Nitya Bhavishya- ದಿನ ಭವಿಷ್ಯ:
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 30ರ ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ, ಹೇಮಂತ ಋತು, ಪುಷ್ಯ ಮಾಸ, ಪಾಡ್ಯ, ಪೂರ್ವಾಷಾಢ ನಕ್ಷತ್ರ, ಶುಕ್ರವಾರ, ಡಿಸೆಂಬರ್ 30, 2022. ಉತ್ತರಾಭಾದ್ರ ನಕ್ಷತ್ರ, ರಾಹುಕಾಲ: ಇಂದು ಬೆಳಗ್ಗೆ 11 ಗಂ॥ 11 ನಿ।। ರಿಂದ ಮಧ್ಯಾಹ್ನ 12 ಗಂ॥ 35 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 55 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 09 ನಿಮಿಷಕ್ಕೆ.
ತಾ. 25-12-2022 ರ ಶುಕ್ರವಾರದ ರಾಶಿ ಭವಿಷ್ಯ ಹೀಗಿದೆ:
- ಮೇಷ ರಾಶಿ:
ಉದ್ಯೋಗದ ಸ್ಥಳದಲ್ಲಿ ನಿಮಗೆ ನಿರಾಸೆಯ ಅನುಭವವಾಗಬಹುದು. ಸಹೋದ್ಯೋಗಿಗಳು, ಮೇಲಧಿಕಾರಿಗಳು ನಿಮ್ಮನ್ನೇ ಗುರಿಯಾಗಿಸಿಕೊಂಡು ಕೆಲಸವನ್ನು ಮಾಡಿಸುವುದು, ಮಾತುಗಳನ್ನಾಡುವುದನ್ನು ಮಾಡಬಹುದು. ಆಪ್ತರ ಭೇಟಿ ಹಾಗೂ ಮಾರ್ಗದರ್ಶನದ ಸುತ್ತಾಟದಲ್ಲಿ ಇಂದು ಮುಕ್ತಾಯಗೊಳ್ಳಲಿದೆ. ಪ್ರಶಂಸೆಗಳು ನಿಮ್ಮನ್ನು ಅರಸಿ ಬರಲಿವೆ. ಆರೋಗ್ಯದ ಬಗ್ಗೆ ನಿಗವಿರಲಿ.
- ವೃಷಭ ರಾಶಿ:
ಪಿತ್ರಾರ್ಜಿತ ಆಸ್ತಿಯ ಕುರಿತು ವಾದ ವಿವಾದಗಳನ್ನು ನಡೆಸುವಿರಿ. ಉತ್ತಮ ಸ್ನೇಹಿತರ ಬಳಗವನ್ನು ಹೊಂದಿರುವ ನೀವು ದಿನದ ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆಯುವಿರಿ. ಸಮಾರಂಭದಲ್ಲಿ ಬಹಳ ಆನಂದದಿಂದ ಪಾಲ್ಗೊಳ್ಳುವಿರಿ. ನಿಮಗೆ ವೃತ್ತಿಸಂಬಂಧ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಚಾಣಾಕ್ಷ ಬುದ್ಧಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಬಾಕಿ ಉಳಿಸಿಕೊಂಡ ಕೆಲಸವನ್ನು ಶೀಘ್ರವಾಗಿ ಮುಗಿಸುವಿರಿ. ನಿಮಗೆ ಸಹಕರಿಸಿ ಜನರೂ ಸಹಕರಿಸುವರು.
- ಮಿಥುನ ರಾಶಿ:
ಹೂಡಿಕೆಯನ್ನು ಮಾಡಲು ಬಯಸಿದ್ದರೆ ಇಂದು ಮಾಡಬಹುದು. ಹಾಸ್ಯದೊಂದಿಗೆ ಇಂದಿನ ದಿನವನ್ನು ಕಳೆಯಲು ಇಚ್ಛಿಸುವಿರಿ. ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ಸಂಗಾತಿಗೆ ಇಷ್ಟವಾಗುವ ಕೆಲಸವನ್ನು ಮಾಡಿ, ಆಕೆಯ ಸಿಹಿಯಪ್ಪುಗೆಯ ಅನುಭವವನ್ನು ಪಡಯುವಿರಿ. ಅನಾರೋಗ್ಯವು ಹೆಚ್ಚಾಗಬಹುದು, ಕಾಳಜಿಯನ್ನು ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಪ್ರಯತ್ನಿಸಿ.
