Vitamin D Deficiency: ಭಾರತದಲ್ಲಿ ಪ್ರತಿ 5 ಜನರಲ್ಲಿ ಒಬ್ಬರಿಗೆ ವಿಟಮಿನ್ ಡಿ ಕೊರತೆಯಿದೆ; ಅಧ್ಯಯನ
ವಿಟಮಿನ್ ಡಿ ನಮ್ಮ ದೇಹಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶವಾಗಿದ್ದು, ಇದರ ಕೊರತೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಪ್ರಾಥಮಿಕ ಮೂಲಕವಾಗಿದ್ದು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೂಲಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಬಹುದು. ವಿಷಯ ಏನಪ್ಪಾ ಅಂದ್ರೆ ವರ್ಷವಿಡೀ ಹೇರಳವಾಗಿ ಸೂರ್ಯನ ಬೆಳಕು ಬೀಳುವ ನಮ್ಮ ಭಾರತದಲ್ಲಿ ಐದರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಅಧ್ಯಯನದಿಂದ ಈ ಶಾಕಿಂಗ್ ಅಂಶ ಬಯಲಾಗಿದೆ.

ಮಿಟಮಿನ್ ಡಿ (Vitamin D) ನಮ್ಮ ದೇಹಕ್ಕೆ ಅತಿ ಅವಶ್ಯಕವಾಗಿರುವ ಪೋಷಕಾಂಶವಾಗಿದೆ (nutrient). ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು (immunization), ಸ್ನಾಯುಗಳು ಮತ್ತು ಜೀವಕೋಶದ ಬೆಳವಣಿಗೆಗೆ, ಉರಿಯೂತ ತಗ್ಗಿಸಲು, ರಕ್ತದೊತ್ತಡ ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು (heart health) ಕಾಪಾಡಲು ಸಹಕಾರಿಯಾಗಿದೆ. ಹೀಗಾಗಿ ವಿಟಮಿನ್ ಡಿ (Vitamin D) ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರ ಜೊತೆಗೆ ಕೆಲವು ಆಹಾರ ಮತ್ತು ಪೂರಕಗಳಿಂದ ಈ ಪೋಷಕಾಂಶವನ್ನು ಪಡೆಯಬಹುದಾಗಿದೆ. ಭಾರತದಲ್ಲಿ ಸೂರ್ಯನ ಬೆಳಕಿನ ಲಭ್ಯತೆ ಸಾಕಷ್ಟಿದ್ದು, ಇದರ ಹೊರತಾಗಿಯೂ ಇಲ್ಲಿನ ಪ್ರತಿ ಐದು ಜನರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ (Vitamin D Deficiency)ಬಳಲುತ್ತಿದ್ದಾರಂತೆ. ICRER ಸಂಶೋಧನಾ ಮಂಡಳಿ ಮತ್ತು ANVKA ಫೌಂಡೇಶನ್ ನಡೆಸಿದ ಸಂಶೋಧನೆಯಿಂದ (study) ಈ ಆಘಾತಕಾರಿ ಸಂಗತಿ ತಿಳಿದು ಬಂದಿದೆ.
ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ (ICRER) ಮತ್ತು ANVKA ಫೌಂಡೇಶನ್‌ನ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ನಮ್ಮ ಭಾರತದಲ್ಲಿ ಐವರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಶಾಕಿಂಗ್ ವಿಚಾರ ಬಯಲಾಗಿದೆ. ICRER ಸಂಶೋಧನಾ ಮಂಡಳಿ ಮತ್ತು ANVKA ಫೌಂಡೇಶನ್ ನಡೆಸಿದ ಮೆಟಾ-ವಿಶ್ಲೇಷಣೆಯಿಂದ ಪ್ರತಿ ಐದು ಭಾರತೀಯರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಪ್ರತಿ ಐದು ಜನರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದು, ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಿದೆ ಎಂದು ತಿಳಿದು ಬಂದಿದೆ. ದೇಶದ ಪೂರ್ವ ಪ್ರದೇಶಗಳಲ್ಲಿ ವಿಟಮಿನ್ ಡಿ ಕೊರತೆ ಶೇ. 38.81% ರಷ್ಟಿದೆ. ಶೇ. 84% ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ 81% ರಷ್ಟು 25-40 ವರ್ಷ ವಯಸ್ಸಿನ ಜನ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದು ಡೇಟಾದಿಂದ ತಿಳಿದು ಬಂದಿದೆ. ವಿಟಮಿನ್ ಡಿ ಕೊರತೆಯು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಮೌನ ಸಾಂಕ್ರಾಮಿಕ ರೋಗವಾಗಿದ್ದು, ಇದು ಮಕ್ಕಳಲ್ಲಿ ರಿಕೆಟ್ಸ್ ಮತ್ತು ವಯಸ್ಕರರಲ್ಲಿ ಆಸ್ಟಿಯೋಮಲೇಶಿಯಾ ಎಂಬ ಮೂಳೆ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ವಿಟಮಿನ್ ಡಿ ಕೊರತೆ ಹೃದಯ ರಕ್ತನಾಳಗಳ ಕಾಯಿಲೆ, ಟೈಪ್ 2 ಮಧುಮೇಹ ಸ್ತನ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಹೊರಗಡೆ ಹೋದಲ್ಲಿ ಬಂದಲ್ಲಿ ಬಾಟಲಿ ನೀರು ಖರೀದಿಸಿ ಕುಡಿಯುವವರೇ ಎಚ್ಚರ!
