Horoscope: ರಾಶಿಭವಿಷ್ಯ, ಕುಟುಂಬದ ಜವಾಬ್ದಾರಿಯು ಈ ರಾಶಿಯವರ ಮೇಲೇ ಬರಬಹುದು
ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 13 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02 ಗಂಟೆ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:29ರ ವರೆಗೆ.
ಮೇಷ ರಾಶಿ: ಅನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗಲಿದೆ. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವು ಇರಲಿದೆ. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ಮಾತಿನಲ್ಲಿ ಮಿತಿ ಇರಲಿದ್ದು ಎಲ್ಲರಿಗೂ ಆಶ್ಚರ್ಯವಾದೀತು. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ದೈವಾನುಕೂಲದಿಂದ ನಿಮಗೆ ಸಿಗಬೇಕಾದ ಸಂಪತ್ತು ಬರಲಿದೆ.
ವೃಷಭ ರಾಶಿ: ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ನಿಮ್ಮ ಸಹನೆಯನ್ನು ಬಿಡದೇ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ನಂಬಿಕೆ ಹೆಚ್ಚಾಗುವುದು.
ಮಿಥುನ ರಾಶಿ: ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ದ್ವಂದ್ವ ಮನಃಸ್ಥಿತಿಯನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನ ಮಾಡುವುವು. ಇಂದು ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಇತರರಿಗೆ ಹಂಚಿ ನಿರಾಳರಾಗುವಿರಿ.
ಕರ್ಕ ರಾಶಿ: ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು. ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯಕ್ಕೆ ಜನಬೆಂಬಲವು ಸಿಗಬಹುದು. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಲಿದೆ. ಇಂದಿನ ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರುವುದು. ಏಕಾಂತವನ್ನೇ ನೀವು ಬೇಕೆಂದುಕೊಳ್ಳುವಿರಿ. ಕೊಟ್ಟ ಮಾತನಾಡುವುದು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