Weekly Horoscope – ವಾರ ಭವಿಷ್ಯ: ಇಂದಿನಿಂದ ಜುಲೈ 17ರವರೆಗೆ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಜುಲೈ ಎರಡನೇ ವಾರದ ರಾಶಿ ಭವಿಷ್ಯ: ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ.

Weekly Horoscope - ವಾರ ಭವಿಷ್ಯ: ಇಂದಿನಿಂದ ಜುಲೈ 17ರವರೆಗೆ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ
ರಾಶಿ ಭವಿಷ್ಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 11, 2022 | 8:08 AM

Weekly Horoscope – ವಾರ ಭವಿಷ್ಯ | ಜುಲೈ ಎರಡನೇ ವಾರದ ರಾಶಿ ಭವಿಷ್ಯ: ಜುಲೈ 11ರಿಂದ ಜುಲೈ 17ರವರೆಗೆ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ನಿಮ್ಮ ಭವಿಷ್ಯದಲ್ಲಿನ ಬದಲಾವಣೆ, ಸಂಭವಿಸುವ ವಿಷಯಗಳು, ಶುಭ-ಅಶುಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾರಭವಿಷ್ಯ: ತಾ.11-07-2022 ರಿಂದ ತಾ.17-07-2022 ರವರೆಗೆ

  1. ಮೇಷ: ಮಾತು ಸರಳ ಮತ್ತು ಸುಂದರವಾಗಿರಬೇಕು. ಆಗ ಎಲ್ಲರ ಮೆಚ್ಚುಗೆ ಪಡೆಯಲು ಸಾಧ್ಯ. ಕಟು ಮಾತುಗಳು, ಇಲ್ಲ ಸಲ್ಲದ ಮಾತುಗಳು ಬೇರೆಯವರಿಗೆ ಕಿರಿಕಿರಿ ಮೂಡಿಸಬಾರದು. ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ನಿಮಗೇ ಒಳಿತು. ಹೆಚ್ಚಿನ ಕೆಲಸದೊತ್ತಡ ಈ ವಾರ ಇರಲಿದೆ.ಅನೇಕ ಅವಕಾಶಗಳು ಒದಗಿ ಬರಲಿವೆ. ಬಿಡುವಿನಲ್ಲಿ ಹಾಳು ಹರಟೆ ಹೊಡೆಯದೆ, ಸೂಕ್ತ ಕೆಲಸಗಳನ್ನು, ಕೈ ಕೆಲಸಗಳನ್ನು, ಅಥವಾ ಯಾವುದೇ ಉತ್ತಮ ಕಾರ್ಯಗಳನ್ನು ಮಾಡಿ. ನನ್ನಿಂದಾಗದು ಎಂಬ ಮನೋಭಾವ ಬಿಟ್ಟು ಶ್ರಮವಹಿಸಿ. ಮುಂದೆ ಸಾಗಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ಕೆಲಸಕ್ಕೆ ಕೈ ಹಾಕುತ್ತಿರುವ ಮಹಿಳೆಯರಿಗೆ ಶುಭವಾಗಲಿದೆ. ಪಾಲುದಾರರಿಂದ ಶುಭವಾಗಲಿದೆ. ಅದೃಷ್ಟ ಬಣ್ಣ: ಕೇಸರಿ, ಶುಭ ಸಂಖ್ಯೆ: 2
