ಕಣ್ಣಿಗೆ ಸಂಬಂಧಿಸಿದ ಈ ಸಮಸ್ಯೆಗಳು ನಿಮ್ಮನ್ನು ಶಾಶ್ವತವಾಗಿ ಕುರುಡರನ್ನಾಗಿ ಮಾಡಬಹುದು ಎಚ್ಚರ
ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ನಿರ್ಲಕ್ಷಿಸಿದರೆ ಶಾಶ್ವತವಾಗಿ ಕುರುಡರಾಗಬಹುದು ಎಚ್ಚರ. ಸಮಸ್ಯೆ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿಗೆ ಹೋಗಿ ಸರಿಯಾದ ಚಿಕಿತ್ಸೆ ಪಡೆಯಲೇಬೇಕು. ಕಣ್ಣಿನ ಸಮಸ್ಯೆಗಳು ನಿಮಗೆ ಯಾವ ವಯಸ್ಸಿನಲ್ಲಿ ಬೇಕಾದರೂ ಕಾಡಬಹುದು, ಮಕ್ಕಳಲ್ಲಿ ಗ್ಲುಕೋಮಾ( Glaucoma)ವೇಗವಾಗಿ ಹೆಚ್ಚುತ್ತಿದೆ. ಇದು ಕಾಲಾನಂತರದಲ್ಲಿ ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ವಯಸ್ಸಾದಂತೆ ಕಣ್ಣಿನ ಪೊರೆ ಸಮಸ್ಯೆಯೂ ದೃಷ್ಟಿಯನ್ನು ದೂರ ಮಾಡುತ್ತದೆ. ಆದ್ದರಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.

ಮಂದ ದೃಷ್ಟಿ ದೃಷ್ಟಿ ಅಸ್ಪಷ್ಟವಾಗಿದ್ದರೆ ಅದು ಅನೇಕ ರೀತಿಯ ಸಮಸ್ಯೆಗಳು ಹಾಗೂ ರೋಗಗಳ ಸೂಚನೆಯಾಗಿರಬಹುದು. ಕೆಲವು ಸಂದರ್ಭದಲ್ಲಿ, ಇದು ಕಣ್ಣಿನ ಪೊರೆ ಅಥವಾ ಮಸೂರಕ್ಕೆ ಸಂಬಂಧಿಸಿದ ಸಮಸ್ಯೆಯಿಂದಲೂ ಕೂಡ ಇರಬಹುದು. ಆದ್ದರಿಂದ ಚಿಕಿತ್ಸೆಯನ್ನು ತಕ್ಷಣವೇ ಪಡೆಯಬೇಕು. ಕಣ್ಣಿನ ಪೊರೆಯು ವಯಸ್ಸಾದಂತೆ ಕಣ್ಣುಗಳಲ್ಲಿನ ನೈಸರ್ಗಿಕ ಬದಲಾವಣೆಗಳಿಂದ ಉಂಟಾಗುತ್ತದೆ. ಆದ್ದರಿಂದ ಸಮಯಕ್ಕೆ ಕಾಳಜಿವಹಿಸದಿದ್ದರೆ, ಅವು ಕುರುಡುತನಕ್ಕೆ ಕಾರಣವಾಗಬಹುದು.
ಕಣ್ಣಿನ ನರಗಳಲ್ಲಿ ಸಮಸ್ಯೆ ಕಣ್ಣುಗಳ ನಗರಗಳ ಸಮಸ್ಯೆಗಳೂ ಕುರುಡುತನಕ್ಕೆ ಕಾರಣವಾಗಬಹುದು, ಇದು ನೋಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು, ಗ್ಲುಕೋಮಾ ಅಂತಹ ಒಂದು ರೋಗ. ಗ್ಲುಕೋಮಾಕ್ಕೆ ಯಾವುದೇ ಸ್ಥಿರ ಚಿಕಿತ್ಸಾ ಮಾದರಿಗಳಿಲ್ಲ. ಆದಾಗ್ಯೂ, ಸಕಾಲಿಕ ಚಿಕಿತ್ಸೆಯಿಂದ ಸಮಸ್ಯೆಯನ್ನು ತೊಡೆದುಹಾಕಬಹುದು.
ಮತ್ತಷ್ಟು ಓದಿ: Symptoms of depression: ಖಿನ್ನತೆಗೆ ಒಳಗಾದ ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡುಬರಬಹುದು; ಎಂದಿಗೂ ನಿರ್ಲಕ್ಷ್ಯಬೇಡ
ಕಣ್ಣಿನ ನೋವಿನ ಸಮಸ್ಯೆ ಅನೇಕ ಕಣ್ಣಿನ ಕಾಯಿಲೆಗಳು ನೋವನ್ನು ಹೆಚ್ಚಿಸಬಹುದು. ಕಣ್ಣುಗಳಿಗೆ ಗಾಯದಿಂದಾಗಿ ನೋವು ಸಂಭವಿಸಬಹುದು. ತಜ್ಞರ ಪ್ರಕಾರ, ಕಣ್ಣುಗಳಲ್ಲಿ ನೋವು ಎಂದರೆ ಕಣ್ಣುಗಳು ಹೆಚ್ಚು ಒತ್ತಡದಲ್ಲಿರುತ್ತವೆ. ಇದು ಗ್ಲುಕೋಮಾದ ಲಕ್ಷಣವೂ ಆಗಿರಬಹುದು. ಈ ಸಮಸ್ಯೆಯು ದೀರ್ಘಕಾಲದವರೆಗೆ ಮುಂದುವರಿದರೆ, ನೀವು ಕಣ್ಣಿನ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಬೇಕು. ಇಲ್ಲದಿದ್ದರೆ, ಇದು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