AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಚತುರ್ದಶೀ / ಅಮಾವಾಸ್ಯಾ ತಿಥಿ, ಭಾನುವಾರ ಪರರಿಂದ ಪ್ರೇರಣೆ, ದುರಭ್ಯಾಸದಿಂದ ಆತಂಕ, ಮೌನವೇ ಕಲಹಕ್ಕೆ ಕಾರಣ ಇವೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 27, 2025 | 1:38 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶಿ/ ಅಮಾವಾಸ್ಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ – 06:13 am, ಸೂರ್ಯಾಸ್ತ – 06: 47 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:13 – 18:47, ಯಮಘಂಡ ಕಾಲ 12:30 – 14:05, ಗುಳಿಕ ಕಾಲ 15:39 – 17:13

ತುಲಾ ರಾಶಿ: ಹಲವು ಕಾರ್ಯಗಳ ಕಡೆ ಗಮನ ಹಾಕುವುದಕ್ಕಿಂತ ಒಂದೇಕಡೆ ಇರಿಸುವುದು ಸೂಕ್ತ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡಲಿದ್ದೀರಿ. ನಿಮ್ಮ ಸುತ್ತಮುತ್ತಲಿನವರ ಪ್ರಗತಿ ನಿಮಗೆ ಆಹ್ಲಾದವಾಗದು. ನಿಮ್ಮ ಕಲ್ಪನೆಯ ಪ್ರಪಂಚದಿಂದ ಹೊರಬರಲು ನಿಮಗೆ ನುರಿತ ವ್ಯಕ್ತಿಯ ಮಾರ್ಗದರ್ಶನ ಅಗತ್ಯವಿದೆ. ಪ್ರೀತಿಯವರಿಂದ ಸಂಕಷ್ಟ ಉದಯಿಸಬಹುದು. ಅದಕ್ಕೆ ಸಂಪೂರ್ಣ ಗಮನ ಹರಿಸಿ. ಮನಸ್ಸಿಗೆ ಶಾಂತಿ ನೀಡುವ ವಿಷಯವೊಂದು ಆಗಬಹುದು. ಇಂದು ನಿಮ್ಮ ಪರೀಕ್ಷಿಯೆ ಕಾಲವಾಗಿರುವುದು. ಹಣವನ್ನು ಬಹಳ ಗೌಪ್ಯವಾಗಿ ಇಟ್ಟುಕೊಳ್ಳುವಿರಿ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು.

ವೃಶ್ಚಿಕ ರಾಶಿ: ಅಧ್ಯಯನ ಹಾಗೂ ಉದ್ಯೋಗ ಎರಡೂ ಕಷ್ಟ. ಮುಂದೆ ಆಗಬೇಕಾದ ಕೆಲವು ಕಾರ್ಯಗಳ ನಿರ್ಧಾರವು ಮಾಡುವಿರಿ. ದೂರಪ್ರಯಾಣವು ನಿಮಗೆ ಕಷ್ಟವಾಗಬಹುದು. ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ರಚನಾತ್ಮಕ ನಿಮ್ಮ ಶೈಲಿ ಪ್ರೇರಣೆಯುಂಟುಮಾಡುತ್ತದೆ. ಹೊಸ ಯೋಜನೆಗಳಲ್ಲಿ ಶಕ್ತಿ ಹೂಡಲು ಇದು ಸೂಕ್ತ ಸಮಯ. ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮೆ ಕೇಳಿ. ಸರಿ ತಪ್ಪುಗಳ ಗೊಂದಲಕ್ಕೆ ಸಿಲುಕುವಿರಿ. ಇದು ನಿಮಗೆ ಸಮಾಧಾನ ಮತ್ತು ಸ್ವೀಕಾರ ನೀಡುತ್ತದೆ. ಉದ್ದೇಶಪೂರ್ಣ ಕೆಲಸಗಳಲ್ಲಿ ತೊಡಗಿದರೆ ಧೈರ್ಯ ಹೆಚ್ಚಾಗುತ್ತದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಬಂಧುಗಳ ಆಗಮನ ನಿಮಗೆ ಕಿರಿಕಿರಿಯನ್ನು ತರಬಹುದು. ಕರ್ಮಗಳು ನ್ಯಾಯೋಚಿತವಾಗಿ ಇರಲಿ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು.

ಧನು ರಾಶಿ: ವ್ಯಾಪಾರದಲ್ಲಿ ಪೈಪೋಟಿಯಿಂದ ಆತಂಕ. ಹೂಡಕೆಯಿಂದ ನಷ್ಟ. ಯಾವುದೇ ಒಪ್ಪಂದವನ್ನು ಮಾಡುವಾಗಲೂ ಅನುಭವಿಗಳ ಜೊತೆ ಚರ್ಚಿಸಿ. ಭೂಮಿಯ ವ್ಯವಹಾರವು ನಿಮಗೆ ಲಾಭವನ್ನು ತರುವುದು. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ನಿಮ್ಮ ನಿಷ್ಠೆಯಿಂದ ಬಂಧುಗಳು ಬೆಂಬಲ ನೀಡುತ್ತಾರೆ. ಅವರಿಂದ ಪ್ರೀತಿ ಹಾಗೂ ಸಹಾಯ ದೊರೆಯಲಿದೆ. ನಿಜವಾಗಿಯೂ ನೀವು ಬೆಲೆಬಾಳುವವರಾಗಿದ್ದೀರಿ ಎಂಬ ಅನುಭವ ಬರುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಇಂದಿನ ಹಗಲು ನಿಮಗೆ ನಿಧಾನವಾಗಿ ಇರುವಂತೆ ಅನ್ನಿಸಬಹುದು. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು.

