Daily Horoscope: ಏನನ್ನಾದರೂ ಸಾಧಿಸಬೇಕೆಂಬ ಮಹದಾಸೆ ಇವರದು, ಇಷ್ಟಾರ್ಥ ಸಿದ್ಧಿಸಲಿದೆ

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಏನನ್ನಾದರೂ ಸಾಧಿಸಬೇಕೆಂಬ ಮಹದಾಸೆ ಇವರದು, ಇಷ್ಟಾರ್ಥ ಸಿದ್ಧಿಸಲಿದೆ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 15 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀಮ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:25 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:12 ರಿಂದ 07:49ರ ವರೆಗೆ.

ಮೇಷ: ಕಾನೂನಿ‌ನ‌ ಸಮರದಿಂದ‌‌ ಹೊರಬರಬೇಕು ಎಂದು ಅನ್ನಿಸಬಹುದು. ನಿಮಗೆ ಅಭದ್ರತೆಯು ಕಾಡಬಹುದು. ‌ ‌ನಿಮಗೆ ಇಂದು‌ ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬಂದಿರುವುದರಿಂದ‌ ಬಂಧನದಂತೆ ಅನ್ನಿಸಬಹುದು. ಹಣದ ವ್ಯವಹಾರವು ಸುಲಲಿತವಾಗಿ ಆಗಲಿದೆ. ಪ್ರತಿಭಾನ್ವಿತರಿಗೆ ಪ್ರೋತ್ಸವು ಸಿಗುವುದು. ಸಕಾಲಕ್ಕೆ ಸಿಗದ ಮಾಹಿತಿಯಿಂದ ಸೌಲಭ್ಯದಿಂದ‌ ವಂಚಿತರಾಗುವಿರಿ. ನಿಮ್ಮ ವಿವಾಹದ‌ ಮಾತು‌ಕತೆಗಳು ನಡೆಯಬಹುದು. ಅಧ್ಯಾತ್ಮದ‌ ಕಡೆಗೂ ನಿಮ್ಮ ಒಲವು ಕಾಣಿಸಲಿದೆ. ಇಂದು ನೀವು ಸವಾಲನ್ನು ಸ್ವೀಕರಿಸುವ ಮನಸ್ಸು ಇರಲಿದೆ. ಕೃಷಿ ಕ್ಷೇತ್ರದತ್ತ ನಿಮ್ಮ‌ ಚಿತ್ತವು ಇರಲಿದೆ.

ವೃಷಭ: ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ‌ ಗುರಿಯನ್ನು ತಲುಪಲು ನಿಮಗೆ ಸದ್ಯಕ್ಕೆ ಅಸಾಧ್ಯ ಎನಿಸಬಹುದು. ನೀವು ವಿರೋಧವನ್ನು ಲೆಕ್ಕಿಸದೇ ಮುನ್ನುಗ್ಗಿ ಅಪಾಯವನ್ನು ತಂದುಕೊಳ್ಳುವಿರಿ. ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳು ಕಷ್ಟವಾದೀತು. ಇನ್ನೊಬ್ಬರ ಮಾತಿಗೂ ಬೆಲೆ ಮತ್ತು ಅವಕಾಶವನ್ನು ಮಾಡಿ‌ಕೊಡಿ. ಯಾವುದರ ಮೇಲೂ ಹೆಚ್ಚಿನ ನಿರೀಕ್ಷೆ ಬೇಡ. ನಿಮ್ಮ ಆನುನುಕೂಲ್ಯಕ್ಕೆ ಬೇಕಾದ ಹಾಗೆ ದಿನವನ್ನು ಇಟ್ಟುಕೊಳ್ಳಿ. ತಂದೆಯ ಮಾತಿನಂತೆ ನಡೆದುಕೊಳ್ಳುವಿರಿ. ಸ್ನೇಹಿತರು ನಿಮ್ಮ ಉದ್ಯೋಗವನ್ನು ಬದಲಿಸಲು ಬಹಳ ಒತ್ತಾಯ ಮಾಡುವರು.

ಮಿಥುನ: ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ‌ ನಿಮಗೆ ನಷ್ಡವಾಗಲಿದೆ.‌ ನಿಮ್ಮ ಎಲ್ಲ‌ ಯೋಜನೆಯೂ ಬಿಡಮೇಲಾಗಬಹುದು. ಉನ್ನತ ಹುದ್ದೆಯ ನಿರೀಕ್ಷೆಯನ್ನು ಮುಂದುವರಿಸುವುದು ಉತ್ತಮ. ಆರೋಗ್ಯವನ್ನು ಸರಿ‌ಮಾಡಿಕೊಳ್ಳಲು ಆದ್ಯತೆ ನೀಡಿ. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಪೂರ್ವ ಯೋಜನೆಯನ್ನು ಮಾಡದೇ ವಿನಾಕಾರಣ ಹಣವನ್ನು ನಷ್ಟಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ. ನಿಮ್ಮ ವಸ್ತುಗಳು ಇನ್ನೊಬ್ಬರಿಂದ ಹಾಳಾಗಿದ್ದು ನಿಮಗೆ ಬಹಳ‌ ಬೇಸರವಾದೀತು.‌ ಕಛೇರಿಯಲ್ಲಿ ನಿಮಗೆ ಪ್ರಶಂಸೆ‌ಯು ಸಿಗಲಿದೆ.