  2. ವೃಷಭ: ಕನಸುಗಳನ್ನು ಕೂಡಿಟ್ಟುಕೊಳ್ಳುತ್ತಿದ್ದರೆ, ಬೆಟ್ಟದಷ್ಟು ಬೆಳೆದು ನಿಲ್ಲುತ್ತವೆ. ಆದರೆ ಒಂದೊಂದೇ ಕನಸನ್ನು ಆಗಾಗ್ಗೆ ಸಾಕಾರಗೊಳ್ಳುವ ಕಡೆ ಹೆಜ್ಜೆ ಹಾಕಿದರೆ ಬದುಕು ಸುಂದರ. ಸಾವಿರ ಮೆಟ್ಟಿಲು ಹತ್ತ ಬೇಕೆಂದರೆ ಮೊದಲು ನಿಧಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತಲು ಆರಂಭಿಸಬೇಕು. ಆಗ ಗುರಿ ತಲುಪಲು ಸಾಧ್ಯ.ಗುಟ್ಟಿನಿಂದ ಜೀವನ ಸುಖಮಯವಾಗುವುದು. ಯಾವುದೇ ಒತ್ತಡಕ್ಕೆ ಮಣಿದು ನಿಮ್ಮನ್ನು ನೀವು ನಾಶ ಮಾಡಿಕೊಳ್ಳಬೇಡಿ. ಮನಸ್ಸಿಟ್ಟು, ಮನಸಾರೆ.ಮುಂದೆ ಸಾಗಿದರೆ ನಿಮಗೇ ಒಳಿತು. ಯಾವುದೇ ಕಾರಣಕ್ಕೂ ಮೂರನೆಯವರ ಮಾತಿಕೆ ಕಿವಿಗೊಡದಿರಿ.ಆಮೀಷಕ್ಕೆ ಒಳಗಾಗಬೇಡಿ. ಹಣಕಾಸಿನ ವಿಚಾರದಲ್ಲಿಎಚ್ಚರಿಕೆಯಿಂದಿರಿ. ಒಳ್ಳೆಯ ನಿರ್ಧಾರ ನಿಮ್ಮದಾಗಲಿ. ಅದೃಷ್ಟ ಬಣ್ಣ: ಗುಲಾಬಿ,ಶುಭ ಸಂಖ್ಯೆ: 6
  3. ಮಿಥುನ: ಮಾಡುವ ಕೆಲಸದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರಲಿ. ಧೈರ್ಯದಿಂದ ಮುನ್ನಡೆಯಿರಿ. ಎಲ್ಲಾ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಾವುದೂ ಕಷ್ಟ ಎನ್ನುವುದಿರುವುದಿಲ್ಲ. ಹೊಸ ಕೆಲಸಕ್ಕೆ ಕುಟುಂಬದವರ ಬೆಂಬಲ, ಮಾರ್ಗದರ್ಶನ ಸಿಗಲಿದೆ.ತವರು ಬಿಟ್ಟು ಬರುವಾಗ ಎಲ್ಲಾ ಹೆಣ್ಣುಮಕ್ಕಳಿಗೂ ಮನಸ್ಸು ಭಾರವಾಗುವುದು. ಸಹಜ. ಆದರೆ ಜೀವನ ಮುಂದೆ ಸಾಗಬೇಕಾದರೆ ಬದಲಾವಣೆ ಅಗತ್ಯ. ದೂರದ ಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರಾಗುವುದರಿಂದ ಎಚ್ಚರಿಕೆ ಯಿಂದಿರಿ. ಮಕ್ಕಳ ಆಹಾರದ ಬಗ್ಗೆಯೂ ಎಚ್ಚರಿಕೆ ಇರಲಿ. ಅದೃಷ್ಟ ಬಣ್ಣ: ಹಸಿರು, ಶುಭ ಸಂಖ್ಯೆ: 3
