AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ತಿಂಗಳು ವೃಷಭ ರಾಶಿಯವರಿಗೆ ಯಾವ ಯಾವ ದಶೆ ಶುಭ ಮತ್ತು ಅಶುಭ?

ಫೆಬ್ರವರಿ ತಿಂಗಳಲ್ಲಿ ವೃಷಭ ರಾಶಿಯವರಿಗೆ ಗ್ರಹಗಳ ಸಂಚಾರವು ಮಿಶ್ರಫಲಗಳನ್ನು ನೀಡಲಿದೆ. ಶುಕ್ರ ಮತ್ತು ಶನಿ ಈ ತಿಂಗಳು ಪ್ರಮುಖ ಪಾತ್ರ ವಹಿಸಿ, ಶುಭ ಫಲಗಳನ್ನು ತರಲಿದ್ದಾರೆ – ವೃತ್ತಿ, ಆರ್ಥಿಕತೆ, ಮತ್ತು ವ್ಯಕ್ತಿತ್ವದಲ್ಲಿ ಸುಧಾರಣೆ ನಿರೀಕ್ಷಿಸಬಹುದು. ಆದರೆ, ಮಂಗಳ, ರಾಹು, ಮತ್ತು ಸೂರ್ಯನ ಪ್ರಭಾವದಿಂದ ಕೋಪ, ತಪ್ಪು ಹೂಡಿಕೆ ಅಥವಾ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಸೂಕ್ತ ಪರಿಹಾರ ಕ್ರಮಗಳೂ ಲೇಖನದಲ್ಲಿವೆ.

ಈ ತಿಂಗಳು ವೃಷಭ ರಾಶಿಯವರಿಗೆ ಯಾವ ಯಾವ ದಶೆ ಶುಭ ಮತ್ತು ಅಶುಭ?
ಸಾಂದರ್ಭಿಕ ಚಿತ್ರ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 11, 2026 | 5:33 PM

Share

ಫೆಬ್ರವರಿ ತಿಂಗಳಲ್ಲಿ ಗ್ರಹಗಳ ಸಂಚಾರವು ವಿಶೇಷವಾಗಿದ್ದು ಫಲವೂ ಅನುಕೂಲ ಮತ್ತು ಪ್ರತಿಕೂಲಗಳಿಂದ ಮಿಶ್ರಿತವಾಗಿರಲಿದೆ. ವೃಷಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸಂಚಾರವು ಮಿಶ್ರಫಲಗಳನ್ನು ನೀಡುತ್ತವೆ. ಮುಖ್ಯವಾಗಿ ನಿಮ್ಮ ರಾಶ್ಯಧಿಪತಿ ಶುಕ್ರ ಮತ್ತು ಕರ್ಮಕಾರಕ ಶನಿ ಈ ತಿಂಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಶನಿಯ ರಾಶಿಯಲ್ಲಿಯೇ ಶುಕ್ರ ಹಾಗೂ ಶುಕ್ರನ ಉಚ್ಚ ಸ್ಥಾನದಲ್ಲಿ ಶನಿ ಇರುವರು. ಹಾಗಾಗಿ ಹೊಸ ರೀತಿಯ ಅನುಭವಗಳು ನಿಮಗೆ ಆಗುವ ಸಾಧ್ಯತೆ ಇದೆ. ​ಯಾವ ಗ್ರಹಗಳು ನಿಮಗೆ ಶುಭ ಮತ್ತು ಯಾವುದು ಅಶುಭ ಎಂಬುದರ ವಿವರ ಇಲ್ಲಿದೆ.

ಶುಭ ಫಲ ಗ್ರಹಗಳು

​ಶುಕ್ರ :

ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಈ ತಿಂಗಳು ನಿಮಗೆ ಅತ್ಯಂತ ಶುಭ ನೀಡಲಿದ್ದಾನೆ. ಇದು ನಿಮ್ಮ ವ್ಯಕ್ತಿತ್ವದಲ್ಲಿ ಮೆರುಗು ತರುತ್ತದೆ ಮತ್ತು ಸುಖ-ಸಂತೋಷಗಳನ್ನು ಹೆಚ್ಚಿಸುತ್ತದೆ. ಕಲಾತ್ಮಕ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಲಾಭ ಸಿಗಲಿದೆ.

​ಶನಿ :

ಶನಿಯು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಸ್ಥಿರತೆ ನೀಡುತ್ತಾನೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಶೆ ಇದಾಗಿದೆ.

​ಬುಧ :

ಬುಧನ ಸಂಚಾರವು ನಿಮ್ಮ ವ್ಯಾಪಾರ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ಹೊಸ ಮೂಲಗಳಿಂದ ಆದಾಯ ಬರಲು ಇದು ಸಹಕಾರಿ.

​ಅಶುಭ ಫಲ ಗ್ರಹಗಳು

​ಮಂಗಳ :

ಮಂಗಳನ ದಶೆ ಅಥವಾ ಸಂಚಾರವು ನಿಮ್ಮಲ್ಲಿ ಕೋಪ ಮತ್ತು ಆತುರವನ್ನು ಹೆಚ್ಚಿಸಬಹುದು. ಇದು ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ.

​ರಾಹು :

ರಾಹು ಲಾಭ ಸ್ಥಾನದಲ್ಲಿದ್ದರೂ, ಅತಿಯಾದ ಆಸೆಯಿಂದಾಗಿ ತಪ್ಪು ಹೂಡಿಕೆ ಮಾಡುವಂತೆ ಪ್ರೇರೇಪಿಸಬಹುದು. ಅಡ್ಡ ದಾರಿಯಲ್ಲಿ ಹಣ ಗಳಿಸುವ ಆಲೋಚನೆಯಿಂದ ದೂರವಿರುವುದು ಒಳಿತು.

​ಸೂರ್ಯ :

ಸೂರ್ಯನ ಸಂಚಾರವು ವೃತ್ತಿ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಸ್ವಲ್ಪ ಘರ್ಷಣೆ ಉಂಟುಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ಮಾತಿನ ಮೇಲೆ ನಿಗಾ ಇರಲಿ.

ಅಶುಭ, ಸಂಕಟ, ನೋವಿನ ಫಲಗಳನ್ನು ಕಡಿಮೆ ಮಾಡಿಕೊಳ್ಳಲು, ಪ್ರತಿ ಮಂಗಳವಾರ ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಯಥಾಶಕ್ತಿ ಸೇವೆ, ಆರಾಧನೆ ಮಾಡಿ ಅಥವಾ ಶನಿವಾರ ಹನುಮಾನ್ ಚಾಲೀಸಾ ಪಠಿಸಿ, ಹನುಮನ ಸೇವಾ ಕಾರ್ಯಗಳನ್ನು ಮಾಡಿ.

– ಲೋಹಿತ ಹೆಬ್ಬಾರ್

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