ಕಟಕ: ಇಷ್ಟಾರ್ಥವು ಸಿದ್ಧಿಸಿತು ಎಂಬ ಸಂತೋಷವು ನಿಮ್ಮಲ್ಲಿ‌ ಇರಲಿದೆ. ಏನೇ ಬಂದರೂ ಎಲ್ಲವೂ ವಿಧಿ ಎಂಬ ನಿರ್ಧಾರಕ್ಕೆ‌ ಬರಲಿದ್ದೀರಿ. ಚಿತ್ತಚಾಂಚ್ಯಲ್ಯವು ನಿಮ್ಮ‌ ನಿರ್ಧಾರವನ್ನೂ ಬದಲಿಸಲಿದೆ. ಇನ್ನೊಬ್ಬರ ವಸ್ತುವನ್ನು ಪಡೆಯುವ ಹಂಬಲ ಅತಿಯಾಗಲಿದೆ. ಏನನ್ನಾದರೂ ಸಾಧಿಸಬೇಕು ಎಂಬ ಮಹದಾಸೆ ಇರಲಿದೆ. ಹೂಡಿಕೆಯನ್ನು ಯೋಗ್ಯ ಕಾಲಕ್ಕೆ ಹಿಂಪಡೆದು ಲಾಭ ಗಳಿಸುವಿರೊ. ಅನಿರೀಕ್ಷಿತ ಸುದ್ದಿಯನ್ನು ನೀವು ಕೇಳಿ ಹತಾಶರಾಗುವಿರಿ. ನಿಮ್ಮ‌ ಮನಸ್ಸು ಯಥಾಸ್ಥಿತಿಗೆ ಬರಲು ಸ್ವಲ್ಪ ಸಮಯವನ್ನು ತೆಗದುಕೊಳ್ಳುವಿರಿ. ಯಾರದೋ ಕೈಗೊಂಬೆಯಾಗಿ ವರ್ತಿಸುವಿರಿ.

ಸಿಂಹ: ನಿಮ್ಮ‌ಕಾರ್ಯವನ್ನು ವೀಕ್ಷಿಸಿ ನಿಮಗೆ ಹೆಚ್ಚಿನ‌ ಬಡ್ತಿಯನ್ನು ಖಾಸಗಿ‌ ಸಂಸ್ಥೆ ಕೊಡಲಿದೆ. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಲಿದೆ. ಸಮಯಕ್ಕೆ ಕಾದಿದ್ದು‌ ಸಾರ್ಥಕ‌ ಎನಿಸಬಹುದು. ಮಾತಿನಲ್ಲಿ ಮೃದುತ್ವ ಇರಲಿ. ವೈಯಕ್ತಿಕ ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.‌ ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವಿರಿ. ನಿಮ್ಮ ವರ್ತನೆಯು ವೃತ್ತಿಯ ಸ್ಥಳದಲ್ಲಿ ಅಹಂಕಾರದಂತೆ ತೋರುವುದು. ನಕಾರಾತ್ಮಕ ಮಾತುಗಳಿಗೆ ಸ್ಪಂದಿಸುವುದು ಬೇಡ. ಸ್ನೇಹಿತರನ್ನು ಕಳೆದುಕೊಳ್ಳುತ್ತೇನೆ‌ ಎಂಬ ಭಯವು ಕಾಡಬಹುದು. ಮನಸ್ಸಿನ ನೋವನ್ನು ನೀವೇ ಅನುಭವಿಸಿ ಕಡಿಮೆ‌ ಮಾಡಿಕೊಳ್ಳುವಿರಿ.

ಕನ್ಯಾ: ಉದ್ಯೋಗವನ್ನು ಪಡೆಯುವ ಉತ್ಸಾಹದಿಂದ ಪ್ರಯಾಣ ಮಾಡುವಿರಿ. ಆದರೆ ಹತಾಶರಾಗುವಿರಿ. ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂಷಿಸುವರು. ಮನೆಯ ಕಾರ್ಯಗಳು ಇಂದು ಬಹಳ ಇರಲಿದೆ. ವಾಹನವನ್ನು ಖರೀದಿಸಲು ಬೇರೆ ಊರಿಗೆ ಹೋಗಬೇಕಾದೀತು. ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಆಪ್ತರಿಗೆ ಹೇಳಿ, ಸಹಾಯವನ್ನೂ ಬಯಸುವಿರಿ. ಸಾಲ ಮರುಪಾವತಿಯ ಆಗದೇ ಆತಂಕವಾಗಲಿದೆ. ಅಕ್ಕಪಕ್ಕದವರು ನಿಮ್ಮ ಸ್ಥಿತಿಯನ್ನು ಕಂಡು ಆಡಿಕೊಳ್ಳುವ ಸಾಧ್ಯತೆ ಇದೆ.

ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?