Horoscope 15 March: ದಿನಭವಿಷ್ಯ; ಈ ರಾಶಿಯವರು ಅನಿವಾರ್ಯತೆ ಇಲ್ಲದಿದ್ದರೂ ಹಣವ್ಯಯ ಮಾಡುವರು
Nitya Bhavishya: 2024 ಮಾರ್ಚ್ 15 ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮಿ/ ಷಷ್ಠಿ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:11 ರಿಂದ ಮಧ್ಯಾಹ್ನ 12:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:11 ರಿಂದ 09:41 ರ ವರೆಗೆ.
ಮೇಷ ರಾಶಿ: ನಿಮ್ಮ ಮುಜುಗರ ಸ್ವಭಾವವು ಇತರರಿಗೆ ಕಷ್ಟವಾಗುವುದು. ಅಪರೂಪದ ವ್ಯಕ್ತಿಗಳಿಗೆ ಅತಿಥಿ ಸತ್ಕಾರವನ್ನು ಮಾಡುವಿರಿ. ನೀವು ಯಾರ ಸಹಕಾರವನ್ನು ಪಡೆಯಲು ಅಪೇಕ್ಷಿಸುವುದಿಲ್ಲ. ನಿರೋದ್ಯೋಗಿಗಳಿಗೆ ಮುಜುಗರದ ಸಂದರ್ಭವು ಬರಬಹುದು. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿಮ್ಮ ಬೆಳವಣಿಗೆಯು ಸಕಾರತ್ಮಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಹತ್ತರ ಜೊತೆ ಹನ್ನೊಂದು ಆಗದಂತೆ ನೀವೇ ನೋಡಿಕೊಳ್ಳಬೇಕು.
ವೃಷಭ ರಾಶಿ: ಕ್ರಿಯಾತ್ಮಕತೆಯಿಂದ ನಿಮಗೆ ಆನಂದವು ಸಿಗಲಿದ್ದು, ಅದನ್ನೇ ಮುಂದುವರಿಸಲು ಇಷ್ಟವಾಗುವುದು. ಕುಟುಂಬದ ವಿರೋಧವನ್ನು ನೀವು ಎದರಿಸಿದರೂ ನಿಮ್ಮ ಧೋರಣೆಯು ಬದಲಾಗದು. ಕಳೆದ ಸಂತೋಷದ ಕಾಲವು ನಿಮಗೆ ಸಿಗದು ಎಂಬ ತೀರ್ಮಾನಕ್ಕೆ ಬರುವಿರಿ. ಚಿಂತಿಸಿ ಪ್ರಯೋಜನವೂ ಇರದು. ಭವಿಷ್ಯದ ಚಿಂತೆಯೂ ಇರಲಿದೆ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ.
ಮಿಥುನ ರಾಶಿ: ಇಂದು ನಿಮ್ಮ ಘನತೆಯನ್ನು ಬಿಟ್ಟು ಕದಲಲಾರಿರಿ. ಹಳೆಯ ಸ್ನೇಹಿತರ ಸಲಹೆಯಿಂದ ನಿಮ್ಮ ಹೂಡಿಕೆ ಇರುಬುದು. ನಿಮ್ಮದೇ ಸರಿ ಎಂಬ ಭಾವವು ಬದಲುಮಾಡಿಕೊಳ್ಳುವುದು ಉತ್ತಮ. ನೌಕರರ ವಿಚಾರದಲ್ಲಿ ನಿಮಗೆ ಅಸಮಾಧಾನ ಇರುವುದು. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಹೂಡಿಕೆಯಿಂದ ನಿಮಗೆ ಲಾಭವು ಸಿಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಜೊತೆ ಹಾರ್ದವಾದ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು.
ಕಟಕ ರಾಶಿ: ಇಂದು ಅಧ್ಯಾತ್ಮದ ಕಡೆ ಚಿಂತನೆ ಇದ್ದರೂ ಅದು ತಾತ್ಕಾಲಿಕವಾದೀತು. ಸಾಮಾಜಿಕ ಕಾರ್ಯದಲ್ಲಿ ಸಿಗುವ ಪ್ರಶಂಸೆಯು ನಿಮಗೆ ಅಲ್ಪ ಬಲವನ್ನು ಕೊಡಿಸುವುದು. ಯಾವುದಾದರೂ ಮುಖ್ಯ ದಾಖಲೆಯನ್ನು ಎತ್ತಿಟ್ಟು, ಅದಕ್ಕಾಗಿ ವಿಪರೀತ ಹುಡುಕುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಅನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಕೊನೆಗೆ ಪರಿಸ್ಥಿತಿ ಗಂಭೀರವಾಗುವುದು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ದ್ವೇಷಭಾವವು ನಿಮ್ಮಲ್ಲಿ ಮೂಡಬಹುದು. ಆಂತರೀವಾಗಿ ನೀವು ಗಟ್ಟಿಯಾಗಬೇಕು.
ಸಿಂಹ ರಾಶಿ: ಇಂದು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಓಡಾಟ ಮಾಡಬೇಕಾದೀತು. ಹೊಸ ಉತ್ಸಾಹದಲ್ಲಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಆಲಂಕಾರಿಕ ವಸ್ತುಗಳ ಬಗ್ಗೆ ಆಸಕ್ತಿಯು ಹೆಚ್ಚುವುದು. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಮಿತಭಾಷಿಯಾಗಿ ನೀವು ಎಲ್ಲರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ಶತ್ರುಗಳ ಪಿತೂರಿಯಿಂದ ನಿಮಗೆ ವ್ಯವಹಾರದಲ್ಲಿ ಹಿನ್ನಡೆಯಾದೀತು. ಎಲ್ಲರನ್ನೂ ದೂರುವುದು ನಿಮಗೆ ಇಷ್ಟವಾಗದು. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ಮನೋರಂಜನೆಗೆ ನಿಮಗೆ ಸಮಯವು ಸಿಗುವುದು. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ಅಸೂಯೆ ಬರಬಹುದು.
ಕನ್ಯಾ ರಾಶಿ: ಇಂದು ಆತಂಕವು ನಿಮ್ಮನ್ನು ಕಾಡಬಹುದು. ನಿಮ್ಮ ಗುರಿಯನ್ನು ಸಾಧಿಸಲು ನಿಮಗೆ ಕೆಲವು ಮಾರ್ಗಗಳು ಗೊತ್ತಾಗಬಹುದು. ಯಾರ ಜೊತೆಗೋ ವಾಗ್ವಾದ ಮಾಡಲು ಹೋಗಿ ನಿಮ್ಮ ವ್ಯಕ್ತಿತ್ವವನ್ನು ತೋರಿಸಿಕೊಳ್ಳುವಿರಿ. ಒಂದಿಲ್ಲೊಂದು ಕಿರಿಕಿರಿಗಳು ನಿಮಗೆ ನೆಮ್ಮದಿಯಿಂದ ಇರಲು ಬಿಡದು. ಗೊಂದಲವೂ ನಿಮ್ಮನ್ನು ಜೋಕಾಲಿಯ ಮೇಲೆ ಕುಳಿತಂತೆ ಅನ್ನಿಸಬಹುದು. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ನಿಮ್ಮ ಬಗ್ಗೆ ಶತ್ರುಗಳು ಅಪಪ್ರಚಾರ ಮಾಡುವರು. ಬಂಧುಗಳು ನಿಮ್ಮನ್ನು ಬಹಳವಾಗಿ ದೂರುವರು. ಯಾರ ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ಕೃಷಿಯನ್ನು ಹೊಸ ರೀತಿಯಲ್ಲಿ ಮಾಡುವ ಉತ್ಸಾಹವಿರುವುದು.
ತುಲಾ ರಾಶಿ: ಇಂದು ನಿಮಗೆ ಕುಟುಂಬದ ಹಲವು ನ್ಯೂನತೆಗಳ ಪರಿಚಯವಾಗುವುದು. ನಿಮ್ಮ ಸಹಾಯವು ನಿಷ್ಪ್ರಯೋಜಕವೆನಿಸಬಹುದು. ಅಸತ್ಯವಾಡಿ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ಹೊಸ ವಸ್ತುಗಳ ಖರೀದಿಯಿಂದ ಪೂರ್ಣ ನೆಮ್ಮದಿ ಸಿಗದು. ಸಂಗಾತಿಯ ಮಾತನ್ನು ಅಲ್ಪವಾದರೂ ಪಾಲಿಸಿ. ಇದರಿಂದ ಖುಷಿಯಾಗುವುದು. ಮನಸ್ಸಿನಲ್ಲಿರುವ ಸಂಕಟವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ವಾಹನ ಚಾಲನೆಯಲ್ಲಿ ಅವಸರ ಬೇಡ. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರಲು ಯತ್ನಿಸುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಎಂತಹ ಅವಕಾಶಗಳು ಸಿಕ್ಕರೂ ಅದನ್ನು ಕೈ ಚೆಲ್ಲಿ ಕೂರುವುದು ಬೇಡ.
ವೃಶ್ಚಿಕ ರಾಶಿ: ನಿಮ್ಮ ಸುದೀರ್ಘ ಕಾರ್ಯಗಳಿಗೆ ಒಂದು ಸಣ್ಣ ವಿರಾಮವನ್ನು ಹೇಳುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಬೆಂಬಲವು ಸಿಕ್ಕಿದರೂ ನಿಮಗೆ ಯಾವುದೇ ಧೈರ್ಯ ಸಾಲದು. ನಿಮ್ಮ ಮೇಲೆ ಕೆಲವು ಆರೋಪಗಳು ಕೇಳಿಬರಬಹುದು. ಉದ್ಯೋದ ಸ್ಥಳದಲ್ಲಿ ನಿಮ್ಮನ್ನು ಸ್ಥಾನಭ್ರಷ್ಟರಾಗುವ ಭೀತಿಯು ಇರಲಿದೆ. ವಿದ್ಯಾರ್ಥಿಗಳು ಓದಿನ ಕಡೆ ವಿಶೇಷ ಗಮನವನ್ನು ಕೊಡುವುದು ಕಷ್ಟವಾದೀತು. ಬಂಧುಗಳ ಕುಹಕಕ್ಕೆ ಸಿಲುಕುವಿರಿ. ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ಅದಕ್ಕೆ ವಿವಾಹವು ಮುಂದೂಡುವುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು.
ಧನು ರಾಶಿ: ನೀವು ಇಂದು ದುಸ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುವುದು. ಕಾರ್ಯದಲ್ಲಿ ಫಲಾಪೇಕ್ಷೆಯು ಮಿತವಾಗಿ ಇರಲಿ. ನಿಮ್ಮ ಯಶಸ್ಸಿಗೆ ತೊಂದರೆಯಾಗಬಹುದು. ಮಾನಸಿಕವಾದ ಅಸ್ಥಿರತೆಯಿಂದ ನಿಮಗೆ ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ದೂರದೃಷ್ಟಿಯಿಂದ ಕೆಲಸವನ್ನು ಮಾಡಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಕೆಲವರ ಮಾತು ನಿಮ್ಮ ವ್ಯಕ್ತಿತ್ವವು ಬದಲಾಗಲು ಮೂಲವಾಗುವುದು. ರಾಜಕೀಯದಲ್ಲಿ ಆದ ಬೆಳವಣಿಗೆಯನ್ನು ನಿಮ್ಮ ಪಾತ್ರ ದೊಡ್ಡದಾಗುವುದು.
ಮಕರ ರಾಶಿ: ಇಂದು ನಿಮಗೆ ನಿಮ್ಮವರಿಂದಲೇ ನೋವಾಗುವುದು. ಅತಿಯಾದ ನಿರೀಕ್ಷೆಯೂ ಇದಕ್ಕೆ ಕಾರಣವಾಗಬಹುದು. ನಿಮ್ಮಿಂದ ಆಗುವ ಅಗತ್ಯ ಸಹಾಯವನ್ನು ಯಾರಿಗಾದರೂ ಮಾಡಿ ಸಂತೋಷಪಡುವಿರಿ. ಸ್ವಾಭಿಮಾನವನ್ನು ಬಿಡಲಾಗದು. ಇಟ್ಟುಕೊಳ್ಳುವುದೂ ಕಷ್ಟವಾಗಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗವಾಗುವುದು. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.
ಕುಂಭ ರಾಶಿ: ಇಂದು ನಿಮಗೆ ಸ್ವಂತ ಆಲೋಚನೆಯೇ ಹಲವು ಸಮಸ್ಯೆಯನ್ನು ದೂರಮಾಡಿಕೊಳ್ಳಲು ಸಹಕಾರಿ. ಅನಿವಾರ್ಯತೆ ಇಲ್ಲದಿದ್ದರೂ ಹಣವ್ಯಯವಾಗುವುದು. ಭೂಮಿಯ ವ್ಯವಹಾರದಲ್ಲಿ ಹಿನ್ನಡೆ ಆಗಬಹುದು. ಬಂಧುಗಳ ಸಹಾಯದ ಅಪೇಕ್ಷೆ ಇದ್ದರೂ ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಆಗಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು.
ಮೀನ ರಾಶಿ: ಇಂದು ನಿಮ್ಮ ಮಾತಿನ ದಾಟಿಯಲ್ಲಿ ವ್ಯಂಗ್ಯವು ಹೆಚ್ಚಿರುವುದು. ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವನ್ನು ನೀಡಬೇಕಾದೀತು. ಹಳೆಯ ವಾಹನಗಳ ಮಾರಾಟದಲ್ಲಿ ನಿಮಗೆ ಲಾಭವು ಕಾಣಿಸುವುದು. ಹೂಡಿಕೆಯಲ್ಲಿ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಆಪ್ತರ ಜೊತೆ ಗೌಪ್ಯ ಮಾತುಕತೆಯನ್ನು ನಡೆಸುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಸನ್ನಿವೇಶಕ್ಕೆ ಯೋಗ್ಯವಾದ ಮಾತುಗಳನ್ನಾಡಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)