AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಗಟ್ಟಿಯಾಗಿ ಹಲ್ಲುಜ್ಜುತ್ತೀರಾ? ಯಾವ ರೀತಿಯ ಬ್ರಶ್ ಬಳಸಬೇಕು?

ನಿಮ್ಮ ಹಲ್ಲುಗಳನ್ನು ತುಂಬಾ ಗಟ್ಟಿಯಾಗಿ ಉಜ್ಜುವುದು ನಿಮ್ಮ ಬಾಯಿಯ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಬಹುದು. ಹಲ್ಲಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದ ನಿಮ್ಮ ದಂತಕವಚವು ನಿಧಾನವಾಗಿ ಸವೆದುಹೋಗಬಹುದು.

ನೀವು ಗಟ್ಟಿಯಾಗಿ ಹಲ್ಲುಜ್ಜುತ್ತೀರಾ? ಯಾವ ರೀತಿಯ ಬ್ರಶ್ ಬಳಸಬೇಕು?
ಬ್ರಶ್Image Credit source: iStock
ಸುಷ್ಮಾ ಚಕ್ರೆ
|

Updated on: Nov 11, 2023 | 6:13 PM

Share

ನಾವು ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಾಯಿ ದುರ್ನಾತ ಬರಬಾರದೆಂದು ಮೌತ್​ವಾಶ್, ಮೌತ್​ ಫ್ರೆಷನರ್ ಏನೇ ಬಳಸಬಹುದು. ಆದರೆ, ಹಲ್ಲಿನ ಆರೋಗ್ಯ ಚೆನ್ನಾಗಿರದಿದ್ದರೆ ಅದು ನಮಗೂ, ಬೇರೆಯವರಿಗೂ ಕಿರಿಕಿರಿ ಉಂಟುಮಾಡುತ್ತದೆ. ಕೆಲವರು ದಿನಕ್ಕೆ 2 ಬಾರಿ ಬ್ರಶ್ ಮಾಡುತ್ತಾರೆ. ಆದರೆ, ಅವರಿಗೆ ಸರಿಯಾಗಿ ಹೇಗೆ ಬ್ರಶ್ ಮಾಡಬೇಕೆಂಬುದು ಗೊತ್ತಿರುವುದಿಲ್ಲ. ನೀವು ಕೂಡ ಗಟ್ಟಿಯಾಗಿ ಮತ್ತು ಗಟ್ಟಿಯಾದ ಬ್ರಶ್​ನಿಂದ ಹಲ್ಲು ಉಜ್ಜುವವರಾಗಿದ್ದರೆ ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಉತ್ತಮ.

ನೀವು ತುಂಬಾ ಗಟ್ಟಿಯಾಗಿ ಬ್ರಷ್ ಮಾಡಿದರೆ ಏನಾಗುತ್ತದೆ ಎಂದು ಗೊತ್ತೇ? ನಿಮ್ಮ ಹಲ್ಲುಗಳನ್ನು ತುಂಬಾ ಗಟ್ಟಿಯಾಗಿ ಉಜ್ಜುವುದು ನಿಮ್ಮ ಬಾಯಿಯ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಬಹುದು. ಹಲ್ಲಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದ ನಿಮ್ಮ ದಂತಕವಚವು ನಿಧಾನವಾಗಿ ಸವೆದುಹೋಗಬಹುದು. ಇದರಿಂದ ಹಲ್ಲುಗಳು ಮತ್ತಷ್ಟು ಸೆನ್ಸಿಟಿವ್ ಆಗಬಹುದು.

ಇದನ್ನೂ ಓದಿ: ಬೆಳಗ್ಗೆ ಹಲ್ಲುಜ್ಜದೆ ಆಹಾರ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮ್ಮ ವಸಡಿಗೆ ಮಾತ್ರವಲ್ಲ ಹೃದಯಕ್ಕೂ ಅಪಾಯ

ತುಂಬಾ ಗಟ್ಟಿಯಾಗಿ ಹಲ್ಲುಜ್ಜುವುದರಿಂದ ವಸಡು ಸಡಿಲವಾಗುತ್ತದೆ. ಇದು ನಿಮ್ಮ ನಗುವಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ನಿಮ್ಮ ಹಲ್ಲುಗಳ ಬೇರುಗಳು ಹೊರಗೆ ಕಾಣಿಸಬಹುದು. ಇದರಿಂದ ಹಲ್ಲುಗಳು ಒಳಗೊಳಗೇ ಕೊಳೆಯತೊಡಗುತ್ತದೆ.

ಸರಿಯಾದ ಹಲ್ಲುಜ್ಜುವ ಯಾವುದು?:

ನೀವು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಅನ್ನು ಬಳಸಿ.

ನಿಮ್ಮ ಹಲ್ಲುಗಳ ಮೇಲೆ 45 ಡಿಗ್ರಿ ಕೋನದಲ್ಲಿ ಬ್ರಷ್ ಅನ್ನು ಹಿಡಿದುಕೊಂಡು ಬ್ರಶ್ ಮಾಡಿ.

ನಿಮ್ಮ ಒಸಡುಗಳನ್ನು ಕೂಡ ನಿಧಾನವಾಗಿ ಬ್ರಶ್ ಮಾಡಿ.

ನೀವು ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಬಳಸಿದರೆ, ನಿಮ್ಮ ಹಲ್ಲುಗಳ ಮೇಲೆ ನೀವು ಅದನ್ನು ಬಲವಾಗಿ ಒತ್ತಬೇಕಾಗಿಲ್ಲ. ಅದನ್ನು ಹಲ್ಲುಗಳ ಮೇಲೆ ಇಟ್ಟರೆ ತನ್ನಿಂತಾನೇ ಬ್ರಶ್ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