  4. ಕಟಕ: ತಪ್ಪು ಮಾಡುವುದು ಸಹಜ, ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕೆ ಹೊರತು ತಪ್ಪನ್ನೇ ಸರಿ ಎಂದು ವಾದಿಸುವುದು ತರವಲ್ಲ. ನೊಂದ ಜೀವಗಳಿಗೆ ನಿಮ್ಮ ಸಾಂತ್ವಾನ, ಧೈರ್ಯದ ಮಾತುಗಳು, ಪ್ರೋತ್ಸಾಹಿಸುವ ಮಾತುಗಳಿಂದ ಇನ್ನೊಬ್ಬರಿಗೆ ಹತ್ತಿರವಾಗಲಿದ್ದೀರಿ. ಸಿಹಿ ಸುದ್ದಿ ಕೇಳುವಿರಿ. ಹಿತಶತೃಗಳು ಕಾಡಲಿದ್ದಾರೆ.  ನಿಮ್ಮನ್ನು ತುಳಿಯುವವರ ಬಗ್ಗೆ ಹೆಚ್ಚು ಚಿಂತೆ ಬೇಡ. ಏಕೆಂದರೆ ಅವರ ಬುದ್ದಿ ಮಟ್ಟವೂ ಕಾಲಿನ ಧೂಳಿಗೆ ಸಮನಾಗಿರುತ್ತದೆ. ಪ್ರಗತಿಯತ್ತ ಮನಸ್ಸು ಆಲೋಚಿಸಲಿ. ಆತ್ಮೀಯರೊಂದಿಗೆ ವ್ಯವಹಾರಕ್ಕೆ ಮುಂದಾಗುವಲ್ಲಿ ಅಗತ್ಯವಾಗಿ ಮುನ್ನೆಚ್ಚರಿಕೆ ಮಾಡಿಕೊಳ್ಳುವುದು ಸೂಕ್ತ. ಹೊಸ ಕೆಲಸಕ್ಕೆ ಒಳ್ಳೆಯ ಸಮಯ. ಅದೃಷ್ಟ ಬಣ್ಣ: ಬಿಳಿಪು, ಶುಭ ಸಂಖ್ಯೆ: 9
  5. ಸಿಂಹ: ಅವಸರದಲ್ಲಿ ತಂದುಕೊಂಡ ನಿರ್ಧಾರ ಮುಂದೊಮ್ಮೆ ಅಪಾಯ ತಂದೊಡ್ಡಬಹುದು. ಎಲ್ಲರಿಂದಲೂ ಒಳ್ಳೆಯದನ್ನೇ ಬಯಸದಿರಿ. ಕೆಲವೊಮ್ಮೆ ಒಳ್ಳೆಯದೆನ್ನುವುದೂ ಕೆಟ್ಟದಾಗಿ ಪರಿಣಮಿಸಬಹುದು. ಮನಸ್ಸಿನ ಕಿರಿಕಿರಿಗೆ ಆದಷ್ಟು ಧ್ಯಾನ ಮಾಡಿ ಇಲ್ಲವೆ ದೂರ ಪ್ರಯಾಣ ಮಾಡಿ.ಪುಸ್ತಕ ಓದುವ ಹುಚ್ಚು ಇನ್ನಷ್ಟು ಹೆಚ್ಚಲಿದೆ. ಸ್ನೇಹಿತನನ್ನು ಈ ಮೂಲಕ ಕಾಣಲು ಇಚ್ಛಿಸುವ ನೀವು, ನಿಮ್ಮ ಮನಸ್ಸಿನ ನೋವು, ತಳಮಳ, ಗೊಂದಲಗಳನ್ನು ಕ್ರಮೇಣ ದೂರಾಗಲಿದೆ. ಮಕ್ಕಳವಿಚಾರದಲ್ಲಿ ಕೋಪಗೊಳ್ಳುವುದು ಬೇಡ. ಆದಷ್ಟು ಧ್ಯಾನ ಮಾಡಿ. ಬಂಧುಗಳ ಆಗಮನ ಸಾಧ್ಯತೆ. ಅದೃಷ್ಟ ಬಣ್ಣ: ಕೆಂಪು, ಶುಭ ಸಂಖ್ಯೆ: 1
