AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಶನಿವಾರ ರುಚಿಕರ ಭೋಜನ, ಅತಿಯಾದ ಭಾವುಕತೆ, ಅಸಂಬಂಧದ ಜೊತೆ ಸಂಬಂಧ, ವ್ಯಾವಹಾರಿಕ ತಿಕ್ಕಾಟ, ಹಣಕಾಸಿಗೆ ಅಡತಡೆ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 05, 2025 | 1:51 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ : ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ – 06 : 09 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:24 : 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47

ಮೇಷ ರಾಶಿ: ಗೃಹೋಪಕರಣವನ್ನು ಮಾರಾಟ ಮಾಡಿ ಆದಾಯ ಬರುವುದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಆಯ್ಕೆ ವಿಚಾರದಲ್ಲಿ ನೀವು ಸೋಲಬಹುದು. ಕಹಿ ನೆನಪು ಕಾಡಲಿದೆ. ಸಂಗಾತಿಯ ಜೊತೆ ವಾಸ್ತವದ ಬಗ್ಗೆ ಆಲೋಚಿಸಿ. ಹೂಡಿಕೆಯಲ್ಲಿ ನಂಬಿಕೆ ಹೆಚ್ಚಾಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ದಿನ ಲಾಭದಾಯಕ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉಲ್ಲಾಸ ತರಬಹುದು. ನಿಮ್ಮ ಧ್ವನಿ ಸಾರ್ವಜನಿಕ ಕಾರ್ಯಕ್ಕೆ ಉಪಯೋಗವಾಗಲಿದೆ. ದಿನದ ಮೊದಲಾರ್ಧದಲ್ಲಿ ನಿರ್ಣಯಗಳಲ್ಲಿ ನಿಶ್ಚಿತತೆ ಇರಲಿ. ಚಾಲನೆಯ ವಿಚಾರದಲ್ಲಿ ಜಾಗರೂಕತೆ ಇರದು. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ಭೂಮಿಯ ವ್ಯವಹಾರಕ್ಕೆ ಸದ್ಯ ಕೈ ಹಾಕುವುದು ಬೇಡ. ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿರದು. ಮಕ್ಕಳು ನಿಮ್ಮಿಂದ ಹಣವು ಖಾಲಿಯಾಗುವಂತೆ ಮಾಡಿಯಾರು. ಅವರು ಬೇಸರಗೊಳ್ಳದಂತೆ ನೋಡಿಕೊಳ್ಳಿ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು.

ವೃಷಭ ರಾಶಿ: ಅಲ್ಲಗಳೆಯದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ಶತ್ರುಗಳ ಕಾಟಕ್ಕೆ ಪೂರ್ಣವಿರಾಮ ಬೇಕಾಗಿದೆ. ಮಾನಸಿಕವಾಗಿ ಅವರು ನಿಮಗೆ ಇಂದು ತೊಂದರೆಯನ್ನು ಕೊಡಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಬುದ್ದಿವಂತಿಕೆಯ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸಬಲ್ಲಿರಿ. ಹಳೆಯ ಚಿಕ್ಕ ವಿಷಯ ಈಗ ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಎಚ್ಚರಿಕೆಯಿಂದಿರಿ. ಮಕ್ಕಳ ಬಗೆಗಿನ ಕಾಳಜಿ ಹೆಚ್ಚಾಗುವುದು. ನಿಮ್ಮ ಸಾಮರ್ಥವನ್ನು ಅಗೌರವಿಸುವರು. ಬರಬೇಕಾದ ಸಂಪತ್ತು ಕೈಗೆ ಸಿಗದೇ ಸಾಲವನ್ನು ಮಾಡಬೇಕಾದೀತು. ಕುಟುಂಬದಲ್ಲಿ ನಿರ್ವಹಣೆಯು ಸರಿಯಾಗಿ ಆಗುತ್ತಿಲ್ಲ ಎಂದು ದಾಂಪತ್ಯದಲ್ಲಿ ಕಲಹವು ಉಂಟಾಗಬಹುದು. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.

ಮಿಥುನ ರಾಶಿ: ಯಾವುದನ್ನೇ ಆದರೂ ದೊಡ್ಡ ಪ್ರಮಾಣದಲ್ಲಿ ಆಗುವಂತೆ ಮಾಡುವಿರಿ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸೋಲಬಹುದು. ದೇಹದಲ್ಲಿ ಸೌಖ್ಯವಿಲ್ಲದ ಭಾವನೆ ಉಂಟಾಗಬಹುದು. ಕೆಲ ಕಾಲ ಮನೋಭಾವ ಕುಂಠಿತವಾಗಿರಬಹುದು. ಮಧ್ಯಾಹ್ನದ ಬಳಿಕ ಕೆಲಸಗಳು ಸರಿದೂಗುತ್ತವೆ. ನಿಮ್ಮ ಬಗ್ಗೆ ವಿನೋದದ ಮಾತಿಗಳನ್ನಾಡುವರು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಅನ್ಯರ ತಪ್ಪುಗಳನ್ನು ಮನ್ನಿಸುವ ಗುಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಆಕಸ್ಮಿಕವಾದ‌ ಕೆಲವು ಘಟನೆಗಳು ನಿಮ್ಮನ್ನು ಚಿಂತೆಯಲ್ಲಿ ಇರುವಂತೆ ಮಾಡುವುದು. ಏಕಾಂತವು ನಿಮಗೆ ಬಲವನ್ನು ಕೊಡುವುದು. ಯುಕ್ತಿಯಿಂದ ನಿಮ್ಮ‌ ಕಾರ್ಯವನ್ನು ಸಾಧಿಸಿಕೊಳ್ಳಿ. ಎಲ್ಲಿಯೂ ಕಲಹವಾಗದೇ ಕೆಲಸವು ಮುಕ್ತಾಯವಾಗುವುದು. ವಿಶೇಷ ಸಂದರ್ಭದಲ್ಲಿ ಭಾಗವಹಿಸಲಿದ್ದೀರಿ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆ.

