AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Health Tips: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದರಲ್ಲಿಯೂ ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಉಷ್ಣತೆ ಮತ್ತು ಆರ್ದ್ರತೆ ಕಂಡುಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಅನುಸರಿಸುವ ಆಹಾರ ಪದ್ಧತಿ ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲು ಉಡುಪಿ ಎಸ್‌ಡಿಎಮ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಷಾಪಿ ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

Summer Health Tips: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್
Beat the Heat: Expert Advice for Mangaloreans
ಪ್ರೀತಿ ಭಟ್​, ಗುಣವಂತೆ
|

Updated on: Apr 09, 2026 | 5:51 PM

Share

ಮಂಗಳೂರಿನಂತಹ ಕರಾವಳಿ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಅತಿ ಹೆಚ್ಚು ಉಷ್ಣತೆ ಮತ್ತು ಆರ್ದ್ರತೆ ಕಂಡುಬರುತ್ತದೆ ಎಂಬುದು ತಿಳಿದಿರುವ ವಿಚಾರ. ಈ ರೀತಿ ಬಿಸಿಲಿನ ತಾಪಮಾನ ಹೆಚ್ಚಾಗಿರುವಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳಬಹುದು. ಆಯುರ್ವೇದದ ಪ್ರಕಾರ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗುತ್ತದೆ. ಮಂಗಳೂರುಂತಹ ತೇವಾಂಶ ಇರುವ ಪ್ರದೇಶದಲ್ಲಿ ಇದು ಇನ್ನಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ ಗ್ರೀಷ್ಮ ಋತುಚರ್ಯೆಯನ್ನು ಅನುಸರಿಸುವುದು ಅತ್ಯವಶ್ಯಕ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲು ಉಡುಪಿ ಎಸ್‌ಡಿಎಮ್‌ ಆಯುರ್ವೇದ ಕಾಲೇಜು (SDM College of Ayurveda, Udupi) ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಷಾಪಿ ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಈ ಸಮಯದಲ್ಲಿ ಸೂರ್ಯನ ಬೆಳಕು ಮಿತವಾಗಿ ಉಪಯುಕ್ತವಾಗಬಹುದು, ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಲು, ಮನಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಆದರೂ ಕೂಡ ಹೆಚ್ಚಿನ ಪ್ರಮಾಣವು ಪಿತ್ತ ಮಟ್ಟವನ್ನು ಹೆಚ್ಚಿಸುತ್ತದೆ, ಅಂಗಾಂಶಗಳನ್ನು ಒಣಗಿಸುತ್ತದೆ ಮತ್ತು ದೇಹದಲ್ಲಿನ ಓಜಸ್ (ಪ್ರಮುಖ ಶಕ್ತಿ) ಅನ್ನು ದುರ್ಬಲಗೊಳಿಸುತ್ತದೆ, ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ದೇಹದ ಬಲ ಕಡಿಮೆಯಾಗುತ್ತದೆ ಹಾಗೂ ಪಚನ ಶಕ್ತಿ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಶೀತಲ, ಮಧುರ ಮತ್ತು ದ್ರವ ಆಹಾರಗಳನ್ನು ಸೇವಿಸಬೇಕು. ಹಾಲು, ಮಜ್ಜಿಗೆ, ತೆಂಗಿನಕಾಯಿ ನೀರು ಮತ್ತು ಹಣ್ಣುಗಳ ರಸಗಳು ದೇಹಕ್ಕೆ ತಂಪು ನೀಡುತ್ತವೆ.

ಬೇಸಿಗೆಗೆ ತಂಪಾಗಿಸುವ ಆಹಾರಗಳು:

ನಾವು ಈ ಸಮಯದಲ್ಲಿ ನೈಸರ್ಗಿಕವಾಗಿ ತಂಪಾಗಿಸುವ, ರಸಭರಿತವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳನ್ನು ಸೇವಿಸಬೇಕು.

