ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಸಂಕಟಕ್ಕೆ ಅಪರಿಚಿತರ ಸಹಾಯ, ಬೇಸರ..

2026ರ ನವೆಂಬರ್ 15 ರ ನಿತ್ಯ ಭವಿಷ್ಯದ ಪ್ರಕಾರ, ಇಂದು ಕೆಲವು ರಾಶಿಯವರಿಗೆ ಅಪರಿಚಿತರ ನೆರವಿನಿಂದ ಸಂಕಟ ನಿವಾರಣೆಯಾಗಲಿದೆ. ಮತ್ತೆ ಕೆಲವರಿಗೆ ಅನಿರೀಕ್ಷಿತ ತಿರುವುಗಳು, ಆರ್ಥಿಕ ತೊಂದರೆಗಳು, ಸಂಬಂಧಗಳಲ್ಲಿ ಗೊಂದಲ ಅಥವಾ ಹೊಸ ಅವಕಾಶಗಳು ಎದುರಾಗಲಿವೆ. ಪ್ರತಿಯೊಂದು ರಾಶಿಯ ಸಂಪೂರ್ಣ ದೈನಂದಿನ ಜಾತಕ ಫಲ ಮತ್ತು ಅದೃಷ್ಟದ ವಿವರಗಳನ್ನು ಇಲ್ಲಿ ಓದಿ.

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಸಂಕಟಕ್ಕೆ ಅಪರಿಚಿತರ ಸಹಾಯ, ಬೇಸರ..
ಸಾಂದರ್ಭಿಕ ಚಿತ್ರ
Edited By:

Updated on: Nov 25, 2026 | 3:20 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಬುಧವಾರದಂದು ಬದಲಾವಣೆಗೆ ಪ್ರಯತ್ನ, ಅತಿಯಾದ ಹೂಡಿಕೆ, ಪ್ರಲೋಭನೆ, ಅಪಘಾತ, ತುರ್ತು ಚಿಕಿತ್ಸೆ, ವಿಶ್ವಾಸಕ್ಕೆ ಘಾಸಿ, ಭಿನ್ನಾಭಿಪ್ರಾಯ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಭರಣೀ, ಯೋಗ : ವರಿಯಾನ್, ಕರಣ : ಬಾಲವ, ಸೂರ್ಯೋದಯ – 06 – 24 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:07 – 13:26, ಯಮಗಂಡ ಕಾಲ 09:15 – 10:41, ಗುಳಿಕ ಕಾಲ 12:06 – 13:32

Loading...

​ಮೇಷ ರಾಶಿ :
ದುಡುಕಿನ‌‌ ಕೆಲವು ಸಂದರ್ಭಗಳನ್ನು ನಿಭಾಯಿಸುವುದು ನಿಮಗೆ ಕಷ್ಟವಾದೀತು. ವ್ಯವಹಾರಕ್ಕೆ ದೂರ ಪ್ರಯಾಣ ಬರುವುದು. ಇಂದು ನಿಮ್ಮ ಅನೇಕ‌ ದಿನಗಳ ಬಯಕೆಯನ್ನು ಪೂರ್ಣ ಮಾಡಿಕೊಳ್ಳುವ ಸಂದರ್ಭವು ಬರಬಹುದು. ರಕ್ಷಣೆಯ ವ್ಯವಸ್ಥೆಯಲ್ಲಿ ಇರುವವರಿಗೆ ಉನ್ನತ ಸ್ಥಾನವು ಸಿಗುವ ಸಾಧ್ಯತೆ ಇದೆ. ಆರ್ಥಿಕತೆಯ ಕಾರಣದಿಂದ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಆಪ್ತರಿಂದ ಧನಸಹಾಯವನ್ನೂ ಬಯಸುವಿರಿ. ವಿವಾಹಕ್ಕೆ ತೊಂದರೆಯಾದ ವಿಷಯವನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ.

​ವೃಷಭ ರಾಶಿ :
ಆದಾಯದ ಮೂಲವು ಆಕಸ್ಮಿಕವಾಗಿ ತಪ್ಪಬಹುದು. ಇನ್ನೊಬ್ಬರ ಅಪ್ರಯೋಜಕ ಸಲಹೆಗೆ ಕಿವಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವಿರಿ. ಸ್ತ್ರೀಯರ ಬಳಿ ವಿನಂತಿ ಮಾಡಿಕೊಂಡು ಸಹಾಯವನ್ನು ಪಡೆದಯುವಿರಿ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಒಂಟಿಯಾಗಿ ಸುತ್ತಾಡುವಿರಿ. ಮಾನಸಿಕ ಶಾಂತಿ ಹೆಚ್ಚುತ್ತದೆ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗುವುದು.

​ಮಿಥುನ ರಾಶಿ :
ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ಸಂಗಾತಿಯ ಸ್ಪಂದನೆಯಿಂದ ಉತ್ಸಾಹವು ಅಧಿಕವಾಗುವುದು.‌ ಹಲವು ಅವಕಾಶಗಳಲ್ಲಿ ನಿಮಗೆ ಎಲ್ಲ ರೀತಿಯಿಂದ ಉಪಯೋಗವಾಗುವುದನ್ನು ಆರಿಸಿಕೊಳ್ಳಿ. ಯಾರನ್ನಾದರೂ ದ್ವೇಷಿಸುವ ಮನೋಭಾವವು ಬರುವ ಸಾಧ್ಯತೆ ಇದೆ. ಸಾಮಾಜಿಕ ಗೌರವವನ್ನು ನೀವಿಂದು ಹೇಳಿಸಿಕೊಂಡು ಪಡೆಯುವಿರಿ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.

​ಕರ್ಕಾಟಕ ರಾಶಿ :
ಸಮಾರಂಭಗಳಿಗೆ ಭೇಟಿ ಕೊಡುವ ಸಂದರ್ಭವು ಬರಬಹುದು. ನಿಮ್ಮ ದಿನಚರಿಯು ಬದಲಾಗಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮವು ಉಂಟಾಗಬಹುದು. ವಿದೇಶದ ಸ್ನೇಹಿತರ ಬಾಂಧವ್ಯ ಬೆಳೆಯುವುದು. ಸಂಬಂಧಗಳಲ್ಲಿ ಮುಕ್ತತೆ, ಮುಗ್ಧತೆ ಎರಡೂ ಇರಲಿ. ಗುರುವಿನ ಕೃಪೆಯಿಂದ ಬೆಳವಣಿಗೆ ಕಾಣಬಹುದು. ನಿಮ್ಮ ಗೆಳೆತನದಿಂದ ಸಂಗಾತಿಗೆ ಅಸೂಯೆ ಉಂಟಾಗುವುದು. ಅಲ್ಪ ಸಾಲವನ್ನು ಇಟ್ಟುಕೊಳ್ಳದೇ ಪೂರ್ಣ ಮರುಪಾವತಿಸುವಿರಿ.

​ಸಿಂಹ ರಾಶಿ :
ವಿದ್ಯಾರ್ಥಿಗಳ ಸುದೀರ್ಘ ಕನಸು ನನಸಾಗುವುದು. ಯಾರ ವ್ಯಕ್ತಿತ್ವವನ್ನೂ ನೋಡಿದ ಮಾತ್ರಕ್ಕೆ ಅಳೆಯುವಲ್ಲಿ ಸೋಲುವಿರಿ. ಇನ್ನೊಬ್ಬರ ವಿಚಾರಗಳಿಗೆ ಮೂಗುತೂರಿಸಲಿದ್ದೀರಿ. ನಿಮ್ಮ ಬಳಿ ಇರುವುದು ಮಾತ್ರ ಶ್ರೇಷ್ಠ ಎಂಬ ಭಾವನೆ ಬೇಡ. ಮಕ್ಕಳಿಗೆ ಬೇಕಾದುದನ್ನು ಕೊಡಿಸಬೇಕಾದೀತು. ರಾಜಕಾರಣದಲ್ಲಿ ಅನಿರೀಕ್ಷಿತ ತಿರುವು ಕಾಣಿಸುವುದು. ಮನೆಯ ಬಗ್ಗೆಯೇ ಆಲೋಚನೆ ಇರುವ ಕಾರಣ ಕಛೇರಿಯಲ್ಲಿ ಕೆಲಸದ ಮನಃಸ್ಥಿತಿ ಇರದು. ಸಂಬಂಧಗಳಲ್ಲಿ ಸ್ಪಷ್ಟ ಸಂವಾದದಿಂದ ಗೊಂದಲ ನಿವಾರಣೆ. ಆತ್ಮಶೋಧನೆಗೆ ಅವಕಾಶ ಸಿಗಲಿದೆ.

​ಕನ್ಯಾ ರಾಶಿ :
ಇಂದು ಇನ್ನೊಬ್ಬರ ಹಂಗಿನಲ್ಲಿ ಬದುಕಿದಂತೆ ಭಾಸವಾಗುವುದು. ನೆರೆಯರ ಜೊತೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಿರಿ. ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ವ್ಯವಹಾರದಲ್ಲಿ ಅಡೆತಡೆಯಾಗಬಹುದು. ನೂತನ ಮನೆಯಲ್ಲಿ ಹಲವು ದಿನಗಳ ಅನಂತರ ವಾಸ ಮಾಡುವಿರಿ. ‌ಕೆಲಸದಲ್ಲಿ ನಿಮ್ಮ ತಂಡದ ಸಹಕಾರ ಅಗತ್ಯ. ಭಾವನಾತ್ಮಕ ವಿಷಯಗಳಲ್ಲಿ ತಾಳ್ಮೆ ಇರಲಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. .

