AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಅನಿರೀಕ್ಷಿತವಾಗಿ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು, ಎಲ್ಲದಕ್ಕೂ ಸಿದ್ಧವಾಗಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 16: ಕೌಟುಂಬಿಕ ವಾತಾವರಣವನ್ನು ನೀವು ಸಂತೋಷದಿಂದ ಅನುಭವಿಸುವಿರಿ. ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಹಾಗಾದರೆ ಸೆಪ್ಟೆಂಬರ್​ 16ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಅನಿರೀಕ್ಷಿತವಾಗಿ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು, ಎಲ್ಲದಕ್ಕೂ ಸಿದ್ಧವಾಗಿರಿ
ಅನಿರೀಕ್ಷಿತವಾಗಿ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು, ಎಲ್ಲದಕ್ಕೂ ಸಿದ್ಧವಾಗಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 16, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಸುಕರ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:25, ಯಮಘಂಡ ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:58 ರಿಂದ ಸಂಜೆ 03:30ರ ವರೆಗೆ.

ಸಿಂಹ ರಾಶಿ: ನಿಮ್ಮ ಉದ್ಯೋಗದ ನಿಷ್ಠೆಯು ಮೇಲಧಿಕಾರಿಗಳಿಗೆ ಇಷ್ಟವಾಗುವುದು. ಇಂದು ನೀವು ನಿಶ್ಚಿಂತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳುವಿರಿ. ಸಾಲವನ್ನು ನೆನೆಸಿಕೊಂಡು ನೀವು ಬಹಳ ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಬಂಧುಗಳ ಅಸಹಜವಾದ ಮಾತನ್ನು ತಿರಸ್ಕರಿಸುವಿರಿ. ನಿಮ್ಮ ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕುಟುಂಬದಲ್ಲಿ ನೀವು ಗಂಭೀರವಾದ ವಿವಾದಗಳನ್ನು ಮಾಡುವಿರಿ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಲಿದೆ. ಒತ್ತಡವಿಲ್ಲದೆ ಇಂದು ನಿಮ್ಮ ದಿನವನ್ನು ಆನಂದಿಸಲು ಪ್ರಯತ್ನಿಸಿ. ನಿಮ್ಮ ನಿಮ್ಮ ಒತ್ತಡವನ್ನು ಇತರರ ಸಹಾಯದಿಂದ ಕಡಿಮೆಮಾಡಿಕೊಳ್ಳಲು ಸಾಧ್ಯ. ಸಾಮಾಜಿಕವಾಗಿ ಏನನ್ನಾದರೂ ಮಾಡಬೇಕು ಎಂದೆನಿಸಬಹುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ.

ಕನ್ಯಾ ರಾಶಿ: ಯಾವ ಒಪ್ಪಂದವನ್ನೂ ಬಾಯಿ ಮಾತಿನಲ್ಲಿ ಮಾಡಿಕೊಳ್ಳಬೇಡಿ. ನೀವು ಇಂದು ಆಪ್ತರನ್ನೇ ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ಸ್ಥಿರಾಸ್ತಿಯಲ್ಲಿ ಹೆಚ್ಚು ಲಾಭವನ್ನು ಪಡೆಯಲು ನೀವು ಯೋಚಿಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದುವಾಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಅನ್ಯರ ಬೆಂಬಲ ಸಿಗಲಿದೆ. ಇಂದು ನೀವು ಲವಲವಿಕೆಯಿಂದ ಇದ್ದು ಇನ್ನೊಬ್ಬರನ್ನೂ ಹಾಗೆ ನೋಡಿಕೊಳ್ಳುವಿರಿ. ಶೈಕ್ಷಣಿಕ ಪ್ರಗತಿಯಿಂದ ನಿಮಗೆ ಉತ್ತಮ ಅವಕಾಶಗಳು ಲಭ್ಯವಾಗುವುವು. ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ಖರ್ಚು ಮಾಡುವ ಮನಸ್ಸು ಬಾರದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಹೆಣ್ಣುಮಕ್ಕಳ ಬಗ್ಗೆ ನಿಮಗೆ ಅತಿಯಾದ ಕನಿಕರ ಇರುವುದು. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಸಣ್ಣ ಉದ್ಯೋಗವಾದರೂ ಪ್ರಾಮಾಣಿಕತೆ ಇರಲಿ.

ತುಲಾ ರಾಶಿ: ವ್ಯವಸ್ಥೆಯ ಕೈಮೀರುವತ ತನಕ‌ ಅದನ್ನು ಬಿಡುವುದು ಬೇಡ. ಇಂದು ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ನೀವು ತೆಗೆದುಕೊಳ್ಳಬೇಡ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವ ಮನಃಸ್ಥಿತಿಯನ್ನು ಹೊಂದುವಿರಿ. ನೀವು ಸಭ್ಯರಂತೆ ಕಂಡರೂ ಯಾರೂ ನಂಬಲಾರರು. ನಿಮ್ಮ ಇಂದಿನ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖ ಕೊಡುವುದು. ಸಂಗಾತಿಯಿಂದ ನೀವು ಬೇಸರವನ್ನು ಅನುಭವಿಸಬೇಕಸದೀತು. ನಿಮ್ಮ ಇಂದಿನ ಕೆಲಸಗಳು ಹೆಚ್ಚು ಸಮಾಧಾನವನ್ನು ತರುವುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ನಿಮ್ಮ ಗೊಂದಲಗಳಿಗೆ ಉತ್ತರವನ್ನು ನೀವೇ ಕಂಡುಕೊಳ್ಳುವಿರಿ. ಬೆಲೆಬಾಳುವ ವಸ್ತುಗಳ ಖರೀದಿಯಿಂದ ಆರ್ಥಿಕ ಹೊರೆಯಾಗುವುದು. ಉದ್ಯೋಗದ ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಬಂದ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ಮಾಡಿ.

ವೃಶ್ಚಿಕ ರಾಶಿ: ಕೌಟುಂಬಿಕ ವಾತಾವರಣವನ್ನು ನೀವು ಸಂತೋಷದಿಂದ ಅನುಭವಿಸುವಿರಿ. ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತನೆ ಆರಂಭವಾಗಲಿದೆ. ನಿಮ್ಮ ಸ್ಥಿರಾಸ್ತಿಯ ಬಗ್ಗೆ ಶಂಕೆ ಇರುವುದು. ನಿಮ್ಮ‌ ಸುತ್ತಮುತ್ತಲಿನವರು ನಿಮಗೆ ತೊಂದರೆ ಕೊಡಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆಯುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಕಾರ್ಯದಲ್ಲಿ ಉತ್ಸಾಹವನ್ನು ತೋರಿಸುವರು. ನೀವು ಇಂದು ಆಸ್ತಿಕತೆಯನ್ನು ರೂಢಿಸಿಕೊಳ್ಳುವಿರಿ. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ. ಸ್ತ್ರೀಯರು ವಸ್ತುಗಳನ್ನು ಬದಲಾಯಿಸಿಕೊಳ್ಳುವರು.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!