ಮಜ್ಜಿಗೆ: ಹಗುರ, ಜೀರ್ಣಕ್ರಿಯೆಗೆ ಅನುಕೂಲಕರ ಮತ್ತು ತಂಪಾಗಿಸುವ ಪಾನೀಯ. ಮಜ್ಜಿಗೆಯಲ್ಲಿ ಒಂದು ಚಿಟಿಕೆ ಜೀರಿಗೆ ಸೇರಿಸುವುದರಿಂದ ಅದರ ಪರಿಣಾಮ ಹೆಚ್ಚಾಗುತ್ತದೆ. ಎಳನೀರು: ಇದು ಪ್ರಕೃತಿಯ ಪರಿಪೂರ್ಣ ಎಲೆಕ್ಟ್ರೋಲೈಟ್ ಪಾನೀಯವಾಗಿದ್ದು, ಇದನ್ನು ಬೆಳಿಗ್ಗೆ ಮಧ್ಯಾಹ್ನದ ಸಮಯದಲ್ಲಿ ಸೇವಿಸುವುದು ಉತ್ತಮ. ಗಿಡಮೂಲಿಕೆಗಳ ಕಷಾಯ: ಕೊತ್ತಂಬರಿ ಬೀಜ ಅಥವಾ ಸೋಂಪು ಬೀಜದ ನೀರು ಶಾಖ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆಮ್ಲಾ ಜ್ಯೂಸ್: ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಣ್ಣುಗಳು: ಕಲ್ಲಂಗಡಿ, ದ್ರಾಕ್ಷಿ ಮತ್ತು ದಾಳಿಂಬೆ. ತರಕಾರಿಗಳು: ಸೌತೆಕಾಯಿಗಳು, ಸೋರೆಕಾಯಿಗಳು ಮತ್ತು ಎಲೆಗಳ ತರಕಾರಿಗಳು. ಧಾನ್ಯ: ಅಕ್ಕಿ ಮತ್ತು ಬಾರ್ಲಿ. ಡೈರಿ: ಪಿತ್ತ ಸಮತೋಲನಕ್ಕೆ ತಾಜಾ ಹಾಲು ಮತ್ತು ತುಪ್ಪದ ಸೇವನೆಯ ಮಿತಿಯ ಅಗತ್ಯವಿದೆ.

ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?

ಈ ಸಲಹೆಗಳನ್ನು ತಪ್ಪದೆ ಪಾಲಿಸಿ:

ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚು ಖಾರ ಮತ್ತು ಎಣ್ಣೆಯ ಪದಾರ್ಥಗಳನ್ನು ಕಡಿಮೆ ಬಳಸುವುದು ಉತ್ತಮ, ದಿನವಡಿ ಸಾಕಷ್ಟು ನೀರು ಕುಡಿಯಬೇಕು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು, ಬಿಸಿಲಿನಿಂದ ರಕ್ಷಣೆ ಪಡೆಯಲು ಹತ್ತಿ ಬಟ್ಟೆಗಳನ್ನು ಧರಿಸಬೇಕು, ಛತ್ರಿ- ಸನ್ ಗ್ಲಾಸ್ ಬಳಸುವುದರಿಂದ ಕಣ್ಣು ಮತ್ತು ಚರ್ಮವನ್ನು ರಕ್ಷಿಸಬಹುದು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಸರಿಯಾದ ನಿದ್ರೆ, ನಿಯಮಿತ ಸ್ನಾನ ಮತ್ತು ಸ್ವಚ್ಛತೆ ಕೂಡ ಮುಖ್ಯ ಬೆವರು ಕಾರಣದಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಸಮತೋಲನವನ್ನು ಕಾಪಾಡಬಹುದು.

ಸುಡುವ ಬಿಸಿಲಿನ ನಡುವೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸೇರಿದಂತೆ ಒಟ್ಟಾರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಜಾಗತಿಕ ತಾಪಮಾನವು ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಾದರೆ, ಜನರು ಬಿಸಿ ಮತ್ತು ಆರ್ದ್ರ ವಾತಾವರಣದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಈ ಕ್ರಮಗಳನ್ನು ಅನುಸರಿಸಿದರೆ ಮಂಗಳೂರು ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು