Rahul Gandhi’s political Horoscope: ರಾಹುಲ್ ಗಾಂಧಿಗೆ ಈ ವರ್ಷ ಶುಭ ಫಲಗಳಿಲ್ಲ, ಹಲವು ವಿಚಾರ ಮುನ್ನಲೆಗೆ ಬರಲಿದೆ

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ವಯನಾಡಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇದೀಗ ರಾಯ್​ಬರೇಲಿಯಿಂದಲೂ ಕಣಕ್ಕಿಳಿದಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ. ಆದರೆ ಇದೀಗ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿಯವರು ರಾಹುಲ್ ಗಾಂಧಿಯವರ ಭವಿಷ್ಯ ನುಡಿದಿದ್ದಾರೆ.

Rahul Gandhi's political Horoscope: ರಾಹುಲ್ ಗಾಂಧಿಗೆ ಈ ವರ್ಷ ಶುಭ ಫಲಗಳಿಲ್ಲ, ಹಲವು ವಿಚಾರ ಮುನ್ನಲೆಗೆ ಬರಲಿದೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 03, 2024 | 3:32 PM

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರಿಗೆ (Rahul Gandhi) ಅಮೇಥಿ ಬದಲಿಗೆ ಉತ್ತರ ಪ್ರದೇಶದ ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ರಾಯ್ ಬರೇಲಿಯಲ್ಲಿ ಚುನಾವಣೆಯ ಕಾವು ಜೋರಾಗಿದ್ದು, ಖ್ಯಾತ ಜ್ಯೋತಿಷಿ ಡಾ ಬಸವರಾಜ್ ಗುರೂಜಿಯವರು ರಾಹುಲ್ ಗಾಂಧಿಯವರಿಗೆ ಈ ವರ್ಷ ಶುಭ ಫಲಗಳಿಲ್ಲ ಎಂದಿದ್ದಾರೆ.

ಪ್ರಸ್ತುತ ರಾಹುಲ್ ಗಾಂಧಿಯವರಿಗೆ ರಾಹು ಮಹಾದಶೆಯು ನಡೆಯುತ್ತಿದ್ದು, ಶಕ್ತಿ ಬುಕ್ತಿಯಿದೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಿಲ್ಲ. ಲಾಭಗಳು ಹಾಗೂ ಯೋಗಗಳು ತುಂಬಾನೇ ಕಡಿಮೆಯಿದೆ. ಆಸೆ ಆಕಾಂಕ್ಷೆಗಳು ಇದ್ದರೂ, ಗುರುಬಲವಿಲ್ಲ. ಹೀಗಾಗಿ ಫಲಗಳು ಪರಿಪೂರ್ಣವಾಗಿರುವುದಿಲ್ಲ ಎಂದು ಬಸವರಾಜ್ ಗುರೂಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಂಗಡಿ ಬಾಗಿಲು ಪಶ್ಚಿಮ ದಿಕ್ಕಿಗೆ ಇದ್ದರೆ ಏನು ಲಾಭ ಗೊತ್ತಾ? ವಿಡಿಯೋ ನೋಡಿ

ಪ್ರಸ್ತುತ 2024 ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ರಾಹುಲ್ ಗಾಂಧಿಯವರಿಗೆ ಅಷ್ಟು ಶುಭವಾಗಿಲ್ಲ. ಪರಿಪೂರ್ಣವಾದ ಫಲ ಕೊಡುವ ಸಾಧ್ಯತೆಗಳು ಕಡಿಮೆಯಿದೆ. ಜೊತೆಗಿದ್ದವರು ದೂರವಾಗಲಿದ್ದು, ಅಪವಾದಗಳಿಗೂ ಗುರಿಯಾಗಲಿದ್ದಾರೆ. ಈ ಸಮಯದಲ್ಲಿ ಬೇರೆ ಬೇರೆ ವಿಚಾರಗಳು ಮುನ್ನಲೆಗೆ ಬರಲಿದೆ. ಅದೃಷ್ಟವು ಕೈ ಹಿಡಿಯುವುದಿಲ್ಲ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯಿದೆ ಎಂದಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