AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಭಾವಿಗಳ ಜೊತೆ ಹೋರಾಟ ಮಾಡಬೇಕಾದೀತು

Horoscope Today 19 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಮಂಗಳವಾರದಂದು ಅಂದಾಜಿನಿಂದ ಲಾಭ, ನಿಮ್ಮದಲ್ಲದ ಧನದ ದುರಾಸೆ, ಕೈಗೊಂಡ ಕಾರ್ಯದಲ್ಲಿ ಅಡಚಣೆ, ರಾಜಕೀಯದಲ್ಲಿ ಅತಂತ್ರ, ಸರ್ಕಾರದ ಕಾರ್ಯಕ್ಕೆ ವಿಘ್ನ ಇವೆಲ್ಲ ಈ ದಿನದ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಭಾವಿಗಳ ಜೊತೆ ಹೋರಾಟ ಮಾಡಬೇಕಾದೀತು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 19, 2026 | 10:10 AM

Share

ಮೇಷ ರಾಶಿ:

ನೀವು ಅಪಾರ ಆತ್ಮವಿಶ್ವಾಸವನ್ನು ಪಡೆದಿದ್ದರೂ ಸರಿಯಾದ ಸಹಕಾರ ಸಿಗದೇ ಕಾರ್ಯವು ಅಪೂರ್ಣವಾಗುವುದು. ಮನೆಯಲ್ಲಿ ನಿಮ್ಮ ಶಕ್ತಿಯು ಸಮಸ್ಯೆಗಳನ್ನು ನಿವಾರಿಸುತ್ತದೆ. ಯಾರ ಮೇಲೋ ಅನುಮಾನಪಡುವುದಕ್ಕಿಂತ ಸರಿಯಾದ ಮಾಹಿತಿಯನ್ನು ಪಡೆದು ಮುಂದಡಿ ಇಡಿ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌

ವೃಷಭ ರಾಶಿ:

ಯಾರಿಗೂ ಗೊತ್ತಾಗದಂತೆ ದಾನ ಮಾಡುವಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಣಕಾಸಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ಸಂಬಂಧಿಕರಿಗೆ ಹಣ ಕೊಡುವುದನ್ನು ತಪ್ಪಿಸಬೇಕು. ವೈವಾಹಿಕ ಜೀವನದಲ್ಲಿ ಇಂದು ವಿಭಿನ್ನ ಅನುಭವ ನಿಮಗೆ ಎದುರಾಗಬಹುದು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಪ್ರೇಮವು ನಿಮಗೆ ಹಾಯೆನಿಸುವುದು. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು.

ಮಿಥುನ ರಾಶಿ :

ಸರಳತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಹಿರಿಯರ ಆಶೀರ್ವಾದ ಪಡೆದುಕೊಂಡು ಕಾರ್ಯಾರಂಭಿಸುವುದು ಶುಭ. ಮಕ್ಕಳೊಂದಿಗೆ ಸಮಯ ಕಳೆಯುವುದು ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು.

ಕರ್ಕಾಟಕ ರಾಶಿ :

ಯಾರೊಂದಿಗಾದರೂ ವಿವಾದಕ್ಕೆ ಸಿಲುಕುವುದು ನಿಮಗೆ ನೋವುಂಟು ಮಾಡುತ್ತದೆ. ನಿಮ್ಮ ಸಂಕಷ್ಟಕ್ಕೆ ಯಾರನ್ನೂ ದೂಷಿಸಲು ಇಷ್ಟವಾಗದು. ನೀವು ನಿಮ್ಮ ಕೆಲಸವನ್ನು ಮುಂದುವರಿಸಿದರೆ ಒಳ್ಳೆಯದು. ನಿಮ್ಮ ಹಳೆಯ ಬಾಕಿಗಳಿಂದ ಬರಬಹುದಾದ ದಿನ. ಸ್ನೇಹಿತರ ಜೊತೆ ಕಾಲ ಕಳೆಯುವುದು ಸಂತೋಷ ತರುತ್ತದೆ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು.

ಸಿಂಹ ರಾಶಿ :

ನಿಮ್ಮ ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ನಿಲ್ಲುವ ಸಾಮರ್ಥ್ಯ ಇರುವುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಫಲ ನೀಡುತ್ತವೆ. ಸ್ನೇಹಿತರಿಂದ ಲಾಭದಾಯಕ ಸಲಹೆ ಸಿಗಬಹುದು. ಭಾವನಾತ್ಮಕ ಸಂಗತಿಗಳಲ್ಲಿ ಎಚ್ಚರದಿಂದಿರಿ. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಸಂತೋಷ ಇರುವುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ.

ಕನ್ಯಾ ರಾಶಿ :

ಇಂದಿನ‌ ಬಿಡುವಿನ ಸಮಯದಲ್ಲಿ ನೀವು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಸಾಮಾಜಿಕ ಕಳಕಳಿಯನ್ನು ಜೊತೆಗಾರರು ಅರ್ಥಮಾಡಿಕೊಳ್ಳುವರು. ಅಪಪ್ರಚಾರಗಳಿಂದ ದೂರವಿರುವುದು ಒಳಿತು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವು ಬಲವಾಗುತ್ತದೆ. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು.

