ಮಳೆಗಾಲದಲ್ಲೂ ಐಸ್ ಕ್ರೀಮ್ ತಿನ್ನುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಮಳೆಗಾಲದಲ್ಲಿ ಅನೇಕರು ಬಿಸಿ ಬಿಸಿಯಾಗಿರುವ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಅದರಲ್ಲಿ ಕೆಲವರು ಮಳೆ ಬರುವಾಗ ತಣ್ಣನೆಯ ಐಸ್ ಕ್ರೀಮ್ ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಈ ರೀತಿ ವಾತಾವರಣದಲ್ಲಿ ಬಿಸಿಯಾಗಿರುವ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ, ಮಳೆಗಾಲದಲ್ಲಿ ನಾವು ಐಸ್ ಕ್ರೀಮ್ ತಿಂದರೆ ಏನಾಗುತ್ತದೆ? ಮಳೆಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದಕ್ಕೂ ಆರೋಗ್ಯ ಹಾಳಾಗುವುದಕ್ಕೂ ಸಂಬಂಧವಿದೆಯೇ ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ವಯಸ್ಸಿನ ಮಿತಿ ಇಲ್ಲದೆ ಐಸ್ ಕ್ರೀಮ್ (Ice Cream) ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಆದರೆ, ಕೆಲವರು ಇದನ್ನು ಇತಿ ಮಿತಿಯಿಲ್ಲದೆ ತಿನ್ನುತ್ತಾರೆ. ಬೇಸಿಗೆ ಕಾಲದಲ್ಲಿ ತಣ್ಣನೆಯ ಐಸ್ ಕ್ರೀಮ್ ತಿನ್ನುವುದು ಸಾಮಾನ್ಯ. ಆಗ ಹೆಚ್ಚಿನ ಆರೋಗ್ಯ (Health) ತೊಂದರೆಯೂ ಉಂಟಾಗುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ, ಮಳೆಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದಕ್ಕೆ ಹಲವಾರು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆದಷ್ಟು ಬಿಸಿ ಬಿಸಿಯಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ ಆದರೂ ಕೂಡ ಕೆಲವರಿಗೆ ಐಸ್ ಕ್ರೀಮ್ ಮೇಲಿರುವ ಹುಚ್ಚು ಪ್ರೀತಿಯಿಂದ ಅದನ್ನು ಯಾವುದೇ ಸಮಯವಾಗಲಿ, ಎಷ್ಟೇ ಮಳೆ ಬರಲಿ, ಚಳಿ ಇರಲಿ ಐಸ್ ಕ್ರೀಮ್ ತಿನ್ನುತ್ತಾರೆ. ಆದರೆ ಮಳೆಗಾಲದಲ್ಲಿ (Monsoon Season) ಐಸ್ ಕ್ರೀಮ್ ತಿಂದ್ರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆಯೇ? ಮಳೆಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದಕ್ಕೂ ಆರೋಗ್ಯ ಹಾಳಾಗುವುದಕ್ಕೂ ಸಂಬಂಧವಿದೆಯೇ ಎಂಬುದನ್ನು ತಿಳಿದುಕೊಳ್ಳಿ.
ಶೀತ, ಕೆಮ್ಮು, ಎದೆಭಾರ
ಮಳೆ ಬರುವ ಸಮಯದಲ್ಲಿ ಹವಾಮಾನದಲ್ಲಿ ಬದಲಾವಣೆಗಳು ಆಗುವುದರಿಂದ, ಬಿಸಿ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ತಣ್ಣಗಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಐಸ್ ಕ್ರೀಮ್ ನಂತಹ ಆಹಾರಗಳನ್ನು ತಂಪು ವಾತಾವರಣದಲ್ಲಿ ಸೇವಿಸಿದಾಗ, ಶೀತ, ಕೆಮ್ಮು ಮತ್ತು ಎದೆ ಭಾರವಾಗುವಂತಹ ಸಮಸ್ಯೆಗಳು ಉಂಟಾಗುತ್ತವೆ. ಮಾತ್ರವಲ್ಲ ಸೋಂಕುಗಳಿಂದಾಗಿ ಕೆಲವು ರೀತಿಯ ರೋಗಗಳು ಕೂಡ ಕಂಡುಬರಬಹುದು.
ಇದನ್ನೂ ಓದಿ: ಕಾಲ್ಬೆರಳಿನ ಮಧ್ಯೆ ಕಂಡು ಬರುವ ನಂಜು ನಿವಾರಣೆಗೆ ಈ ಮನೆಮದ್ದನ್ನು ಮಾಡಿ
ಬೊಜ್ಜಿಗೆ ಕಾರಣವಾಗುತ್ತೆ!
ಐಸ್ ಕ್ರೀಂನಲ್ಲಿ ಸಕ್ಕರೆ, ಕ್ಯಾಲೋರಿಗಳು ಮತ್ತು ಅನಗತ್ಯ ಕೊಬ್ಬಿನಾಂಶ ಇರುವುದರಿಂದ, ಇದು ಬೊಜ್ಜು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾಗಬಹುದು. ಜೊತೆಗೆ ಮಳೆಗಾಲದ ಸಮಯದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ಜೀರ್ಣ ಶಕ್ತಿ ದುರ್ಬಲಗೊಳ್ಳುತ್ತದೆ. ಗಂಟಲು ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಮಳೆ ಬರುವಂತಹ ಸಮಯ ಅಥವಾ ತಂಪಿನ ವಾತಾವರಣ ಇರುವಾಗ ಐಸ್ ಕ್ರೀಮ್ ತಿನ್ನುವುದರಿಂದ ಮೆದುಳಿನ ನರಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ಹಲ್ಲಿನ ಸಮಸ್ಯೆಗಲು ಕಂಡುಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಐಸ್ ಕ್ರೀಮ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು, ಇದು ಬೊಜ್ಜಿಗೂ ಕಾರಣವಾಗಬಹುದು. ಹಾಗಾಗಿ ಐಸ್ ಕ್ರೀಮ್ ಬಹಳ ಇಷ್ಟ ಎಂದು ಮಳೆಗಾಲದಲ್ಲಿ ತಿನ್ನಬೇಡಿ. ನಿಮ್ಮ ಇಷ್ಟ ಆರೋಗ್ಯಕ್ಕೆ ಕಷ್ಟವಾಗಬಾರದು. ಹಾಗಾಗಿ ಆಹಾರದಲ್ಲಿ ಎಲ್ಲ ರೀತಿಯಿಂದಲೂ ಒಂದು ಇತಿಮಿತಿ ಇರಲಿ. ಇದು ನಿಮಗೂ ನಿಮ್ಮ ದೇಹಕ್ಕೂ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