- ಕಟಕ ರಾಶಿ:
ನಿಮ್ಮ ಸುತ್ತಲೂ ವಿರೋಧಿಗಳ ಹಿಂಡು ಹೊಂಚು ಹಾಕಿ ನಿಮ್ಮ ಅವನತಿಯನ್ನುವ ಕಾಯುತ್ತಿರಬಹುದು. ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ಇನ್ನೊಬ್ಬರಿಗೆ ಕೊಟ್ಟರೆ ಅದರಿಂದ ಅವರು ಲಾಭವನ್ನು ಪಡೆಯುವರು. ವಿದ್ಯಾರ್ಥಿಗಳು ಶ್ರಮವಹಿಸಿ ಓದಬೇಕಾಗಿದೆ. ಮಾತುಗಳನ್ನು ಎಚ್ಚರದಿಂದ ಆಡಿ. ಮಾತು ಕಂಟಕಗಳನ್ನು ತಂದೀತು. ಸಂಗಾತಿಯು ನಿಮ್ಮಿಂದ ಹೆಚ್ಚು ಸಮಯವನ್ನು ತನಗಾಗಿ ಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ.
- ಸಿಂಹ ರಾಶಿ:
ನಿರುಪಯುಕ್ತ ವಿಷಯಗಳ ಕುರಿತು ಹೆಚ್ಚು ಚರ್ಚೆ ಮತ್ತು ಉಪಚರ್ಚೆಗಳನ್ನು ಮಾಡುತ್ತಿರುವಿರಿ. ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ಸಂಗಾತಿಯ ಅನಾರೋಗ್ಯದಿಂದ ತೀವ್ರ ಕಳವಳಗೊಳ್ಳುವಿರಿ. ಸತ್ಯವನ್ನು ಅರ್ಥಮಾಡಿಕೊಳ್ಳಲು ಮನಸ್ಸು ನಿಮ್ಮದಾಗಿರುವುದಿಲ್ಲ. ಯಾರನ್ನೂ ಅವಮಾನಿಸಲು ಹೋಗಬೇಡಿ. ಧರ್ಮಕರ್ಮಗಳಲ್ಲಿ ಭಾಗವಹಿಸಿ. ಮಾನಸಿಕ ನೆಮ್ಮದಿಯು ನಿಮ್ಮದಾದೀತು.
- ಕನ್ಯಾ ರಾಶಿ:
ಮನೆಯಲ್ಲಿ ಹಿರಿಯ ಮಾತನ್ನು ಗೌರವಿಸಿ ಮುನ್ನಡೆಯುವಿರಿ. ಸಂಗಾತಿಯ ಮುದ್ದು ಪ್ರೀತಿಯು ಅರ್ಥವಾಗುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣುವುದು. ಮಕ್ಕಳೇ ಶತ್ರುಗಳಂತೆ ವರ್ತಿಸಿಯಾರು. ತಲೆನೋವು ಕಾಣಿಸಿಕೊಳ್ಳಬಹುದು. ಧರ್ಮಕಾರ್ಯಗಳಲ್ಲಿ ಅನಾಸಕ್ತಿಯೆದ್ದು ತೋರುವುದು.
ನೀವಾಡುವ ಮಾತುಗಳನ್ನು ನಿಮ್ಮ ಸಹಾಯಕ್ಕೆ ಇದ್ದವರು ಕೇಳಬಹುದು. ಶುದ್ಧಾಂತಃಕರಣದಿಂದ ಇರುವಿರಿ.
