Horoscope Today: ದಿನ ಭವಿಷ್ಯ -ಈ ರಾಶಿಯವರಿಗೆ ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಸಂಭವ

| Updated By: ಸಾಧು ಶ್ರೀನಾಥ್​

Updated on: Oct 30, 2021 | 7:37 AM

Horoscope ಅಕ್ಟೋಬರ್ 30, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today: ದಿನ ಭವಿಷ್ಯ -ಈ ರಾಶಿಯವರಿಗೆ ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಸಂಭವ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಕೃಷ್ಣಪಕ್ಷ, ನವಮಿ ತಿಥಿ, ಶನಿವಾರ, ಅಕ್ಟೋಬರ್ 30, 2021. ಆಶ್ಲೇಷ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9.06 ರಿಂದ ಇಂದು ಬೆಳಿಗ್ಗೆ 10.32 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.13. ಸೂರ್ಯಾಸ್ತ: ಸಂಜೆ 5.45

ತಾ.30-10-2021 ರ ಶನಿವಾರದ ರಾಶಿಭವಿಷ್ಯ.
ಮೇಷ: ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ. ಶುಭ ಸಂಖ್ಯೆ: 6

ವೃಷಭ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 1

ಮಿಥುನ: ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು. ಶುಭ ಸಂಖ್ಯೆ: 9

ಕಟಕ: ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವದು. ಹಳೆಯ ಮಿತ್ರರ ಒಡನಾಟ ಸಂತಸ ತರುವುದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಶುಭ ಸಂಖ್ಯೆ: 2

ಸಿಂಹ: ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು. ಶುಭ ಸಂಖ್ಯೆ: 4

ಕನ್ಯಾ: ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವುದು. ಆರ್ಥಿಕ ಅಭಿವೃದ್ಧಿ ಕಂಡುಬರುವುದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವುದು. ಶತೃಗಳೂ ಸೌಮ್ಯರಾಗುವ ಕಾಲ ಇರುವುದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ. ಶುಭ ಸಂಖ್ಯೆ: 8

ತುಲಾ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ: 7

ವೃಶ್ಚಿಕ: ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 3

ಧನು: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 5

ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡಯುವುದು ಉತ್ತಮ. ಶುಭ ಸಂಖ್ಯೆ: 1

ಕುಂಭ: ಯಶಸ್ಸು. ಶ್ರಮಕ್ಕೆ ತಕ್ಕ ಲಾಭ, ಕೀರ್ತಿ, ಕೃಷಿಯಲ್ಲಿ ಉತ್ತಮ ಸಾಧನೆ, ಮನೆಯಲ್ಲಿ ಮಂಗಲಕಾರ್ಯ, ಬುಧ, ಮಂಗಳ ಯೋಗ ಶುಭದಾಯಕ ಆದರೂ ಕಿರಿಕಿರಿ ಸಂಭವ. ಪರಿಹಾರಕ್ಕಾಗಿ ಅನ್ನದಾನ ಮಾಡಿರಿ. ಶುಭ ಸಂಖ್ಯೆ: 6

ಮೀನ: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವುದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವುದು. ತರಕಾರಿ ದಾನ ಮಾಡಿರಿ. ಶುಭ ಸಂಖ್ಯೆ: 9

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

Published On - 6:44 am, Sat, 30 October 21