ಕರ್ಕಾಟಕ ರಾಶಿ: ಬೇಡದ ವಿಚಾರಕ್ಕೆ ಗೊಂದಲಗಳು ಸೃಷ್ಟಿಮಾಡಿಕೊಳ್ಳುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಗೊತ್ತಿದ್ದೂ ಉದ್ವೇಗದಲ್ಲಿ ಸಿಕ್ಕಿಕೊಳ್ಳಬೇಡಿ. ಹಿರಿಯರ ಜೊತೆ ಮಾತನಾಡುವಾಗ ಹಿಡಿತವಿರಲಿ. ಆಧ್ಯಾತ್ಮಿಕ ಪ್ರಗತಿ ಮಾರ್ಸಾಧ್ಯ. ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಸಮಯ ಬಳಕೆ ಅಗತ್ಯ. ಕೆಲವು ಅಸಹಜ ಘಟನೆಗಳಿಂದ ಆತಂಕ ಉಂಟಾಗಬಹುದು. ಹಣಕಾಸಿನ ನಿರ್ವಹಣೆಯಲ್ಲಿ ಯುಕ್ತಿ ಅವಶ್ಯ. ಅಪವಾದದಿಂದ ನೀವು ಚುರುಕಾಗುವಿರಿ. ವಿದ್ಯಾಭ್ಯಾಸದಲ್ಲಿ ಆತಂಕ ಬಂದು ಅರ್ಧಕ್ಕೆ ಬಿಡುವಿರಿ. ಯಾರದೋ ಮಾತಿಗೆ ಮಣಿದು ನಿಮ್ಮ ಗುರಿಯನ್ನು ಬದಲಿಸಿಕೊಳ್ಳುವುದು ಸರಿಯಲ್ಲ. ನೀವು ಬಹಳ ವೇಗವಾಗಿ ನಡೆಯುವಿರಿ ಹಾಗೂ ವೇಗವಾಗಿ ಮಾತನಾಡುವಿರಿ. ಸ್ತ್ರೀಯರಿಂದ ಸಹಕಾರವು ಸಿಗಬಹುದು. ಆತ್ಮೀಯತೆಯು ಬದಲಾಗಬಹುದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವು ನಿಮಗೆ ತೃಪ್ತಿಕರವಾಗಿ ಇರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ.

ಸಿಂಹ ರಾಶಿ: ನಿಮ್ಮ ಒತ್ತಡವು ಇತರರಿಗೆ ಗೊತ್ತಾಗದಂತೆ ಇರುವಿರಿ. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ಇದಕ್ಕೆ ಸಹೋದರನ ಬೆಂಬಲವೂ ಸಹಕಾರವೂ ಸಿಗಲಿದೆ. ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ವ್ಯವಸ್ಥಿತ ರೀತಿಯಿಂದ ಆಸ್ತಿಯ ಹಂಚಿಕೆಯನ್ನು ಮಾಡಿಕೊಳ್ಳಿ. ಮಾತು ಜವಾಬ್ದಾರಿಯಿಂದ ಕೂಡಿರಲಿ. ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಬರುವ ಸಾಧ್ಯತೆ. ಕುಟುಂಬದಲ್ಲಿ ಏನಾದರೂ ಹೊಸ ಚಟುವಟಿಕೆ ನಡೆಯಬಹುದು. ಸೋಲನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಕೈಗೆ ಬಂದ ಹಣವು ಹೇಗೆ ಖರ್ಚಾಯಿತು ಎಂಬುದೇ ಊಹಾತೀತವಾಗುವುದು. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯದೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ.

ಕನ್ಯಾ ರಾಶಿ: ಹಣವನ್ನು ಕೂಡಲೆ ಸಿಗುವಂತೆ ಇಟ್ಟುಕೊಳ್ಳುವುದು ಬೇಡ. ಇಂದು ನಿಮ್ಮ ದುರಭ್ಯಾಸಗಳು ಇತರರಿಗೆ ಗೊತ್ತಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ಮೂರನೇ ವ್ಯಕ್ತಿಗಳ ಮಾತನ್ನು ನಂಬಿ ಮೋಸಹೋಗುವಿರಿ. ಒತ್ತಡ ಇರಬಹುದು ಆದರೆ ತಾಳ್ಮೆಯಿಂದ ಜಯಿಸಬಹುದು. ವಾದವಿವಾದಗಳಲ್ಲಿ ತಾಳ್ಮೆ ಉಳಿಸಿ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಬಹುದು. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ. ಮಕ್ಕಳ ಬಗ್ಗೆ ಸಂತೋಷದ ಸುದ್ದಿ ಸಿಗಬಹುದು. ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವವನ್ನು ಬೆಳಿಸಿಕೊಳ್ಳಬೇಕಾಗಬಹುದು. ಏನೇ ಹೊಸದನ್ನು ಮಾಡಿದರೂ ಅದಕ್ಕೆ ನಿಮ್ಮರಿಂದಲೇ ತಡೆ ಬರಬಹುದು. ಸಾಂಸಾರಿಕ‌ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದೀರಿ. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ.