Horoscope: ದಿನಭವಿಷ್ಯ: ಇಂದು ನಿಮಗೆ ನಿಮ್ಮವರಿಂದಲೇ ನೋವಾಗುವುದು
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮಾರ್ಚ್ 15ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 15) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮಿ/ ಷಷ್ಠಿ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:11 ರಿಂದ ಮಧ್ಯಾಹ್ನ 12:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:11 ರಿಂದ 09:41 ರ ವರೆಗೆ.
ಧನು ರಾಶಿ : ನೀವು ಇಂದು ದುಸ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುವುದು. ಕಾರ್ಯದಲ್ಲಿ ಫಲಾಪೇಕ್ಷೆಯು ಮಿತವಾಗಿ ಇರಲಿ. ನಿಮ್ಮ ಯಶಸ್ಸಿಗೆ ತೊಂದರೆಯಾಗಬಹುದು. ಮಾನಸಿಕವಾದ ಅಸ್ಥಿರತೆಯಿಂದ ನಿಮಗೆ ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ದೂರದೃಷ್ಟಿಯಿಂದ ಕೆಲಸವನ್ನು ಮಾಡಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಕೆಲವರ ಮಾತು ನಿಮ್ಮ ವ್ಯಕ್ತಿತ್ವವು ಬದಲಾಗಲು ಮೂಲವಾಗುವುದು. ರಾಜಕೀಯದಲ್ಲಿ ಆದ ಬೆಳವಣಿಗೆಯನ್ನು ನಿಮ್ಮ ಪಾತ್ರ ದೊಡ್ಡದಾಗುವುದು.
ಮಕರ ರಾಶಿ : ಇಂದು ನಿಮಗೆ ನಿಮ್ಮವರಿಂದಲೇ ನೋವಾಗುವುದು. ಅತಿಯಾದ ನಿರೀಕ್ಷೆಯೂ ಇದಕ್ಕೆ ಕಾರಣವಾಗಬಹುದು. ನಿಮ್ಮಿಂದ ಆಗುವ ಅಗತ್ಯ ಸಹಾಯವನ್ನು ಯಾರಿಗಾದರೂ ಮಾಡಿ ಸಂತೋಷಪಡುವಿರಿ. ಸ್ವಾಭಿಮಾನವನ್ನು ಬಿಡಲಾಗದು. ಇಟ್ಟುಕೊಳ್ಳುವುದೂ ಕಷ್ಟವಾಗಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗವಾಗುವುದು. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.
ಕುಂಭ ರಾಶಿ : ಇಂದು ನಿಮಗಮ ಸ್ವಂತ ಆಲೋಚನೆಯೇ ಹಲವು ಸಮಸ್ಯೆಯನ್ನು ದೂರಮಾಡಿಕೊಳ್ಳಲು ಸಹಕಾರಿ. ಅನಿವಾರ್ಯತೆ ಇಲ್ಲದಿದ್ದರೂ ಹಣವ್ಯಯವಾಗುವುದು. ಭೂಮಿಯ ವ್ಯವಹಾರದಲ್ಲಿ ಹಿನ್ನಡೆ ಆಗಬಹುದು. ಬಂಧುಗಳ ಸಹಾಯದ ಅಪೇಕ್ಷೆ ಇದ್ದರೂ ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಆಗಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು.
ಮೀನ ರಾಶಿ : ಇಂದು ನಿಮ್ಮ ಮಾತಿನ ದಾಟಿಯಲ್ಲಿ ವ್ಯಂಗ್ಯವು ಹೆಚ್ಚಿರುವುದು. ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವನ್ನು ನೀಡಬೇಕಾದೀತು. ಹಳೆಯ ವಾಹನಗಳ ಮಾರಾಟದಲ್ಲಿ ನಿಮಗೆ ಲಾಭವು ಕಾಣಿಸುವುದು. ಹೂಡಿಕೆಯಲ್ಲಿ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಆಪ್ತರ ಜೊತೆ ಗೌಪ್ಯ ಮಾತುಕತೆಯನ್ನು ನಡೆಸುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಸನ್ನಿವೇಶಕ್ಕೆ ಯೋಗ್ಯವಾದ ಮಾತುಗಳನ್ನಾಡಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)