- ತುಲಾ ರಾಶಿ:
ನಿಮ್ಮ ಸಾಮರ್ಥ್ಯದ ಪ್ರಕಾಶಕ್ಕೆ ಸ್ವಲ್ಪ ಸಮಯ ಬೇಕಾದೀತು. ಪ್ರೀತಿ-ಪ್ರೇಮದ ಬಗ್ಗೆ ಎಚ್ಚರವಿರಲಿ. ಇಂದು ಹುಟ್ಟಿದ ನೈಜಪ್ರೇಮವೇ ಆಗಿರಬೇಕಿಂದಲ್ಲ. ಕಾಲಿನ ನೋವುಗಳು ಕಾಣಿಸಿಕೊಳ್ಳಬಹುದು. ಔಷಧೋಪಚಾರಗಳಿಂದ ಸರಿ ಮಾಡಿಕೊಳ್ಳಿ. ಅಪರೂಪದವರು ಬಂಧುಗಳಾಗುವರು. ಸಂತಾನವು ವಿಳಂಬವಾದೀತು. ಸಂತಾನನಾಶದ ದುಃಖವು ಬರಬಹುದು. ಸಂಗಾತಿಯ ಮೇಲೆ ಅನುಮಾನಪಡುವಿರಿ. ಕುಟುಂಬದವರ ಮಾತುಗಳು ನಿಮ್ಮನ್ನು ಹತಾಶಗೊಳಿಸಬಹುದು. ಮಾನಸಿಕ ಕಿರಿಕಿರಿಯುಂಟಾಗಬಹುದು. ತಂದೆಯ ಪ್ರಾಬಲ್ಯವನ್ನು ಕಂಡು ಅಚ್ಚರಿಪಡುವಿರಿ, ಸಂಪತ್ತೂ ಸಿಗುವ ಸಾಧ್ಯತೆ. ಮಾತನಾಡದೇ ಸುಮ್ಮನಿರುವುದು ಒಳ್ಳೆಯದು.
- ವೃಶ್ಚಿಕ ರಾಶಿ:
ಮಕ್ಕಳಿಂದ ಸಂತೋಷವನ್ನು ಅನುಭವಿಸುವಿರಿ. ಪಿತ್ರಾರ್ಜಿತ ಸಂಪತ್ತು ಸಿಗಲಿದೆ. ನಿಮ್ಮ ಪ್ರಾಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಬಂಧುಗ ಆಗಮನವು ಖುಷಿಯನ್ನು ಕೊಡಲಿದೆ. ನಿಮ್ಮ ಪ್ರತಿಭೆಯ ಅನಾವರಣವಿಂದು. ಹಳೆಯ ನೋವುಗಳು ಇಂದು ಹೆಚ್ವಾಗಬಹುದು. ಸಂಗಾತಿಯೊಂದಿಗೆ ಮನಿಸು ಕಾಣಿಸಿಕೊಳ್ಳುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸು ಇಚ್ಛಿಸುವುದು. ಸಹೋದರನಿಂದ ಸಹಾಯ ಸಿಗಲಿದೆ. ವ್ಯಯಿಸುವ ಸಂಪತ್ತಿಗೆ ಕಡಿವಾಣ ಹಾಕಿಕೊಳ್ಳಿ.
- ಧನು ರಾಶಿ:
ನೀವು ನಿಮ್ಮನ್ನೇ ಅವಲೋಕನ ಮಾಡಿಕೊಳ್ಳಿ. ಮಾತಿನಿಂದ ಹಾಗೂ ಸೇವಕರಿಂದ ಸಹಾಯ ಸಿಗಲಿದೆ. ಕುಟುಂಬದಲ್ಲಿ ಸ್ವಸ್ಥವಾತಾವರಣ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಆರೋಗ್ಯವು ಹದಗೆಡಲಿದೆ. ಹೆಂಡತಿಯ ಕಡೆಯಿಂದ ಸಂಪತ್ತು ಸಿಗಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡೀತು. ಪೂರ್ವಜರ ಪುಣ್ಯ ನಿಮ್ಮನ್ನು ಆಪತ್ತಿಂದ ಕಾಪಾಡಲಿದೆ. ಶಿಕ್ಷಕವೃತ್ತಿಯಲ್ಲಿ ಮಾನಸಿಕ ನೆಮ್ಮದಿ ಇಲ್ಲ. ಧನಾಗಮನವಾಗುವ ಸಾಧ್ಯತೆ ಇದೆ. ಅನಾರೋಗ್ಯದ ಕಾರಣಕ್ಕೆ ಹಣವನ್ನು ವ್ಯಯಿಸುವಿರಿ.
