ಬೆಳಗ್ಗಿನ ತಿಂಡಿಗೆ ಹಾಗೂ ಆರೋಗ್ಯಕರ ತೂಕ ನಿಯಂತ್ರಣಕ್ಕೆ ಸಹಕಾರಿ ಕ್ವಿನೋವಾ ಕಟ್ಲೆಟ್
ನಿಮ್ಮ ಆಹಾರದಲ್ಲಿ ಕ್ವಿನೋವಾವನ್ನು ಸೇರಿಸಲು ನೀವು ಪ್ರಯತ್ನಿಸುತ್ತಿದ್ದೀರಾ? ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಈ ಸುಲಭವಾದ ಆರೋಗ್ಯಕರ ಪಾಕವಿಧಾನವನ್ನು ಪ್ರಯತ್ನಿಸಿ.
ತೂಕ ಇಳಿಸಿಕೊಳ್ಳುವ ನಿಮ್ಮ ಪ್ರಯತ್ನದಲ್ಲಿ, ನೀವು ಅನೇಕ ರೀತಿಯ ಪಾಕವಿಧಾನಗಳನ್ನು ಮಾಡಿ ನೋಡಿರಬಹುದು. ನಿಮಗೆ ತೂಕ ಇಳಿಸಿಕೊಳ್ಳಲು ಅನೇಕ ಪಾಕವಿಧಾನಗಳಿವೆಯಾದರೂ, ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳುವಂತೆ ಮಾಡುವ ಯಾವುದೇ ಮಾಂತ್ರಿಕ ಪದಾರ್ಥವಿಲ್ಲ. ಆದರೆ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಿಕೊಂಡರೆ ನಿಮಗೆ ಪ್ರಯೋಜನಕಾರಿಯಾಗಬಹುದು. ಅಂತಹ ಪದಾರ್ಥಗಳಲ್ಲಿ ಕ್ವಿನೋವಾ ಕೂಡ ಒಂದು. ಜೊತೆಗೆ ನೀವು ಪ್ರತಿದಿನ ಬೆಳಿಗ್ಗೆ ರುಚಿಕರವಾದ ಏನನ್ನಾದರೂ ಬಯಸುತ್ತಿದ್ದರೆ, ನೀವು ಉಪಾಹಾರಕ್ಕಾಗಿ ಈ ಕ್ವಿನೋವಾ ಮೊಳಕೆ ಕಾಳುಗಳ ಪಾಕವಿಧಾನವನ್ನು ಪ್ರಯತ್ನಿಸಬೇಕು.
ಅನಾದಿ ಕಾಲದಿಂದಲೂ ತೂಕ ಇಳಿಸುವ ಆಹಾರದಲ್ಲಿ ಕ್ವಿನೋವಾವನ್ನು ಪ್ರಧಾನವೆಂದು ಪರಿಗಣಿಸಲಾಗಿದೆ. ಈ ಬೀಜ ಸಣ್ಣಗಿದ್ದರೂ ಇದರಲ್ಲಿರುವ ಶಕ್ತಿಯುತ ಪೋಷಕಾಂಶ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸೂಪರ್ಫುಡ್ ಎಂದರೆ ತಪ್ಪಾಗಲಾರದು. ಇದರಲ್ಲಿ ನೀವು ಅನೇಕ ಪ್ರಯೋಗ ಮಾಡಬಹುದು. ಅದೇ ರೀತಿ ಇಲ್ಲಿ ಹಂಚಿಕೊಳ್ಳುತ್ತಿರುವ ಪಾಕವಿಧಾನ ಆರೋಗ್ಯಕರವಾಗಿದ್ದು, ಅದು ನಿಮ್ಮ ತೂಕ ಇಳಿಸುವ ಪ್ರಯಾಣಕ್ಕೆ ಬೆಂಬಲ ನೀಡುತ್ತದೆ.
ಖ್ಯಾತ ಪೌಷ್ಟಿಕತಜ್ಞೆ ಲೀಮಾ ಮಹಾಜನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೂಕ ಇಳಿಸಿಕೊಳ್ಳಲು ಆರೋಗ್ಯಕರ ಮತ್ತು ಸುಲಭವಾದ ಪಾಕವಿಧಾನಗಳಲ್ಲಿ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು (10 ಕಟ್ಲೆಟ್ ಗಳಿಗೆ):
50 ಗ್ರಾಂ ಕ್ವಿನೋವಾ
100 ಗ್ರಾಂ ಮೊಳಕೆ ಕಾಳುಗಳು
1 ಇಂಚಿನ ಶುಂಠಿ
1 ಬೆಳ್ಳುಳ್ಳಿ ಎಸಳು
100 ಗ್ರಾಂ ತುರಿದ ಬೇಯಿಸಿದ ಆಲೂಗಡ್ಡೆ
ಅರ್ಧ ಕಪ್ ತುರಿದ ಕ್ಯಾರೆಟ್
ರುಚಿಗೆ ತಕ್ಕಷ್ಟು ಉಪ್ಪು
ಹಸಿ ಮೆಣಸಿನಕಾಯಿ
ಆಮ್ಚೂರ್ ಪುಡಿ
ಗರಂ ಮಸಾಲಾ
ಕಡಲೆ ಹಿಟ್ಟು
ಇದನ್ನೂ ಓದಿ: ಸಂಜೆ ಮೊಸರು ತಿನ್ನುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತೆ, ಇತರೆ ಪ್ರಯೋಜನಗಳ ತಿಳಿಯಿರಿ
ಕ್ವಿನೋವಾ ಮೊಳಕೆ ಕಾಳುಗಳ ಕಟ್ಲೆಟ್ ತಯಾರಿಸುವ ವಿಧಾನ?
