ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ
Horoscope Today 09 June: ಜೂನ್ 9, 2026ರ ಇಂದಿನ ರಾಶಿ ಭವಿಷ್ಯ ನಿಮ್ಮ ದೈನಂದಿನ ಜೀವನದ ಮೇಲೆ ಗ್ರಹಗಳ ಪ್ರಭಾವವನ್ನು ವಿವರಿಸುತ್ತದೆ. ಹಣಕಾಸು, ವೃತ್ತಿ, ಪ್ರೀತಿ, ಆರೋಗ್ಯ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಾಗುವ ಸವಾಲುಗಳು ಮತ್ತು ಅವಕಾಶಗಳನ್ನು ಅರಿಯಿರಿ. ಪ್ರತಿಯೊಂದು ರಾಶಿಯವರಿಗೂ ಅದೃಷ್ಟ, ಶುಭ-ಅಶುಭ ಫಲಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ದಿನದ ವಿಶೇಷತೆಗಳನ್ನು ತಿಳಿದು ನಿಮ್ಮ ದಿನವನ್ನು ಉತ್ತಮಗೊಳಿಸಿಕೊಳ್ಳಿ.

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ನವಮೀ ತಿಥಿಯ ಮಂಗಳವಾರದಂದು ಬಂಧನದ ಅನುಭವ, ಹೊಸ ಉದ್ಯೋಗ, ಶಿಕ್ಷೆಯ ಭಯ, ಪ್ರೀತಿಯಲ್ಲಿ ವಿವಾದ, ಹಿಂಪಡೆವ ಹೂಡಿಕೆ ಇವೆಲ್ಲ ಈ ದಿನದ ಭವಿಷ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವಿಷ್ಕಂಭ, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:14, ಯಮಗಂಡ ಕಾಲ 09:10 – 10:47, ಗುಳಿಕ ಕಾಲ 12:24 – 14:01
ಮೇಷ ರಾಶಿ :
ಹಣಕಾಸಿನ ಅಡಚಣೆಗಳಿಂದ ಹೊರಬರಲು ಸಾಧ್ಯವಿದೆ. ವ್ಯಾಪಾರಿಗಳಿಗೆ ಇದು ಶುಭಕರವಾದ ಸಮಯವಾಗಿದ್ದು, ಹೊಸ ಒಪ್ಪಂದಗಳು ಲಾಭ ತರಬಹುದು. ನಕಾರಾತ್ಮಕ ಸುದ್ದಿಗಳು ಬರುವ ಬಗ್ಗೆ ಗಮನ ಹೆಚ್ಚು. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ.
ವೃಷಭ ರಾಶಿ :
ವೈಯಕ್ತಿಕ ಜೀವನದಲ್ಲಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಅನಿರೀಕ್ಷಿತ ಸವಾಲುಗಳು ಎದುರಾಗಲಿವೆ. ದಿನದ ಪ್ರಾರಂಭದಲ್ಲಿ ಸಂಕಷ್ಟಗಳು ಹೆಚ್ಚಿದ್ದರೂ ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿ ತಾತ್ಕಾಲಿಕ ಏರಿಳಿತಗಳು ಕಂಡುಬಂದರೂ, ದೈರ್ಯದಿಂದ ಮುಂದುವರಿಯುವುದು ಮುಖ್ಯ. ಇಂದು ಆಸ್ತಿಯ ವಿವಾದವು ಬಗೆಹರಿಯಲಿದೆ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ.
ಮಿಥುನ ರಾಶಿ :
ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಲಸದ ಒತ್ತಡ ಹೆಚ್ಚಿದರೂ, ಎಲ್ಲ ಕೆಲಸಗಳು ಅಡೆತಡೆಯಿಲ್ಲದೇ ಪೂರ್ಣಗೊಳ್ಳುತ್ತವೆ. ಶೀತಬಾಧೆಯಿಂದ ಕೂಡಲೇ ಆರಾಮ ಸಿಗದು. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳ ಕುರಿತು ವಿಷಯಗಳು ಕೇಳಿಬರಬಹುದು. ನಿಮ್ಮವರಿಂದ ನಿಮಗೆ ಕಷ್ಟಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ. ಆಸ್ತಿ ಖರೀದಿಯ ಬಗ್ಗೆ ಚಿಂತನೆ ಇರುವುದು.
ಕರ್ಕಾಟಕ ರಾಶಿ :
ಆದಾಯದಲ್ಲಿ ಏರಿಳಿತ ಕಾಣಬಹುದು ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶುಭವಾರ್ತೆ ಕೇಳುವ ಸಾಧ್ಯತೆ ಇದೆ. ಅದು ನಿಮ್ಮ ಮನಸ್ಸಿಗೆ ಖುಷಿ ನೀಡಲಿದೆ. ಹೊಸತನಕ್ಕೆ ತಹತಹಿಸುವಿರಿ. ಉದ್ಯೋಗದಲ್ಲಿ ಬದಲಿ ಅಥವಾ ಸ್ಥಾನೋನ್ನತಿಗೆ ಸಂಭಾವ್ಯತೆ ಇರುವುದು. ವೈವಾಹಿಕ ಜೀವನದಲ್ಲಿ ಪ್ರೀತಿಯ ಬಾಂಧವ್ಯ ಹೆಚ್ಚಾಗುತ್ತದೆ. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.