  6. ಕನ್ಯಾ: ನಿಮ್ಮನ್ನು ನೀವು ಮೊದಲು ನಂಬದಿದ್ದರೆ, ಬೇರೆಯವರು ನಿಮ್ಮನ್ನು ನಂಬಬೇಕೆನ್ನುವುದು ತಪ್ಪಲ್ಲವೆ. ನಂಬಿಕೆ ಎನ್ನುವುದು ಕನ್ನಡಿಯಂತೆ ಜೋಪಾನವಾಗಿ ಕಾಪಾಡಬೇಕು. ನಕಾರಾತ್ಮಕ ಆಲೋಚನೆ ಬೇಡ. ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಹೊಸ ಆಲೋಚನೆಗೆ ಹೊಸ ತಿರುವು ಸಿಗಲಿದೆ. ಅದರಲ್ಲಿ ಸಫಲರಾಗುವಿರಿ.ಅದೃಷ್ಟ ಕೂಡಿಬರುವ ವಾರ. ನಿಮ್ಮ ಯೋಚನೆಗಳು ಬೇರೆಯವರಿಗೆ ಮನದಟ್ಟಾಗಬಹುದು, ಹಾಗಂತ ಅವರಿಂದ ಫಲ ನಿರೀಕ್ಷಿಸುವಂತಿಲ್ಲ. ಕೆಲ ವಿಚಾರಗಳಿಗೆ ನಿಮಗೆ ಈಗ ಪರೀಕ್ಷೆಗಳು ಎದುರಾಗಲಿದ್ದು, ಅದನ್ನುಹೇಗೆ ನಿಭಾಯಿಸುವಿರಿ ಎಂಬುದರ ಮೇಲೆ ರಿಸಲ್ಟ್ಇರುತ್ತೆ. ಮಕ್ಕಳಿಂದ ಪೋಷಕರಿಗೆ ಸಂತಸ ತರಲಿ. ಅದೃಷ್ಟ ಬಣ್ಣ: ಬೂದು, ಶುಭ ಸಂಖ್ಯೆ: 4
  7. ತುಲಾ: ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ದಾರಿದೀಪವಾಗಲಿದೆ. ನಿಮಗೆ ಸಂಬಂಧಿತವಲ್ಲದ ವಿಚಾರಗಳಿಗೆ ತಲೆ ಹಾಕುವುದು ಬೇಡ. ಆದಷ್ಟು ಹೊಸ ಸ್ನೇಹಿತರ ಬಗ್ಗೆ ಎಚ್ಚರ ಇರಲಿ. ಹೊಸದೆಂದು ಎಲ್ಲವನ್ನೂ ಅಪ್ಪಿಕೊಳ್ಳದಿರಿ. ಚೂರಿ ಚುಚ್ಚುವವರು ನಿಮ್ಮ ಬೆನ್ನ ಹಿಂದೇ ಇದ್ದಾರೆ.ನಿಮ್ಮ ಶಕ್ತಿ, ಉತ್ಸಾಹ ಇನ್ನೂ ಹೆಚ್ಚಲಿದೆ. ನಾಯಕನ ಸ್ಥಾನಕ್ಕೇರುವ ಸಾಧ್ಯತೆ. ಹೊಸ ಕೆಲಸಕ್ಕೆ ಇದು ಸಕಾಲವಲ್ಲ. ಅದರಲ್ಲೂ ವ್ಯವಹಾರದ ವಿಚಾರಗಳಿಗೆ ಕೈ ಹಾಕಲೇಬೇಡಿ. ಕಷ್ಟದಿಂದ ಸತತ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಹಣ ಉಳಿತಾಯ. ವಾರಂತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಾಣಲಿದ್ದೀರಿ. ಅದೃಷ್ಟ ಬಣ್ಣ: ಹಳದಿ, ಶುಭ ಸಂಖ್ಯೆ: 8
  8. ವೃಶ್ಚಿಕ: ಇಚ್ಛಾಶಕ್ತಿ ಒಂದಿದ್ದರೆ ಏನನ್ನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಿವಾಗಲಿದ್ದೀರಿ. ಕೆಲವೊಮ್ಮೆ ಯಾವುದು ಸರಿಹೊಂದುತ್ತಿಲ್ಲವೊ ಅದನ್ನು ಸರಿಹೊಂದಿಸಿಕೊಳ್ಳಬೇಕಾಗುತ್ತದೆ. ಇನ್ನೊಬ್ಬರ ಖುಷಿಗೆ ಕೆಲ ಕೆಲಸಗಳನ್ನು ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ.ಪ್ರೇಮ ನಿವೇದನೆಗೆ ಈವಾರ ತಕ್ಕುದಲ್ಲ. ಏಳುಬೀಳುಗಳು ಈ ವಾರ ಹೆಚ್ಚಿದ್ದು, ಶತ್ರಗಳ ಹತ್ತಿರ ಸುಳಿಯಲೇಬೇಡಿ. ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ ಇರಲಿದ್ದು, ನಿಮ್ಮ ನಡುವೇಯೇ ಸ್ನೇಹಿತರಂತಿರುವ ಶತ್ರುಗಳ ಬಗ್ಗೆ ಎಚ್ಚರ ಅಗತ್ಯ. ಹೊಸ ಕೆಲಸಕ್ಕೆ ಉತ್ತಮ ವಾರ. ಅದೃಷ್ಟ ಬಣ್ಣ: ಕಂದು, ಶುಭ ಸಂಖ್ಯೆ: 7
  9. ಧನುಸ್ಸು: ಸಂಗಾತಿಯೊಂದಿಗಿನ ಮನಸ್ಥಾಪ ಕ್ಷಣಿಕವಾದದ್ದು, ಅದನ್ನು ತೀರ ಎಳೆದುಕೊಂಡು ಹೋದರೆ ಮಾಯಬೇಕಾದ ಗಾಯ ದೊಡ್ಡದಾಗುತ್ತಾ ಹೋಗುತ್ತದೆ. ಕೈನಲ್ಲೇ ಇರುವ ಪ್ರೀತಿಯ ಅಸ್ತ್ರವನ್ನು ಉಪಯೋಗಿಸಿ.ಸಿಟ್ಟು, ಬಡಿತದಿಂದ ಎಲ್ಲವೂ ಸರಿಹೋಗುವುದಿಲ್ಲ. ಪ್ರೀತಿಯಿಂದ ಕೆಲ ಸಮಸ್ಯೆಗಳನ್ನು ಸರಿಪಡಿಸಿದರೆ ಅದು ಕಂಡಿತವಾಗಿಯೂ ಸರಿಹೋಗುತ್ತದೆ. ದೂರ ಪ್ರಯಾಣದಿಂದ ಆಯಾಸ. ಆರೋಗ್ಯದಲ್ಲಿ ಏರುಪೇರು. ಬಂಧುಗಳ ಕಿರಿಕಿರಿ. ಅದೃಷ್ಟ ಬಣ್ಣ: ಗೋದಿ ಬಣ್ಣ, ಶುಭ ಸಂಖ್ಯೆ: 2
  10. ಮಕರ: ಸ್ನೇಹ ಎಂಬುದು ಪವಿತ್ರ ಸಂಬಂಧ. ಅಲ್ಲಿ ನೋವು ನಲಿವು, ಪ್ರಿತಿ ದ್ವೇಷ ಎಲ್ಲವೂ ಇರುತ್ತದೆ. ಪ್ರೀತಿ ಪಾತ್ರರಿಂದ ನಿಮ್ಮ ಹೊಸ ಕೆಲಸಕ್ಕೆ ಬೆಂಬಲ ಸಿಗಲಿದೆ. ವಾರಾಂತ್ಯದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಸಂತೋಷ ಮನೆಮಾಡಲಿ.ಬದುಕಿನ ಸೂತ್ರಗಳು ನಾವಂದುಕೊಂಡಂತೆ ನಡೆಯುವುದಿಲ್ಲ. ಕ್ಷಣವೂ ಬದಲಾವಣೆಗಳು ಕಾಣುತ್ತವೆ. ಬದಲಾವಣೆ ಎನ್ನುವುದೇ ಜಗದ ನಿಯಮ ಅಲ್ಲವೇ. ಹಾಗಾಗಿ ಕಾಲ ಬಂದಂತೆ ಅದಕ್ಕೆತಕ್ಕಂತೆ ಸರಿ ನಿರ್ಧಾರದೊಂದಿಗೆ ಮುಂದೆ ಸಾಗಿ. ಅದೃಷ್ಟ ಬಣ್ಣ: ಕಪ್ಪು, ಶುಭ ಸಂಖ್ಯೆ: 9
