Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 05 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:48ರ ವರೆಗೆ.

ಮೇಷ ರಾಶಿ: ಆಲಸ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು. ಕೃಷಿಯಲ್ಲಿ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮನಸ್ಸನ್ನು ಇಟ್ಟುಕೊಳ್ಳುವಿರಿ. ನೀವು ಇಂದು ಅತಿಥಿಯಾಗಿ ಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಿರಿ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ಕೋಪವು ಇದ್ದಕ್ಕಿದ್ದಂತೆ ಕಡಿಮೆ ಆಗಿರುವುದು ಆಶ್ಚರ್ಯ ಎನಿಸಬಹುದು. ‌ಕಳೆದ ದಿಮಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿಯು ಕಡಿಮೆ ಆಗಿದೆ ಎಂದು ಅನ್ನಿಸಬಹುದು.

ವೃಷಭ ರಾಶಿ: ಸಹೋದ್ಯೋಗಿಗಳನ್ನು ಕೆಲಸದಲ್ಲಿ ಸಹಾಯಕ್ಕಾಗಿ ಕೇಳುವಿರಿ. ನಿಮ್ಮದಾದ ಚಿಂತನೆಯನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಲು ಬಯಸುವಿರಿ.‌ ಅನಿರೀಕ್ಷಿತ ಪ್ರಯಾಣವು ಬರಬಹುದು.‌ ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿ‌ದೆ ಬೇಸರವು ಆಗಬಹುದು. ದಾಖಲೆಗಳನ್ನು ಸರಿಯಾದ ಕಡೆಗಳಲ್ಲಿ ಇಟ್ಟುಕೊಳ್ಳಿ. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು ಸಂತೋಷದ ವಿಚಾರವಾಗಲಿದೆ. ಮನೆಯವರ ಜೊತೆ ಹೆಚ್ಚು ಆನಂದದಿಂದ ಇರುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗುವಿರಿ.

ಮಿಥುನ ರಾಶಿ: ಅಧಿಕ ಆಲೋಚನೆಯನ್ನು ಮಾಡುವುದರಿಂದ ಮನಸ್ಸು ದುರ್ಬಕವಾಗಬಹುದು. ಕಾಲು ನೋವಿಗೆ ವೈದ್ಯರನ್ನು ಭೇಟಿ ಮಾಡಿ. ನಿಮಗಮ ಜೀವನ ಕ್ರಮವನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗಲಿದೆ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಆಗದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋಗಬೇಕಾಗುವುದು. ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ನೂತನ ವಸ್ತುಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುವಿರಿ.

ಕರ್ಕಾಟಕ ರಾಶಿ: ನಿಮ್ಮ ಮಾತಿಗೆ ಇಂದು ವಿರೋಧವು ಬರಬಹುದು. ‌ಆದಷ್ಟು ಇಂತಹ ಸಂದರ್ಭವು ಬಾರದಂತೆ ನೋಡಿಕೊಳ್ಳುವುದು ಉತ್ತಮ. ತಂದೆಯ ಮೇಲೆ‌ ನಿಮಗೆ ಬೇಸರ ಉಂಟಾಗಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ಕೊಡಬಹುದು. ಆಸ್ತಿಯ ವಿಚಾರದಲ್ಲಿ ನೀವು ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಹುಡುಕುವಿರಿ. ಮನೆಯ ವಾತಾವರಣವು ನಿಮಗೆ ಅಹಿತಕರ ಎನಿಸಬಹುದು. ವಿಶೇಷವಾದ ವಸ್ತುವನ್ನು ಕೊಳ್ಳುವ ಆಸಕ್ತಿಯು ಇರಲಿದೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!