ಮಕರ ರಾಶಿ: ಭೂಮಿಗೆ ಹೂಡಿದ ಹಣವನ್ನು ಪಡೆಯುವ ಸಂದರ್ಭ ಬರಬಹುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾಗುವುದು. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಕೌಶಲ್ಯಕ್ಕೆ ಯೋಗ್ಯವಾದ ಸ್ಥಳ ಸಿಗುವುದು. ಗಡುವಿಗೆ ಮುನ್ನ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ನಿಮ್ಮ ಕನಸುಗಳೇ ನಿಮ್ಮ ಮಾರ್ಗದರ್ಶಿ. ದೊಡ್ಡ ಯೋಜನೆಗಳಿಗೆ ತಕ್ಷಣ ಒಪ್ಪಿಗೆ ಕೊಡುವುದಿಲ್ಲ. ಪ್ರಸ್ತುತದ ಸ್ಥಿತಿಯನ್ನು ವೀಕ್ಷಿಸಿ ಮುನ್ನಡೆಯುವುದು ಶ್ರೇಯಸ್ಕರ. ಸಮಯವನ್ನು ನಿರೀಕ್ಷಿಸುವುದು ಒಳ್ಳೆಯದು. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು.

ಕುಂಭ ರಾಶಿ: ನಿಮ್ಮ ತೊಂದರೆಗಳಿಗೆ ದೈವದ ಆಶ್ರಯ ಪಡೆಯುವುದು ಉತ್ತಮ. ನೀವು ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ಅರಿತುಕೊಳ್ಳಲಾಗದು. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಕಳೆದ ವಸ್ತುಗಳ ಬಗ್ಗೆ ಅಧಿಕ ಚಿಂತೆ ಮಾಡುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಶಸ್ಸಿಲ್ಲದ ಯೋಜನೆಯ ನೆನೆಪು ದಣಿವನ್ನು ಉಂಟುಮಾಡಬಹುದು. ನಿಮ್ಮ ಶಕ್ತಿಯನ್ನು ಹೊಸದಾಗಿ ಪ್ರೇರಣೆಯಾದ ಕೆಲಸಗಳಿಗೆ ತಿರುಗಿಸಿ. ಮಹಿಳೆಯರು ನಕಾರಾತ್ಮಕ ಟೀಕೆಗಳಿಂದ ದೂರವಿರುವುದು ಉತ್ತಮ. ನಿಮ್ಮ ಪ್ರತಿಭೆಯ ಅರಿವಿರುವ ವ್ಯಕ್ತಿಯ ಭೇಟಿಯಿಂದ ಖುಷಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಎಚ್ಚರಿಕೆ ಇರಲಿ. ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ. ಕಾಲು ಕೆರೆದುಕೊಂಡು ಯಾರೊಂದಿಗೂ ಜಗಳವಾಡಬೇಡಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ.

ಮೀನ ರಾಶಿ: ಒಂದರ ಅಂತ್ಯ ಇನ್ನೊಂದರ ಆರಂಭವಾಗಲಿದೆ. ನಿಶ್ಚಿಂತೆಯೆಂದು ಅನ್ನಿಸಿದಿದ್ದರೂ ನೆಮ್ಮದಿ ಅನುಭವಕ್ಕೆ ಬರಲಿದೆ. ಇಂದು ನಿಮ್ಮ ಮನಸ್ಸಿಗೆ ಶಾಂತಿಯೂ ನೆಮ್ಮದಿಯೂ ಇರುತ್ತದೆ. ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ಉದ್ಯೋಗದಲ್ಲಿ ಅಡಚಣೆಗಳಿರಬಹುದು, ಆದರೆ ಇವು ತಾತ್ಕಾಲಿಕ. ನಿಮ್ಮ ಸುತ್ತಲಿರುವ ಜನರಿಂದ ದೂರವಿರುವುದು ಒಳಿತು. ಮೋಸದ ಕೆಲಸಗಳಿಂದ ಎಚ್ಚರಿಕೆಯಿಂದಿರಿ. ಭವಿಷ್ಯದ ಬಗ್ಗೆ ಚಿಂತೆಯಿದ್ದರೆ, ಪ್ರಬುದ್ಧರ ಸಲಹೆ ಹಿತಕರ. ಅಪಾಯಕಾರಿ ಹೂಡಿಕೆಗಳನ್ನು ತಕ್ಷಣವೇ ಬಿಟ್ಟುಬಿಡಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಧಾರ್ಮಿಕ ವಿಚಾರದಲ್ಲಿ ಭಕ್ತಿ ಇರದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ.