Astrology: ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳಬಹುದು ಎಚ್ಚರ!

ರಾಶಿ ಭವಿಷ್ಯ, ಶುಕ್ರವಾರ(ಅಕ್ಟೋಬರ್: 18): ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ‌ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಸಮಯವನ್ನು ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು. ಆದಾಯ ಮೂಲದ ಬಗ್ಗೆ ನಿಮಗೆ ಅಸಮಾಧನವು ಇರಲಿದೆ. ಹಾಗಾದರೆ ಅಕ್ಟೋಬರ್: 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳಬಹುದು ಎಚ್ಚರ!
ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳಬಹುದು ಎಚ್ಚರ!
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಜ್ರ​, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:18ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:14 ರಿಂದ ಸಂಜೆ 04:42ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:22 ರವರೆಗೆ.

ಧನು ರಾಶಿ: ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ನಿಮ್ಮ ಉದ್ಯೋಗವು ಗೋಡೆಯ ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಆರೋಗ್ಯದ ಸಮಸ್ಯೆಯು ಗಂಭೀರವಾಗಿ ಇರಲಿದೆ. ನಿಮ್ಮ ಇಷ್ಟದವರ ಭೇಟಯಿಂದ ಖುಷಿಯು ಹೆಚ್ಚಾಗಲಿದೆ. ಕಡಿಮೆ ಖರ್ಚಿದ್ದರೂ ದೈಹಿಕ ಶ್ರಮವು ಹೆಚ್ಚಾಗುವುದು. ಸರ್ಕಾರಿ ಉದ್ಯೋಗವನ್ನು ಮಾಡುತ್ತಿದ್ದರೆ ಒತ್ತಡವು ನಿಮಗೆ ಅಧಿಕವಾಗಲಿದೆ. ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಹೆಚ್ಚು ಹಣವನ್ನು ಖರ್ಚುಮಾಡುವಿರಿ. ದುಸ್ಸಾಧ್ಯವಾದ ಕೆಲಸಗಳಿಗೆ ನೀವು ಪ್ರಯತ್ನಶೀಲರಾಗುವುದು ಬೇಡ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಅನಾರೋಗ್ಯವಿದ್ದರೂ ನೀವು ಕಾರ್ಯವನ್ನು ನಿರ್ವಹಿಸುವಿರಿ.

ಮಕರ ರಾಶಿ: ಇಂದಿನ ನಿಮ್ಮ‌ ತೀರ್ಮಾನವು ಯೋಗ್ಯವಾಗಿ ಇರುವುದು. ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸವನ್ನು ಮಾಡುವಿರಿ. ನಿಮ್ಮ ನೈಜ‌ಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ‌ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಸಮಯವನ್ನು ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು. ಆದಾಯ ಮೂಲದ ಬಗ್ಗೆ ನಿಮಗೆ ಅಸಮಾಧನವು ಇರಲಿದೆ. ವಿದ್ಯಾಭ್ಯಾಸದಲ್ಲಿ ನೀವು ಅಂದುಕೊಂಡಂತೆ ಆಗದು. ಯಾರದೋ ವಿಚಾರಕ್ಕೆ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ನಿದ್ರೆಯಲ್ಲಿ ದುಃಸ್ವಪ್ನಗಳು ನಿಮ್ಮ ಆಲೋಚನೆಯ ದಿಕ್ಕನ್ನು ತಪ್ಪಿಸಬಹುದು. ಸಂಗಾತಿಯ ಜೊತೆ ವಿಹಾರವನ್ನು ಮಾಡುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು.

ಕುಂಭ ರಾಶಿ: ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ಭವಿಷ್ಯದ ಬಗ್ಗೆ ನಿಮಗೆ ಕೆಲವರು ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮರಿಗೆ ನೀವು ಬೆಲೆಯನ್ನು ಕೊಡುವಿರಿ. ಕಣ್ತಪ್ಪಿನ ದೋಷದಿಂದ ಎಚ್ಚರಿಕೆಯಿಂದ ಇರಬೇಕು. ಸಾಧ್ಯವಾದಷ್ಟು ಎಲ್ಲರ ಜೊತೆ ಬೆರೆಯುವ ಮನಃಸ್ಥಿತಿಯನ್ನು ಇಟ್ಟುಕೊಳ್ಳಿ. ನಿಮ್ಮ ಮೂಗಿನ ನೇರಕ್ಕೆ ಆಗಬೇಕು ಎಲ್ಲವು ಎಂಬ ಧೋರಣೆ ಸರಿಯಾಗದು. ಸ್ವೇಚ್ಛೆಯಿಂದ ಇಂದಿನ ದಿನವನ್ನು ಕಳೆಯುವಿರಿ. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ. ಮಕ್ಕಳ ಮಾತುಗಳು ನಿಮಗೆ ಹಾಸ್ಯದಂತೆ ಕಾಣಿಸುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಕರ್ತವ್ಯದ ದೃಷ್ಟಿಯಿಂದ ನೀವು ಕೆಲಸವನ್ನು ಮಾಡುವಿರಿ.

ಮೀನ ರಾಶಿ: ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಕಲೆಯಲ್ಲಿ ಅಭಿರುಚಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು. ಹಿತಶತ್ರುಗಳ ಪೀಡೆಯು ಉತ್ಸಾಹವು ಕುಗ್ಗಿಸಬಹುದು ಅಥವಾ ಅನ್ಯ ಕೆಲಸಗಳನ್ನು ಮಾಡಲು ಅವಕಾಶಗಳನ್ನು ಕೊಡದೇ ಹೋಗಬಹುದು. ನಷ್ಟವನ್ನು ಭರಿಸಿಕೊಳ್ಳಲಾಗದು. ಬರಹಗಾರರಿಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಬಹುದು. ಯಾವ ವಿಚಾರಗಳಿಗೂ ಅತಿಯಾದ ಚಿಂತೆಯ ಅವಶ್ಯಕತೆ ಇರದು. ನಂಬಿಕೆ ಇಡುವುದಾದರೆ ಪೂರ್ಣವಾಗಿ ಇಡಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಇಂದು ನಿಮಗೆ ಪರ ಊರಿನಲ್ಲಿ ಇಂದು ವಾಸವಾಗುವುದು.

ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