ಈ ರಾಶಿಯವರಿಗೆ ಇಂದು ಖರೀದಿಸಿದ ಹೊಸ ವಸ್ತುಗಳು ಬಹಳ ಖುಷಿ ಕೊಡುವುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ, ಬುಧವಾರ ನಿಂದನೆಯನ್ನು ಸಹಿಸಿಕೊಳ್ಳುವುದು, ಅನಧಿಕೃತ ವಿಚಾರಗಳ ಚರ್ಚೆ, ಹಿರಿಯರ ಮಾರ್ಗದರ್ಶನ ಇವೆಲ್ಲ ಈ ದಿನದ ವಿಶೇಷ.

ನಿತ್ಯ ಪಂಚಾಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 33 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:38 – 14:10, ಯಮಘಂಡ ಕಾಲ 08:05 – 09:36, ಗುಳಿಕ ಕಾಲ 11:07 – 12:38
ತುಲಾ ರಾಶಿ: ನಿಮಗೆ ವಹಿಸುವ ಹೆಚ್ಚವರಿ ಕೆಲಸವನ್ನು ಭಾರವೆಂದು ಬಿಡುವಿರಿ. ಇದರಿಂದ ನಿಮ್ಮ ಆದಾಯಕ್ಕೆ ಹಿನ್ನಡೆ. ಇಂದು ನೀವು ವ್ಯಾಪಾರಕ್ಕೆ ಹಾಕಿದ ಬಂಡವಾಳಕ್ಕೆ ಮೋಸವಾಗದು. ಸಹೋದ್ಯೋಗಿಗಳು ಹಿರಿಯ ಅಧಿಕಾರಿಗಳ ಮುಂದೆ ನಿಮ್ಮನ್ನು ಪ್ರಶಂಸಿಸಬಹುದು. ಇಂದು ನೀವು ತೋರಿಕೆಗೆ ಬಹಳ ಶಾಂತರಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಕುದಿಯುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಪರರ ಅವಕಾಶವನ್ನು ನೋಡಿ ಮನಸ್ಸಿನಲ್ಲಿ ಸಂಕಟ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ ಮಾಡುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸುವುದು. ನಿಮ್ಮ ಉತ್ತಮ ಹವ್ಯಾಸವು ಪ್ರಯೋಜನಕ್ಕೆ ಬಂದೀತು. ನಿಮಗೆ ಸಂಬಂಧಿಸದ ವ್ಯಕ್ತಿಯ ಪ್ರಭಾವಕ್ಕೆ ಸಿಕ್ಕಿಬೀಳುವಿರಿ. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು.
ವೃಶ್ಚಿಕ ರಾಶಿ: ಕಾನೂನಾತ್ಮಕ ಸಲಹೆಯನ್ನು ಪಡೆದು ಆಸ್ತಿಯ ಖರೀದಿಗೆ ಮುಂದಾಗಿ. ಇದರಿಂದ ಇಂದು ಉದ್ಯಮದಲ್ಲಿ ಬರುವ ಸವಾಲುಗಳನ್ನು ಸುಲಭವಾಗಿ ಗೆಲ್ಲುವಿರಿ. ತಂದೆಗೆ ಬೇಕಾದ ಹಣವನ್ನು ನೀವು ಕೊಟ್ಟು ಮುನ್ನಡೆಸುವಿರಿ. ಮೇಲಿಂದ ಮೇಲೆ ಬೀಳುವ ಪೆಟ್ಟಿನಿಂದ ಮನಸ್ಸು ದುರ್ಬಲವಾಗಬಹುದು. ನಿಮ್ಮ ಕಾರ್ಯಕ್ಷಮತೆ ಕಡಿಮೆಯಾದಂತೆ ತೋರುವುದು. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಕುಟುಂಬ ಎಲ್ಲರಲ್ಲಿ ಒಂದು ಚಿಂತೆ, ನಿಮಗೆ ಮತ್ತೊಂದು ಚಿಂತೆ. ಯಾರನ್ನೋ ನಂಬಿ ಹಣಕಾಸಿನ ವ್ಯವಹಾರವನ್ನು ಮಾಡುವಿರಿ. ಉದ್ಯೋಗದಿಂದ ಹೊರತಾದ ಕೆಲಸವನ್ನು ಒಪ್ಪಿಕೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ.