- ಮಕರ ರಾಶಿ:
ಆಲಸ್ಯವೇ ರೂಪವೆತ್ತಂತೆ ಇರುವಿರಿ. ಅನ್ಯರಿಂದ ಸಂಪತ್ತು ದೊರೆಯಲಿದೆ. ನಿಮ್ಮ ಪ್ರಭಾವವು ಜನರಿಗೆ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗಲಾರದು. ನಿಮ್ಮ ಪ್ರತಿಭೆಯನ್ನು ಗುರುತಿಸುವುದೂ ಕಷ್ಟವೇ. ಅನಾರೋಗ್ಯದಿಂದ ಬಳಲುವಿರಿ. ಸಾತ್ತ್ವಿಕ ಪರಾಕ್ರಮಕ್ಕೆ ಜನಬೆಂಬಲ ಸಿಗಲಿದೆ. ಆನಾರೋಗ್ಯದ ಕಾರಣದಿಂದ ಸಂಪತ್ತು ನಷ್ಟವಾಗುವುದು. ಪೂರ್ವಪುಣ್ಯ ನಿಮ್ಮನ್ನು ರಕ್ಷಿಸುತ್ತದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಪುತ್ರನಿಂದ ಧನಸಹಾಯ ಸಿಗಲಿದೆ. ಧರ್ಮಕಾರ್ಯಕ್ಕೆ ಧನವ್ಯಯವಾಗಲಿದೆ.
- ಕುಂಭ ರಾಶಿ:
ಶರೀರದ ಉತ್ಸಾಹಭಂಗಗೊಳ್ಳುವ ಸಾಧ್ಯತೆಯಿದೆ. ಪಿತ್ರಾರ್ಜಿತ ಸಂಪತ್ತಿನಿಂದ ಸುಖಿಸುವಿರಿ. ಸಹೋದರರೊಂದಿಗೆ ಕಲಹವೇರ್ಪಡಬಹುದು. ಬಂಧುಗಳಿಂದ ಸಹಾಯ ದೊರೆಯಬಹುದು. ಕಲಾವಿದರಿಗೆ ಸಮಾರಂಭದಲ್ಲಿ ಭಾಗವಹಿಸುವ ಯೋಗ, ಧನಾಗಮನದ ಸಾಧ್ಯತೆ. ತಾಯಿಗೆ ಅನಾರೋಗ್ಯವುಂಟಾಗಬಹುದು. ತಂದೆಯಿಂದ ಧನಸಹಾಯ ಲಭ್ಯವಿದೆ. ಸೊಂಟದ ನೋವು ಕಾಣಿಸಿಕೊಳ್ಳಬಹುದು. ಅನಾರೋಗ್ಯದಿಂದ ಧನಹಾನಿ. ಕೆಟ್ಟ ಕೆಲಸಕ್ಕೆ ಧನವ್ಯಯವಗುವುದು.
ತಂತ್ರಜ್ಞರಿಗೆ ಅನುಕೂಲ. ವೈರಾಗ್ಯಭಾವವನ್ನು ಉಂಟಾಗಲಿದೆ.
- ಮೀನ ರಾಶಿ:
ದೇಹ ಹಾಗು ಮನಸ್ಸಿನ ಆರೋಗ್ಯ ದೃಢವಾಗಿರಲಿದೆ. ಪಿತ್ರಾರ್ಜಿತ ಸಂಪತ್ತಿನ ಸ್ವೀಕಾರಕ್ಕೆ ಹೋಗಬೇಡಿ. ನಿಮ್ಮ ಪ್ರಭಾವ ನಿಮ್ಮವರಿಗೆ ತಿಳಿಯಲಿದೆ. ಕುಟುಂಬದ ಸಹಕಾರವನ್ನು ಪಡೆಯುವಿರಿ. ಮಕ್ಕಳಿಂದ ಸುಖ ನಿಮಗಿದೆ. ಸರ್ಕಾರಿ ಕಾರ್ಯದಲ್ಲಿ ತಡೆಯಾಗಬಹುದು. ಸಂಗಾತಿಯ ಸಂಪತ್ತಿಂದ ಖುಷಿಪಡುವಿರಿ. ಪ್ರೇಮವ್ಯವಹಾರಕ್ಕೆ ಸಂಬಂಧಿಸಿದಂತೆ ಅಲ್ಪ ಲಾಭವಾಗುವುದು. ಬಲವನ್ನು ಪ್ರದರ್ಶಿಸಲು ಉತ್ತಮದಿನ. ಶಿಕ್ಷವೃತ್ತಿಯವರಿಗೆ ಯಶಸ್ಸು ಸಿಗುವ ದಿನ. ಸಂಪತ್ತು ಭಂಡಾರ ಏರುತ್ತಿರುವುದು. ಕಲೆ, ಮನೋರಂಜನೆಗೆ ಹಣವನ್ನು ವ್ಯಯಿಸುವಿರಿ. ಲೋಹಿತ ಶರ್ಮಾ, ಇಡುವಾಣಿ