  11. ಕುಂಭ: ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಗಲಿದೆ. ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಇನ್ನೊಬ್ಬನಿಲ್ಲ. ದುಃಖ ಹೆಚ್ಚಾದಾಗ, ಬೇಸರವಾದಾಗ ಪುಸ್ತಕ ಓದಿ. ಯಾಂತ್ರೀಕೃತ ಬದುಕಿನಿಂದ ಹೊರ ಬಂದು ವಾರಾಂತ್ಯದಲ್ಲಾದರೂ ಹಸಿರಿನ ಮಧ್ಯೆ ಸ್ವಲ್ಪ ಕಾಲಕಳೆಯಿರಿ. ಇದರಿಂದ ಶಾಂತತೆ, ಸಂತೋಷ ಸಿಗಲಿದೆ.ಇಷ್ಟು ದಿನದ ಪ್ರಯತ್ನಕ್ಕೆ ಉತ್ತಮ ರಿಸಲ್ಟ್ ಪಡೆದಿದ್ದೀರಿ. ಇನ್ನು ಮುಂದೆ ಬದುಕಿನಲ್ಲ ಬದಲಾವಣೆಯ ಪರ್ವ ಹರಿಯಲಿದೆ. ಅವಕಾಶಗಳು ಇನ್ನೂ ಹೆಚ್ಚಲಿದ್ದು ಆಶಾವಾದಿಗಳಾಗಿರಿ.ಉತ್ತಮ ರಿಸಲ್ಟ್‌ನಿಂದ ಹಿಗ್ಗದೆ,ಇದೇಪರಿಶ್ರಮವನ್ನು ಮುಂದುವರಿಸಿದರೆ ಇನ್ನೂ ಉತ್ತಮ ಸ್ಥಾನಕ್ಕೇರಬಹುದು. ಅದೃಷ್ಟ ಬಣ್ಣ: ತಿಳಿ ಹಸಿರು, ಶುಭ ಸಂಖ್ಯೆ: 4
  12. ಮೀನ: ದೇವರ ಮೇಲೆ ನಂಬಿಕೆ ಹೆಚ್ಚಾಗಲಿದೆ. ಮನೆಯಲ್ಲಿನ ಅಶಾಂತತೆಯ ವಾತಾವರಣಕ್ಕೆ ತಾತ್ಕಾಲಿಕ ಮುಕ್ತಿ ಸಿಗಲಿದೆ. ಹಣಕಾಸಿನಿ ವ್ಯವಹಾರದಲ್ಲಿ ಲಾಭ ಹೊಂದಿದರೂ ಅಷ್ಟೇ ಪ್ರಮಾಣದಲ್ಲಿ ಖರ್ಚೂ ಈ ವಾರ ಆಗಲಿದೆ. ದೂರಾದವರನ್ನು ದೂರ ಇರಲು ಬಿಟ್ಟುಬಿಡಿ. ಅದನ್ನು ಸರಿ ಪಡಿಸುವುದಕ್ಕೆ ಮುಂದಾಗದಿರಿ. ಇದರಿಂದ ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗ ಬಹುದು. ನಿಮ್ಮ ಸ್ಥಾನದ ಬಗ್ಗೆ ಅವರಿಗೆ ಅರಿವಾದಾಗ ಅವರೇ ನಿಮ್ಮ ಬಳಿ ಬರುತ್ತಾರೆ. ಸಿಹಿ ಸುದ್ದಿ ಕೇಳುವಿರಿ. ವಿಧ್ಯಾರ್ಥಿಗಳಿಗೆ ಶುಭ ವಾರ. ಅದೃಷ್ಟ ಬಣ್ಣ: ಗುಲಾಬಿ, ಶುಭ ಸಂಖ್ಯೆ: 5
Basavaraj Guruji

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937,9972548937

Published On - 7:30 am, Mon, 11 July 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