“ವಿಟಮಿನ್ ಡಿ ಕೊರತೆಯು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಮೌನ ಸಾಂಕ್ರಾಮಿಕ ರೋಗವಾಗಿದ್ದರೂ ಇದನ್ನು ಕಡೆಗಣಿಸಲಾಗಿದೆ. ಇದರ ಪರಿಣಾಮವಾಗಿ ಮೂಲೆಗಳು ದುರ್ಬಲಗೊಳ್ಳುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯ ಕುಗ್ಗಿವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇಂತಹ ಆರೋಗ್ಯ ಸಮಸ್ಯೆಯ ಒತ್ತಡ ಕುಟುಂಬಗಳಿಗೆ ಹೊರೆಯಾಗುತ್ತದೆ ಮತ್ತು ನಮ್ಮ ರಾಷ್ಟ್ರೀಯ ಆರೋಗ್ಯ ಗುರಿಗಳನ್ನು ದುರ್ಬಲಗೊಳಿಸುತ್ತದೆ ಹಾಗಾಗಿ ಈ ಪರಿಸ್ಥಿಯನ್ನು ನಿಭಾಯಿಸಲು ನೀತಿ ನಿರೂಪಕರು, ಆರೋಗ್ಯ ವೃತ್ತಿಪರರು, ಉದ್ಯಮ, ರಾಜಕೀಯ ನಾಯಕರು ಒಟ್ಟಾಗಿ ಕೈ ಜೋಡಿಸುವ ಅಗತ್ಯವಿದೆ ಹೀಗೆ ಬಲವರ್ಧಿತ ಪೋಷಣೆ, ಆರೋಗ್ಯ ತಂತ್ರ ಜಾಗೃತಿ ಅಭಿಯಾನಗಳನ್ನು ರೂಪಿಸುವ ಮೂಲಕ ವಿಟಮಿನ್ ಡಿ ಕೊರತೆಯಿಂದ ದೇಶದ ಜನರನ್ನು ಮುಕ್ತರಾಗಿಸಬಹುದು” ಎಂದು ಆಕಾಶ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಈ ಅಧ್ಯಯನದ ಸಹ ಲೇಖಕ ಡಾ. ಆಶಿಶ್ ಚೌಧರಿ ಹೇಳಿದ್ದಾರೆ.
ವಿಟಮಿನ್ ಡಿ ಕೊರತೆಗೆ ಕಾರಣ:
ಮಕ್ಕಳು, ಹದಿಹರೆಯದವರು, ಗರ್ಭಿಣಿಯರು ಮತ್ತು ವೃದ್ಧರು ಹೆಚ್ಚಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಹೊರಾಂಗಣ ಚಟುವಟಿಕೆಗಳ ಕೊರತೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೆ ಹೆಚ್ಚು ಕಾಲ ಒಳಾಂಗಣದಲ್ಲಿಯೇ ಕಳೆಯುವುದು, ನಗರ ವಾಯು ಮಾಲಿನ್ಯ, ಮೀನು, ಮೊಟ್ಟೆಮ ಡೈರಿ ಉತ್ಪನ್ನಗಳು ಸೇರದಂತೆ ವಿಟಮಿನ್ ಡಿ ಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸದಿರುವುದೇ ವಿಟಮಿನ್ ಡಿ ಪೋಷಕಾಂಶದ ಕೊರತೆಗೆ ಮುಖ್ಯ ಕಾರಣವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