ಸಿಂಹ ರಾಶಿ :
ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ನಿರ್ಧರಿಸಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಹಿಳೆಯರು ತಮ್ಮನ್ನು ಅತಿಮಾನುಷ ರೀತಿಯಲ್ಲಿ ಅಂದುಕೊಳ್ಳಬಹುದು. ಬೇರೆಯವರು ನೀಡುವ ಒತ್ತಡದಿಂದ ದೂರವಿರಿ. ಉದ್ಯೋಗವನ್ನು ಬಿಡುವುದಾಗಿ ಬೆದರಿಸಿಯಾರು. ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ನಿಮ್ಮ ಬುದ್ಧಿಯನ್ನು ಪ್ರದರ್ಶಿಸಬೇಡಿ.
ಕನ್ಯಾ ರಾಶಿ :
ನಿಮ್ಮ ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ವಿದೇಶದ ವ್ಯಕ್ತಿಗಳ ಸ್ನೇಹವಾಗಲಿದೆ. ಹಣಕಾಸಿನ ಲಾಭದ ಸೂಚನೆ ಇದೆ, ಆದರೆ ಖರ್ಚುಗಳ ಮೇಲೂ ನಿಯಂತ್ರಣ ಅಗತ್ಯ. ಉದ್ಯೋಗದಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಬೇಸರದ ನಿವಾರಣೆಗೆ ಒಳ್ಳೆಯ ಕೆಲಸದ ಕಡೆಗೆ ಗಮನಹರಿಸುವಿರಿ. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ.
ತುಲಾ ರಾಶಿ :
ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಯೋಜನೆಗಳು ಯಶಸ್ವಿಯಾಗಿ ಮುಂದುವರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು. ಆದರೆ ನೀವು ಅದರಲ್ಲಿಂದ ಹೊರಬಂದು ಗೆಲುವು ಸಾಧಿಸುವಿರಿ. ಯಾವುದೇ ಕಾರಣಕ್ಕೂ ವಿಷಾದಕ್ಕೆ ಆಸ್ಪದ ಬೇಡ. ಸಕಾರಾತ್ಮಕ ಆಲೋಚನೆ ಇರಲಿ. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಇದು ಜಾಣತನವೂ ಹೌದು.
ವೃಶ್ಚಿಕ ರಾಶಿ :
ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಸಹಾಯದಿಂದ ಸದುಪಯೋಗ ಪಡೆದು ನಿಮ್ಮನ್ನು ಬಿಟ್ಟುಹೋಗಿದವರು ಕಳಪೆ ನಡೆ ತೋರುತ್ತಾರೆ. ಕಾರ್ಯಕ್ಷೇತ್ರದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ.
ಧನು ರಾಶಿ :
ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಆರ್ಥಿಕವಾಗಿ ಲಾಭದ ಸಾಧ್ಯತೆ ಇದೆ, ಆದರೆ ಸಂಯಮ ಅಗತ್ಯ. ಅಲಕ್ಷ್ಯದಿಂದ ನಿಗದಿತ ಕಾರ್ಯಗಳಲ್ಲಿ ವಿಳಂಬ ಸಂಭವಿಸಬಹುದು. ಭಯ ಅಥವಾ ಆತಂಕ ಕಡಿಮೆಯಾಗುತ್ತದೆ, ಶಾಂತಿಗೆ ದಾರಿ ತೆರೆಯುತ್ತದೆ. ವಾಹನ ಚಾಲನೆಗೆ ಹೆಚ್ಚಿನ ಎಚ್ಚರತೆ ಅಗತ್ಯ. ವಿದೇಶಕ್ಕೆ ಬೇಕಾದ ತಯಾರಿಗಳನ್ನು ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ.
ಮಕರ ರಾಶಿ :
ಸಾರ್ವತ್ರಿಕವಾಗಿ ನಿಮ್ಮ ಸಂಗಾತಿಯ ಪ್ರೀತಿಯನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಾಮಾಜಿಕ ಜೀವನ ಚಟುವಟಿಕೆಯಿಂದ ತುಂಬಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡುತ್ತದೆ ಮತ್ತು ಹೊಸ ಸಂಪರ್ಕಗಳು ಉದಯಿಸುತ್ತವೆ. ಕೆಲಸದಲ್ಲಿ ಗಮನ ಕಡಿಮೆಯಾಗಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.
ಕುಂಭ ರಾಶಿ :
ಕಾನೂನಿನಲ್ಲಿ ನಿಮಗೆಬಜಯ ಸಿಗದೆಂಬ ಬೇಸರ. ತಂದೆಗೆ ಸಮಾನವಾದವರ ಬಳಿ ಹಿತೋಪದೇಶವನ್ನು ಆಲಿಸಿ. ಸೌಮ್ಯವಾಗಿ ಕಾರ್ಯನಿರ್ವಹಿಸಬೇಕು. ಹಳೆಯ ವಿಚಾರಗಳು ಭುಗಿಲೇಳುವ ಸಾಧ್ಯತೆ ಇದೆ. ಭಾವನೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ಅಗತ್ಯ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.
ಇದನ್ನೂ ಓದಿ: ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್?
ಮೀನ ರಾಶಿ :
ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಅಪ್ರಬುದ್ಧರ ಎದುರು ನಿಮ್ಮ ಮನೆಯ ವ್ಯವಹಾರಗಳನ್ನು ಹೇಳಬೇಡಿ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ಆದರೆ ಸಹನೆ ಮತ್ತು ಅಂತರಾಳದ ನಿರ್ವಹಣೆ ಅಗತ್ಯ. ಕುಟುಂಬದೊಂದಿಗೆ ಕಳೆಯುವ ಸಮಯದಿಂದ ಮಾನಸಿಕ ಶಾಂತಿ ಲಭಿಸುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಮುಗಿಸಿಬಿಡಿ, ಕಾಯುವುದು ಬೇಡ.
– ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