ತುಲಾ ರಾಶಿ :

ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಪ್ರೇಮ ಜೀವನದಲ್ಲಿ ಭಾವನಾತ್ಮಕ ತೀವ್ರತೆ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಅನಾರೋಗ್ಯಕ್ಕೆ ವಿಶ್ರಾಂತಿಗಿಂತ ಮನಸ್ಸಿನಲ್ಲಿ ಉತ್ಸಾಹ ಹೆಚ್ಚಿರಲಿ. ಹೊಸ ಯೋಜನೆಗಳ ಬಗ್ಗೆ ಆಲೋಚನೆ ಶುರುವಾಗಬಹುದು. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ಯಾರ ತಪ್ಪನ್ನೂ ನೇರವಾಗಿ ಹೇಳದೇ ಅರ್ಥ ಮಾಡಿಸಿ, ತಿದ್ದಿ.

ವೃಶ್ಚಿಕ ರಾಶಿ :

ಇಂದು ಭೇಟಿಯಾಗುವ ವ್ಯಕ್ತಿಗಳು ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬಿಸುವರು. ಕೆಲವು ವೈಫಲ್ಯಗಳು ನಿಮಗೆ ಪಾಠವಾಗಿ‌ ಕಲಿಯಬೇಕು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಇತರರಿಗೆ ಸಹಾಯಮಾಡುವ ನಿಮ್ಮ ಗುಣವು ಫಲ ನೀಡುತ್ತದೆ. ಪುಣ್ಯಾತ್ಮರ ದರ್ಶನವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಸಿಹಿಯ ಅನುಭವ ಸಾಧ್ಯ. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು.

ಧನು ರಾಶಿ :

ನೀವು ಕುಟುಂಬದ ಸಮಸ್ಯೆಗಳನ್ನು ಕುಳಿತು ಮಾತನಾಡಬಹುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಯಾತ್ರೆಗಳಲ್ಲಿ ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಮಾನವೀಯತೆಯ ದೃಷ್ಟಿಯಿಂದ ಸಹಕಾರ ಮಾಡುವಿರಿ. ಮನೆಯ ಸ್ವಚ್ಛತೆಯ ಕಡೆ ಗಮನ ಹರಿಸುವುದು ಸಂತೋಷದ ವಿಚಾರ. ಒಂಟಿಯಾಗಿ ಇರಬೇಕು ಎನಿಸಬಹುದು. ಸಹೋದರಿಯರ ನಡುವೆ ಮನಸ್ತಾಪವು ಬರುತ್ತದೆ. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ.

ಮಕರ ರಾಶಿ :

ಅಪಾಯಕಾರಿಯಾಗಿರುವ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಮನೆಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಯಶಸ್ವಿಯಾಗಿದೆ. ಪ್ರೀತಿಯ ವ್ಯಕ್ತಿಯಿಂದ ಅಚ್ಚರಿಯ ಉಡುಗೊರೆ ನಿರೀಕ್ಷಿಸಬಹುದು. ದಿನದ ಹೆಚ್ಚಿನ ಭಾಗವನ್ನು ಮನರಂಜನೆಗೆ ಮೀಸಲಿಡುವಿರಿ. ಅಹಂಕಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ.

ಕುಂಭ ರಾಶಿ :

ಇಂದು ನೀವು ಮಾತನಾಡುವ ರೀತಿ ಜನರನ್ನು ಆಕರ್ಷಿಸುವುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ, ಕಳ್ಳತನ ಸಾಧ್ಯತೆ ಇದೆ. ಸಂಬಂಧಗಳ ಪುನ‌ರ್ ಸ್ಥಾಪನೆಯ ಸಮಯ ಇದು. ಪ್ರೇಮ ಸಂಬಂಧಗಳಲ್ಲಿ ನೈಜತೆ ಇಟ್ಟುಕೊಳ್ಳಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಇಂದು ಆದ ನಿದ್ರಾಭಂಗದಿಂದ‌ ದಿನವು ಸರಿಯಾಗದೇ ಹೋಗಬಹುದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ.

ಮೀನ ರಾಶಿ :

ನಿಮ್ಮನ್ನು ನೀವು ಆಶಾವಾದಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುವಿರಿ. ಯಶಸ್ಸಿನ ದಾರಿಯನ್ನು ತೋರಿಸುತ್ತದೆ. ಕುಟುಂಬದ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಕಳೆವ ಕ್ಷಣ ಸ್ಮರಣೀಯವಾಗಿರುತ್ತದೆ. ಹಣದ ವ್ಯವಹಾರಗಳಲ್ಲಿ ಸಮತೋಲನ ಇರಲಿ. ಪ್ರೇಮದ ಆಕರ್ಷಣೆಯು ನಿಮ್ಮ ಗುರಿಯಿಂದ ನಿಮ್ಮನ್ನು ದೂರವಿಡಬಹುದು. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಬೇಜವಾಬ್ದಾರಿತನದಿಂದ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:09, ಯಮಗಂಡ ಕಾಲ 09:09 – 10:45, ಗುಳಿಕ ಕಾಲ 12:21 – 13:37

-ಲೋಹಿತ ಹೆಬ್ಬಾರ್-8762924271 (what’s app only)

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಧೋನಿ ಸ್ಟೈಲ್​​ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್
ಧೋನಿ ಸ್ಟೈಲ್​​ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್
ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು
ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?