ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಶನಿವಾರ ರುಚಿಕರ ಭೋಜನ, ಅತಿಯಾದ ಭಾವುಕತೆ, ಅಸಂಬಂಧದ ಜೊತೆ ಸಂಬಂಧ, ವ್ಯಾವಹಾರಿಕ ತಿಕ್ಕಾಟ, ಹಣಕಾಸಿಗೆ ಅಡತಡೆ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ : ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ – 06 : 09 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:24 : 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47
ತುಲಾ ರಾಶಿ: ಅಪರಿತರಿಂದ ಮಾತಿಗೆ ತಿರಸ್ಕಾರ ಬರುವುದನ್ನು ಸಹಿಸಲಾಗದು. ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಕೆಲಸದಲ್ಲಿ ಚುರುಕು ಮತ್ತು ಸ್ಪಷ್ಟತೆ ಅಗತ್ಯ. ಇತ್ತೀಚಿನ ಯಾವುದೇ ತೀರ್ಮಾನವು ಪರಿಶೀಲನೆ ಅಗತ್ಯವಿದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭದೊರೆಯಬಹುದು. ಪೋಷಕರ ಆರೋಗ್ಯಕ್ಕೆ ಆರೈಕೆ ಅವಶ್ಯ. ಕಾನೂನು ಅಥವಾ ಅಧಿಕಾರಿಗಳೊಂದಿಗೆ ಸಂಬಂಧ ಉತ್ತಮ ಇರಲಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ತಾಯಿಯ ಜೊತೆ ಹರಟೆ ಹೊಡೆದು ಅವರ ಮನಸ್ಸನ್ನು ಹಗುರ ಮಾಡುವಿರಿ. ಸಂಗಾತಿಗೆ ನಿಮ್ಮಿಂದ ಪ್ರಿಯವಾದುದು ಸಿಗಬಹುದು. ಮನಸ್ಸಿನ ದ್ವಂದ್ವಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದುವಿರಿ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ.
ವೃಶ್ಚಿಕ ರಾಶಿ: ಆದಾಯದ ಮೂಲಗಳಿಂದ ಬರುವ ಹಣವು ನಿಮಗೆ ಸಾಕಾಗದು. ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ಸಹೋದ್ಯೋಗಿಗಳಿಂದ ಕಛೇರಿಯಲ್ಲಿ ನಿಮಗೆ ಒತ್ತಡ ಪರಿಸ್ಥಿತಿ ಬರಬಹುದು. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಯಶಸ್ಸು ಖಚಿತ. ಹಠ ಅಥವಾ ಜಿದ್ದು ದಾಂಪತ್ಯದಲ್ಲಿ ಅಸಮಾಧಾನ ತರಬಹುದು. ಹಣಕಾಸು ಸ್ಥಿತಿಯು ಸ್ಥಿರವಾಗಿರಲಿದೆ. ಹಿರಿಯರ ಸಲಹೆಗೆ ಕಿವಿಗೊಡಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಭೂಮಿಯನ್ನು ಖರೀದಿಸಲು ಸ್ಥಳ ಪರಿಶೀಲನೆಗೆ ಹೋಗುವ ಸಾಧ್ಯತೆ ಇದೆ. ಯಾರಾದರೂ ಹಣಕಾಸಿನ ವಿಚಾರಕ್ಕೆ ಬಂದರೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ಇಂದಿನ ಕಾರ್ಯವನ್ನು ಉತ್ಸಾಹದಿಂದ ಮಾಡುವಿರಿ. ಯಾರನ್ನೂ ಅವಲಂಬಿಸುವ ಯೋಜನೆಯನ್ನು ನೀವು ಬಿಡುವಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.
ಧನು ರಾಶಿ: ಇಂದು ಆಪ್ತರ ಮಾತಿಗೆ ಅತಿಯಾಗಿ ಭಾವುಕರಾಗುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಲಿದ್ದೀರಿ. ನೆರೆಹೊರೆಯವರು ನಿಮ್ಮ ಮನೆಗೆ ಬರಬಹುದು. ನಿಮ್ಮ ಪ್ರಯತ್ನಗಳು ಗುರುತು ಕಾಣುವ ದಿನ. ಮಿತ್ರರ ಸಹಕಾರದಿಂದ ಕೆಲಸ ಸುಲಭವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಬದಲಾಗಬಹುದು. ಅತಿ ನಂಬಿಕೆಯಿಂದ ಹಾನಿ ಆಗಬಾರದು ಎಂಬುದನ್ನು ನೆನಪಿಡಿ. ಕೋಪದಿಂದಲೇ ಎಲ್ಲದಕ್ಕೂ ಪರಿಹಾರ ಸಿಗದು. ಕೇವಲ ಮಾತಿನ ಆಧಾರದ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸಬಹುದು. ಯಾರಿಂದಲಾದರೂ ಏನನ್ನಾದರೂ ಪಡೆಯುವಾಗ ವಿನಯವು ಇರಲಿ. ಅತಿಯಾದ ಆಲಸ್ಯದಿಂದ ಮನೆಯ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.
ಮಕರ ರಾಶಿ: ಅಸಂಗತಗಳಿಂದ ನಿಮಗೆ ಅಪಮಾನವಾಗಲಿದೆ. ಯಾವ ಸೋಲಿಗೂ ಹತಾಶರಾಗುವುದು ಬೇಡ. ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಮನೆಯಿಂದ ದೂರ ಉದ್ಯೋಗದ ನಿಮಿತ್ತ ಇರಬೇಕಾಗಿ ಬರಬಹುದು. ಕೌಟುಂಬಿಕ ಚರ್ಚೆಗಳಲ್ಲಿ ತಾಳ್ಮೆಯಿಂದ ಪ್ರತಿಕ್ರಿಯಿಸಿ. ಆರ್ಥಿಕವಾಗಿ ಏರುಪೇರು ಆಗಬಹುದು. ಹೊಸ ಖರೀದಿಗೆ ದಿನ ಸೂಕ್ತವಲ್ಲ. ಸ್ನೇಹಿತರ ಮಾತುಗಳಲ್ಲಿ ಸತ್ಯತೆ ಇಲ್ಲದಿರುವ ಸಾಧ್ಯತೆ. ಅಸ್ತಿ ಸಂಬಂಧ ಕಾನೂನು ವ್ಯವಹಾರ ನೋಡಿಕೊಳ್ಳಿ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡುವಿರಿ. ಸಾಲಬಾಧೆಯ ಭಯವು ಕಾಡುವುದು. ಎಲ್ಲರ ಪ್ರೀತಿಯನ್ನು ಗಳಿಸಲು ಸಾಧ್ಯವಾಗದು. ಪ್ರತಿಕೂಲ ಸಂದರ್ಭವನ್ನು ಸರಿಯಾಗಿ ನಿಭಾಯಿಸುವಿರಿ. ತೊಂದರೆಗಳು ಬರುವುದು ನಿಲ್ಲುವುದು. ಇರುವುದನ್ನು ಸರಿ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮ ಮೇಲಿದೆ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ.
ಕುಂಭ ರಾಶಿ: ನಿಮ್ಮ ಗುರಿಗೆ ಅಪರಿಚಿತರು ಜೊತೆಯಾಗುವರು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಮನಸ್ಸು ಕೆಡುವುದು ಬಿಟ್ಟರೆ ಮತ್ತೇನೂ ಆಗದು. ಯಾರ ಮಾತನ್ನೂ ಕೇಳದೇ ಹಣ ಹೂಡಿಕೆ ಮಾಡಿ ಕಳೆದುಕಳ್ಳುವಿರಿ. ಹಣಕಾಸು ವಿಷಯದಲ್ಲಿ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು. ಕೆಲಸದ ಜವಾಬ್ದಾರಿಗಳಿಂದ ದೂರ ಉಳಿಯಲಾಗದು. ಆರೋಗ್ಯ ಸರಾಸರಿ ಇರುತ್ತದೆ. ಪ್ರವಾಸದ ಯೋಚನೆಯಲ್ಲಿದ್ದರೆ ಮುಂದೂಡುವುದು ಉತ್ತಮ. ಮಾನಸಿಕವಾಗಿ ಹಿಂಜರಿಕೆ ಇರಲಿದೆ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ಚಟಗಳಿಂದ ಒಂದಿಷ್ಟು ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಭವಿಷ್ಯದ ಕುರಿತು ಆಲೋಚಿಸುವುದು ಉತ್ತಮ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ.
ಮೀನ ರಾಶಿ: ನಿಮ್ಮಿಂದ ರುಚಿಕರವಾದ ಭೋಜನ ಮನೆಯವರಿಗೆ ಸಿಗುವುದು. ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಸರಿಯಾದ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ಸ್ವಲ್ಪ ಕಾಲ ಕಳೆಯಿರಿ. ಆತ್ಮವಿಶ್ವಾಸವನ್ನು ಬೆಳಸಿಕೊಂಡ ನಿಮಗೆ ಸದಾ ಸಂತೋಷವು ಇರಲಿದೆ. ಆರ್ಥಿಕ ವಿಚಾರದಲ್ಲಿ ಚಿಂತೆ ಇರಬಹುದು, ಆದರೆ ತಾಳ್ಮೆಯಿಂದ ನಿರ್ವಹಿಸಬಲ್ಲಿರಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಸಂತೋಷ ತರುವದು. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗಬಹುದು. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಲು ಬಯಸುವಿರಿ. ಎಲ್ಲದರ ಬಗ್ಗೆಯೂ ಋಣಾತ್ಮಕ ಭಾವವನ್ನು ಇಟ್ಟುಕೊಂಡು ಕೊರಗುವುದು ನಿರ್ಥಕ. ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಕೊಳ್ಳುವ ಮನಸ್ಸಿರದು. ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.