ಧನು ರಾಶಿ: ಸರಕಿನ ಆಮದು ಸಂದರ್ಭದಲ್ಲಿ ವಂಚನೆ ತಿಳಿಯುವುದು. ಅಪವಾದ ನಿಮಗೆ ಬರಬಹುದು. ವಿಚಲಿತ ಮನಃಸ್ಥಿತಿಯಿಂದ ಗೆಲ್ಲಲು ಸಾಧ್ಯವಾಗದು. ಇಂದು ನಮ್ಮ ಉದ್ಯೋಗದಲ್ಲಿ ಹೊಸ ನಿರೀಕ್ಷೆಯು ಇರಲಿದೆ. ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಹಿರಿಯ ಅಧಿಕಾರಿಗಳ ಜೊತೆ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸುವಿರಿ. ಧೈರ್ಯವೇ ನಿಮ್ಮ ಗೆಲುವಿನ ಮೂಲವಾಗಿರಲಿ. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು. ಕಛೇರಿಯಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ ಉಂಟಾಗಬಹುದು.
ಮಕರ ರಾಶಿ: ಕಾಯುತ್ತಿರುವ ಅವಕಾಶ ನಿಮ್ಮ ಪಾಲಿಗೆ ಸಿಗಲಿದೆ. ಉದ್ಯೋಗದಲ್ಲಿ ಸವಾಲಿನ ಕೆಲಸ ಕಾರ್ಯಗಳು ದೊರೆತರೂ ಸಾಧಿಸಬಲ್ಲಿರಿ. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಕುಟುಂಬದ ಜವಾಬ್ದಾರಿಯನ್ನು ಸಂಗಾತಿ ನೋಡಿಕೊಳ್ಳುವಂತೆ ಮಾಡುವಿರಿ. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ಪಕ್ಷಪಾತ ಮಾಡದೇ ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವ ಪ್ರಯತ್ನ ಮಾಡಿ.
ಕುಂಭ ರಾಶಿ: ನಿಮ್ಮ ಅನುಪಸ್ಥಿಯು ಕಛೇರಿಗೆ ಗೊತ್ತಾಗಲಿದ್ದು, ದೂರವಾಣಿ ಕರೆಗಳನ್ನು ಅಧಿಕವಾಗಿ ಸ್ವೀಕರಿಸಬೇಕಾಗುವುದು. ಕುಟುಂಬದಲ್ಲಿ ನೀರಸ ವಾತಾವರಣವಿದ್ದು, ವ್ಯಾಪಾರ ವ್ಯವಹಾರಗಳ ಆದಾಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ನೆರೆ ಹೊರೆಯವರ ವಿಚಾರದಲ್ಲಿ ಸಣ್ಣ ಅಸಮಾಧಾನ ಇರಲಿದೆ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ನಿಮ್ಮ ನಡಿಗೆಯೇ ವಿಶ್ವಾಸದಿಂದ ಇರುವುದನ್ನು ಹೇಳುತ್ತದೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಸ್ತಿಕೆ ಬೇಡ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಇಂದು ಭಯವು ಕಾಡಲಿದ್ದು ಮನೆಯನ್ನು ಬಿಟ್ಟು ಹೋಗಲಾರಿರಿ.
ಮೀನ ರಾಶಿ: ನೀವು ಯಾರ ಬಳಿ ಕಾರ್ಯ ಮಾಡಿಸುವುದಿದ್ದರೂ ಮೊದಲು ಅವರನ್ನು ವಶಪಡಿಸಿಕೊಳ್ಳುವ ಅಗತ್ಯತೆ ಇದೆ. ತಾಳ್ಮೆ ಮತ್ತು ಸಂಯಮದಿಂದ ಇರುವ ಕಾರಣ ಕುಟುಂಬವನ್ನೂ ಕಛೇರಿಯನ್ನೂ ನೆಮ್ಮದಿಯಿಂದ ಮುನ್ನಡೆಸಲು ಸಾಧ್ಯ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ಪ್ರೇಮದ ಕಾರಣಕ್ಕೆ ವಿಚಲಿತವಾಗಬಹುದು. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು. ಇಂದಿನ ಹೂಡಕೆಯು ಲಾಭದಾಯಕವಾಗಿರುವುದು. ನಿಮಗೆ ಇಂದು ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗಿದ್ದು ದೂರದ ಊರಿನಿಂದ ನೋಡಲು ಹೋಗುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ಅತಿಯಾದ ಕಾರ್ಯಗಳಿಂದ ಏಕಾಂಗಿಯಾಗಿ ಇರಬೇಕು ಎಂದು ಅನ್ನಿಸಬಹುದು.