Nitya Bhavishya: ಈ ರಾಶಿಯವರು ಇಂದು ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದುರ್ಬಲರಾಗುವಿರಿ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಫೆಬ್ರವರಿ 18 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ನವಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:09 ರಿಂದ 06:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:09ರ ವರೆಗೆ.
ಧನು ರಾಶಿ : ಇಂದು ಕಾನೂನು ವಿಷಯಗಳಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸುವಿರಿ. ನೀವು ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಕುಟುಂಬದ ಜನರು ನಿಮ್ಮ ಮಾತನ್ನು ಗೌರವಿಸುತ್ತಾರೆ. ಇದರಿಂದ ನಿಮಗೆ ತೃಪ್ತಿ ಸಿಗುವುದು. ವಿಶೇಷವಾದುದನ್ನು ಮಾಡಬೇಕೆಂಬ ನಿಮ್ಮ ಬಯಕೆ ಬಲವಾಗಿರುತ್ತದೆ. ಅಪರಿಚಿತರ ಮಾತುಗಳಿಂದ ದೂರವಿರಬೇಕು. ವಹಿವಾಟಿಗೆ ಸಂಬಂಧಿಸಿದ ಯಾವುದೇ ವಿಷಯವು ನಿಮಗೆ ತಲೆನೋವಾಗಬಹುದು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಮಿಂಚಿದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ. ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ.
ಮಕರ ರಾಶಿ : ಇಂದು ನೀವು ಎಲ್ಲರಿಂದ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಇರಲಿದೆ. ನೀವು ಹೊಸ ವಾಹನವನ್ನು ಖರೀದಿಸುವ ಬಗ್ಗೆ ಮುಂದುವರಿಯಬಹುದು. ನೀವು ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬದ ವಾತಾವರಣವು ನಿರ್ಮಾಣ ಮಾಡುವಿರಿ. ನೀವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ನಿಮ್ಮ ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಎಂದೂ ನಂಬದವರ ಮಾತನ್ನು ಇಂದು ನಂಬಬೇಕಾದೀತು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ.
ಕುಂಭ ರಾಶಿ : ಇಂದು ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದುರ್ಬಲರಾಗುವಿರಿ. ಉದ್ಯಮಿಗಳು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸುವ ಲಕ್ಷಣವಿರುವುದು. ಆದರೆ ಪಾಲುದಾರಿಕೆಯಲ್ಲಿ ಏನನ್ನೂ ನಿಮ್ಮಷ್ಟಕ್ಕೇ ನಿರ್ಣಯ ಮಾಡಬೇಡಿ. ನಿಮ್ಮ ಮನಸ್ಸು ಯಾವುದೋ ಚಿಂತೆಯಲ್ಲಿ ಇರುವಂತೆ ತೋರುವುದು. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಕೆಲವು ಅಪವಾದವನ್ನು ಕೇಳಬೇಕಾದೀತು. ನೀವು ಕೆಲವು ಹಳೆಯ ತಪ್ಪುಗಳಿಂದ ಕಲಿಯಬೇಕು. ಇಂದು ಹೆಚ್ಚಿನ ಸಮಯವನ್ನು ತಂದೆ-ತಾಯಿಯರ ಸೇವೆಯಲ್ಲಿ ಕಳೆಯಬೇಕು ಎನಿಸಬಹುದು. ಇಂದು ನಡೆದ ಅಹಿತಕರ ಘಟನೆಯನ್ನು ಕೆಟ್ಟಗಳಿಗೆ ಎಂದು ಮರೆತುಬಿಡುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ನಿಷ್ಠುರದ ಮಾತಿನಿಂದ ಅನಂತರ ಪಶ್ಚಾತ್ತಾಪಗೊಳ್ಳುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು.
ಮೀನ ರಾಶಿ : ಇಂದು ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನವಶ್ಯಕ ಜಗಳಗಳು, ಗೊಂದಲಗಳಿಂದ ನೀವು ತುಂಬಾ ಚಿಂತಿತರಾಗುತ್ತೀರಿ. ಕೆಲವು ಕಾರ್ಯಗಳು ಪೂರ್ಣಗೊಳ್ಳದ ಕಾರಣ ನೀವು ನಿರಾಶೆಗೊಳ್ಳುವಿರಿ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮ ಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಾನೂನಿನ ಕ್ರಮದಲ್ಲಿ ಮುಂದುವರಿದರೆ, ನೀವು ಅದರಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಹುದ್ದೆಗಳು ಸಿಗುತ್ತವೆ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)




