Horoscope: ನಿಮ್ಮ ಅತಿಯಾದ ಆತ್ಮವಿಶ್ವಾಸವೇ ನಿಮಗೆ ತೊಂದರೆ ಉಂಟುಮಾಡಬಹುದು
ಸೆಪ್ಟೆಂಬರ್ 17, 2024ರ ನಿಮ್ಮ ರಾಶಿಭವಿಷ್ಯ: ನಿಮಗೆ ಬೇಕಾದಾಗ ಬೇಕಾದವರು ಸಿಗದೇಹೋಗಬಹುದು. ಸಂಗಾತಿಯ ಮಾರ್ಗದರ್ಶನದಲ್ಲಿ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಧಾರ್ಮಿಕ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಸ್ಪೃಹತೆಯನ್ನು ಹೆಚ್ಚಿಸುವುದು. ಹಾಗಾದರೆ ಸೆಪ್ಟೆಂಬರ್ 17ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:31 ಗಂಟೆ, ರಾಹು ಕಾಲ ಮಧ್ಯಾಹ್ನ 03:29 ರಿಂದ 05:00, ಯಮಘಂಡ ಕಾಲ ಬೆಳಿಗ್ಗೆ 09:25 ರಿಂದ 10:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:27 ರಿಂದ ಮಧ್ಯಾಹ್ನ 01:58ರ ವರೆಗೆ.
ಮೇಷ ರಾಶಿ: ಅತಿಯಾದ ವಿಶ್ವಾಸವೇ ನಿಮಗೆ ತೊಂದರೆ ಕೊಡಬಹುದು. ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಕಾರ್ಯವನ್ನು ಮಾಡುವ ಆಲೋಚನೆ ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಉಪಾಯದಿಂದ ಮಾಡುವ ಕೆಲಸಕ್ಕೆ ಶಕ್ತಿಯ ಅವಶ್ಯಕತೆ ಇರದು. ಮಕ್ಕಳಿಂದ ಕೆಲಸಕ್ಕೆ ಅಡ್ಡಿಯಾಗಲಿದೆ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದವನ್ನು ಮಾಡಿ ಬೇಸರ ತರಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವು ಸಂತೋಷವನ್ನು ತರುವುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವಿರಿ. ನಿಮ್ಮ ಸಮಯವು ಇಂದು ವ್ಯರ್ಥವಾದಂತೆ ತೋರುವುದು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಅಧಿಕಾರದಲ್ಲಿ ಇದ್ದರೂ ವಿನಯತೆಯು ನಿಮ್ಮನ್ನು ಮೇಲಕ್ಕೆ ಏರಿಸುವುದು. ನಿಮ್ಮನ್ನು ಇಷ್ಟಪಡುವವರಿಗೆ ಅಲ್ಪ ಸಮಯವನ್ನಾದರೂ ಕೊಡುವುದು ಅನಿವಾರ್ಯವಾಗಲಿದೆ.
ವೃಷಭ ರಾಶಿ: ಇಂದು ಇನ್ನೊಬ್ಬರ ಇಂಗಿತವನ್ನು ಅರ್ಥಮಾಡಿಕೊಂಡು ಕಾರ್ಯವನ್ನು ನಿರ್ವಹಿಸಿ. ಸಂಗಾತಿಯ ಜೊತೆಗಿನ ವೈಮನಸ್ಯವನ್ನು ಹೇಗಾದರೂ ಮಾಡಿ ದೂರ ಮಾಡಿಕೊಳ್ಳಬೇಕು. ಇಂದು ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರಗೊಳಿಸಿಕೊಳ್ಳುವಿರಿ. ನಿಮಗೆ ಬೇಕಾದಾಗ ಬೇಕಾದವರು ಸಿಗದೇಹೋಗಬಹುದು. ಸಂಗಾತಿಯ ಮಾರ್ಗದರ್ಶನದಲ್ಲಿ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಧಾರ್ಮಿಕ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಸ್ಪೃಹತೆಯನ್ನು ಹೆಚ್ಚಿಸುವುದು. ಅಭಾವವೈರಾಗ್ಯವು ನಿಮ್ಮಲ್ಲಿ ಉಂಟಾಗಬಹುದು. ಇಂದಿನ ನಿಮ್ಮ ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ತಂದುಕೊಡುವುದು. ಯಾರನ್ನೂ ಅವಲಂಬಿಸದೇ ಸ್ವಂತ ಶ್ರಮದಿಂದ ನೀವು ಆಗುವಷ್ಟು ಕೆಲಸವನ್ನು ಮಾಡಿ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ಕೆಲವು ವಿಚಾರಕ್ಕೆ ದಿಕ್ಕು ತೋಚದೇ ಸುಮ್ಮನಾಗುವಿರಿ.
ಮಿಥುನ ರಾಶಿ: ನೀವಾಗಿಯೇ ಸೃಷ್ಟಿಸಿಕೊಂಡಿದ್ದನ್ನು ಬಿಡುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ. ಯಾವ ವಸ್ತುವನ್ನು ಖರೀದಿಸುವ ಯೋಚನೆಯನ್ನು ಮಾಡಬೇಡಿ. ಹಲವು ದಿನಗಳ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು.
ಕರ್ಕಾಟಕ ರಾಶಿ: ಅಪ್ರಬುದ್ಧ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗುವುದು. ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿ ಹೋಗುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯು ಬರಲಿದೆ. ಇಂದಿನ ನಿಮ್ಮ ಉತ್ಸಾಹವು ಬಹಳ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯು ಸಿಗಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಸುದ್ದಿಗಳು ವಿಳಂಬವಾಗಿ ಗೊತ್ತಾಗುವುದಿ. ಸ್ವಂತ ವ್ಯವಹಾರವನ್ನು ಲಾಭದಾಯಕವಾಗಿ ಪರಿವರ್ತಿಸುವಿರಿ. ಕಛೇರಿಯ ವಾತಾವರಣವು ನಿಮಗೆ ಮುಜುಗರವನ್ನು ತಂದೀತು. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಬಂಧುಗಳಿಂದ ಭೂಮಿಯನ್ನು ಖರೀದಿ ಮಾಡುವಿರಿ.