೆ ಕಂಡುಬಂದರೆ, ಅದು ಮಕ್ಕಳಲ್ಲಿ ಕಬ್ಬಿಣದ ಕೊರತೆಯ ಸೂಚನೆಯಾಗಿದೆ. ಆದ್ದರಿಂದ ಬೆಲ್ಲ ನೀಡುವುದು ಅತ್ಯಗತ್ಯ. ಇವುಗಳ ಜೊತೆಗೆ, ಪ್ರತಿದಿನ ಹಾಲು ಮತ್ತು ಮೊಸರು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಪ್ರಯೋಜನಕಾರಿ. ನಿಯಮಿತವಾಗಿ ಮೊಟ್ಟೆ ತಿನ್ನುವುದರಿಂದ ಕಬ್ಬಿಣದ ಕೊರತೆ ಕಡಿಮೆಯಾಗುತ್ತದೆ ಮತ್ತು ತುಟಿಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ಹಲ್ಲುಗಳಲ್ಲಿ ಆಗಾಗ ಸಮಸ್ಯೆಗಳು ಕಂಡುಬರುತ್ತಿದ್ದರೆ, ಅದು ಕಡಿಮೆ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಅನ್ನು ಸೂಚಿಸುತ್ತದೆ. ಮೊಸರು, ರಾಗಿ, ಎಳ್ಳು ಇವುಗಳನ್ನು ಮಕ್ಕಳಿಗೆ ನಿಯಮಿತವಾಗಿ ಯಾವುದಾದರೂ ರೂಪದಲ್ಲಿ ನೀಡಬೇಕು. ಸಾಂದರ್ಭಿಕವಾಗಿ ಅವರ ಆಹಾರದಲ್ಲಿ ಪನೀರ್ (ಕಾಟೇಜ್ ಚೀಸ್) ಸೇರಿಸುವುದು ಸಹ ತುಂಬಾ ಒಳ್ಳೆಯದು. ಹೆಚ್ಚುವರಿಯಾಗಿ, ಅವರು ಪ್ರತಿದಿನ ಸೂರ್ಯನ ಬೆಳಕನ್ನು ಪಡೆಯುವುದು ಬಹಳ ಮುಖ್ಯ.

ಇದನ್ನೂ ಓದಿ: ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ

ಮೂಡ್ ಸ್ವಿಂಗ್ಸ್

ಮಕ್ಕಳ ಮನಸ್ಥಿತಿಯಲ್ಲಿ ಆಗಾಗ ಬದಲಾವಣೆಗಳು ಕಂಡುಬರುತ್ತವೆ. ಹಾಗಿದ್ದಲ್ಲಿ, ಇದು ಖಂಡಿತವಾಗಿಯೂ ಅವರಲ್ಲಿ ಬಿ6 ಅಥವಾ ಬಿ12 ಜೀವಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ಅಂತಹ ಮಕ್ಕಳಿಗೆ ಹಾಲು, ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ನಿಯಮಿತವಾಗಿ ನೀಡಬೇಕು. ಓಟ್ಸ್, ಬೇಳೆ ಮತ್ತು ಸೋಯಾಬೀನ್ ಸಹ ಈ ಜೀವಸತ್ವಗಳನ್ನು ಒದಗಿಸಬಹುದು. ಅವರು ಯಾವಾಗಲೂ ಆಲಸ್ಯದಿಂದ ಕಾಣುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯನ್ನು ಸೂಚಿಸುತ್ತದೆ. ಹಾಗಾಗಿ ಖರ್ಜೂರ, ಸೊಪ್ಪು ಮತ್ತು ಮೊಸರನ್ನು ನಿಯಮಿತವಾಗಿ ನೀಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಬಿ12 ಜೀವಸತ್ವದ ಕೊರತೆಯಿರುವಾಗ ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳಬಹುದು. ಬೀಟ್ರೂಟ್ ಮತ್ತು ಪಾಲಕ್ ಅನ್ನು ಅವರ ಆಹಾರದಲ್ಲಿ ಸೇರಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ದೃಷ್ಟಿ ಸರಿಯಾಗಿಲ್ಲದಿದ್ದರೆ, ಅದು ವಿಟಮಿನ್ ಎ ಕೊರತೆಯನ್ನು ಸೂಚಿಸುತ್ತದೆ. ಕ್ಯಾರೆಟ್, ಪಪ್ಪಾಯಿ ಮತ್ತು ಬ್ರೊಕೊಲಿಯನ್ನು ಆಗಾಗ ನೀಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!