Horoscope: ನಿತ್ಯಭವಿಷ್ಯ; ಈ ರಾಶಿಯವರು ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮಾರ್ಚ್ 29 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 29) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 31 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:06 ರಿಂದ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:03 ರಿಂದ 09:34
ಧನು ರಾಶಿ : ಇಂದಿನ ಲಾಭದಿಂದ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ಇರುತ್ತದೆ. ಸ್ವಂತ ನಿರ್ಧಾರದ ಬಗ್ಗೆ ದೃಢವಾದ ಗಮನವಿರಲಿ. ನಿಮ್ಮ ಬಳಿ ಸ್ನೇಹಿತರು ಸಾಲಕ್ಕೆ ಬೇಡಿಕೆ ಇಡುವರು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾದೀತು. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕ್ಕಳ ವೃತ್ತಿಜೀವನದಲ್ಲಿ ನೀವು ಸಾಕಷ್ಟು ತೃಪ್ತರಾಗುವಿರಿ. ಇಂದು, ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ, ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ.
ಮಕರ ರಾಶಿ : ಮನೆಯಲ್ಲಿ ಇಂದು ಧಾರ್ಮಿಕ ಚುಟುವಟಿಕೆಯಲ್ಲಿ ಭಾಗಿಯಾಗಿ ಖುಷಿಪಡುವಿರಿ. ಸ್ನೇಹಿತರ ಜೊತೆ ವೃತ್ತಿಗೆ ಸಂಬಂಧಿಸಿದ ವಿಚಾರವನ್ನು ಮಾಡುತ್ತ ಸಮಯ ಕಳೆಯುತ್ತೀರಿ. ಸಮಯದ ಅಪವ್ಯಯದ ಕುರಿತು ಎಚ್ಚರವಿರಲಿ. ವಿದ್ಯಾರ್ಥಿಗಳು ಓದಿನೆಡೆ ಇನ್ನಷ್ಟು ಹೆಚ್ಚು ಗಮನ ಹರಿಸಬೇಕು. ಇಂದು ಅನಗತ್ಯ ಖರ್ಚುಗಳನ್ನು ತಪ್ಪಿಸಿದರೆ ಉತ್ತಮ. ಕೂಲಂಕುಷವಾಗಿ ಯೋಚಿಸಿದ ಅನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಕೆಲವು ಅನಿರೀಕ್ಷಿತ ಲಾಭಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಆರ್ಥಿಕತೆಯನ್ನು ಸರಿದೂಗಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಿ.
ಕುಂಭ ರಾಶಿ : ನಿಮ್ಮ ಮನಸ್ಸಿನ ಶಾಂತಿಗೆ ಆಧ್ಯಾತ್ಮವನ್ನು ಇಷ್ಟಪಡುವಿರಿ. ಸ್ವಯಾರ್ಜಿತ ಭೂಮಿಯನ್ನು ಮಾರಾಟ ಮಾಡಿ ಸಫಲರಾಗುವಿರಿ. ಹೂಡಿಕೆಯಲ್ಲಿ ನಿರೀಕ್ಷೆಗಿಂತಲು ಹೆಚ್ಚು ಲಾಭವಿರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಕಸಿವಿಸಿ. ಇಂದು ಹೆಚ್ಚಿನ ಕೆಲಸದ ನಿಮಿತ್ತ, ನೀವು ಹೆಚ್ಚು ತಿರುಗಾಟ ಮಾಡಬೇಕಾದೀತು. ಜಾಗರೂಕರಾಗಿರಿ, ಕಾಲಿಗೆ ಗಾಯವಾಗುವ ಸಂಭವವಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಿಮಗೇ ಪ್ರಯೋಜನವನ್ನು ನೀಡುತ್ತದೆ. ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು.
ಮೀನ ರಾಶಿ : ನಿಮ್ಮಿಂದಾಗಿ ಸ್ನೇಹಿತರ ವ್ಯಾಪಾರದಲ್ಲಿ ಲಾಭವಿರುವುದು. ಬಿಡುವಿಲ್ಲದ ಕೆಲಸದ ನಡುವೆಯು ನಿಮ್ಮವರಿಗೆ ಸಮಯ ಹೊಂದಿಸಿಕೊಳ್ಳುವಿರಿ. ಇಂದು ಸಿಗುವ ಹಣದಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಯ ಜೊತೆ ಮುನಿಸಿರುವುದು. ನಿಮ್ಮ ಕೌಶಲ್ಯದ ಕೆಲಸವನ್ನು ಗುರುತಿಸುವರು. ಇಂದು ನೀವು ಹಣದ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುತ್ತೀರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ಉತ್ತಮ ಕೆಲಸದ ಅನ್ವೇಷಣೆಯನ್ನು ಮಾಡುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)