1. ಕ್ವಿನೋವಾವನ್ನು ಸುಮಾರು ಅರ್ಧ ಗಂಟೆ ನೆನೆಸಿಡಿ.
2. ಒಂದು ಬೌಲ್ ಗೆ ಶುಂಠಿ, ಬೆಳ್ಳುಳ್ಳಿ ಮತ್ತು ನೆನೆಸಿದ ಮೊಳಕೆ ಕಾಳುಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ.
3. ನೆನೆಸಿದ ಕ್ವಿನೋವಾವನ್ನು ರುಬ್ಬಿ ಒಂದು ಬಟ್ಟಲಿಗೆ ವರ್ಗಾಯಿಸಿ. ಮೊಳಕೆ ಕಾಳುಗಳ ಮಿಶ್ರಣಕ್ಕೆ ಸೇರಿಸಿಕೊಳ್ಳಿ.
4. ಬಳಿಕ ತುರಿದ ಆಲೂಗಡ್ಡೆ, ಕ್ಯಾರೆಟ್, ಕತ್ತರಿಸಿದ ಹಸಿಮೆಣಸು, ಉಪ್ಪು, ಗರಂ ಮಸಾಲಾ ಮತ್ತು ಆಮ್ಚೂರ್ ಪುಡಿಯನ್ನು ಕ್ವಿನೋವಾ ಮಿಶ್ರಣಕ್ಕೆ ಸೇರಿಸಿ.
5. ಈ ಮಿಶ್ರಣಕ್ಕೆ 1 ಚಮಚ ಕಡಲೆ ಹಿಟ್ಟು ಸೇರಿಸಿ ಬಳಿಕ ಚೆನ್ನಾಗಿ ಮಿಶ್ರಗೊಳಿಸಿ.
6. ಈಗ, ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಂಡು ಬಳಿಕ ಅದನ್ನು ಚಪ್ಪಟೆ ಆಕಾರಕ್ಕೆ ಮಾಡಿ. ಅಂದರೆ ಕಟ್ಲೇಟ್ ಮಾದರಿಯಲ್ಲಿ ಮಾಡಿಕೊಳ್ಳಿ.
7. ಒಂದು ಬದಿಯಿಂದ ಎಣ್ಣೆ ಸವರಿಕೊಂಡು. ಗ್ರಿಲ್ ಮೇಲೆ ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ.
8. ಎರಡೂ ಬದಿಗಳನ್ನು ಸರಿಯಾಗಿ ಬೇಯಿಸಿಕೊಂಡ ಮೇಲೆ ಬದಿಯಲ್ಲಿ ಸ್ವಲ್ಪ ಚಟ್ನಿಯೊಂದಿಗೆ ಬಿಸಿಯಾಗಿ ತಿನ್ನಿರಿ.
ತೂಕ ಇಳಿಸಿಕೊಳ್ಳಲು ಈ ಕ್ವಿನೋವಾ ಪಾಕವಿಧಾನದ ಪ್ರಯೋಜನಗಳೇನು?
ನಾರು ತುಂಬಿರುವ ಈ ಕ್ವಿನೋವಾ ತಿನ್ನುವುದರಿಂದ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ಕ್ವಿನೋವಾ ಪ್ರೋಟೀನ್ ನ ಉತ್ತಮ ಮೂಲವಾಗಿದೆ, ಇದು ಹಸಿವನ್ನು ನಿಯಂತ್ರಿಸಲು, ನಿಮ್ಮ ಊಟದ ಸಂತೃಪ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ, ಇವೆಲ್ಲವೂ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕ್ವಿನೋವಾ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದಲ್ಲದೆ, ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವ ಇತರ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಬೇಕಾದ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ.
ಈ ತೂಕ ಇಳಿಸುವ ಪಾಕವಿಧಾನದಲ್ಲಿ ಎರಡನೇ ಮುಖ್ಯ ಘಟಕಾಂಶವೆಂದರೆ ಮೊಳಕೆ ಕಾಳುಗಳು. ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಮತ್ತೊಂದು ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಮತ್ತು ಸಮೃದ್ಧ ಪೋಷಕಾಂಶ ಆಹಾರವಾಗಿದೆ. ಜೊತೆಗೆ ನಿಮ್ಮ ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ, ಈ ಬೀಜವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟದ ಸಮಯದಲ್ಲಿ ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.
ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕೆಲವು ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಪಾಕವಿಧಾನವಾಗಿರುವುದರಿಂದ, ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು. ಆದರೆ ಇದನ್ನು ಪ್ರಯತ್ನಿಸುವ ಮೊದಲು ನಿಮ್ಮ ಪೌಷ್ಟಿಕತಜ್ಞರೊಂದಿಗೆ ಚರ್ಚಿಸುವುದನ್ನು ಮರೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