​ತುಲಾ ರಾಶಿ :
ಅಸೂಯೆಯಿಂದ ಏನನ್ನೋ ಸಾಧಿಸಲು ಹೋಗುವಿರಿ. ಅತಿಯಾದ ಆತ್ಮವಿಶ್ವಾಸವೇ ನಿಮ್ಮನ್ನು ಕೆಳಗಿಳಿಸಬಹುದು. ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ಮಕ್ಕಳ ಕಾರಣದಿಂದ ನಿಮಗೆ ಯಾವಕಡೆಯೂ ಹೋಗಲಾಗದು. ಸಂಬಂಧಗಳಲ್ಲಿ ನಿಖರವಾದ ಮಾತು ಒಳ್ಳೆಯದು. ಸಂಗಾತಿಗೆ ನಿಮ್ಮಿಂದ ಅಪರೂಪದ ಉಡುಗೊರೆಯು ಸಿಗಲಿದೆ.‌ ಬಿಟ್ಟ ಅಭ್ಯಾಸವನ್ನು ಪುನಃ ಬೆಳೆಸಿಕೊಳ್ಳುವಿರಿ. ನಿಮ್ಮ‌ ಸರಳತೆಯು ನಿಮಗೆ ಅಲ್ಪ ಯಶಸ್ಸನ್ನು ಕೊಡುವುದು.

​ವೃಶ್ಚಿಕ ರಾಶಿ :
ನಿಮ್ಮ ಪ್ರತಿಭೆಯ ಪರಿಚಯವು ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ಮನಸ್ಸಿನ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯ ವಿಧಾನವನ್ನು ರೂಪಿಸಿಕೊಳ್ಳುವಿರಿ. ಜಾಗರೂಕತೆಯಿಂದ ಮಾಡುವ ಕಾರ್ಯಕ್ಕೆ ತೊಂದರೆ ಬರುವುದು.‌ ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸಾಧ್ಯವಾಗಬಹುದು. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗಿರುವಿರಿ. ಹಂಚಿಕೊಳ್ಳುವ ಸ್ವಭಾವ ಬೇಕಾದೀತು.

​ಧನು ರಾಶಿ :
ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಜಾಗ್ರತೆ ಮುಖ್ಯ. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಮಕ್ಕಳ ಜೊತೆ ಸಮಯ ಕಳೆಯಲು ಸಮಯದ ಅಭಾವ ಇರುವುದು.

​ಮಕರ ರಾಶಿ :
ಹಳೆಯ ವಸ್ತುಗಳನ್ನು ಮಾರಾಟ ಮಾಡಿದರೆ ಉತ್ತಮ‌ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ಅಧಿಕಾರಿಗಳಿಂದ ನಿಮಗೆ ಒತ್ತಡ ಬರಬಹುದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸತ್ಯತ್ವ ಕಾಪಾಡಿದರೆ ದಿನ ಸುಗಮವಾಗುವುದು. ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು.

​ಕುಂಭ ರಾಶಿ :
ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ವಾಹನ ದುರಸ್ತಿಯು ತುರ್ತಾಗಿ ಬರಬಹುದು. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಆರೋಗ್ಯದಲ್ಲಿ ಚಿಕ್ಕ ತೊಂದರೆಗಳಿದ್ದರೂ ಶೀಘ್ರ ಸುಧಾರಣೆ ಕಂಡುಬರುತ್ತದೆ. ಮನೆಯಿಂದ ದೂರವಿರಲು ಇಷ್ಟಪಡುವಿರಿ.‌

​ಮೀನ ರಾಶಿ :
ಮನೋವಿಕಾರದ ಕಾರಣ ಎಲ್ಲರಿಂದ ನಿಂದನೆ ಬರಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ವಿನಯಶೀಲತೆಯು ಇಂದು ದುಃಖ ಕೊಡಬಹುದು. ಸಂಗಾತಿಯನ್ನು ನೀವೇ ಬೇಸರಿಸಿ ಬೆಣ್ಣೆ ಹಚ್ಚುವಿರಿ. ಇಂದು ನಿದ್ರೆಯನ್ನು ಅಧಿಕವಾಗಿ ಮಾಡುವಿರಿ. ಮನಸ್ಸು ಶಾಂತವಾಗಿಡುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.

-ಲೋಹಿತ್ ಹೆಬ್ಬಾರ್-8762924271 (what’s app only)

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us